ಅಭಿವೃದ್ಧಿಯಿಲ್ಲದ ಮನಸ್ಸಿನಲ್ಲಿ ರಾಗವು ಪ್ರವೇಶಿಸುತ್ತದೆ
ಕೆಟ್ಟ ಛಾವಣಿಯ
ಮನೆಯಲ್ಲಿ ಮಳೆಯು ನುಗ್ಗುವ ಹಾಗೆ ಅಭಿವೃದ್ಧಿ ಹೊಂದದ ಮನಸ್ಸಿನಲ್ಲಿ ರಾಗವು ನುಗ್ಗುತ್ತದೆ. (13)
ಸುಭದ್ರವಾದ ಛಾವಣಿಯ
ಮನೆಯಲ್ಲಿ ಮಳೆಯು ನುಗ್ಗದ ಹಾಗೆ ಅಭಿವೃದ್ಧಿ ಹೊಂದಿರುವ ಮನಸ್ಸಿನಲ್ಲಿ ರಾಗವು ನುಗ್ಗುವುದಿಲ್ಲ. (14)
ಗಾಥ ಪ್ರಸಂಗ 1:9
ನಂದ ಭಿಕ್ಷುವಿನ ಸಂಗತಿ
ಒಮ್ಮೆ ಭಗವಾನರು ರಾಜಗೃಹದ ವೇಲುವನದಲ್ಲಿ ತಂಗಿದ್ದರು.
ಆಗ ಅವರ ತಂದೆ ಶುದ್ಧೋದನರು ನಿರಂತರವಾಗಿ ಸಂದೇಶಕಾರರನ್ನು ಕಳುಹಿಸಿದರು. ಕಪಿಲವಸ್ತುವಿಗೆ
ಅವರಿಗಾಗಿ ಆಹ್ವಾನ ನೀಡಿದರು. ಅದರಂತೆಯೇ ಭಗವಾನರು ದೊಡ್ಡ ಅರಹಂತರ ಸಮೂಹದೊಂದಿಗೆ ಪ್ರಯಾಣ
ಬೆಳೆಸಿದರು.
ಅವರು ಕಪಿಲವಸ್ತುವಿಗೆ ಪ್ರವೇಶಿಸಿದಾಗ ಅವರ
ಬಂಧು-ಭಾಂದವರಿಗೆ ವಸ್ಸಂತರಜಾತಕ ತಿಳಿಸಿದರು. ಎರಡನೆಯದಿನ ಅವರು ನಗರವನ್ನು ಪ್ರವೇಶಿಸುವಾಗ
ಜಾಗೃತರಾಗಿ, ಅಪ್ರಮಾದಿತರಾಗದಿರಿ,
ಧರ್ಮದಿಂದ ಸುಚಾರಿತ್ರ್ಯದಿಂದ
ಜೀವಿಸಿ, ಧರ್ಮಚಾರಿಯು ಈ
ಲೋಕದಲ್ಲಿ ಮತ್ತು ಪರಲೋಕದಲ್ಲಿಯೂ ಸುಖಿಯಾಗಿ ಜೀವಿಸುವನು ಎಂದು ತಿಳಿಸಿದರು. ಅದನ್ನು ಕೇಳಿ
ಶುದ್ದೋದನ ಮಹಾರಾಜರು ಸೋತಪತ್ತಿಫಲ ಪ್ರಾಪ್ತಿಮಾಡಿದರು. ಹಾಗೆಯೇ ಭಗವಾನರು ಅರಮನೆಯನ್ನು
ಪ್ರವೇಶಿಸುವಾಗ ಸುಚ್ಚಾರಿತ್ರ್ಯದಿಂದ, ಧರ್ಮದಿಂದ ಜೀವಿಸಿ.
ದುಚ್ಚಾರಿತ್ರ್ಯದ ಜೀವನ ನಡೆಸದಿರಿ. ಧಮ್ಮಾಚಾರಿಯು ಈ ಲೋಕದಲ್ಲಿ ಮತ್ತು ಪರಲೋಕದಲ್ಲೂ ಸುಖಿಯಾಗಿ
ಜೀವಿಸುವನು ಎಂದು ನುಡಿದರು. ಈ ಗಾಥೆಯನ್ನು ಕೇಳಿದಾಗ ಶುದ್ದೋದನರು ಸಕದಾಗಾಮಿಫಲ
ಪ್ರಾಪ್ತಿಮಾಡಿದರು ಮತ್ತು ಪ್ರಜಾಪತಿ ಗೋತಮಿ ಸೋತಪತ್ತಿಫಲ ಪಡೆದರು. ಭೋಜನದ ನಂತರ ಚಂದಾಕಿನ್ನರ
ಜಾತಕ ಹೇಳಿದರು. ಆ ಜಾತಕದಲ್ಲಿ ರಾಹುಲಮಾತೆ (ಯಶೋಧರೆ)ಯ ಶ್ರೇಷ್ಠ ಸದ್ಗುಣಗಳ ಬಗ್ಗೆ ತಿಳಿಸಿದರು.
ಮಾರನೆಯದಿನ ಬೋಧಿಸತ್ತರ ಮಲ ತಮ್ಮ ಮದುವೆಯ ದಿನದ
ಸಂಭ್ರಮ ಆಚರಿಸುತ್ತಿದ್ದರು. ಭಗವಾನರು ನಂದರ ಮನೆಗೆ ಆಹಾರಕ್ಕೆ ಹೊರಟರು ಮತ್ತು
ಪಿಂಡಪಾತ್ರೆಯನ್ನು ರಾಜಕುಮಾರ ನಂದರವರ ಕೈಗೆ ಇಟ್ಟರು. ನಂತರ ಭಗವಾನರು ಅದನ್ನು ತೆಗೆದುಕೊಳ್ಳದೆ
ಹೊರಟರು. ಹೀಗಾಗಿ ನಂದರವರು ಅದನ್ನು ಹಿಂತಿರುಗಿಸಲು ಹಿಂದೆ ಹಿಂದೆ ಹೊರಟರು. ಅವರನ್ನು
ವಿವಾಹವಾಗಲು ಸಿದ್ಧವಾಗಿದ್ದ ನವವಧು ರಾಜಕುಮಾರಿ ಜನಪದ ಕಲ್ಯಾಣಿಯು ರಾಜಕುಮಾರ ಬೇಗ ಹಿಂತಿರುಗಿ
ಎಂದಳು. ಆದರೆ ವಿಹಾರದಲ್ಲಿ ರಾಜಕುಮಾರ ಭಿಕ್ಷುವಾಗಲು ಒಪ್ಪಿದರು.
ಭಿಕ್ಷುವಾದರೂ ಸಹಾ ನಂದರವರ ಮನಸ್ಸು ಸದಾ ಜನಪದ
ಕಲ್ಯಾಣಿಯ ಕಡೆಗೆ ವಾಲುತ್ತಿತತು. ಅವರ ಮನಸ್ಸು ದ್ವಂದ್ವದಲ್ಲಿ ಸಿಲುಕಿತ್ತು. ಇದನ್ನು ಅರಿತ
ಭಗವಾನರು ನಂದರವರಿಗೆ ತಾವತಿಂಸ ಲೋಕದ ದೇವಿಯರನ್ನು ತೋರಿಸಿದರು. ಅವರ ಸೌಂದರ್ಯವು ಜನಪದ
ಕಲ್ಯಾಣಿಗಿಂತ ಹಲವಾರುಪಟ್ಟು ಸೌಂದರ್ಯವುಳ್ಳವರಾಗಿದ್ದರು. ನಂದರವರು ಧಮ್ಮಜೀವನ ಪಾಲಿಸಿದರೆ
ಅವರಲ್ಲಿ ಒಬ್ಬರನ್ನು ಪಡೆಯಬಹುದು ಎಂದು ಹೇಳಿದಾಗ ನಂದರು ಆನಂದದಿಂದ ಒಪ್ಪಿದರು. ಅವರು ಶ್ರೇಷ್ಠ
ಜೀವನವನ್ನು ಪಾಲಿಸತೊಡಗಿದರು. ಆದರೆ ಸಹ ಭಿಕ್ಷುಗಳು ಹೆಣ್ಣಿಗಾಗಿ ಧಮರ್ಾಚರಣೆ ಮಾಡುವವ ಎಂದು
ಹಿಯಾಳಿಸಿದಾಗ, ವ್ಯಂಗ್ಯ ಮಾಡಿದಾಗ
ಆತ ನಾಚಿ, ಕೊನೆಗೆ ತನ್ನ ದೃಢ
ಪರಿಶ್ರಮದಿಂದ ಅರಹತ್ವ ಪ್ರಾಪ್ತಿಮಾಡಿದರು. ಆದರೆ ಅರಹಂತರಲ್ಲಿ ಯಾವುದೇ ಬಯಕೆಯೇ ಇರುವುದಿಲ್ಲ.
ಇನ್ನು ಹೆಣ್ಣಿನ ಬಯಕೆ ಎಲ್ಲಿ ಬರಬೇಕು. ಇದೆಲ್ಲವೂ ಭಗವಾನರಿಗೆ ಮೊದಲೇ ಗೊತ್ತಿತ್ತು. ಅವರು
ದೇವಮಾನವರನ್ನು ಪಳಗಿಸುವುದರಲ್ಲಿ ನಿಸ್ಸೀಮರು. ಅವರು ಪ್ರತಿ ವ್ಯಕ್ತಿಯ ಪ್ರಚ್ಛನ್ನತೆಯಂತೆ
ಪಳಗಿಸುತ್ತಿದ್ದರು.
ಮುಂದೆ ಭಿಕ್ಷುಗಳು ನಂದರವರನ್ನು ಹೆಣ್ಣಿನ ಬಗ್ಗೆ ಕೇಳಿದಾಗ
ಅವರು ನನ್ನಲ್ಲಿ ಯಾವುದೇ ಅಂಟುವಿಕೆ ಇಲ್ಲ ಎಂದರು. ಭಿಕ್ಷುಗಳಿಗೆ ಅನುಮಾನ ಮೂಡಿ ಭಗವಾನರಲ್ಲಿಗೆ
ಈ ವಿಷಯ ತಿಳಿಸಿದಾಗ ಭಗವಾನರು ಮೇಲಿನ ಗಾಥೆ ಹೇಳಿ ನಂದರವರ ಹಿಂದಿನ ಮತ್ತು ಇಂದಿನ ಮನಸ್ಥಿತಿಯಂತೆ
ಈ ಎರಡು ಗಾಥೆಗಳನ್ನು ನುಡಿದು ವಿವರಿಸಿದರು.
No comments:
Post a Comment