Friday, 31 October 2014

dhammapada/yamaka vagga/1:7/the story of devadatta

ಪರಿಶುದ್ಧರು ಕಾಷಾಯಕ್ಕೆ ಅರ್ಹರು, ಪಾಪಿಗಳಲ್ಲ.
ಯಾರು ಕಶ್ಮಲಗಳಿಂದ ಕೂಡಿರುವರೊ, ಧಮ್ಮ ಮತ್ತು ಸತ್ಯರಹಿತರೋ ಅವರು ಕಾಷಾಯವಸ್ತ್ರ ಧರಿಸಿದರೂ ಅನರ್ಹರಾಗಿದ್ದಾರೆ        (9)
ಯಾರು ಕಶ್ಮಲಗಳಿಂದ ಮುಕ್ತರೋ, ಶೀಲವಂತರೊ, ಸುಸಮಾಹಿತತೆ (ಪ್ರಶಾಂತತೆ) ಹೊಂದಿರುವರೋ, ಧಮ್ಮ ಮತ್ತು ಸತ್ಯಗಳಿಂದ ಕೂಡಿರುವರೋ ಅವರು ಕಾಷಾಯ ವಸ್ತ್ರಕ್ಕೆ ಅರ್ಹರಾಗಿದ್ದಾರೆ.        (10)
ಗಾಥ ಪ್ರಸಂಗ 1:7 

 ಸ್ತ್ರ ಸ್ವೀಕಾರಾರ್ಹರು ಯಾರು ? (ದೇವದತ್ತನ ಕಥೆ)
ಕಾಷಾವಸ್ತ್ರ ಸ್ವೀಕಾರಾರ್ಹರು ಯಾರು ? (ದೇವದತ್ತನ ಕಥೆ)
ಕಾಷಾವಸ್ತ್ರ ಕಾಷಾವಸ್ತ್ರ ಸ್ವೀಕಾರಾರ್ಹರು ಯಾರು ? (ದೇವದತ್ತನ ಕಥೆ)
ಒಮ್ಮೆ ಪೂಜ್ಯ ಸಾರಿಪುತ್ತ ಮತ್ತು ಪೂಜ್ಯ ಮೊಗ್ಗಲಾನರವರು ಶ್ರಾವಸ್ತಿಯಿಂದ ರಾಜಗೃಹದೆಡೆಗೆ ಹೊರಟಿದ್ದರು. ಆಗ ರಾಜಗೃಹದ ಜನರು ಅವರಿಗೆ ಔತಣಕ್ಕಾಗಿ ಆಹ್ವಾನಿಸಿದರು. ಆ ಸಂದರ್ಭದಲ್ಲಿ ಒಬ್ಬ ಅತ್ಯಂತ ಬೆಲೆಬಾಳುವ ವಸ್ತ್ರವನ್ನು ಇಟ್ಟುಕೊಂಡು ಚಂದಾ ಹಣಕ್ಕೆ ತೊಂದರೆಯಾದರೆ ಮಾರಾಟ ಮಾಡಿ ಆ ಹಣದಿಂದ ಭಿಕ್ಷುಗಳಿಗೆ ದಾನ ಮಾಡಲು ನಿರ್ಧರಿಸಿದ್ದನು. ಒಂದುವೇಳೆ ಹಣಕ್ಕೆ ಮುಗ್ಗಟ್ಟು ಬರದಿದ್ದರೆ ಶ್ರೇಷ್ಠ ಭಿಕ್ಷುವಿಗೆ ದಾನ ಮಾಡುವುದೆಂದು ನಿರ್ಧರಿಸಿದನು. ಆಗ ಯಾವುದೆ ಹಣಮುಗ್ಗಟ್ಟು ಬರಲಿಲ್ಲ. ಆಗ ಆಗ್ರಶ್ರಾವಕರಾದ ಸಾರಿಪುತ್ತ ಮತ್ತು ಮೊಗ್ಗಲಾನರವರು ಆಕಸ್ಮಿಕವಾಗಿ ರಾಜಗೃಹದಲ್ಲಿ ಬಂದಿದ್ದರು. ಆದರೆ ಜನರು ಪಕ್ಷಪಾತಕ್ಕೆ ಬಲಿಯಾಗಿ ತಮ್ಮ ನಗರದವನೆಂದು ರಾಜಗೃಹದ ದೇವದತ್ತನಿಗೆ ಆ ಅಮೂಲ್ಯವಾದ ವಸ್ತ್ರವನ್ನು ನೀಡಿದರು. ಹೀಗೆ ಅನರ್ಹರೊಬ್ಬರಿಗೆ ಅಮೂಲ್ಯ ಕಾಷಾಯ ವಸ್ತ್ರವು ಸಿಕ್ಕಿತು.
                ದೇವದತ್ತರು ಸಂಘಕ್ಕೆ ಸೇರಿದರೂ ಸಹ ಲೌಕಿಕದ ಅಧಿಕಾರ, ಕೀತರ್ಿಯ ಮಾಯೆಗೆ ಬಲಿಯಾಗಿ ಅದಕ್ಕಾಗಿ ಬುದ್ಧರನ್ನೇ ಕೊಲ್ಲಲು ಬಯಸಿದ್ದರು, ಪ್ರಯತ್ನಿಸಿದ್ದರು. ಆದರೆ ಬುದ್ಧಲೀಲೆಯಿಂದ ಅವೆಲ್ಲಾ ವ್ಯರ್ಥವಾಯಿತು. ಕೊನೆಗೆ ಸಂಘಬೇಧ ಮಾಡಲು ಹಿಂಜರಿಯಲಿಲ್ಲ. ಹೀಗೆ ಅವರು ದುಶ್ಶೀಲರಾಗಿದ್ದರು, ಅಸತ್ಯ ಮತ್ತು ಧಮ್ಮರಹಿತರಾಗಿದ್ದರು. ಆದರೆ ಪವಾಡಶಕ್ತಿ ಮತ್ತು ವಾಕ್ಚಾತುರ್ಯತೆಯಿಂದಾಗಿ ಜನರಿಗೆ ದೇವದತ್ತರ ಬಗ್ಗೆ ಸರಿಯಾಗಿ ತಿಳಿಯಲಿಲ್ಲ.
                ದೇವದತ್ತರು ಹೆಮ್ಮೆಯಿಂದ ಅದನ್ನು ಧರಿಸಿದರು. ಈ ವಿಷಯವನ್ನು ರಾಜಗೃಹದಿಂದ ಶ್ರಾವಸ್ತಿಗೆ ಬಂದಿದ್ದ ಭಿಕ್ಷುವೊಬ್ಬನು ಭಗವಾನರಿಗೆ ತಿಳಿಸಿ ವಿಷಾದ ವ್ಯಕ್ತಪಡಿಸಿದನು. ಆಗ ಬುದ್ಧರು ಅನರ್ಹನಾಗಿಯೂ ದೇವದತ್ತನು ಕಾಷಾಯವನ್ನು ಧರಿಸಿರುವುದು ಇದೇ ಮೊದಲಲ್ಲ ಎಂದರು. ಆಗ ಭಿಕ್ಷುಗಳ ಕೋರಿಕೆಯಂತೆ ಹಿಂದಿನ ಜನ್ಮದ ವೃತ್ತಾಂತವನ್ನು ತಿಳಿಸಿದರು.
*    *    *
                ದೇವದತ್ತನು ಹಿಂದಿನ ಜನ್ಮದಲ್ಲಿ ಆನೆ ಹಂತಕನಾಗಿದ್ದನು ಮತ್ತು ದಂತಚೋರ ಬೇಟೆಗಾರನಾಗಿದ್ದನು. ಆಗ ಒಂದು ಕಾಡಿನಲ್ಲಿ ಅಸಂಖ್ಯಾತ ಆನೆಗಳಿದ್ದವು. ಒಂದುದಿನ ಬೇಟೆಗಾರನು ಆ ಆನೆಗಳೆಲ್ಲಾ ಪಚ್ಚೇಕ ಬುದ್ಧರ ಕಾಲಿಗೆ ಬೀಳುವುದನ್ನು ಮತ್ತು ವಂದಿಸುವುದನ್ನು ಕಂಡನು. ಆಗ ಆತನು ಪಚ್ಚೇಕ ಬುದ್ಧರಂತೆ ಕಾಣುವುದಕ್ಕಾಗಿ ಕಾಷಾಯವಸ್ತ್ರ ಧರಿಸಿ ಆತನಿಗೆ ಗೌರವಿಸಲು ಬಂದಂತಹ ಆನೆಗಳನ್ನು ಒಂದೊಂದಾಗಿ ಕೊಲ್ಲಲು ಪ್ರಾರಂಭಿಸಿದನು.
                ಆಗ ಆ ಆನೆಗಳ ಗುಂಪಿಗೆ ಬೋಧಿಸತ್ವರೇ ನಾಯಕರಾಗಿದ್ದರು. ಬೋಧಿಸತ್ತರು ಬಲಿಷ್ಠ ಆನೆಯಾಗಿದಷ್ಟೇ ಅಲ್ಲದೆ, ಚಾಣಾಕ್ಷತೆಯಿಂದ ಆನೆಗಳ ಹಿಂಡಿನ ಕ್ಷೀಣತೆಗೆ ಕಾರಣನಾದ ಬೇಟೆಗಾರನನ್ನು ತನ್ನ ಬಲಿಷ್ಠ ಸೊಂಡಿಲಿನಿಂದ ಹಿಡಿಯಿತು ಮತ್ತು ಆತನನ್ನು ನೆಲಕ್ಕೆ ಅಪ್ಪಳಿಸಲು ಸೊಂಡಿಲನ್ನು ಮೇಲಕ್ಕೆ ಎತ್ತಿತು. ಆದರೆ ಆತನು ಧರಿಸಿದ್ದ ಕಾಷಾಯವಸ್ತ್ರಕ್ಕೆ ಗೌರವಿಸಿ ಆತನಿಗೆ ಜೀವದಾನ ನೀಡಿತು.
*    *    *
                ಹೀಗೆ ಭಗವಾನರು ಹಿಂದಿನ ವೃತ್ತಾಂತ ತಿಳಿಸಿ ಈ ಮೇಲಿನ ಗಾಥೆಗಳನ್ನು ತಿಳಿಸಿದರು

No comments:

Post a Comment