ಒಳಿತು ಒಳಿತಿಗೆ ಜನ್ಮ ನೀಡುತ್ತದೆ
ಮನಸ್ಸು ಎಲ್ಲಾ
(ಕುಶಲ) ಸ್ಥಿತಿಗಳಿಗೆ ಮುಂದಾಳಾಗಿದೆ. ಮನಸ್ಸೇ ನಾಯಕವಾಗಿದೆ. ಮನಸ್ಸಿನಿಂದಲೇ ಅವೆಲ್ಲವೂ
ನಿಮರ್ಿತವಾಗಿದೆ. ಒಬ್ಬನು ಪರಿಶುದ್ಧ ಮನಸ್ಸಿನಿಂದ ಮಾತನಾಡಿದರೆ ಅಥವಾ ಕಾರ್ಯ ಮಾಡಿದರೆ ಆತನಿಗೆ
ಸುಖವು ಎಂದೆಂದಿಗೂ ಹಿಂಬಾಲಿಸುವ ನೆರಳಿನಂತೆ ಹಿಂಬಾಲಿಸುತ್ತದೆ.
(2)
ಗಾಥ ಪ್ರಸಂಗ 1:2
ಬುದ್ಧ ದರ್ಶನದ
ಮಹತ್ವತೆ (ಮಥ್ಥ ಕುಂಡಲಿ)
ಮಥ್ಥ ಕುಂಡಲಿ ಎಂಬ ಬ್ರಾಹ್ಮಣ ಯುವಕನಿದ್ದನು. ಆತನ
ತಂದೆಯು ಪರಮ ಜಿಪುಣನಾಗಿದ್ದನು. ಆತನು ಎಂದಿಗೂ ಯಾರಿಗೂ ದಾನವನ್ನೇ ನೀಡಿರಲಿಲ್ಲ. ಆತನ ಮಗನಿಗಾಗಿ
ನೀಡಿದ್ದ ಚಿನ್ನದ ಆಭರಣಗಳನ್ನು ಸಹಾ ಕುಶಲಕಮರ್ಿಗಳಿಗೆ ಭತ್ಯೆ ನೀಡಬೇಕಾಗುತ್ತದೆ ಎಂದು ಸ್ವತಃ
ನಿಮರ್ಿಸಿದ್ದನು.
ಒಂದುದಿನ ಮಥ್ಥ ಕುಂಡಲಿಗೆ ಕಾಮಾಲೆ ರೋಗ ಬಂದಿತು. ಹಣದ
ಮೇಲಿನ ಆಸೆಯಿಂದ ಆತನ ತಂದೆಯು ವೈದ್ಯನಿಗೂ ತೋರಿಸಲಿಲ್ಲ. ಆತನಿಗೆ ತನ್ನ ಮಗನು ಅಂತಿಮ ಕ್ಷಣಗಳ
ಸ್ಥಿತಿಗೆ ಬಂದಿರುವುದನ್ನು ಕಂಡು ಆತನು ಮಗನನ್ನು ಹೊರಗಡೆಯ ವರಾಂಡದಲ್ಲಿ ಇರಿಸಿದ. ಅದಕ್ಕೆ
ಕಾರಣವೇನೆಂದರೆ ಬರುವ ಜನರಿಗೆ ತನ್ನ ಐಶ್ವರ್ಯ ತಿಳಿಯದಿರಲಿ ಎಂದು.
ಬುದ್ಧ ಭಗವಾನರು ಪ್ರಾತಃ ಕಾಲದಲ್ಲಿ ಮಹಾ ಕರುಣಾ
ಸಮಾಪತ್ತಿಯಲ್ಲಿ ಮಥ್ಥ ಕುಂಡಲಿಯ ದೀನ ಸ್ಥಿತಿಯನ್ನು ಕಂಡರು. ಆತನಿಗಾಗಿ ಆತನ ಮನೆಯ ಬಾಗಿಲಿನ ಬಳಿ
ನಿಂತರು. ನಂತರ ಬುದ್ಧ ಭಗವಾನರು ಆತನ ಗಮನ ತಮ್ಮತ್ತ ತಿರುಗಿಸಲು ಕಿರಣವೊಂದನ್ನು ಕಳುಹಿಸಿದರು.
ಆಗ ಆ ಯುವಕ ತನ್ನ ಗಮನ ಬುದ್ಧರೆಡೆಗೆ ಹರಿಸಿದನು. ಬುದ್ಧರನ್ನು ನೋಡಿದನು. ಆತನ ಶರೀರ ಬಹಳ
ದುರ್ಬಲವಾಗಿತ್ತು. ಆದರೆ ಶ್ರದ್ಧೆಯುಕ್ಕಿ ಆನಂದಿತನಾದನು. ಬುದ್ಧ ಭಕ್ತಿಯ ಆನಂದದಿಂದಲೇ ಆತನು
ಮೃತ್ಯುವಶವಾದನು. ಪರಿಣಾಮವಾಗಿ ಆತನು ತಾವತಿಂಸ ದೇವಲೋಕದಲ್ಲಿ ಜನಿಸಿದನು.
ಆತನು ಆ ದಿವ್ಯಸ್ಥಿತಿಯ ಸ್ಥಾನದಿಂದಲೇ ತನ್ನ ತಂದೆಯು
ಸ್ಮಶಾನದಲ್ಲಿ ಅಳುತ್ತಿರುವುದನ್ನು ಕಂಡನು. ಆಗ ವೃದ್ಧನ ಬಳಿ ತನ್ನ ಹಿಂದಿನ ಆಕಾರದಿಂದ
ಕಾಣಿಸಿದನು. ಮತ್ತು ತನ್ನ ವೃತ್ತಾಂತ ತಿಳಿಸಿ ಬುದ್ಧರ ಬಳಿಗೆ ಬೋಧನೆ ಕೇಳಲು ಪ್ರೋತ್ಸಾಹಿಸಿದನು.
ಆತನು ಅದರಂತೆಯೇ ನಡೆದುಕೊಂಡನು. ಆತನಿಗೆ ಬೋಧನೆಯ ಶ್ರೇಷ್ಠತೆ ಅರಿವಾಗಿ ಆತನ ಜಿಪುಣತೆ ನಾಶವಾಗಿ,
ಆತ ಅಂದಿನಿಂದ ದಾನಿಯಾದನು.
ನಂತರ ಈ ವಿಷಯವು ಎಲ್ಲಾ ಕಡೆ ದೃಢವಾಯಿತು. ಏನೆಂದರೆ
ಒಬ್ಬನು ದಾನ, ಶೀಲ ಇಲ್ಲದೆಯೂ
ಬುದ್ಧರ ಮೇಲಿನ ಶ್ರದ್ಧಾಭಕ್ತಿಯ ಆನಂದದಿಂದ ಒಂದುವೇಳೆ ಅದೇ ಸಮಯದಲ್ಲಿ ಮೃತ್ಯು ಹೊಂದಿದರೆ
ಆತನಿಗೆ ಸುಗತಿಯು ಲಭಿಸುವುದು.
ಈ ಗಾಥೆಯು ಆ ಸಮಯದಲ್ಲಿ ನುಡಿದುದ್ದಾಗಿದೆ
No comments:
Post a Comment