ಸೇಡು ಶಾಂತಿಯನ್ನು ನೀಡದು
ನನಗೆ ಬೈದನು,
ನನಗೆ ಹೊಡೆದನು, ನನಗೆ ಸೋಲಿಸಿದನು, ನನ್ನಿಂದ ಕಸಿದುಕೊಂಡನು ಎಂದು ಇಂತಹ ಯೋಚನೆಗಳಿಂದ
ಕೂಡಿರುವವನ ವೈರವು ಶಮನವಾಗದು. (3)
ನನಗೆ ಬೈದನು,
ನನಗೆ ಹೊಡೆದನು, ನನಗೆ ಸೋಲಿಸಿದನು, ನನ್ನಿಂದ ಕಸಿದುಕೊಂಡನು ಎಂದು ಯಾರು ಇಂತಹ ಯೋಚನೆಗಳಿಂದ
ಕೂಡಿರುವುದಿಲ್ಲವೋ ಅಂತಹವರ ವೈರವು ಶಮನವಾಗುತ್ತದೆ. (4)
ಗಾಥ ಪ್ರಸಂಗ 1:3
ದ್ವೇಷಿ
ವೃದ್ಧ (ತಿಸ್ಸ)
ಬುದ್ಧರ ಸಂಬಂಧಿಯಾದ ತಿಸ್ಸನೆಂಬ ಭಿಕ್ಷುವು
ವೃದ್ಧಾಪ್ಯದಲ್ಲಿ ಭಿಕ್ಷುವಾದರು. ಅವರು ಹಿರಿಯ ಭಿಕ್ಷುವಾಗಿ ಕಾಣಿಸಿಕೊಳ್ಳಲು
ಇಷ್ಟಪಡುತ್ತಿದ್ದರು. ಆದರೆ ಇನ್ನೊಂದೆಡೆ ಅವರೇ ಹಿರಿಯ ಭಿಕ್ಷುಗಳಿಗೆ ಗೌರವ ನೀಡುತ್ತಿರಲಿಲ್ಲ.
ಭಿಕ್ಷು ಸಂಘದಲ್ಲಿ ಹಿರಿತನವು ಅವರು ಸಂಘಕ್ಕೆ ಸೇರಿದಾಗಿನಿಂದ ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ.
ತಿಸ್ಸರವರು ಯುವ ಭಿಕ್ಷುಗಳೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದರು. ಯಾರಾದರೂ ಅವರಿಗೆ ಈ ರೀತಿಯ
ವರ್ತನೆಯ ಬಗ್ಗೆ ನಿಂದಿಸಿದರೆ, ಅವರು ತೀರ
ಕ್ಷೊಭೆಗೊಂಡು, ಅತ್ತುಕೊಂಡು
ಬುದ್ಧರ ಬಳಿಗೆ ಬಂದು ದೂರನ್ನು ನೀಡುತ್ತಿದ್ದರು. ಬುದ್ಧರಿಗೆ ಇಡೀ ಪರಿಸ್ಥಿತಿಯ ಅರಿವಾಯಿತು.
ಅವರು ತಿಸ್ಸನಿಗೆ ವರ್ತನೆಯನ್ನು ಬದಲಿಸುವಂತೆ ಬುದ್ಧಿವಾದ ನೀಡಿದರು. ದ್ವೇಷಕ್ಕೆ ಪ್ರತಿಯಾಗಿ
ದ್ವೇಷ ಮಾಡದಿರುವಂತೆ, ಅದ್ವೇಷದಿಂದಲೇ
ದ್ವೇಷವು ನಶಿಸುತ್ತದೆ ಎಂದು ತಿಳಿಸಿದರು. ಈ ಗಾಥೆಯು ಆಗ ನುಡಿದಿದ್ದಾಗಿದೆ.
* * *
ನಂತರ ಬುದ್ಧರು ತಿಸ್ಸನ ಬಗ್ಗೆ ಆತ ಹಿಂದಿನ ಜನ್ಮದಲ್ಲೂ
ಹೀಗೆಯೇ ಹಠಮಾರಿ ಯಾಗಿದ್ದನೆಂದು ತಿಳಿಸಿದರು. ಆತ ಹಿಂದಿನ ಜನ್ಮದಲ್ಲಿ ದೇವಲ ಎಂಬ
ಋಷಿಯಾಗಿದ್ದನು. ಆತನು ಆಪಾರ್ಥತೆಯಿಂದಾಗಿ ಶುದ್ಧ ಗುರುವಿಗೆ ಶಪಿಸಿದ್ದನು. ನಂತರ ರಾಜನ
ಮಧ್ಯಸ್ಥಿಕೆ ಮತ್ತು ಒತ್ತಾಯದಿಂದಲೂ ಆತ ಗುರುವಿನೊಂದಿಗೆ ಕ್ಷಮೆಯಾಚಿಸಲಿಲ್ಲ. ಕೊನೆಗೆ ರಾಜನು
ಭೌತಿಕ ಬಲಪ್ರಯೋಗದಿಂದ ಕ್ಷಮೆಯಾಚಿಸುವಂತೆ ಮಾಡಿದನು
No comments:
Post a Comment