Saturday, 25 October 2014

dhammapada/yamaka vagga/1:6/maha kaala and chula kaala

ಬಲಹೀನರು ಪ್ರಲೋಭನೆಗೆ ವಶರಾಗುತ್ತಾರೆ, ಬಲಿಷ್ಠರಲ್ಲ
ಸುಂದರ ಸುಖಕರ ಎಂದು ಚಿಂತಿಸುತ್ತ ಜೀವಿಸುವವನನ್ನು ಇಂದ್ರೀಯಗಳಲ್ಲಿ ಸಂಯಮಿಯಲ್ಲದವನನ್ನು, ಭೋಜನದಲ್ಲಿ ಮಿತವಿಲ್ಲದವನನ್ನು, ಆಲಸಿಯನ್ನು, ಹೀನವೀರ್ಯನನ್ನು, ಮಾರನು ದುರ್ಬಲವಾದ ಮರವನ್ನು ವಾಯುವು ಉರುಳಿಸುವಂತೆ ವಶಪಡಿಸಿಕೊಳ್ಳುವನು.      (7)
ಅಶುಭ ಧ್ಯಾನದಲ್ಲಿ ವಿಹರಿಸುವವನ್ನು, ಇಂದ್ರಯ ಸಂಯಮಿಯನ್ನು, ಭೋಜನದಲ್ಲಿ ಮಿತಿಯಿರುವವನನ್ನು, ಪೂರ್ಣ ಶ್ರದ್ಧೆಯಿರುವವನನ್ನು ಅಪಾರ ಯತ್ನಶೀಲನನ್ನು, ಅಂತಹವನನ್ನು ಪರ್ವತದಂತಹ ಹೆಬ್ಬಂಡೆಯನ್ನು ವಾಯುವು ಏನೂ ಮಾಡಲಾರದಂತೆ ಮಾರನು ವಶಪಡಿಸಿಕೊಳ್ಳಲಾರನು. (8)
ಗಾಥ ಪ್ರಸಂಗ 1:6
ಭಿಕ್ಷುಗಳಾದ ಮಹಾಕಾಲ ಮತ್ತು ಚುಲ್ಲ (ಚಿಕ್ಕ) ಕಾಲ

                ಮಹಾಕಾಲ ಮತ್ತು ಚುಲ್ಲಕಾಲ ಇವರಿಬ್ಬರು ಸಹೋದರರು. ಹಿಂದೆ ವ್ಯಾಪಾರಿಗಳಾಗಿದ್ದರು. ಅವರು ವ್ಯಾಪಾರಕ್ಕಾಗಿ ಪ್ರಯಾಣಿಸುವಾಗ ಬುದ್ಧರಿಂದ ಅವರಿಗೆ ಧಮ್ಮ ಆಲಿಸುವ ಅವಕಾಶ ಸಿಕ್ಕಿತು. ಪ್ರವಚನದ ನಂತರ ಮಹಾಕಾಲ ಭಿಕ್ಷುವಾದರು. ಹಾಗೆಯೇ ಚುಲ್ಲಕಾಲ ಕೂಡ ಭಿಕ್ಷುವಾದರೂ ಅಂತಹ ಶ್ರದ್ಧೆಯಿರಲಿಲ್ಲ.
                ಮಹಾಕಾಲರವರು ಧ್ಯಾನದಲ್ಲಿ ಅತಿ ಗಂಭೀರರಾದರು ಮತ್ತು ಅಶುಭ (ಅಸುಂದರ) ಧ್ಯಾನದಲ್ಲಿ ತಲ್ಲೀನರಾಗಿ ದೇಹದ ನಶ್ವರತೆ ಅರಿವಾಗಿ ಹಾಗೆಯೇ ಹಂತಹಂತವಾಗಿ ಮುಂದುವರೆದು ಅರಹಂತರಾದರು. ಅದಕ್ಕಾಗಿ ಅವರು ಹೀಗೆ ಶ್ರಮಪಟ್ಟಿದ್ದರು. ರಾತ್ರಿ 10 ಗಂಟೆಗೆ ಎಲ್ಲರೂ ಮಲಗಿ ನಿದ್ರಿಸುತ್ತಿರುವಾಗ ಅವರು ಸ್ಮಶಾನಕ್ಕೆ ಹೋಗಿ ಅಲ್ಲಿ ಸಾಧನೆ ಮಾಡಿ ಸೂಯರ್ೊದಯಕ್ಕೆ ಮುಂಚೆ ವಿಹಾರಕ್ಕೆ ಹಿಂತಿರುಗುತ್ತಿದ್ದರು.
                ಒಮ್ಮೆ ಸುಂದರಳಾಗಿದ್ದ ಸ್ತ್ರೀಯು ಮರಣ ಹೊಂದಿದಳು. ಆಕೆಯನ್ನು ಸುಡಲು ಆಕೆಯ ಬಂಧು-ಮಿತ್ರರೆಲ್ಲ ಬಂದು ಅವರಿಗೆ ದಹನಕ್ರಿಯೆ ನೋಡಲು ಹಿಂಜರಿಕೆಯಾಗಿ ಕಾವಲುಗಾರಳಿಗೆ ಒಪ್ಪಿಸಿ ಸುಡಲು ಹೇಳಿ ಹೊರಟರು. ಕಾವಲುಗಾರಳಿಗೆ ಅಲ್ಪಸ್ವಲ್ಪ ಧಮ್ಮದ ಪರಿಚಯವಿತ್ತು ಮತ್ತು ಆಕೆಯು ಮಹಾಕಾಲರವರು ಸ್ಮಶಾನದಲ್ಲಿ ಬಂದು ಸಾಧನೆ ಮಾಡುವುದು ತಿಳಿದಿತ್ತು. ಆಕೆಯು ಆ ಶವವನ್ನು ನೋಡಿ ಅಶುಭಾಧ್ಯಾನ ಮಾಡಲು ಯೋಗ್ಯವಾದ ಶರೀರವಿದು ಎಂದುಕೊಂಡು ಆಕೆಯು ಮಹಾಕಾಲರಿಗೆ ಈ ವಿಷಯ ತಿಳಿಸಿದಳು. ಅವರು ಬಂದು ಆ ಶವವನ್ನು ತಲೆಯಿಂದ ಪಾದದವರೆಗೂ ವೀಕ್ಷಿಸಿದರು. ಅದು ಚಿನ್ನದ ಬಣ್ಣದ ಶವವಾಗಿತ್ತು. ಅವರು ಶವ ಸುಡುವವಳಿಗೆ ಶವವನ್ನು ಅಗ್ನಿಯಲ್ಲಿ ಇಡಲು ಹೇಳಿ ವೀಕ್ಷಿಸುತ್ತಾ ಹೋದರು. ಸ್ವಲ್ಪ ಕಾಲದಲ್ಲಿ ಆ ಚಿನ್ನದ ಬಣ್ಣದ ಶರೀರ ಅತ್ಯಂತ ವಿಕಾರವಾಗಿ ಹಂತಹಂತವಾಗಿ ಅತ್ಯಂತ ಅಸಹ್ಯ ರೂಪ ಹೊಂದಿ ಕರಕಲಾಯಿತು. ಯಾವ ದೇಹ ಧಮ್ಮವನ್ನು ಮರೆಸುವಂತಿತ್ತೊ, ಅದು ವಿಕಾರವಾಗಿದೆ ಮತ್ತು ಮರಣ ಹೊಂದಿದೆ ಎಂದು ಚಿಂತಿಸುತ್ತಾ ಮಹಾಕಾಲರವರು ಶವದ ಅಶುಭವನ್ನು ಧ್ಯಾನಿಸುತ್ತಾ ಅನಿತ್ಯ ಸಾಕ್ಷಾತ್ಕಾರವಾಗಿ ಹಾಗೆಯೇ ಮುಂದುವರೆದು ಅರಹಂತರಾದರು.
                ಮುಂದೆ ಒಮ್ಮೆ ಮಹಾಕಾಲ ಮತ್ತು ಚುಲ್ಲಕಾಲರವರು ಬುದ್ಧರೊಂದಿಗೆ ಸಿಂಪಸ್ಸು ಕಾಡಿನಲ್ಲಿ ತಂಗುವ ಅವಕಾಶ ಒದಗಿಬಂತು. ಅಲ್ಲಿ ಅವರಿಗೆ ಚುಲ್ಲಕಾಲರವರ ಪತ್ನಿಯರು ಔತಣಕ್ಕೆ ಆಹ್ವಾನಿಸಿದರು. ಹಾಗೆಯೇ ಆಹಾರ ಬಡಿಸಿದರು. ಅಲ್ಲಿ ಚುಲ್ಲಕಾಲನಿಗೆ ಆಕಷರ್ಿಸಿ ವಶಮಾಡಿಕೊಂಡು ಗೃಹಸ್ಥನನ್ನಾಗಿ ಮಾಡಿಕೊಂಡರು.
                ಮಾರನೆಯದಿನ ಮಹಾಕಾಲನ ಪತ್ನಿಯರು ಇದರಿಂದ ಪ್ರೇರಣೆ ಹೊಂದಿ ಅವರೂ ಸಹ ಔತಣಕ್ಕೆ ಆಹ್ವಾನಿಸಿದರು. ಔತಣದ ನಂತರ ಅವರು ಬುದ್ಧರಲ್ಲಿ ಮಹಾಕಾಲನನ್ನು ಅನುಮೋದನೆ ಮಾಡಲು ಉಳಿಯುವಂತೆ ಕೇಳಿಕೊಂಡರು. ಆಗ ಬುದ್ಧರು ಮತ್ತು ಸಂಘವು ಮಹಾಕಾಲನನ್ನು ಬಿಟ್ಟು ಹೊರಟರು.
                ನಂತರ ಆ ಪತ್ನಿಯರು ಮಹಾಕಾಲನನ್ನು ವಶಪಡಿಸಲು ಪ್ರಯತ್ನಿಸಿದರು. ಆದರೆ ಅರಹಂತರಾದ ಮಹಾಕಾಲರವರು ಗಾಳಿಯಲ್ಲಿ ತೇಲಿ ಹಾಗೆಯೇ ಹಾರಿ ಬುದ್ಧರಲ್ಲಿಗೆ ಬಂದು ವಂದಿಸಿದರು. ಆ ಸಮಯದಲ್ಲಿ ಭಿಕ್ಷುಗಳು ಈ ಅಣ್ಣ ತಮ್ಮಂದಿರ ಬಗ್ಗೆ ಚಚರ್ಿಸುವಾಗ ಬುದ್ಧರು ಈ ಗಾಥೆಯನ್ನು ನುಡಿದರು

No comments:

Post a Comment