Wednesday, 31 December 2014

dhammapada/appamadavagga/2.4/the festival of fools

ಎಚ್ಚರವುಳ್ಳವರಾಗಿ, ಎಚ್ಚರಹೀನರಾಗಬೇಡಿ
ಮೂರ್ಖರು ಮತ್ತು ದುಮರ್ೆಧಾವಿಗಳು ಎಚ್ಚರಹೀನತೆಯಲ್ಲಿ ಆನಂದಿಸುತ್ತಾರೆ. ಆದರೆ ಮೇಧಾವಿಗಳು ಎಚ್ಚರಿಕೆಯನ್ನು ಶ್ರೇಷ್ಠ ಧನದಂತೆ (ಅಮೂಲ್ಯ ಐಶ್ವರದಂತೆ) ರಕ್ಷಿಸುತ್ತಾರೆ.    (26)
ಆದ್ದರಿಂದ ಎಚ್ಚರಿಕೆ ಹೀನತೆಯಲ್ಲಿ ತೊಡಗಬೇಡ, ಇಂದ್ರೀಯ ಕಾಮಗಳಲ್ಲಿ ಅನುರಕ್ತನಾಗಬೇಡ, ಸದಾ ಎಚ್ಚರವುಳ್ಳವನು, ಧ್ಯಾನಿಯು ವಿಪುಲವಾದ ಸುಖವನ್ನು ಪಡೆಯುತ್ತಾನೆ.    (27)
ಗಾಥ ಪ್ರಸಂಗ 2:4
ಮೂರ್ಖರ ನಕ್ಷತ್ರ ಹಬ್ಬ

                ಶ್ರಾವಸ್ತಿಯಲ್ಲಿ ನಕ್ಷತ್ರ ಹಬ್ಬ ಎಂದು ಆಚರಿಸುತ್ತಿದರು. ಆದರೆ ಆ ಹಬ್ಬದ ಆಚರಣೆಯು ಅತ್ಯಂತ ತುಚ್ಛವಾಗಿತ್ತು. ಆ ಸಮಯದಲ್ಲಿ ಜನರು ತಮ್ಮ ತಮ್ಮಲ್ಲೇ ಬೂಸಾ, ಸಗಣಿ, ಎರಚುತ್ತ, ಬೈದಾಡುತ್ತ ಜನರಿಗೆ ತೊಂದರೆ ನೀಡುತ್ತಾ ನಗರದಲ್ಲಿ ಸುತ್ತಾಡುತ್ತಿದ್ದರು. ಈ ಹಬ್ಬವು ಏಳು ದಿನಗಳ ಕಾಲ ನಡೆಯುತ್ತಿತ್ತು. ಈ ರೀತಿ ತೊಂದರೆ ನೀಡಬಾರದು ಎಂದು ಬಯಸಿದರೆ ಆ ಗಲಭೆಕೋರರಿಗೆ ಸ್ವಲ್ಪ ಹಣ ನೀಡಬೇಕಿತ್ತು.

                ಆ ಸಮಯದಲ್ಲಿ ಬುದ್ಧ ಉಪಾಸಕರು ಶ್ರಾವಸ್ತಿಯಲ್ಲಿ ಹೇರಳವಾಗಿದ್ದರು. ಅವರು ಬುದ್ಧರ ಬಳಿಗೆ ಬಂದು ಏಳು ದಿನಗಳ ಕಾಲ ವಿಹಾರದಲ್ಲೇ ಉಳಿಯುವಂತೆ ಹೇಳಿ, ಆ ದಿನಗಳಲ್ಲಿ ಅವರು ಬುದ್ಧರಿಗೆ ಮತ್ತು ಸಂಘಕ್ಕೆ ಆಹಾರವನ್ನು ವಿಹಾರದಲ್ಲೇ ತಂದು ನೀಡಿದರು. ನಂತರ ಎಂಟನೇ ದಿನದಂದು ಬುದ್ಧರು ಮತ್ತು ಭಿಕ್ಷುಗಳಿಗೆ ನಗರಕ್ಕೆ ಆಹ್ವಾನಿಸಿ ಬೋಧನೆ ನೀಡುವಂತೆ ಕೇಳಿಕೊಂಡರು. ನಂತರ ಆ ಸಮಯದಲ್ಲಿ ಈ ಮೂರ್ಖರ ಆಚರಣೆ ಬಗ್ಗೆ ಪ್ರಸ್ತಾಪ ಬಂದಾಗ ಭಗವಾನರು ಈ ಮೇಲಿನ ಗಾಥೆಯನ್ನು ಹೇಳಿದರು. ಇದನ್ನು ಕೇಳಿ ಉಪಾಸಕರಿಗೆ ಧಮ್ಮದ ಮೇಲೆ ಶ್ರದ್ಧೆಯುಕ್ಕಿತು. 

dhammapada/appamadavagga/2.3/cullapanthaka's mind power

ಪ್ರಯತ್ನದಿಂದಲೇ ಪರಮಾರ್ಥ
ತನ್ನ ಪ್ರಯತ್ನದಿಂದ, ಎಚ್ಚರಿಕೆಯಿಂದ ಸಂಯಮದಿಂದ ಮತ್ತು ಧರ್ಮದಿಂದಾಗಿ ಮೇಧಾವಿಯು ಪ್ರವಾಹವು ಪೀಡಿಸದಂತಹ ದ್ವೀಪವನ್ನಾಗಿ ಮಾಡಿಕೊಳ್ಳಲಿ.     (25)
ಗಾಥ ಪ್ರಸಂಗ 2:3
ಚುಲ್ಲಪಂಥಕನ ಚಮತ್ಕಾರ

                ಇಬ್ಬರು ಸೋದರರು ಭಿಕ್ಷುಗಳಾಗಿದ್ದರು. ಹಿರಿಯವ ಅರಹಂತ ನಾಗಿದ್ದನು. ಕಿರಿಯವ ಇನ್ನೂ ಸಾಮಣೇರನಾಗಿದ್ದನು. ಕಿರಿಯ ಚುಲ್ಲಪಂಥಕನು 4 ತಿಂಗಳು ಆದರೂ ಇನ್ನೂ 1 ಗಾಥೆಯನ್ನು ಸಹಾ ಕಲಿಯಲಾಗಲಿಲ್ಲ. ಎಷ್ಟೇ ಕಂಠಪಾಠ ಮಾಡಿದರೂ ಅದನ್ನು ಮರೆಯುತ್ತಿದ್ದನು. ಅದಕ್ಕೆ ಹಿರಿಯನಾದ ಮಹಾಪಂಥಕ ಕಿರಿಯನಿಗೆ ನೀನು ಗೃಹಸ್ಥನಾಗಲು ಅರ್ಹ ಹೊರತು ಧ್ಯಾನಿಯಾಗಲು ಅಲ್ಲವೇ ಅಲ್ಲ, ನೀನು ಹೊರಟು ಹೋಗು ಎಂದು ಹೇಳಿದನು.
                ಆತನು ಗ್ರಹಸ್ಥನಾಗಲು ಮನಸ್ಸಿಲ್ಲದೆಯೇ ಬೇರೇನೂ ತೋಚದೆ ಹೊರಡಲು ಸಿದ್ಧನಾದನು. ದ್ವಾರದಲ್ಲಿ ಬುದ್ಧ ಭಗವಾನರು ಕಾಣಿಸಿಕೊಂಡರು. ವಿಷಯ ತಿಳಿದು ನಾನು ಹೇಳಿದಂತೆ ಮಾಡು ಬಾ ಚುಲ್ಲಪಂಥಕ ಎಂದು ಹೇಳಿ ಗಂಧಕುಟಿಯ ಬಾಗಿಲಲ್ಲಿ ಪೂವರ್ಾಭಿಮುಖವಾಗಿ ಧ್ಯಾನಕ್ಕೆ ಕುಳ್ಳಿರಿಸಿದರು. ಆತನ ಕೈಗೆ ಪರಿಶುದ್ಧವಾದ ಬಿಳಿಯ ಕರವಸ್ತ್ರ ಸೃಷ್ಟಿಸಿ ನೀಡಿದರು. ಚುಲ್ಲಪಂಥಕ ಈ ಬಿಳಿಯ ವಸ್ತ್ರಕ್ಕೆ ಕೈಯಿಂದ ಉಜ್ಜುತ್ತಾ ರಜೋಹರಣಂ ಎಂದು ಜಪಿಸುತ್ತಾ ಕುಳಿತಿರು ಎಂದರು. (ರಜೋಹರಣಂ ಎಂದರೆ ಕೊಳೆಯ ನಿಮರ್ೂಲನೆ). ಆತ ಹಾಗೆಯೇ ಮಾಡುತ್ತಾ ಆತನ ಬಿಳಿ ವಸ್ತ್ರ ಕಪ್ಪಗೆ ತಿರುಗಿತ್ತು. ಆತ ಆಗಲೇ ಸಮಾಧಿ ಸಿದ್ಧಿಸಿದ್ದನು. ನಂತರ ಆತನು ಬಿಳಿವಸ್ತ್ರ ಕಪ್ಪಗೆ ಆಗಿರುವುದನ್ನು ಕಂಡು ಈ ರೀತಿ ಚಿಂತಿಸಿದನು.
                ಈ ವಸ್ತ್ರವು ಶುಚಿಯಾಗಿಯೇ ಇತ್ತು. ಆದರೆ ಈ ಅಸ್ತಿತ್ವದಿಂದಾಗಿ ಕಪ್ಪಾಯಿತು. ಈ ಕಾರಣದಿಂದಾಗಿ ಇದು ಕೊಳೆಯಾಯಿತು ಆತ ಹಾಗೆಯೇ ಪಂಚಖಂಧಗಳ (ದೇಹ ಮನಸ್ಸಿನ) ಬಗ್ಗೆ ಅರಿವನ್ನು ಆಳವಾಗಿ ಪಡೆಯಲು ಪ್ರಾರಂಭಿಸಿದನು. ನಂತರ ಹಾಗೆಯೇ ಅರಹಂತರ ಮಾರ್ಗದಲ್ಲಿ ತಲ್ಲೀನನಾದನು.
                ಆಗ ಭಗವಾನರು ಈ ಗಾಥೆಗಳನ್ನು ಈ ಅರ್ಥದಲ್ಲಿ ಹೇಳಿದರು.
                ಈ ಕೊಳೆಯು ಜರವಲ್ಲ, ನಿಜವಾದ ಕೊಳೆ ಲೋಭವಾಗಿದೆ/ದ್ವೇಷವಾಗಿದೆ/ಮೋಹ ಆಗಿದೆ. ಈ ಮೂರು ಅಕುಶಲಗಳಿಗೆ ಕೊಳೆಯೆಂದು ಕರೆಯುತ್ತಾರೆ ಹೊರತು ಬಟ್ಟೆಯ ಕೊಳೆಯನ್ನಲ್ಲ. ಯಾವ ಜ್ಞಾನಿಯು ಈ 3 ಅಕುಶಲವಾದ ಲೋಭ, ದ್ವೇಷ ಮತ್ತು ಮೋಹಗಳನ್ನು ವಜರ್ಿಸುವರೋ ಅವರು ವಿಗತರಜಸ್ಸ (ರಾಗದ್ವೇಷರಹಿತ ಮೋಹರಹಿತರು)ರ ಶಾಸನದಲ್ಲಿ ವಿಹರಿಸುವರು.
                ತಕ್ಷಣ ಪೂಜ್ಯ ಚೂಲಪಂಥಕ ನವಲೋಕೋತ್ತರ ಸ್ಥಿತಿ ಪ್ರಾಪ್ತಿ ಮಾಡಿದರು. ಹಾಗೆಯೇ 4 ಪಟಿಸಂಬಿದ ಜ್ಞಾನಸಹಿತ ಪ್ರಾಪ್ತಿ ಮಾಡಿದರು. ಜೊತೆಗೆ ಅಭಿಜ್ಞಾಗಳನ್ನು ಪ್ರಾಪ್ತಿ ಮಾಡಿದನು.
                ನಂತರ ಭಗವಾನರು ಜೀವಕನ ಮನೆಗೆ ಭಿಕ್ಷು ಸಂಘಸಹಿತ ಹೋದರು. ಆಗ ಜಿವಕನು ಬುದ್ಧರಿಗೆ ದಕ್ಷಿಣೋದಕ ತಂದರು. ಆಗ ಭಗವಾನರು ಜೀವಕ ವಿಹಾರದಲ್ಲಿ ಇನ್ನೂ ಭಿಕ್ಷುಗಳಿದ್ದಾರೆ ಎಂದರು. ಜೀವಕನ ಸೇವಕನು ಅಮ್ರವನಕ್ಕೆ ಬಂದನು ಅದೇವೇಳೆಯಲ್ಲಿ ಈ ಇಡೀ ಸನ್ನಿವೇಶ ಚುಲ್ಲಪಂಥಕನಿಗೆ ದಿವ್ಯದೃಷ್ಟಿಯಲ್ಲಿ ಅರಿವಾಯಿತು. ಆತ ತನ್ನ ಇದ್ಧಿಶಕ್ತಿಯಿಂದ ಸಹಸ್ರಾರು ತನ್ನಂತೆ ಶರೀರಗಳನ್ನು ಸೃಷ್ಟಿಸಿದನು. ಹಾಗು ಪ್ರತಿ ಚುಲ್ಲಪಂಥಕ ವಿಭಿನ್ನ ಕೆಲಸ ಮಾಡುತ್ತಿದ್ದರು. ಸೇವಕನು ಬಂದು ಚುಲ್ಲಪಂಥಕನಿಗೆ ಶಾಸ್ತರು ಕರೆಯುತ್ತಿದ್ದಾರೆ ಎಂದನು. ಆಗ ಸಹಸ್ರ ಮಂದಿಯು ನಾನು ಚುಲ್ಲಪಂಥಕ ಎಂದರು. ಆಗ ಸೇವಕ ಹಿಂತಿರುಗಿ ಭಂತೆ ಎಲ್ಲರೂ ಚುಲ್ಲಪಂಥಕರೇ. ಆಗ ಭಗವಾನರು ಸೇವಕನಿಗೆ ಮೊದಲು ಯಾರು ಚುಲ್ಲಪಂಥಕ ಎನ್ನುವರೋ ಅವರ ಕೈಯನ್ನು ಹಿಡಿದುಕೋ. ಉಳಿದವರು ಮಾಯಾ ಆಗುತ್ತಾರೆ. ನಂತರ ಹಾಗೇ ಆಯಿತು. ನಂತರ ಚುಲ್ಲಪಂಥಕ ಭಿಕ್ಷೆ ಸ್ವೀಕರಿಸಿದರು. ಇಲ್ಲಿಯೂ ಒಂದೇ ದಿನದಲ್ಲಿ ಇಷ್ಟೊಂದು ಬದಲಾವಣೆ ಮಾಡಿಸಿದರು.

                ಆ ಸಂದರ್ಭದಲ್ಲಿ ಭಗವಾನರು ಈ ಗಾಥೆಯನ್ನು ನುಡಿದರು. 

Tuesday, 23 December 2014

dhammapada/appamadavagga/2.2/kumbhagosara

ಯತ್ನಶಾಲಿಯು ಉನ್ನತವಾಗಿ ಯಶಸ್ವಿಯಾಗುತ್ತಾನೆ
ಪ್ರಯತ್ನಶೀಲನ, ಸ್ಮೃತಿವಂತನ, ಶುಚಿಕರ್ಮನ, ಸಂಯಮಶೀಲನ, ವಿಚಾರವಂತನ ಮತ್ತು ಧಮ್ಮಜೀವಿಯ ಯಶಸ್ಸು ಸದಾ ಬೆಳೆಯುತ್ತಿರುತ್ತದೆ.            (24)
ಗಾಥ ಪ್ರಸಂಗ 2:2
ಶ್ರೀಮಂತನ ಧ್ವನಿಯ ವಿಶಿಷ್ಟತೆ (ಕುಂಭಗೋಸರ)

                ಒಮ್ಮೆ ರಾಜಗೃಹದಲ್ಲಿ ಪ್ಲೇಗ್ ರೋಗವು ಭೀಕರವಾಗಿ ತಾಂಡವವಾಡಿತು. ಆಗ ನಗರದ ಲೇವಾದೇವಿಯವ, ಆತನ ಹೆಂಡತಿ ಮತ್ತು ಇತರರು ಆ ಭೀಕರ ರೋಗಕ್ಕೆ ಸಿಲುಕಿದರು. ಆಗ ಅವರು ರೋಗ ಬಾಧಿಸದಿದ್ದ ಕಿರಿಯ ಮಗನಾದ ಕುಂಭಗೋಸಕನನ್ನು ಕರೆದು ಮಗು ಪ್ಲೇಗ್ ರೋಗವು ಪೂರ್ಣವಾಗಿ ಇನ್ನಿಲ್ಲವಾದಾಗ ಪುನಃ ಈ ನಗರಕ್ಕೆ ಬಾ, ಇಲ್ಲಿದ್ದರೆ ನೀನು ಸಹಾ ಸಾಯುವೆ ಎಂದು ತಮ್ಮ ಐಶ್ವರ್ಯವನ್ನು ಬಚ್ಚಿಟ್ಟ ಸ್ಥಳ ಆತನಿಗೆ ತೋರಿಸಿದರು. ಆತ ಅದರಂತೆಯೇ ನಡೆದುಕೊಂಡನು. ಕೊನೆಗೆ ಬಹಳ ವರ್ಷಗಳ ಕಾಲದನಂತರ ಆತನು ನಗರಕ್ಕೆ ಹಿಂತಿರುಗಿದನು.
                ಆದರೆ ಆತನನ್ನು ಯಾರೂ ಗುರುತಿಸಲಿಲ್ಲ. ನಂತರ ಆತನು ತಂದೆ-ತಾಯಿಗಳು ಐಶ್ವರ್ಯವನ್ನು ಬಚ್ಚಿಟ್ಟ ಸ್ಥಳವನ್ನು ನೋಡಿದನು, ಅದು ಸುರಕ್ಷಿತವಾಗಿತ್ತು. ಆದರೆ ಆತನು ಅದನ್ನು ತೆಗೆಯುವ ಪ್ರಯತ್ನ ಮಾಡಲಿಲ್ಲ. ಏಕೆಂದರೆ ಆತನು ಅದನ್ನು ತೆಗೆದರೆ ಜನರು ಆತನ ಬಗ್ಗೆ ಮಿಥ್ಯ ಮಾರ್ಗದಿಂದ ಹಣ ಸಂಪಾದಿಸಿದನೆಂದು ಅವರು ಪಾಲು ಕೇಳುವ ಸಾಧ್ಯತೆಯಿತ್ತು. ಅಥವಾ ರಾಜನಿಗೆ ಹೇಳುವ ಸಾಧ್ಯತೆಯು ಇತ್ತು. ಆಗ ಈತನ ಪೂರ್ವಪರ ತಿಳಿಯದೆ ರಾಜನು ಆಸ್ತಿ ವಶಪಡಿಸಿಕೊಳ್ಳವ ಸಾಧ್ಯತೆಯಿತ್ತು. ಆದ್ದರಿಂದ ಆತನು ನಿಧಿಯನ್ನು ತೆರೆಯದೆ, ತನ್ನನ್ನು ಪೋಷಿಸಿಕೊಳ್ಳಲು ಮಾರ್ಗ ಹುಡುಕಿದನು. ಆಗ ಆತನು ಜನರಿಗೆ ಎಬ್ಬಿಸುವ ಕೆಲಸದಲ್ಲಿ ಸೇರಿಕೊಂಡನು. ಆತ ಪ್ರತಿನಿತ್ಯ ಜನರಿಗೆ ಏಳಿ ಇದು ಎದ್ದೇಳುವ ಸಮಯ ಅಥವಾ ಆಹಾರವನ್ನು ಸಿದ್ಧಪಡಿಸುವ ಸಮಯ ಅಥವಾ ಬಂಡಿಗಳನ್ನು ಏರುವ ಸಮಯ ಎಂದು ಜಾಗೃತಿಪಡಿಸುತ್ತಿದ್ದನು. ಆತನದು ನಗರದಲ್ಲಿ ಕೂಗುವ ಕೆಲಸವಾಗಿತ್ತು. ಏಕೆಂದರೆ ಆ ಕಾಲದಲ್ಲಿ ಅಲಾರಾಂ ಗಡಿಯಾರಗಳು ಇರಲಿಲ್ಲ.
                ಒಂದುದಿನ ರಾಜ ಬಿಂಬಸಾರನು ಆತನನ್ನು ನೋಡಿದನು, ರಾಜನಿಗೆ ಧ್ವನಿ ಕೇಳಿಯೇ ವ್ಯಕ್ತಿಗಳನ್ನು ಅಳೆಯುವಷ್ಟು ಸಾಮಥ್ಯವಿತ್ತು. ಕುಂಭಗೋಸಕನ ಧ್ವನಿ ಕೇಳಿ ಬಿಂಬಸಾರನಿಗೆ ಇದು ಐಶ್ವರ್ಯಶಾಲಿಯ ಧ್ವನಿ ಎಂದು ತನಗೆ ತಾನೇ ಹೇಳಿಕೊಂಡನು. ಅದನ್ನು ಕೇಳಿದ ರಾಜ ದಾಸಿಯೊಬ್ಬಳು ಆತನನ್ನು ಶೋಧಿಸಲು ಒಬ್ಬನನ್ನು ಕಳುಹಿಸಿದಳು. ಆದರೆ ಆತನು ಕೇವಲ ಕೂಗುವವ ಎಂದು ಗೊತ್ತಾಯಿತು. ಆದರೆ ಅದನ್ನು ರಾಜನಿಗೆ ತಿಳಿಸಿದಾಗಲು ರಾಜನು ದೃಢವಾಗಿ ಅದು ಖಂಡಿತವಾಗಿ ಐಶ್ವರ್ಯವಂತನ ಧ್ವನಿಯೇ ಎಂದು ಹೇಳಿದನು. ಮತ್ತೆ ಪರಿಶೋಧನೆ ನಡೆಸಿಯೂ ಆತನು ಶ್ರೀಮಂತನಲ್ಲವೆಂದು ತಿಳಿಸಲಾಯಿತು. ಆಗ ರಾಜದಾಸಿಯು ಸ್ವತಃ ತಾನೇ ಕಂಡುಹಿಡಿಯುವೆ ಎಂದು ತಿಳಿಸಿ ತನ್ನ ಮಗಳೊಂದಿಗೆ ಅಲ್ಲಿಗೆ ಬಂದಳು. ನಾವು ಯಾತ್ರಿಕರು ನಮಗೆ ಇರಲು ಸ್ಥಳನೀಡಿ ಎಂದು ಕೇಳಿಕೊಂಡು ಅಲ್ಲಿ ವಾಸ ಮಾಡಿದಳು. ಆ ಸಂದರ್ಭದಲ್ಲಿ ರಾಜನು ಒಂದು ಆಜ್ಞೆಯನ್ನು ಹೊರಡಿಸಿದನು. ಏನೆಂದರೆ ಒಂದು ಸಮಾರಂಭದ ವಿಶೇಷತೆಗಾಗಿ ಪ್ರತಿ ಕಾಮರ್ಿಕನು ತನ್ನ ಕಾಣಿಕೆಯನ್ನು ರಾಜ್ಯಕ್ಕೆ ನೀಡುವುದು. ಆದರೆ ಕುಂಭಗೋಸಕನ ಬಳಿ ಆ ಸಮಯದಲ್ಲಿ ಯಾವುದೇ ಹಣವಿರಲಿಲ್ಲ. ಆದ್ದರಿಂದಾಗಿ ಆತನು ಅಡಗಿಸಿಟ್ಟ ಸ್ಥಳದಿಂದ ಒಂದೆರಡು ಚಿನ್ನದ ನಾಣ್ಯಗಳನ್ನು ತೆಗೆಯಬೇಕಾಯಿತು ಮತ್ತು ಅದನ್ನು ನೀಡುವಂತೆ ಆತನು ದಾಸಿಗೆ ನೀಡಿದ್ದರಿಂದ ಆಕೆಯು ಅದನ್ನು ರಾಜನಿಗೆ ಒಪ್ಪಿಸಿದಳು. ಆಗ ರಾಜನು ವಿಚಾರಣೆಗಾಗಿ ಆತನನ್ನು ಕರೆಸಿದನು ಮತ್ತು ರಾಜನು ಆತನಿಗೆ ನೀನು ನಿರಪರಾಧಿಯಾಗಿದ್ದರೆ ನಿನಗೆ ಯಾವ ಹಾನಿಯೂ ಇಲ್ಲ ಸತ್ಯವನ್ನು ಹೇಳು ಎಂದು ನುಡಿದಾಗ ಆ ಯುವಕನು ತನ್ನ ತಂದೆಯು ಇದೇ ನಗರದ ಲೇವಾದೇವಿಯವ ಎಂದು ಹೇಳಿ ತನ್ನ ವೃತ್ತಾಂತವನ್ನೆಲ್ಲಾ ತಿಳಿಸಿದನು. ಅದನ್ನು ಕೇಳಿದ ಬಿಂಬಸಾರನು ಆತನಿಗೆ ನಗರದ ಲೇವಾದೇವಿಯ ಸ್ಥಾನವನ್ನು ನೀಡಿ ತನ್ನ ಮಗಳನ್ನು ನೀಡಿ ವಿವಾಹ ಮಾಡಿಸಿದನು

                ನಂತರ ಬಿಂಬಸಾರನು ತನ್ನ ಅಳಿಯನೊಂದಿಗೆ ಬುದ್ಧರನ್ನು ಕಾಣಲು ಹೊರಟನು. ಅಲ್ಲಿ ಭಗವಾನರಿಗೆ ವಿಷಯವೆಲ್ಲ ತಿಳಿಸಿದನು. ಆಗ ಭಗವಾನರು ಮೇಲಿನ ಗಾಥೆಯನ್ನು ಹೇಳಿದರು. 

dhammapada/appamadavagga/2.1/saamaavathi's metta power

ಅಪ್ಪಮಾದ ವಗ್ಗ

ಜಾಗರೂಕರು ಸಾಯುವುದಿಲ್ಲ, ಎಚ್ಚರಹೀನ ಸತ್ತಂತೆ
ಎಚ್ಚರಿಕೆಯಿಂದಿರುವಿಕೆ ಅಮರತ್ವದ ಪಥ, ಎಚ್ಚರಿಕೆಯಿಲ್ಲದಿರುವಿಕೆ ಮೃತ್ಯುವಿನ ಪಥ, ಎಚ್ಚರಿಕೆ ಇರುವವ ಸಾಯುವುದಿಲ್ಲ, ಎಚ್ಚರಿಕೆ ಇಲ್ಲದವರು ಮೃತ್ಯು ಹೊಂದಿದಂತೆ ಇರುತ್ತಾರೆ.     (21)
ಈ ವಿಶೇಷತೆ ಅರಿತ ಪಂಡಿತರು (ಜ್ಞಾನಿಗಳು) ಎಚ್ಚರಿಕೆಯಲ್ಲೇ ಆನಂದಿಸುತ್ತಾರೆ ಮತ್ತು ಆರ್ಯರ (ಅರಹಂತರ) ಕ್ಷೇತ್ರದಲ್ಲೇ ರತರಾಗುತ್ತಾರೆ.    (22)
ಸದಾ ಧ್ಯಾನಶೀಲರಾಗಿ ಸತತ ಪ್ರಯತ್ನಶೀಲರಾದ ಧೀರರು ಮಾತ್ರ ನಿಬ್ಬಾಣದಂತಹ, ಬಂಧವಿಮುಕ್ತ ಅನುತ್ತರವಾದ ಕ್ಷೇಮವನ್ನು ಅನುಭವಿಸುತ್ತಾರೆ.            (23)
ಗಾಥ ಪ್ರಸಂಗ 2:1
ಸಾಮಾವತಿಯ ಮೈತ್ರಿಯ ಶಕ್ತಿ
                ರಾಣಿ ಸಾಮಾವತಿಗೆ ಅನೇಕ ಸೇವಕಿಯರಿದ್ದರು. ಅವರಲ್ಲಿ ಖುಜ್ಜುತ್ತರಾಳ ಕಾರ್ಯವೇನೆಂದರೆ ಸುಮನ ಹೂಗಾರನಿಂದ ಹೂಗಳನ್ನು ಪ್ರತಿದಿನ ಕೊಂಡುತರುವುದು. ಒಂದುದಿನ ಖುಜ್ಜುತ್ತರಳು ಸುಮನನ ಮನೆಯಲ್ಲಿ ಬುದ್ಧೋಪದೇಶ ಕೇಳಿದಳು, ಆಕೆಯ ಹಿಂದಿನ ಜನ್ಮದ ಪುಣ್ಯದ ಫಲದಿಂದಾಗಿ ಆಕೆಯು ಸೋತಪತ್ತಿ ಫಲವನ್ನು ಪಡೆದಳು. ಆಕೆಯು ಅರಮನೆಗೆ ಹಿಂತಿರುಗಿದ ನಂತರ ಸಾಮಾವತಿ ಮತ್ತು ಆಕೆಯ ಸಖಿಯರಿಗೆ ಉಪದೇಶ ನೀಡಿದಳು. ಆಗ ಅದರ ಪರಿಣಾಮವಾಗಿ ಅವರು ಸಹಾ ಧಮ್ಮವನ್ನು ಅರಿತರು. ಆ ದಿನದಿಂದ ಆಕೆಗೆ ಬೇರ್ಯಾವ ದೊಡ್ಡ ಕಾರ್ಯ ನೀಡುತ್ತಿರಲಿಲ್ಲ. ಆಕೆಯನ್ನು ಸಾಮಾವತಿಯು ತಾಯಿಯಂತೆ ಮತ್ತು ಗುರುವಿನಂತೆ ಕಾಣುತ್ತಿದ್ದಳು. ಖುಜ್ಜುತ್ತರಳು ಅತ್ಯಂತ ಪ್ರಜ್ಞಾವಂತಳಾಗಿದ್ದಳು. ಆಕೆ ತಾನು ಕೇಳಿದ ಪ್ರತಿ ಬುದ್ಧವಚನವನ್ನು ಸಾಮಾವತಿ ಮತ್ತು ಆಕೆಯ ಸಖಿಯರಿಗೆ ತಿಳಿಸುತ್ತಿದ್ದಳು. ಸ್ವಲ್ಪ ಕಾಲದಲ್ಲೇ ಆಕೆಯು ಧಮ್ಮ ಪ್ರವೀಣೆಯಾದಳು.
                ಇದರಿಂದಾಗಿ ಸಾಮಾವತಿಗೆ ಮತ್ತು ಆಕೆಯ ಸಖಿಯರಿಗೆ ಬುದ್ಧರ ಮೇಲೆ ಭಕ್ತಿ-ಶ್ರದ್ಧೆಗಳು ಹೆಚ್ಚಾದವು. ಅವರು ಬುದ್ಧರಿಗೆ ಪೂಜಿಸಲು, ದಶರ್ಿಸಲು ಇಚ್ಛಿಸಿದರು. ಆದರೆ ರಾಜನು ನಿರಾಕರಿಸಬಹುದು ಎಂದು ಭಯವಿತ್ತು. ಆದ್ದರಿಂದಾಗಿ ಅವರು ಅರಮನೆಯ ಗೋಡೆಗಳ ರಂಧ್ರಗಳ ಮೂಲಕ ಬುದ್ಧರನ್ನು ನೋಡುತ್ತಿದ್ದರು. ಅಲ್ಲಿಂದಲೇ ಗೌರವಪೂರ್ವಕ ವಂದನೆಗಳನ್ನು ಸಲ್ಲಿಸುತ್ತಿದ್ದರು.
                ಅದೇ ಸಮಯದಲ್ಲಿ ರಾಜನು ಇನ್ನೊಂದು ಸ್ತ್ರೀಗೆ ವಿವಾಹವಾಗಿ ಆಕೆಯನ್ನು ತನ್ನ ರಾಣಿಯನ್ನಾಗಿಸಿದ್ದನು. ಆಕೆಯೇ ಮಾಗಂಡಿಯ, ಮಾಗಂಡಿಯಳು ಬ್ರಾಹ್ಮಣ ದಂಪತಿಯ ಮಗಳಾಗಿದ್ದಳು. ಆಕೆ ಅತಿರೂಪ ಸುಂದರಿಯಾಗಿದ್ದಳು. ಆ ಬ್ರಾಹ್ಮಣ ದಂಪತಿಗಳು ಆಕೆಗೆ ತಕ್ಕ ವರ ಬುದ್ಧರೇ ಎಂದು ತೀಮರ್ಾನಿಸಿದರು. ಅವರು ಬುದ್ಧರಲ್ಲಿಗೆ ಬಂದು ಈ ವಿಷಯ ತಿಳಿಸಿದರು. ಆಗ ಬುದ್ಧರು ಇಂತೆಂದರು:
                ಮಾರನ ಕುಮಾರಿಯರಾದ ತನ್ಹಾ, ಅರತಿ ಮತ್ತು ರಾಗ ಇವರು ಅತ್ಯಂತ ಸ್ಫುರದ್ರೂಪಿಗಳು, ಅವರನ್ನು ಕಂಡಾಗಲು ನನ್ನಲ್ಲಿ ಯಾವುದೇ ಆಸೆ ಉಂಟಾಗಲಿಲ್ಲ. ಇನ್ನೂ ಕೇವಲ ಕಶ್ಮಲಗಳಿಂದ ಕೂಡಿದ ಈ ದೇಹವನ್ನು ನಾನು ಇಚ್ಛಿಸುವೆನೇ? ಬುದ್ಧರು ಹಾಗೆ ಹೇಳುವುದಕ್ಕೆ ಕಾರಣವಿತ್ತು. ಆ ಬ್ರಾಹ್ಮಣ ದಂಪತಿಗಳಿಗೆ ಅನಾಗಾಮಿ ಪ್ರಾಪ್ತಿಯಾಗಬೇಕಾದರೆ ಅವರಿಗೆ ಪ್ರಾಥಮಿಕವಾಗಿ ದೇಹದ ಅಶುಭಾ ಜ್ಞಾನ ಅರಿವಾಗಬೇಕಿತ್ತು. ಅವರಿಗೆ ನಂತರದ ಬೋಧನೆಯಿಂದ ಅನಾಗಾಮಿ ಪ್ರಾಪ್ತಿಯಾಯಿತು.
                ಆದರೆ ಮಾಗಂಡಿಯಳು ಮಾತ್ರ ತನ್ನ ರೂಪ ಅಹಂಭಾವದಿಂದ ತನಗೆ ಅವಮಾನವಾದಂತೆ ಭಾವಿಸಿದಳು. ಇದಕ್ಕಾಗಿ ಪ್ರತಿಕಾರ ಸಂಕಲ್ಪವನ್ನು ಮಾಡಿದ್ದಳು. ಈಗ ಆಕೆಯು ರಾಜ ಉದೇನನ ಪತ್ನಿಯಾದಮೇಲೆ ಆಕೆಗೆ ಸಾಮಾವತಿಯ ಮೇಲೂ ಅಸೂಯೆ ಉಂಟಾಯಿತು. ಸಾಮಾವತಿಯು ರಂಧ್ರದ ಮೂಲಕ ಬುದ್ಧರನ್ನು ವೀಕ್ಷಿಸಿ ವಂದಿಸುವುದನ್ನು ಕಂಡ ಮಾಗಂಡಿಯಳು ಇಬ್ಬರ ಮೇಲೂ ಸೇಡು ತೀರಿಸಲು ತಕ್ಕಕಾಲ ಎಂದು ಭಾವಿಸಿ ಆಕೆಯು ರಾಜನಿಗೆ ಸಾಮಾವತಿಯು ನಂಬಿಕೆಗೆ ಅರ್ಹಳಲ್ಲ ಎಂದು ಹೇಳಿ ಸಾಮಾವತಿಯು ರಂಧ್ರಗಳಲ್ಲಿ ವೀಕ್ಷಿಸುವುದನ್ನು ಹೇಳಿದಳು. ಆದರೆ ರಾಜನಿಗೆ ಸಾಮಾವತಿಯು ವಿವರವಾಗಿ ತಿಳಿಸಿದಾಗ ಆತನಿಗೆ ಕೋಪ ಉಂಟಾಗಲಿಲ್ಲ.
                ಆದರೆ ಮಾಗಂಡಿಯಳು ಮಾತ್ರ ರಾಜನಿಗೆ ಪದೇ ಪದೇ ಸಾಮಾವತಿಯ ಮೇಲೆ ಸಂಶಯ ಉಂಟಾಗುವಂತೆ ಹೇಳಿಕೆಗಳನ್ನು ನೀಡುತ್ತಾ ಆಕೆಯು ಉದೇನನ್ನು ಕೊಲ್ಲಲು ಸಹಾ ಹವಣಿಸುತ್ತಾಳೆ ಎಂದು ಸುಳ್ಳು ಹೇಳಿದಳು. ಅದಕ್ಕಾಗಿ ಒಂದು ಕುಟಿಲೋಪಾಯವನ್ನು ಸಹಾ ಸಿದ್ಧಮಾಡಿದಳು. ರಾಜನು ಸಾಮಾವತಿಯ ಅಂತಃಪುರಕ್ಕೆ ಹೋಗುವ ಮುನ್ನ ಆತನ ಕೊಳಲಲ್ಲಿ ಚಿಕ್ಕ ವಿಷಸರ್ಪವನ್ನು ಅಡಗಿಸಿ ರಂಧ್ರವನ್ನು ಹೂವಿನಿಂದ ಮುಚ್ಚಿದಳು. ಆತನು ಸಾಮಾವತಿಯ ಬಳಿಗೆ ಹೋಗುವಾಗ ಆಕೆ ಹೋಗದಂತೆ ತಡೆದಳು. ಆತನಿಗೆ ಅಭದ್ರತೆಯಿರಬಹುದು ಎಂದು ಹೇಳಿ ನಟಿಸಿದಳು. ಆದರೆ ಉದೇನನು ಇವೆಲ್ಲವನ್ನು ಲಕ್ಷಿಸದೆ ಸಾಮವತಿಯ ಬಳಿಗೆ ಬಂದನು. ಅದೇ ವೇಳೆಯಲ್ಲಿ ಆ ಹಾವು ಹೊರಬಂದು ಹಾಸಿಗೆಯಲ್ಲಿ ಕಾಣಿಸಿತು. ಇದನ್ನು ಕಂಡ ರಾಜನಿಗೆ ಮಾಗಂಡಿಯಾಳ ಮಾತು ನಿಜವಿರಬಹುದೆಂದು ಮುಗ್ದೆ ಸಾಮಾವತಿಯ ಮೇಲೆ ಸಂಶಯಪಟ್ಟನು. ಹಾಗು ಕ್ರೋಧಗೊಂಡು ಸಾಮಾವತಿ ಮತ್ತು ಆಕೆಯ ಸಖಿಯರಿಗೆ ಎಲ್ಲರೂ ಒಂದು ಸಾಲಿನಲ್ಲಿ ಸಾಮವತಿಯ ಹಿಂದೆ ನಿಲ್ಲಲು ಹೇಳಿದನು. ನಂತರ ಆತನು ಬಿಲ್ಲನ್ನು ಕೈಯಲ್ಲಿ ಹಿಡಿದು ಬಾಣವನ್ನು ವಿಷದಲ್ಲಿ ಅದ್ದಿದನು. ಆತನು ಗುರಿಯಿಡುವುದರಲ್ಲಿ ಪ್ರವೀಣನಾಗಿದ್ದನು. ಆ ಸಮಯದಲ್ಲಿ ಸಾಮವತಿ ಮತ್ತು ಆಕೆಯ ಸಖಿಯರು ರಾಜನ ಮೇಲೆ ಕೋಪ ತಾಳಲಿಲ್ಲ. ಬದಲಾಗಿ ಮೈತ್ರಿಭಾವನೆ ಪ್ರಸರಿಸಿದರು. ಆಗ ಮೈತ್ರಿಯ ಪ್ರಚಂಡಶಕ್ತಿಯಿಂದಾಗಿ ರಾಜನು ಬಾಣವನ್ನು ಬಿಟ್ಟರೂ ಅದು ಗುರಿತಪ್ಪತೊಡಗಿತು. ಇದು ರಾಜನಿಗೆ ಅತ್ಯಂತ ಆಶ್ಚರ್ಯವನ್ನುಂಟು ಮಾಡಿ ಅವರ ಮುಗ್ದತೆ ಮತ್ತು ನಿರ್ಮಲತೆ ಅರಿವಾಗಿ ಸಾಮಾವತಿಗೆ ಬುದ್ಧರನ್ನು ಮತ್ತು ಸಂಘವನ್ನು ಅರಮನೆಗೆ ಆಹ್ವಾನಿಸಿ ಔತಣ ನೀಡಲು ಮತ್ತು ಧಮ್ಮಪ್ರವಚನ ಕೇಳಲು ಸ್ವಾತಂತ್ರ್ಯ ನೀಡಿದನು.
                ಇದರಿಂದಾಗಿ ಮಾಗಂಡಿಯಳು ಮತ್ತಷ್ಟು ಕ್ರುದ್ಧಳಾಗಿ ಸೋಲೇ ಉಂಟಾಗದಂತಹ ಕ್ರೂರ ಉಪಾಯವನ್ನು ಮಾಡಿದಳು. ಅದೆಂದರೆ ಆಕೆಯ ಸಂಬಂಧಿಯೊಬ್ಬನನ್ನು ಕರೆಯಿಸಿ ಸಾಮಾವತಿ ಮತ್ತು ಆಕೆಯ ಸಖಿಯರು ಅರಮನೆಯ ಒಳಗೆ ಇದ್ದಂತೆಯೇ ಅವರನ್ನು ಜೀವಂತ ಸುಡಲು ಸಾಮಾವತಿಯ ಅರಮನೆಗೆ ಬೆಂಕಿ ಇಡಿಸಿದಳು. ಆದರೆ ಅರಮನೆಯು ಹೊರಗಡೆಯಿಂದ ಉರಿಯುತ್ತಿದ್ದಂತೆ ಸಾಮವತಿ ಮತ್ತು ಆಕೆಯ ಸಖಿಯರು ಧ್ಯಾನಿಸಲು ಆರಂಭಿಸಿದರು. ಅವರಲ್ಲಿ ಕೆಲವರು ಸಕದಾಗಾಮಿ ಸ್ಥಿತಿ ತಲುಪಿದರು ಮತ್ತು ಮಿಕ್ಕವರು ಸಹಾ ಲಾಭ ಪಡೆದರು. ಆದರೆ ಆ ಹೊತ್ತಿಗಾಗಲೇ ಇಡೀ ಅರಮನೆಯು ಉರಿದು ಹೋಯಿತು.
                ಈ ಸುದ್ದಿಯು ಹಬ್ಬುತ್ತಿದ್ದಂತೆ ರಾಜನು ಸ್ಥಳಕ್ಕೆ ಧಾವಿಸಿದನು. ಆದರೆ ತುಂಬ ತಡವಾಗಿ ಹೋಗಿತ್ತು. ರಾಜನಿಗೆ ಇದು ಮಾಗಂಡಿಯಾಳ ಕೃತ್ಯವಿರಬಹುದೆಂದು ಸಂಶಯವಾಯಿತು. ಆದರೆ ಆತ ಅದನ್ನು ತೋರ್ಪಡಿಸಲಿಲ್ಲ. ಬದಲಾಗಿ ಆತ ಹೀಗೆ ಹೇಳಿದನು. ಯಾವಾಗ ಸಾಮಾವತಿಯು ಜೀವಂತವಾಗಿದ್ದಳಲ್ಲ ಆಗ ನನಗೆ ಸದಾ ಜೀವಭಯ ಕಾಡುತ್ತಿತ್ತು. ಈಗ ನನಗೆ ಮನಸ್ಸು ಶಾಂತವಾಗಿದೆ. ಇದನ್ನು ಯಾರು ಮಾಡಿರಬಹುದು? ನನ್ನನ್ನು ಅತಿಯಾಗಿ ಪ್ರೀತಿಸಿದವರು ಮಾತ್ರ ಇದನ್ನು ಮಾಡಿರಬಹುದು ಎಂದಾಗ ಇದನ್ನು ಕೇಳಿದ ದಡ್ಡಿ ಮಾಗಂಡಿಯಾ ಇದನ್ನು ನಾನೇ ಮಾಡಿಸಿದೆ ಎಂದಳು. ಇದನ್ನು ಕೇಳಿದ ರಾಜ ಆಕೆಗೆ ದೊಡ್ಡ ಬಹುಮಾನ ನೀಡುವುದಾಗಿ ಹೇಳಿ, ಅದಕ್ಕೆ ಸಂಬಂಧಿಸಿದ ಆಕೆಯ ಸಂಬಂಧಿಕರನು ಕರೆಸಿದನು. ನಂತರ ಎಲ್ಲರನ್ನೂ ಬಂಧಿಸಿ ಅರಮನೆಯ ಆವರಣದಲ್ಲಿ ಕೊಲ್ಲಿಸಿದನು. ಈ ರೀತಿಯಾಗಿ ಆಕೆಗೆ ತನ್ನ ಹೀನ ಪಾಪಕ್ಕಾಗಿ ಶಿಕ್ಷೆಯಾಯಿತು.
                ಭಗವಾನರಿಗೆ ಈ ಎರಡು ಘಟನೆಗಳು ತಿಳಿಸಲ್ಪಟ್ಟಾಗ ಅವರು ಈ ಮೇಲಿನ ಗಾಥೆಗಳನ್ನು ತಿಳಿಸಿದರು