ಮಿಥ್ಯಾ ಮಾರ್ಗದಶರ್ಿತ ಮನಸ್ಸಿನಿಂದ ಮಹಾ ಹಾನಿಯಾಗುತ್ತದೆ
ಯಾವರೀತಿಯ
ಹಾನಿಯನ್ನು ವೈರಿಯು ವೈರಿಗೆ ಮಾಡಬಹುದೋ ಅಥವಾ ದ್ವೇಷಿಯು ದ್ವೇಷಿಗೆ ಮಾಡಬಹುದೋ, ಅದೆಲ್ಲಕ್ಕಿಂತ ಹೆಚ್ಚಿನ ಹಾನಿಯು ಒಬ್ಬನಿಗೆ
ಮಿಥ್ಯಾಮಾರ್ಗದಶರ್ಿತ ಮನಸ್ಸಿನಿಂದ ಆಗುತ್ತದೆ. (42)
ಗಾಥ ಪ್ರಸಂಗ 3:8
ಕರ್ಮಫಲದಿಂದಾಗುವ ಮೃತ್ಯುವನ್ನು ತಡೆಯಲಾಗದು
ನಂದನೆಂಬ ಗೋಪಾಲಕನು ಅನಾಥಪಿಂಡಿಕನ ಮನೆಯಲ್ಲಿನ
ಹಸುಗಳನ್ನು ನೋಡಿಕೊಳ್ಳುತ್ತಿದ್ದನು. ಆತನು ದನಕಾಯುವವನಾದರೂ ಆತನಲ್ಲೂ ತನ್ನದೆನ್ನುವ
ಆಸ್ತಿಯಿತ್ತು. ಆತನು ಆಗಾಗ್ಗೆ ಅನಾಥಪಿಂಡಿಕನ ಮನೆಗೆ ಹೋಗುತ್ತಿದ್ದನು ಮತ್ತು ಅಲ್ಲಿ ಆತನು
ಬುದ್ಧರ ಪ್ರವಚನಗಳನ್ನು ಕೇಳುತ್ತಿದ್ದನು. ನಂದನು ಒಮ್ಮೆ ಭಗವಾನರಲ್ಲಿಗೆ ಬಂದು ಆತನ ಆತಿಥ್ಯ
ಸ್ವೀಕರಿಸುವಂತೆ ಕೇಳಿಕೊಂಡನು. ಆದರೆ ಆತನ ಭವಿಷ್ಯ ಅರಿತಿದ್ದ ಭಗವಾನರು ಈಗ ಬೇಡ, ಅದಕ್ಕೆ ಇನ್ನೂ ಕಾಲ ಬಂದಿಲ್ಲ ಎಂದರು.
ಸ್ವಲ್ಪದಿನಗಳ ನಂತರ ಭಗವಾನರು ತಮ್ಮ ಹಿಂಬಾಲಕರೊಂದಿಗೆ
ನಂದನ ಮನೆಗೆ ಬಂದರು. ನಂದ ಗೌರವದಿಂದ ಬುದ್ಧರನ್ನು ಮತ್ತು ಸಂಘವನ್ನು ಬರಮಾಡಿಕೊಂಡನು. ನಂತರ
ಆತನು ಹಾಲಿನಿಂದ ತಯಾರಾದ ವಿವಿಧರೀತಿಯ ತಿಂಡಿಗಳಿಂದ ಅವರಿಗೆ ಏಳು ದಿನಗಳ ಕಾಲ ಆತಿಥ್ಯ ನೀಡಿದನು.
ಕೊನೆಯ ದಿನದಂದು ಭಗವಾನರ ಬೋಧನೆ ಆಲಿಸಿ ಆತನು ಸೋತಪನ್ನನಾದನು. ನಂತರ ಭಗವಾನರು ಹೊರಡಲು
ಸಿದ್ಧರಾದಾಗ ಅವರನ್ನು ಹಿಂಬಾಲಿಸಿ ಅವರ ಪಿಂಡಪಾತ್ರೆಯನ್ನು ಅವರಿಗೆ ನೀಡಿ ಗೌರವ ಅರ್ಪಣೆ ಮಾಡಿ
ಹಿಂತಿರುಗಿದನು.
ಆದರೆ ಅದೇ ವೇಳೆಯಲ್ಲಿ ಬೇಟೆಗಾರನ ಬಾಣದಿಂದ
ಚುಚ್ಚಲ್ಪಟ್ಟು ಆತನು ಸತ್ತನು. ಅದನ್ನು ಕಂಡ ಭಿಕ್ಷುಗಳು ಈ ವಿಷಯವನ್ನು ಭಗವಾನರಿಗೆ ತಿಳಿಸಿ
ಹೀಗೆಂದರು ಭಗವಾನ್ ತಾವು ಇಲ್ಲಿ ಬಂದಿದ್ದರಿಂದಲೇ ಆತನು ಆತಿಥ್ಯ ನೀಡಿದ ಮತ್ತು ಹಿಂದಿರುಗುವಾಗ
ಆತನು ಕೊಲ್ಲಲ್ಪಟ್ಟಿದ್ದಾನೆ. ಆಗ ಭಗವಾನರು ನುಡಿದರು ಭಿಕ್ಷುಗಳೇ, ನಾನು ಇಲ್ಲಿಗೆ ಬರಲಿ ಅಥವಾ ಬಾರದೆ ಇರಲಿ, ಮರಣದಿಂದ ಪಾರಾಗಲು ಸಾಧ್ಯವಿಲ್ಲ. ಏಕೆಂದರೆ ಆತನ ಹಿಂದಿನ ಕರ್ಮಫಲ
ಹಾಗಿತ್ತು ಎಂದು ನುಡಿದು ಈ ಮೇಲಿನ ಗಾಥೆ ನುಡಿದರು.
No comments:
Post a Comment