ಪ್ರೀತಿ (ಮೆತ್ತಾ) ಯಿಂದ
ಕೋಪವನ್ನು ಜಯಿಸಬಹುದು
ವೈರದಿಂದ ವೈರ್ಯವು
ಈ ಜಗತ್ತಿನಲ್ಲಿ ಎಂದೂ ಶಮನವಾಗುವುದಿಲ್ಲ. ಅವೈರದಿಂದ (ಪ್ರೀತಿಯಿಂದ) ಮಾತ್ರ ಶಮನವಾಗುತ್ತದೆ.
ಇದೇ ಸನಾತನ ಧಮ್ಮವಾಗಿದೆ (5)
ಗಾಥ ಪ್ರಸಂಗ 1:4
ಹಲವಾರು
ಜನ್ಮಗಳವರೆಗೆ ಮುಂದುವರೆದ ದ್ವೇಷ (ಕಾಲ ಯಕ್ಷಿಣಿ)
ಒಮ್ಮೆ ಒಬ್ಬ ಗೃಹಸ್ಥನಿಗೆ ಬಂಜೆಯಾದ ಹೆಂಡತಿಯಿದ್ದಳು.
ಆಕೆಯು ಮಕ್ಕಳನ್ನು ಹಡೆಯದ ಕಾರಣ ಮತ್ತು ತನ್ನ ಗಂಡನು ಕೆಟ್ಟದಾಗಿ ವತರ್ಿಸಬಹುದೆಂಬ ಭೀತಿಯಿಂದ
ಆಕೆಯೇ ಒಂದು ಹೆಣ್ಣನ್ನು ಆಯ್ಕೆಮಾಡಿ ಮದುವೆ ಮಾಡಿಸಿದಳು. ಆದರೆ ಆ ನವವಧುವು ಗಭರ್ಿಣಿಯಾಗುವ
ಚಿಹ್ನೆ ಕಂಡುಬಂದಾಗ ಆಕೆ ಆಹಾರದಲ್ಲಿ ಕೆಲವು ಔಷಧಿ ಮಿಶ್ರಣ ಮಾಡಿ ಗರ್ಭಪಾತ ಮಾಡಿಸುತ್ತಿದ್ದಳು.
ಇದೇರೀತಿ 2 ಬಾರಿ ಮಾಡಿದಳು. 3ನೆಯ ಬಾರಿ ಆಕೆ ಗಭರ್ಿಣಿಯಾದಾಗ ತನ್ನ ಸವತಿಗೆ ಈ
ವಿಷಯವನ್ನು ತಿಳಿಸಲಿಲ್ಲ. ಆದರೆ ನಿಧಾನವಾಗಿ ಆ ವಿಷಯ ತಿಳಿದುದರಿಂದಾಗಿ ಆ ಹಿರಿಯ ಸವತಿಯು
ಗರ್ಭಪಾತ ಮಾಡಿಸಿದಳು. ದುಷ್ಟರಿಣಾಮವಾಗಿ ಆ ಎರಡನೆಯ ಹೆಂಡತಿಯು ಮಗುವಿಗೆ ಜನ್ಮ ನೀಡುವಾಗ
ಸತ್ತಳು. ಆದರೆ ಸಾಯುವಾಗ ಆಕೆಯು ಬಂಜೆಯೊಂದಿಗೆ ಸೇಡು ತೀರಿಸುವೆ ಎಂದು ಪ್ರತಿಜ್ಞೆ ಮಾಡಿ
ಸತ್ತಳು. ಈ ರೀತಿಯಾಗಿ ಆ ವೈರವು ಪ್ರಾರಂಭವಾಯಿತು.
ಮುಂದಿನ ಜನ್ಮದಲ್ಲಿ ಅವರಿಬ್ಬರು ಕೋಳಿ ಮತ್ತು ಬೆಕ್ಕು
ಆಗಿ ಜನ್ಮಿಸಿದರು. ಬೆಕ್ಕು ಕೋಳಿಯನ್ನು ತಿಂದಿತು. ನಂತರ ಇನ್ನೊಂದು ಜನ್ಮದಲ್ಲಿ ಜಿಂಕೆ ಮತ್ತು
ಚಿರತೆಯಾಗಿ ಹುಟ್ಟಿದರು. ಚಿರತೆಯು ಜಿಂಕೆಯನ್ನು ತಿಂದಿತು. ನಂತರ ಮುಂದಿನ ಜನ್ಮದಲ್ಲಿ
ಶ್ರಾವತ್ತಿಯ ಶ್ರೇಷ್ಠಿಯ ಮಗಳು ಗರ್ಭವತಿಯಾಗಿ ನಂತರ ಮಗುವಿನ ತಾಯಿಯಾದಳು. ಆ ಮಗುವನ್ನು ತಿನ್ನಲು
ಯಕ್ಷಿಣಿಯು ಧಾವಿಸಿದಳು. ಆಕೆ ರಕ್ಷಣೆಗಾಗಿ ಮಗುವನ್ನು ಎತ್ತಿಕೊಂಡು ಓಡಿದಳು. ಕೊನೆಗೆ ಓಡುತ್ತಾ
ಜೇತವನದಲ್ಲಿ ಧರ್ಮಬೋಧನೆ ಮಾಡುತ್ತಿದ್ದ ಬುದ್ಧರ ಬಳಿಗೆ ಬಂದು ಅವರ ಪಾದದ ಬಳಿ ಮಗುವನ್ನು ಇಟ್ಟು
ಬುದ್ಧರ ರಕ್ಷಣೆ ಬೇಡಿದಳು. ಯಕ್ಷಿಣಿಗೆ ವಿಹಾರದಲ್ಲಿ ಪ್ರವೇಶಿಸಲು ಸಾಧ್ಯವಾಗಲಿಲ್ಲ. ನಂತರ
ಬುದ್ಧರು ಇಬ್ಬರನ್ನೂ ಕರೆಸಿ ಹಿಂದಿನ ಜನ್ಮದ ವಿಷಯ ತಿಳಿಸಿ, ಮೈತ್ರಿಯ ಲಾಭ ತಿಳಿಸಿ, ಮೇಲಿನ ಗಾಥೆ ಹೇಳಿ ಇಬ್ಬರಲ್ಲೂ ಮೈತ್ರಿಯನ್ನು
ಪ್ರತಿಷ್ಠಾಪಿಸಿದರು. ಇಬ್ಬರೂ ತಮ್ಮ ತಮ್ಮ ತಪ್ಪನ್ನು ಒಪ್ಪಿ ಸ್ನೇಹದಿಂದಿರಲು ಒಪ್ಪಿದರು. ನಂತರ
ಬುದ್ಧರು ಗೃಹಿಣಿಗೆ ಆಕೆಯ ಮಗುವನ್ನು ಯಕ್ಷಿಣಿಗೆ ನೀಡುವಂತೆ ಹೇಳಿದರು. ಗೃಹಿಣಿಗೆ ಭಯವಾಯಿತು.
ಆದರೂ ಬುದ್ಧರ ಮೇಲಿನ ಭಕ್ತಿ ಮತ್ತು ಶ್ರದ್ಧೆಯಿಂದಾಗಿ ಆಕೆ ಯಕ್ಷಿಣಿಗೆ ತನ್ನ ಮಗುವನ್ನು
ನೀಡಿದಳು. ಆ ಮಗುವನ್ನು ಯಕ್ಷಿಣಿಯು ವಾತ್ಸಲ್ಯದಿಂದ ಎತ್ತಿ ಮುದ್ದಾಡಿ, ಅಪ್ಪಿ ವಾತ್ಸಲ್ಯಧಾರೆ ಹರಿಸಿ ಮರಳಿ ಆ ತಾಯಿಗೆ
ನೀಡಿದಳು. ಈ ರೀತಿಯಾಗಿ ಎರಡೂ ಕಡೆಯಲ್ಲೂ ಸ್ನೇಹ ಶಾಂತಿಯು ನೆಲೆಸಿತು.
No comments:
Post a Comment