Thursday, 15 January 2015

dhammapada/appamadavagga/2.5/mahakassapa

ಎಚ್ಚರಿಕೆಯಿಂದ ಅಲಕ್ಷವನ್ನು ಗೆಲ್ಲಬಹುದು
ಪಂಡಿತರು (ಜ್ಞಾನಿಗಳು) ಎಚ್ಚರಿಕೆಯಿಂದ ಅಲಕ್ಷವನ್ನು ದೂರೀಕರಿಸುತ್ತಾರೆ. ಅವರು ಪ್ರಜ್ಞಾದ ಗೋಪುರವನ್ನೇರಿ ಶೋಕ ಶೂನ್ಯರಾಗಿ ಶೋಕದಿಂದಿರುವ ಪ್ರಜೆಗಳನ್ನು ಕಾಣುತ್ತಾರೆ. ಹೇಗೆ ಪರ್ವತಶಿಖರದಿಂದ ಕೆಳಗಿನ ಭೂಮಿಯನ್ನು ಕಾಣುವರೋ ಹಾಗೆ ಧೀರರು ಅಜ್ಞಾನಿಗಳನ್ನು ಕಾಣುತ್ತಾರೆ.       (28)
ಗಾಥ ಪ್ರಸಂಗ 2:5
ಜನ್ಮಗಳಲ್ಲಿ ಬಿದ್ದು ಒದ್ದಾಡುವ ಜೀವಿಗಳ ದೃಶ್ಯ
                ಒಂದುದಿನ ಮಹಾಕಸ್ಸಪರು ಪಿಪ್ಪಲಿ ಗುಹೆಯಲ್ಲಿ ವಾಸವಾಗಿದ್ದರು. ಅವರು ರಾಜಗೃಹದಲ್ಲಿ ಆಹಾರವನ್ನು ಸ್ವೀಕರಿಸಿ ಸೇವಿಸಿದ ನಂತರ ಪದ್ಮಾಸನಬದ್ಧರಾಗಿ ತಮ್ಮ ವಿಶುದ್ಧ ನೇತ್ರದ ನೋಟದಿಂದ ಸರ್ವಜೀವಿಗಳನ್ನು ವೀಕ್ಷಿಸಿದರು. ಆ ಜೀವಿಗಳಲ್ಲಿ ಅಲಕ್ಷವುಳ್ಳವರು, ಜಾಗೃತರು, ಹೇಗೆ ತಮ್ಮ ಕರ್ಮಾನುಸಾರವಾಗಿ ಜನ್ಮಗಳನ್ನು ಪಡೆದು ದುಃಖವನ್ನು ಅನುಭವಿಸುತ್ತವೆ ಎಂಬುದನ್ನು ವೀಕ್ಷಿಸಿದರು. ಅವರು ಜೀವಿಗಳ ಅಸ್ತಿತ್ವವನ್ನು ಕಲ್ಪಕಲ್ಪಗಳಿಂದ ಹೇಗೆ ವತರ್ಿಸುತ್ತ ಬಂದಿವೆ ಎಂಬುದನ್ನು ನೋಡುತ್ತಿದ್ದರು. ಇನ್ನೂ ನೋಡಲು ಪ್ರಯತ್ನಿಸಿದಾಗ ವಿಫಲರಾದರು.

                ಅದೇವೇಳೆಯಲ್ಲಿ ಬುದ್ಧಭಗವಾನರು ಜೇತವನದಲ್ಲಿ ಕುಳಿತಿದ್ದರು. ಅವರು ಮಹಾಕಸ್ಸಪರು ಏನು ಮಾಡುತ್ತಿರಬಹುದು ಎಂದು ವೀಕ್ಷಿಸಿದಾಗ ಮಹಾಕಸ್ಸಪರವರು ಜೀವಿಗಳ ಏಳುಬೀಳುಗಳನ್ನು ಕಾಣುತ್ತಿರುವುದು ತಿಳಿಯಿತು. ಆಗ ಬುದ್ಧ ಭಗವಾನರು ತಮ್ಮ ಪ್ರತಿಬಿಂಬ ಸ್ವರೂಪದ ಕಿರಣವನ್ನು ಮಹಾಕಸ್ಸಪರ ಮುಂದೆ ಪ್ರತ್ಯಕ್ಷ ಮಾಡಿಸಿ ಈ ರೀತಿ ಹೇಳಿದರು. ಮಗು ಕಸ್ಸಪ, ಜನನ ಮರಣಗಳ ಚಕ್ರದ ಜ್ಞಾನವು ಪೂರ್ಣವಾಗಿ ಅರಿಯಲು ನಿನ್ನಿಂದಾಗದು ಕಸ್ಸಪ, ಅದು ನಿನ್ನ ಎಲ್ಲೆಯನ್ನು ಮೀರಿದ್ದು. ಅದು ಕೇವಲ ಬುದ್ಧರ ಕ್ಷೇತ್ರವಾಗಿದೆ. ಬುದ್ಧರು ಮಾತ್ರ ತಿಳಿಯಬಲ್ಲರು ಮತ್ತು ಹೇಳಬಲ್ಲರು ಎಂದು ಹೇಳಿ ಮೇಲಿನ ಗಾಥೆಯನ್ನು ಹೇಳಿದರು. 

No comments:

Post a Comment