ದೇಹಕ್ಕೆ ಅಂಟದಿರಿ
ಬಹುಬೇಗನೆ ಈ ಶರೀರ
ವಿಞ್ಞಾನ (ಅರಿವು) ವಿಲ್ಲದೆ, ಈ ನೆಲದ ಮೇಲೆ
ವ್ಯರ್ಥವಾದ ಒಣಗಿದ ಮರದಂತೆ ಬಿದ್ದಿರುತ್ತದೆ. (41)
ಗಾಥ ಪ್ರಸಂಗ 3:7
ತಿಸ್ಸನೆಂಬ ಭಿಕ್ಷುವು ಬುದ್ಧರಿಂದ ಧ್ಯಾನ ವಿಷಯ
ತೆಗೆದುಕೊಂಡು ನಿಷ್ಠೆಯಿಂದ ಧ್ಯಾನ ಮಾಡತೊಡಗಿದನು. ಆದರೆ ಕಾಲನಂತರ ಆತನಿಗೆ ರೋಗ ಬಂದಿತು. ಸಣ್ಣ
ಸಣ್ಣ ಗುಳ್ಳೆಗಳು ಆತನ ಶರೀರದಲ್ಲೆಲ್ಲಾ ಕಾಣಿಸಿಕೊಂಡಿತು ಅವು ನಂತರ ದೊಡ್ಡ ಗುಳ್ಳೆಗಳಾಗಿ
ಬೆಳೆದವು. ಹಾಗೆಯೇ ಅವು ಒಡೆದು ರಕ್ತ, ಕೀವುಗಳೆಲ್ಲಾ
ಬಟ್ಟೆಗಳಿಗೆ ಅಂಟಿದವು. ಆ ಬಟ್ಟೆಗಳೆಲ್ಲಾ ಒದ್ದೆಯಾಗಿ ದುವರ್ಾಸನೆ ಬೀರಲಾರಂಭಿಸಿತು. ಅಂದಿನಿಂದ
ಆತನಿಗೆ ಪುಟಿಗಟ್ಟ ತಿಸ್ಸನೆಂದು ಕರೆಯಲ್ಪಟ್ಟನು (ದುವರ್ಾಸನೆಯ ತಿಸ್ಸ).
ಬುದ್ಧ ಭಗವಾನರು ಪ್ರತಿದಿನ ಎರಡುಬಾರಿ ಜಗತ್ತಿನಲ್ಲಿ
ಯಾರ್ಯಾರು ದುಃಖದಲ್ಲಿದ್ದಾರೆ ಎಂದು ವೀಕ್ಷಿಸಿ ಅವರಿಗೆ ಸಹಾಯ ಮಾಡುತ್ತಿದ್ದರು. ಬುದ್ಧರು ಮಹಾ
ಕರುಣಿಕ ಸಮಾಪತ್ತಿಯಲ್ಲಿ ವೀಕ್ಷಿಸುವಾಗ ಅವರಿಗೆ ಯಾವ ಭಿಕ್ಷುವು ಸಹಾಯ ಮಾಡದ ತಿಸ್ಸ ಕಾಣಿಸಿದನು.
ಆಗ ಭಗವಾನರು ಹೀಗೆ ಯೋಚಿಸಿದರು ಈ ಭಿಕ್ಷುವು ತನ್ನ ಸಹಚರರಿಂದ ತ್ಯಜಿಸಲ್ಪಟ್ಟಿದ್ದಾನೆ. ಈಗ
ಈತನಿಗೆ ನನ್ನ ವಿನಃ ಬೇರಾರು ಆಶ್ರಯದಾತರಿಲ್ಲ. ನಂತರ ಭಗವಾನರು ಗಂಧಕುಟಿಯಿಂದ ಹೊರಟು, ವಿಹಾರದ ವೀಕ್ಷಣೆ ಮಾಡುವವರಂತೆ ಬೆಂಕಿಯಿರುವ ಕೋಣೆಗೆ
ಹೊರಟರು. ಅಲ್ಲಿ ಅವರು ಕಡಾಯಿ ತೊಳೆದರು. ನಂತರ ನೀರು ತುಂಬಿ ಒಲೆಯ ಮೇಲಿಟ್ಟರು. ಅದು ಬಿಸಿಯಾದ
ನಂತರ, ಅದನ್ನು ಎತ್ತಿಕೊಂಡು ತಿಸ್ಸನ
ಬಳಿಗೆ ಬಂದರು.
ಆಗ ಭಿಕ್ಷುಗಳು ಭಗವಾನರಿಗೆ ಹೀಗೆ ಹೇಳಿದರು : ಭಗವಾನ್
ದಯವಿಟ್ಟು ಸರಿಯಿರಿ. ನಾವು ನಿಮಗಾಗಿ ಆತನನ್ನು ಎತ್ತುವೆವು ಎಂದು ಹೇಳಿ ತಿಸ್ಸನ ಸಮೇತ ಮಂಚವನ್ನು
ಎತ್ತಿಕೊಂಡು ಬೆಂಕಿಯ ಕೋಣೆಗೆ ಬಂದರು. ನಂತರ ತಿಸ್ಸನ ಮೇಲ್ಭಾಗದ ಬಟ್ಟೆ ತೆಗೆಯಲಾಯಿತು. ಆ
ಬಟ್ಟೆಯನ್ನು ಬಿಸಿನೀರಲ್ಲಿ ತೊಳೆದು ಸೂರ್ಯನ ಬೆಳಕಿನಲ್ಲಿ ಒಣಗಿಸಲಾಯಿತು. ಆ ಬಟ್ಟೆಯು
ಒಣಗಿತ್ತು. ಅದನ್ನು ತೊಡಿಸಿ ಉಳಿದ ಬಟ್ಟೆಯನ್ನೂ ಹಾಗೆಯೇ ಬಿಸಿನೀರಲ್ಲಿ ತೊಳೆದು ಸೂರ್ಯನ
ಎದುರಲ್ಲಿ ಒಣಗಿಸಲಾಯಿತು. ನಂತರ ಆತನಿಗೆ ಪೂರ್ಣವಾಗಿ ಬಿಸಿನೀರಿನಲ್ಲಿ ಸ್ನಾನ ಮಾಡಿಸಿ ಬಟ್ಟೆ
ತೊಡಿಸಿದರು.
ಈಗ ತಿಸ್ಸನ ಶರೀರವು ಪುನಃಚೇತನ ಪಡೆಯಿತು, ಉಲ್ಲಾಸಿತವಾಯಿತು, ಪ್ರಶಾಂತವಾಯಿತು. ಹಾಗೆಯೇ ತಿಸ್ಸನು ಸಮಾಧಿ ಸ್ಥಿತಿ
ಪ್ರಾಪ್ತಿಮಾಡಿದನು. ಆಗ ಭಗವಾನರು ಆತನ ತಲೆಯ ಬಳಿ ನಿಂತು ಈ ಶರೀರವು ಬಹುಬೇಗನೆ ವಿನ್ಯಾನದಿಂದ
ಬೇರ್ಪಟ್ಟು ವ್ಯರ್ಥ ಮರದ ತುಂಡಿನಂತೆ ನೆಲದಲ್ಲಿರುವುದು ಎಂದು ಮೇಲಿನ ಗಾಥೆಯನ್ನು ಹೇಳಿದರು.
ನಂತರದ ಬೋಧನೆಯಲ್ಲಿ ಆತನು ಅರಹಂತನಾಗುತ್ತಾನೆ. ಹಾಗೆಯೇ ಪರಿನಿಬ್ಬಾಣವನ್ನು ಪ್ರಾಪ್ತಿ
ಮಾಡುತ್ತಾನೆ. ನಂತರ ಬುದ್ಧರು ಭಿಕ್ಷುಗಳಿಗೆ ತಿಸ್ಸನ ಶರೀರಕ್ಕೆ ಸ್ತೂಪ ನಿಮರ್ಿಸುವಂತೆ
ನಿದರ್ೆಶಿಸುತ್ತಾರೆ.
ನಂತರ ಭಿಕ್ಷುಗಳು ಭಗವಾನರಲ್ಲಿ ತಿಸ್ಸನ ಈ ಅವಸ್ಥೆಗೆ
ಕಾರಣವನ್ನು ಕೇಳುತ್ತಾರೆ. ಆಗ ಭಗವಾನರು ತಿಸ್ಸನು ಹಿಂದಿನ ಜನ್ಮದಲ್ಲಿ ಕ್ರೂರ ಹಕ್ಕಿ
ಬೇಟೆಗಾರನಾಗಿದ್ದನು. ಆತ ಆಗ ಪಕ್ಷಿಗಳನ್ನು ಹಿಡಿದು ಅವುಗಳು ಹಾರದಂತೆ, ಓಡದಂತೆ ಅವುಗಳ ಕಾಲುಗಳ ಮತ್ತು ರೆಕ್ಕೆಗಳ ಮೂಳೆಗಳನ್ನು
ಮುರಿಯುತ್ತಿದ್ದನು. ಇದರ ಪರಿಣಾಮವಾಗಿ ಈ ಜನ್ಮದಲ್ಲಿ ಈ ದುರ್ಗತಿ ಬಂದಿತ್ತು.
No comments:
Post a Comment