Wednesday, 31 December 2014

dhammapada/appamadavagga/2.4/the festival of fools

ಎಚ್ಚರವುಳ್ಳವರಾಗಿ, ಎಚ್ಚರಹೀನರಾಗಬೇಡಿ
ಮೂರ್ಖರು ಮತ್ತು ದುಮರ್ೆಧಾವಿಗಳು ಎಚ್ಚರಹೀನತೆಯಲ್ಲಿ ಆನಂದಿಸುತ್ತಾರೆ. ಆದರೆ ಮೇಧಾವಿಗಳು ಎಚ್ಚರಿಕೆಯನ್ನು ಶ್ರೇಷ್ಠ ಧನದಂತೆ (ಅಮೂಲ್ಯ ಐಶ್ವರದಂತೆ) ರಕ್ಷಿಸುತ್ತಾರೆ.    (26)
ಆದ್ದರಿಂದ ಎಚ್ಚರಿಕೆ ಹೀನತೆಯಲ್ಲಿ ತೊಡಗಬೇಡ, ಇಂದ್ರೀಯ ಕಾಮಗಳಲ್ಲಿ ಅನುರಕ್ತನಾಗಬೇಡ, ಸದಾ ಎಚ್ಚರವುಳ್ಳವನು, ಧ್ಯಾನಿಯು ವಿಪುಲವಾದ ಸುಖವನ್ನು ಪಡೆಯುತ್ತಾನೆ.    (27)
ಗಾಥ ಪ್ರಸಂಗ 2:4
ಮೂರ್ಖರ ನಕ್ಷತ್ರ ಹಬ್ಬ

                ಶ್ರಾವಸ್ತಿಯಲ್ಲಿ ನಕ್ಷತ್ರ ಹಬ್ಬ ಎಂದು ಆಚರಿಸುತ್ತಿದರು. ಆದರೆ ಆ ಹಬ್ಬದ ಆಚರಣೆಯು ಅತ್ಯಂತ ತುಚ್ಛವಾಗಿತ್ತು. ಆ ಸಮಯದಲ್ಲಿ ಜನರು ತಮ್ಮ ತಮ್ಮಲ್ಲೇ ಬೂಸಾ, ಸಗಣಿ, ಎರಚುತ್ತ, ಬೈದಾಡುತ್ತ ಜನರಿಗೆ ತೊಂದರೆ ನೀಡುತ್ತಾ ನಗರದಲ್ಲಿ ಸುತ್ತಾಡುತ್ತಿದ್ದರು. ಈ ಹಬ್ಬವು ಏಳು ದಿನಗಳ ಕಾಲ ನಡೆಯುತ್ತಿತ್ತು. ಈ ರೀತಿ ತೊಂದರೆ ನೀಡಬಾರದು ಎಂದು ಬಯಸಿದರೆ ಆ ಗಲಭೆಕೋರರಿಗೆ ಸ್ವಲ್ಪ ಹಣ ನೀಡಬೇಕಿತ್ತು.

                ಆ ಸಮಯದಲ್ಲಿ ಬುದ್ಧ ಉಪಾಸಕರು ಶ್ರಾವಸ್ತಿಯಲ್ಲಿ ಹೇರಳವಾಗಿದ್ದರು. ಅವರು ಬುದ್ಧರ ಬಳಿಗೆ ಬಂದು ಏಳು ದಿನಗಳ ಕಾಲ ವಿಹಾರದಲ್ಲೇ ಉಳಿಯುವಂತೆ ಹೇಳಿ, ಆ ದಿನಗಳಲ್ಲಿ ಅವರು ಬುದ್ಧರಿಗೆ ಮತ್ತು ಸಂಘಕ್ಕೆ ಆಹಾರವನ್ನು ವಿಹಾರದಲ್ಲೇ ತಂದು ನೀಡಿದರು. ನಂತರ ಎಂಟನೇ ದಿನದಂದು ಬುದ್ಧರು ಮತ್ತು ಭಿಕ್ಷುಗಳಿಗೆ ನಗರಕ್ಕೆ ಆಹ್ವಾನಿಸಿ ಬೋಧನೆ ನೀಡುವಂತೆ ಕೇಳಿಕೊಂಡರು. ನಂತರ ಆ ಸಮಯದಲ್ಲಿ ಈ ಮೂರ್ಖರ ಆಚರಣೆ ಬಗ್ಗೆ ಪ್ರಸ್ತಾಪ ಬಂದಾಗ ಭಗವಾನರು ಈ ಮೇಲಿನ ಗಾಥೆಯನ್ನು ಹೇಳಿದರು. ಇದನ್ನು ಕೇಳಿ ಉಪಾಸಕರಿಗೆ ಧಮ್ಮದ ಮೇಲೆ ಶ್ರದ್ಧೆಯುಕ್ಕಿತು. 

No comments:

Post a Comment