Friday 31 October 2014

dhammapada/yamaka vagga/1:8/the story of sariputta and moggalana


ಯೋಗ್ಯ ಗ್ರಹಿಕೆಯು ಸತ್ಯದೆಡೆಗೆ ಕೊಂಡೊಯ್ಯುತ್ತದೆ
ಅಸಾರವಾದುದರಲ್ಲಿ ಅವರು ಸಾರವನ್ನು ಕಲ್ಪಿಸುವರು, ಸಾರವಾದುದರಲ್ಲಿ ಅವರು ಅಸಾರವನ್ನು ಕಾಣುವರು. ಯಾರು ಇಂತಹ ತಪ್ಪು ಯೋಚನೆಗಳಲ್ಲಿ ಆನಂದಿಸುವರೋ ಅವರು ಎಂದಿಗೂ ಸಾರವನ್ನು ಸಾಕ್ಷಾತ್ಕರಿಸಲಾರರು (11)
ಯಾವುದು ಸಾರವೋ ಅದನ್ನು ಸಾರವಾಗಿಯೇ ಅವರು ಪರಿಗಣಿಸುವರು, ಯಾವುದು ಅಸಾರವೋ ಅವರು ಅಸಾರವಾಗಿಯೇ ಪರಿಗಣಿಸುತ್ತಾರೆ. ಯಾರು ಈ ರೀತಿಯಲ್ಲಿ ಯೋಗ್ಯ ಚಿಂತನೆಯಿಂದಾಗಿ ಅವರ ಸಾರದ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾರೆ.        (12)
ಗಾಥ ಪ್ರಸಂಗ 1:8
ಸತ್ಯವನ್ನು ಸಾಕ್ಷಾತ್ಕರಿಸುವುದು ಅತಿ ಕಷ್ಟಕರ (ಉಪತಿಸ್ಸ ಮತ್ತು ಕೋಲಿತ)

                ರಾಜಗೃಹದ ಸಮೀಪ ಉಪತಿಸ್ಸ ಮತ್ತು ಕೋಲಿತ ಎಂಬ ಹಳ್ಳಿಗಳಿದ್ದವು. ಉಪತಿಸ್ಸ ಹಳ್ಳಿಯಲ್ಲಿ ರೂಪಸಾರಿ ಎಂಬ ಬ್ರಾಹ್ಮಣಿಗೆ ಮತ್ತು ಕೋಲಿತ ಹಳ್ಳಿಯಲ್ಲಿನ ಮೊಗ್ಗಲಿ ಎಂಬ ಬ್ರಾಹ್ಮಣಿಗೆ ಏಕಕಾಲದಲ್ಲಿ 10 ತಿಂಗಳ ಬಳಿಕ ಗಂಡು ಮಕ್ಕಳು ಹುಟ್ಟಿದವು. ರೂಪಸಾರಿ ಬ್ರಾಹ್ಮಣಿಯ ಮಗನಿಗೆ ಉಪತಿಸ್ಸನೆಂದು ಹಾಗೆಯೇ ಮೊಗ್ಗಲಿಯ ಮಗನಿಗೆ ಕೊಲಿತ ಎಂದು ಹೆಸರಿಟ್ಟರು. ಆ ಎರಡು ಕುಟುಂಬಗಳಿಗೆ ಏಳು ತಲೆಮಾರಿನಿಂದ ಮಿತ್ರತ್ವವಿತ್ತು. ಆದ್ದರಿಂದ ಸಹಜವಾಗಿಯೇ ಇವರೀರ್ವರಲ್ಲಿ ಗಾಢ ಸ್ನೇಹವಿತ್ತು. ಇಬ್ಬರೂ ಎಲ್ಲಾ ಕಲೆ ಮತ್ತು ಶಾಸ್ತ್ರಗಳಲ್ಲಿ ಪ್ರಾವಿಣ್ಯತೆ ಪಡೆದರು. ಬಾಲ್ಯದಿಂದಲೇ ನಾಯಕತ್ವ ಗುಣಗಳಿಂದ ಈರ್ವರೂ ಕೂಡಿದ್ದರು. ಬಾಲ್ಯದಲ್ಲೇ 500 ಜನ ಹಿಂಬಾಲಿಕರಿಂದ ಕೂಡಿದ್ದರು.
                ರಾಜಗೃಹದಲ್ಲಿ ಪರ್ವತದ ಮೇಲಿನ ಹಬ್ಬವನ್ನು ಆಚರಿಸಲಾಗುತ್ತಿತ್ತು. ಇಬ್ಬರಿಗೂ ಮೆತ್ತನೆಯ ಮಂಚವನ್ನು ಸಿದ್ಧಪಡಿಸಿದ್ದರು. ಹೀಗೆ ಅವರು ಹಬ್ಬದ ವಿನೋದಗಳನ್ನು ನೋಡುತ್ತಾ ಇದ್ದರು, ಆನಂದ ಅನುಭವಿಸುತ್ತಾ ಇದ್ದರು. ಆಗ ಹಬ್ಬಗಳು ಕೆಲವು ವಾರ ನಡೆಯುತ್ತಿತ್ತು. ಎರಡು ಅಥವಾ ಮೂರು ದಿನದ ನಂತರ ಅವರಿಗೆ ಆನಂದ ಸಿಗಲಿಲ್ಲ. ಇಡೀ ಹಬ್ಬವೆಲ್ಲಾ ಮಕ್ಕಳ ಆಟದಂತೆ ಗೋಚರಿಸಿತು. ಜೊತೆಗೆ ಪ್ರಾಪಂಚಿಕ ಸುಖವು ಅವರಿಗೆ ಕ್ಷಣಿಕವಾಗಿ, ದಡ್ಡತನದ ಸುಖದಂತೆ ಕಂಡುಬಂದಿತ್ತು. ಅವರ ಪ್ರಜ್ಞಾ ವಿಕಾಸವಾಗಿತ್ತು. ಅವರು ಕ್ಷಣಿಕವಾದ ಭೌತಿಕತೆಯಲ್ಲಿ ರಮಿಸಲು ಬಂದಿರಲಿಲ್ಲ. ನಾವು ಏಕೆ ಇದನ್ನು ನೋಡಬೇಕು? ನೂರು ವರ್ಷಗಳು ಕಳೆದನಂತರ ಈ ಎಲ್ಲಾ ಜನಗಳು ಕಣ್ಮರೆಯಾಗುತ್ತಾರೆ. ಇಂದ್ರೀಯ ಸುಖಗಳು ಎಂದಿಗೂ ತೃಪ್ತಿನೀಡಲಾರವು. ಆದ್ದರಿಂದ ನಾವು ವಿಮುಕ್ತಿಯ ಹಾದಿಯನ್ನು ಹುಡುಕಬೇಕು ಎಂದು ಚಚರ್ಿಸಿಕೊಂಡರು.
                ನಂತರ ಅವರು ಗುರುವಿಗಾಗಿ ಹುಡುಕಾಡಲಾರಂಭಿಸಿದರು. ಗುರು ಸಿಕ್ಕನಂತರ ಮತ್ತೊಬ್ಬರಿಗೆ ಅದನ್ನು ತಿಳಿಸುವುದೆಂದು ನಿರ್ಧರಿಸಿದರು. ಮೊದಲಿಗೆ ಸಂಜಯನೆಂಬ ಋಷಿಯ ಬಳಿ ದೀಕ್ಷೆ ತೆಗೆದುಕೊಂಡರು ಮತ್ತು ಗೃಹಸ್ಥತನದಿಂದ ಮುಕ್ತರಾದರು. ಕೆಲಕಾಲದಲ್ಲೇ ಗುರುವಿನ ಹಂತಕ್ಕೆ ಏರಿದರು. ಗುರುವಿನ ಬಳಿಗೆ ಬಂದು ಗುರುವೇ ನೀವು ಅರಿತದ್ದು ಇಷ್ಟೇಯೇ ಅಥವಾ ಇನ್ನೂ ಇದೆಯೇ? ಎಂದು ಕೇಳಿದರು. ಅದಕ್ಕೆ ಸಂಜಯರು ಅಷ್ಟೇ, ಈಗ ನಿಮಗೆ ಗೊತ್ತಿರುವಷ್ಟೇ ನನಗೂ ತಿಳಿಸಿದೆ ಎಂದು ಉತ್ತರಿಸಿದರು. ಅವರ ಪ್ರಾವಿಣ್ಯತೆ ಹೇಗಿತ್ತೆಂದರೆ ಅವರ ಪ್ರಶ್ನೆಗಳಿಗೆ ಉತ್ತರ ನೀಡಲು ಯಾರಿಗೂ ಸಾಧ್ಯವಿರಲಿಲ್ಲ, ಆದರೆ ಇವರು ಎಲ್ಲರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಆದರೂ ಅವರಿಗೆ ನಿಜವಾದ ಜ್ಞಾನ ಸಿಕ್ಕಿದೆ ಎನಿಸಿರಲಿಲ್ಲ. ಆದ್ದರಿಂದ ಯೋಗ್ಯ ಗುರುವಿಗೆ ಹುಡುಕಾಡುತ್ತಿದ್ದರು.
                ಒಂದುದಿನ ಪಂಚವಗರ್ಿಯ ಭಿಕ್ಷುಗಳಲ್ಲಿ ಒಬ್ಬರಾದ ಅಸ್ಸಜಿಯನ್ನು ಉಪತಿಸ್ಸರವರು ಕಂಡರು ಮತ್ತು ಹೀಗೆಂದರು: ಶಾಂತ ಮತ್ತು ಸುಪ್ರಶಾಂತವಾಗಿದೆ ನಿಮ್ಮ ಎಲ್ಲಾ ಇಂದ್ರೀಯಗಳು. ಸ್ವಚ್ಛ, ಶುಭ್ರ ಮತ್ತು ಸ್ಪಷ್ಟವಾಗಿದೆ ನಿಮ್ಮ ಚರ್ಮದ ಕಾಂತಿ. ಏತಕ್ಕಾಗಿ ನೀವು ಜಗವ ತೊರೆದಿರಿ? ಮತ್ತು ನಿಮ್ಮ ಗುರುಗಳು ಯಾರು? ಮತ್ತು ಯಾವ ಸಿದ್ಧಾಂತವನ್ನು ನೀವು ಪಾಲಿಸುತ್ತಿರುವಿರಿ? ಎಂದು ಪ್ರಶ್ನಿಸಿದರು. ಅದಕ್ಕೆ ಅಸಜ್ಜಿಯವರು ಹೀಗೆ ಉತ್ತರಿಸಿದರು ಸೋದರ, ನಾನಿನ್ನು ಹೊಸಬ. ಭಿಕ್ಷುವಾಗಿ ಬಹಳ ದಿನ ಕಳೆದಿಲ್ಲ. ಈಗತಾನೇ ಬುದ್ಧರ ಧಮ್ಮ ಮತ್ತು ವಿನಯವನ್ನು ಆರಂಭಿಸಿದ್ದೇನೆ. ಆಗ ಉಪತಿಸ್ಸರವರು ಹೀಗೆ ಸಿಂಹನಾದ ಮಾಡಿದರು ನಾನು ಉಪತಿಸ್ಸ, ನಿಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಹೇಳಿರಿ, ಅದು ಸಂಕ್ಷಿಪ್ತವಾಗಿ ಇರಲಿ ಅಥವಾ ವಿವರವಾಗಿ ಇರಲಿ. ಅದರ ಅರ್ಥವನ್ನು ನಾನು ನೂರು ಹಾದಿಯಲ್ಲಿ ಅಥವಾ ಸಾವಿರ ವಿಧದಲ್ಲಿ ಅರ್ಥಮಾಡಿಕೊಳ್ಳುವೆ ಎಂದರು.
                ಆಗ ಅಸ್ಸಜಿಯು ಹೀಗೆ ಹೇಳಿದರು ಕಾರಣಗಳಿಂದ ಉಂಟಾಗುವ ಎಲ್ಲಾ ಆಗುಹೋಗುಗಳ ಕಾರಣವನ್ನು ತಥಾಗತರು ಹೇಳಿದ್ದಾರೆ ಮತ್ತು ಹಾಗೆಯೇ ಅವುಗಳ ನಿರೋಧವನ್ನು ಸಹಾ ಹೇಳಿದ್ದಾರೆ. ಇದೇ ಬುದ್ಧಭಗವಾನರ ಬೋಧನೆಯಾಗಿದೆ.
                ಆಗ ಮೊದಲ ಎರಡು ವಾಕ್ಯಗಳನ್ನು ಕೇಳಿದ ಕ್ಷಣವೇ ಉಪತಿಸ್ಸರಿಗೆ (ಸಾರಿಪುತ್ತರಿಗೆ) ಸೋತಪನ್ನ ಸ್ಥಿತಿಯು ಲಭಿಸಿತು. ನಂತರ ಸಾರಿಪುತ್ತರವರು ಬುದ್ಧಭಗವಾನರು ಎಲ್ಲಿ ವಿಹರಿಸುತ್ತಿದ್ದಾರೆಂದು ಕೇಳಿಕೊಂಡು (ಕೋಲಿತ) ಮೊಗ್ಗಲಾನರಲ್ಲಿ ಬಂದು ಅಸ್ಸಜಿಯವರು ಹೇಳಿದ ನಾಲ್ಕು ವಾಕ್ಯಗಳ ಗಾಥೆ ಹೇಳಿದರು. ಕೇಳಿದ ಕ್ಷಣವೇ ಮೊಗ್ಗಲಾನರವರು ಸಹಾ ಸೋತಪನ್ನರಾದರು. ಆಗ ಇಬ್ಬರೂ ಸಹ ಆನಂದಿತರಾದರು. ಅವರು ಈ ವಿಷಯವನ್ನು ತಮ್ಮ ಹಿಂದಿನ ಗುರುವಾದ ಸಂಜಯರಿಗೆ ಹೇಳಿದರು. ಆದರೆ ಸಂಜಯರಿಗೆ ಆ ಮಹಾಜ್ಞಾನದ ಆಳದ ಅರಿವು ಉಂಟಾಗಲಿಲ್ಲ. ಬದಲಾಗಿ ಅವರಿಗೆ ತಮ್ಮ ಹೆಚ್ಚು ಶಿಷ್ಯರನ್ನು ಒಳಗೊಂಡ ಸಮೂಹವನ್ನು ಬಿಟ್ಟು ಬುದ್ಧರ ಬಳಿಗೆ ಬಂದು ಶಿಷ್ಯವೃತ್ತಿ ಮಾಡಲು ಅಹಂಕಾರ ಅಡ್ಡಿಯಾಯಿತು. ಆದರೂ ಸಂಜಯರಿಗೆ ಬುದ್ಧರ ಸರ್ವಜ್ಞತೆಯ ಮೌಲ್ಯ ಅರಿವಾಯಿತು. ಆಗ ಅವರು ಪ್ರಶ್ನಿಸಿದರು. ಈ ಭೂಮಿಯಲ್ಲಿ ಜ್ಞಾನಿಗಳು ಹೆಚ್ಚಾಗಿರುವೋ ಅಥವಾ ಮೂರ್ಖರು ಹೆಚ್ಚಾಗಿರುವರೋ? ಆಗ ಸಾರಿಪುತ್ತರು ಮೂರ್ಖರು ಹೆಚ್ಚಾಗಿದ್ದಾರೆ ಎಂದು ಹೇಳಿದರು. ಹಾಗಾದರೆ ಜ್ಞಾನಿಗಳು ಬುದ್ಧರ ಬಳಿಗೆ ಹೋಗಲಿ ಮತ್ತು ದಡ್ಡರು ನನ್ನಲ್ಲಿಗೆ ಬರಲಿ ಎಂದು ಸಂಜಯರು ಹೇಳಿದರು.

                ನಂತರ ಸಾರಿಪುತ್ತ ಮತ್ತು ಮೊಗ್ಗಲಾನರು ಬುದ್ಧರ ಬಳಿಗೆ ಹೋದರು. ಆಗ ಅವರ ಜೊತೆಯಲ್ಲಿ ಸಂಜಯನ ಅರ್ಧದಷ್ಟು ಶಿಷ್ಯರು ಜೊತೆ ಸೇರಿದರು. ನಂತರ ಬುದ್ಧರ ಬಳಿಗೆ ಬಂದು ಸಂಘದಲ್ಲಿ ಸೇರಿದರು. ಅಂದಿನಿಂದ ಅವರ ಹೆಸರು ಸಾರಿಪುತ್ತ ಮತ್ತು ಮೊಗ್ಗಲಾನ ಎಂದೇ ಖಾತ್ರಿಯಾಯಿತು. ಮೊಗ್ಗಲಾನರವರು ಸಂಘ ಸೇರಿದ 7ನೇ ದಿನದಂದು ಅರಹಂತರಾದರು. ಸಾರಿಪುತ್ತರು 15ನೇ ದಿನಕ್ಕೆ ಅರಹಂತರಾದರು. ಬುದ್ಧ ಭಗವಾನರು ಸಹಾ ಇವರಿಗೆ ಅಗ್ರಶ್ರಾವಕರೆಂದು ಘೋಷಿಸಿದರು. ನಂತರ ಸಾರಿಪುತ್ತ ಮತ್ತು ಮೊಗ್ಗಲಾನರವರು ಸಂಜಯರು ಬುದ್ಧರ ಬಳಿಗೆ ಬರಲು ನಿರಾಕರಿಸಿದ್ದನ್ನು ತಿಳಿಸಿದರು. ಆಗ ಬುದ್ಧರು ಮೇಲಿನ ಗಾಥೆಗಳನ್ನು ನುಡಿದರು.

dhammapada/yamaka vagga/1:7/the story of devadatta

ಪರಿಶುದ್ಧರು ಕಾಷಾಯಕ್ಕೆ ಅರ್ಹರು, ಪಾಪಿಗಳಲ್ಲ.
ಯಾರು ಕಶ್ಮಲಗಳಿಂದ ಕೂಡಿರುವರೊ, ಧಮ್ಮ ಮತ್ತು ಸತ್ಯರಹಿತರೋ ಅವರು ಕಾಷಾಯವಸ್ತ್ರ ಧರಿಸಿದರೂ ಅನರ್ಹರಾಗಿದ್ದಾರೆ        (9)
ಯಾರು ಕಶ್ಮಲಗಳಿಂದ ಮುಕ್ತರೋ, ಶೀಲವಂತರೊ, ಸುಸಮಾಹಿತತೆ (ಪ್ರಶಾಂತತೆ) ಹೊಂದಿರುವರೋ, ಧಮ್ಮ ಮತ್ತು ಸತ್ಯಗಳಿಂದ ಕೂಡಿರುವರೋ ಅವರು ಕಾಷಾಯ ವಸ್ತ್ರಕ್ಕೆ ಅರ್ಹರಾಗಿದ್ದಾರೆ.        (10)
ಗಾಥ ಪ್ರಸಂಗ 1:7 

 ಸ್ತ್ರ ಸ್ವೀಕಾರಾರ್ಹರು ಯಾರು ? (ದೇವದತ್ತನ ಕಥೆ)
ಕಾಷಾವಸ್ತ್ರ ಸ್ವೀಕಾರಾರ್ಹರು ಯಾರು ? (ದೇವದತ್ತನ ಕಥೆ)
ಕಾಷಾವಸ್ತ್ರ ಕಾಷಾವಸ್ತ್ರ ಸ್ವೀಕಾರಾರ್ಹರು ಯಾರು ? (ದೇವದತ್ತನ ಕಥೆ)
ಒಮ್ಮೆ ಪೂಜ್ಯ ಸಾರಿಪುತ್ತ ಮತ್ತು ಪೂಜ್ಯ ಮೊಗ್ಗಲಾನರವರು ಶ್ರಾವಸ್ತಿಯಿಂದ ರಾಜಗೃಹದೆಡೆಗೆ ಹೊರಟಿದ್ದರು. ಆಗ ರಾಜಗೃಹದ ಜನರು ಅವರಿಗೆ ಔತಣಕ್ಕಾಗಿ ಆಹ್ವಾನಿಸಿದರು. ಆ ಸಂದರ್ಭದಲ್ಲಿ ಒಬ್ಬ ಅತ್ಯಂತ ಬೆಲೆಬಾಳುವ ವಸ್ತ್ರವನ್ನು ಇಟ್ಟುಕೊಂಡು ಚಂದಾ ಹಣಕ್ಕೆ ತೊಂದರೆಯಾದರೆ ಮಾರಾಟ ಮಾಡಿ ಆ ಹಣದಿಂದ ಭಿಕ್ಷುಗಳಿಗೆ ದಾನ ಮಾಡಲು ನಿರ್ಧರಿಸಿದ್ದನು. ಒಂದುವೇಳೆ ಹಣಕ್ಕೆ ಮುಗ್ಗಟ್ಟು ಬರದಿದ್ದರೆ ಶ್ರೇಷ್ಠ ಭಿಕ್ಷುವಿಗೆ ದಾನ ಮಾಡುವುದೆಂದು ನಿರ್ಧರಿಸಿದನು. ಆಗ ಯಾವುದೆ ಹಣಮುಗ್ಗಟ್ಟು ಬರಲಿಲ್ಲ. ಆಗ ಆಗ್ರಶ್ರಾವಕರಾದ ಸಾರಿಪುತ್ತ ಮತ್ತು ಮೊಗ್ಗಲಾನರವರು ಆಕಸ್ಮಿಕವಾಗಿ ರಾಜಗೃಹದಲ್ಲಿ ಬಂದಿದ್ದರು. ಆದರೆ ಜನರು ಪಕ್ಷಪಾತಕ್ಕೆ ಬಲಿಯಾಗಿ ತಮ್ಮ ನಗರದವನೆಂದು ರಾಜಗೃಹದ ದೇವದತ್ತನಿಗೆ ಆ ಅಮೂಲ್ಯವಾದ ವಸ್ತ್ರವನ್ನು ನೀಡಿದರು. ಹೀಗೆ ಅನರ್ಹರೊಬ್ಬರಿಗೆ ಅಮೂಲ್ಯ ಕಾಷಾಯ ವಸ್ತ್ರವು ಸಿಕ್ಕಿತು.
                ದೇವದತ್ತರು ಸಂಘಕ್ಕೆ ಸೇರಿದರೂ ಸಹ ಲೌಕಿಕದ ಅಧಿಕಾರ, ಕೀತರ್ಿಯ ಮಾಯೆಗೆ ಬಲಿಯಾಗಿ ಅದಕ್ಕಾಗಿ ಬುದ್ಧರನ್ನೇ ಕೊಲ್ಲಲು ಬಯಸಿದ್ದರು, ಪ್ರಯತ್ನಿಸಿದ್ದರು. ಆದರೆ ಬುದ್ಧಲೀಲೆಯಿಂದ ಅವೆಲ್ಲಾ ವ್ಯರ್ಥವಾಯಿತು. ಕೊನೆಗೆ ಸಂಘಬೇಧ ಮಾಡಲು ಹಿಂಜರಿಯಲಿಲ್ಲ. ಹೀಗೆ ಅವರು ದುಶ್ಶೀಲರಾಗಿದ್ದರು, ಅಸತ್ಯ ಮತ್ತು ಧಮ್ಮರಹಿತರಾಗಿದ್ದರು. ಆದರೆ ಪವಾಡಶಕ್ತಿ ಮತ್ತು ವಾಕ್ಚಾತುರ್ಯತೆಯಿಂದಾಗಿ ಜನರಿಗೆ ದೇವದತ್ತರ ಬಗ್ಗೆ ಸರಿಯಾಗಿ ತಿಳಿಯಲಿಲ್ಲ.
                ದೇವದತ್ತರು ಹೆಮ್ಮೆಯಿಂದ ಅದನ್ನು ಧರಿಸಿದರು. ಈ ವಿಷಯವನ್ನು ರಾಜಗೃಹದಿಂದ ಶ್ರಾವಸ್ತಿಗೆ ಬಂದಿದ್ದ ಭಿಕ್ಷುವೊಬ್ಬನು ಭಗವಾನರಿಗೆ ತಿಳಿಸಿ ವಿಷಾದ ವ್ಯಕ್ತಪಡಿಸಿದನು. ಆಗ ಬುದ್ಧರು ಅನರ್ಹನಾಗಿಯೂ ದೇವದತ್ತನು ಕಾಷಾಯವನ್ನು ಧರಿಸಿರುವುದು ಇದೇ ಮೊದಲಲ್ಲ ಎಂದರು. ಆಗ ಭಿಕ್ಷುಗಳ ಕೋರಿಕೆಯಂತೆ ಹಿಂದಿನ ಜನ್ಮದ ವೃತ್ತಾಂತವನ್ನು ತಿಳಿಸಿದರು.
*    *    *
                ದೇವದತ್ತನು ಹಿಂದಿನ ಜನ್ಮದಲ್ಲಿ ಆನೆ ಹಂತಕನಾಗಿದ್ದನು ಮತ್ತು ದಂತಚೋರ ಬೇಟೆಗಾರನಾಗಿದ್ದನು. ಆಗ ಒಂದು ಕಾಡಿನಲ್ಲಿ ಅಸಂಖ್ಯಾತ ಆನೆಗಳಿದ್ದವು. ಒಂದುದಿನ ಬೇಟೆಗಾರನು ಆ ಆನೆಗಳೆಲ್ಲಾ ಪಚ್ಚೇಕ ಬುದ್ಧರ ಕಾಲಿಗೆ ಬೀಳುವುದನ್ನು ಮತ್ತು ವಂದಿಸುವುದನ್ನು ಕಂಡನು. ಆಗ ಆತನು ಪಚ್ಚೇಕ ಬುದ್ಧರಂತೆ ಕಾಣುವುದಕ್ಕಾಗಿ ಕಾಷಾಯವಸ್ತ್ರ ಧರಿಸಿ ಆತನಿಗೆ ಗೌರವಿಸಲು ಬಂದಂತಹ ಆನೆಗಳನ್ನು ಒಂದೊಂದಾಗಿ ಕೊಲ್ಲಲು ಪ್ರಾರಂಭಿಸಿದನು.
                ಆಗ ಆ ಆನೆಗಳ ಗುಂಪಿಗೆ ಬೋಧಿಸತ್ವರೇ ನಾಯಕರಾಗಿದ್ದರು. ಬೋಧಿಸತ್ತರು ಬಲಿಷ್ಠ ಆನೆಯಾಗಿದಷ್ಟೇ ಅಲ್ಲದೆ, ಚಾಣಾಕ್ಷತೆಯಿಂದ ಆನೆಗಳ ಹಿಂಡಿನ ಕ್ಷೀಣತೆಗೆ ಕಾರಣನಾದ ಬೇಟೆಗಾರನನ್ನು ತನ್ನ ಬಲಿಷ್ಠ ಸೊಂಡಿಲಿನಿಂದ ಹಿಡಿಯಿತು ಮತ್ತು ಆತನನ್ನು ನೆಲಕ್ಕೆ ಅಪ್ಪಳಿಸಲು ಸೊಂಡಿಲನ್ನು ಮೇಲಕ್ಕೆ ಎತ್ತಿತು. ಆದರೆ ಆತನು ಧರಿಸಿದ್ದ ಕಾಷಾಯವಸ್ತ್ರಕ್ಕೆ ಗೌರವಿಸಿ ಆತನಿಗೆ ಜೀವದಾನ ನೀಡಿತು.
*    *    *
                ಹೀಗೆ ಭಗವಾನರು ಹಿಂದಿನ ವೃತ್ತಾಂತ ತಿಳಿಸಿ ಈ ಮೇಲಿನ ಗಾಥೆಗಳನ್ನು ತಿಳಿಸಿದರು

Saturday 25 October 2014

dhammapada/yamaka vagga/1:6/maha kaala and chula kaala

ಬಲಹೀನರು ಪ್ರಲೋಭನೆಗೆ ವಶರಾಗುತ್ತಾರೆ, ಬಲಿಷ್ಠರಲ್ಲ
ಸುಂದರ ಸುಖಕರ ಎಂದು ಚಿಂತಿಸುತ್ತ ಜೀವಿಸುವವನನ್ನು ಇಂದ್ರೀಯಗಳಲ್ಲಿ ಸಂಯಮಿಯಲ್ಲದವನನ್ನು, ಭೋಜನದಲ್ಲಿ ಮಿತವಿಲ್ಲದವನನ್ನು, ಆಲಸಿಯನ್ನು, ಹೀನವೀರ್ಯನನ್ನು, ಮಾರನು ದುರ್ಬಲವಾದ ಮರವನ್ನು ವಾಯುವು ಉರುಳಿಸುವಂತೆ ವಶಪಡಿಸಿಕೊಳ್ಳುವನು.      (7)
ಅಶುಭ ಧ್ಯಾನದಲ್ಲಿ ವಿಹರಿಸುವವನ್ನು, ಇಂದ್ರಯ ಸಂಯಮಿಯನ್ನು, ಭೋಜನದಲ್ಲಿ ಮಿತಿಯಿರುವವನನ್ನು, ಪೂರ್ಣ ಶ್ರದ್ಧೆಯಿರುವವನನ್ನು ಅಪಾರ ಯತ್ನಶೀಲನನ್ನು, ಅಂತಹವನನ್ನು ಪರ್ವತದಂತಹ ಹೆಬ್ಬಂಡೆಯನ್ನು ವಾಯುವು ಏನೂ ಮಾಡಲಾರದಂತೆ ಮಾರನು ವಶಪಡಿಸಿಕೊಳ್ಳಲಾರನು. (8)
ಗಾಥ ಪ್ರಸಂಗ 1:6
ಭಿಕ್ಷುಗಳಾದ ಮಹಾಕಾಲ ಮತ್ತು ಚುಲ್ಲ (ಚಿಕ್ಕ) ಕಾಲ

                ಮಹಾಕಾಲ ಮತ್ತು ಚುಲ್ಲಕಾಲ ಇವರಿಬ್ಬರು ಸಹೋದರರು. ಹಿಂದೆ ವ್ಯಾಪಾರಿಗಳಾಗಿದ್ದರು. ಅವರು ವ್ಯಾಪಾರಕ್ಕಾಗಿ ಪ್ರಯಾಣಿಸುವಾಗ ಬುದ್ಧರಿಂದ ಅವರಿಗೆ ಧಮ್ಮ ಆಲಿಸುವ ಅವಕಾಶ ಸಿಕ್ಕಿತು. ಪ್ರವಚನದ ನಂತರ ಮಹಾಕಾಲ ಭಿಕ್ಷುವಾದರು. ಹಾಗೆಯೇ ಚುಲ್ಲಕಾಲ ಕೂಡ ಭಿಕ್ಷುವಾದರೂ ಅಂತಹ ಶ್ರದ್ಧೆಯಿರಲಿಲ್ಲ.
                ಮಹಾಕಾಲರವರು ಧ್ಯಾನದಲ್ಲಿ ಅತಿ ಗಂಭೀರರಾದರು ಮತ್ತು ಅಶುಭ (ಅಸುಂದರ) ಧ್ಯಾನದಲ್ಲಿ ತಲ್ಲೀನರಾಗಿ ದೇಹದ ನಶ್ವರತೆ ಅರಿವಾಗಿ ಹಾಗೆಯೇ ಹಂತಹಂತವಾಗಿ ಮುಂದುವರೆದು ಅರಹಂತರಾದರು. ಅದಕ್ಕಾಗಿ ಅವರು ಹೀಗೆ ಶ್ರಮಪಟ್ಟಿದ್ದರು. ರಾತ್ರಿ 10 ಗಂಟೆಗೆ ಎಲ್ಲರೂ ಮಲಗಿ ನಿದ್ರಿಸುತ್ತಿರುವಾಗ ಅವರು ಸ್ಮಶಾನಕ್ಕೆ ಹೋಗಿ ಅಲ್ಲಿ ಸಾಧನೆ ಮಾಡಿ ಸೂಯರ್ೊದಯಕ್ಕೆ ಮುಂಚೆ ವಿಹಾರಕ್ಕೆ ಹಿಂತಿರುಗುತ್ತಿದ್ದರು.
                ಒಮ್ಮೆ ಸುಂದರಳಾಗಿದ್ದ ಸ್ತ್ರೀಯು ಮರಣ ಹೊಂದಿದಳು. ಆಕೆಯನ್ನು ಸುಡಲು ಆಕೆಯ ಬಂಧು-ಮಿತ್ರರೆಲ್ಲ ಬಂದು ಅವರಿಗೆ ದಹನಕ್ರಿಯೆ ನೋಡಲು ಹಿಂಜರಿಕೆಯಾಗಿ ಕಾವಲುಗಾರಳಿಗೆ ಒಪ್ಪಿಸಿ ಸುಡಲು ಹೇಳಿ ಹೊರಟರು. ಕಾವಲುಗಾರಳಿಗೆ ಅಲ್ಪಸ್ವಲ್ಪ ಧಮ್ಮದ ಪರಿಚಯವಿತ್ತು ಮತ್ತು ಆಕೆಯು ಮಹಾಕಾಲರವರು ಸ್ಮಶಾನದಲ್ಲಿ ಬಂದು ಸಾಧನೆ ಮಾಡುವುದು ತಿಳಿದಿತ್ತು. ಆಕೆಯು ಆ ಶವವನ್ನು ನೋಡಿ ಅಶುಭಾಧ್ಯಾನ ಮಾಡಲು ಯೋಗ್ಯವಾದ ಶರೀರವಿದು ಎಂದುಕೊಂಡು ಆಕೆಯು ಮಹಾಕಾಲರಿಗೆ ಈ ವಿಷಯ ತಿಳಿಸಿದಳು. ಅವರು ಬಂದು ಆ ಶವವನ್ನು ತಲೆಯಿಂದ ಪಾದದವರೆಗೂ ವೀಕ್ಷಿಸಿದರು. ಅದು ಚಿನ್ನದ ಬಣ್ಣದ ಶವವಾಗಿತ್ತು. ಅವರು ಶವ ಸುಡುವವಳಿಗೆ ಶವವನ್ನು ಅಗ್ನಿಯಲ್ಲಿ ಇಡಲು ಹೇಳಿ ವೀಕ್ಷಿಸುತ್ತಾ ಹೋದರು. ಸ್ವಲ್ಪ ಕಾಲದಲ್ಲಿ ಆ ಚಿನ್ನದ ಬಣ್ಣದ ಶರೀರ ಅತ್ಯಂತ ವಿಕಾರವಾಗಿ ಹಂತಹಂತವಾಗಿ ಅತ್ಯಂತ ಅಸಹ್ಯ ರೂಪ ಹೊಂದಿ ಕರಕಲಾಯಿತು. ಯಾವ ದೇಹ ಧಮ್ಮವನ್ನು ಮರೆಸುವಂತಿತ್ತೊ, ಅದು ವಿಕಾರವಾಗಿದೆ ಮತ್ತು ಮರಣ ಹೊಂದಿದೆ ಎಂದು ಚಿಂತಿಸುತ್ತಾ ಮಹಾಕಾಲರವರು ಶವದ ಅಶುಭವನ್ನು ಧ್ಯಾನಿಸುತ್ತಾ ಅನಿತ್ಯ ಸಾಕ್ಷಾತ್ಕಾರವಾಗಿ ಹಾಗೆಯೇ ಮುಂದುವರೆದು ಅರಹಂತರಾದರು.
                ಮುಂದೆ ಒಮ್ಮೆ ಮಹಾಕಾಲ ಮತ್ತು ಚುಲ್ಲಕಾಲರವರು ಬುದ್ಧರೊಂದಿಗೆ ಸಿಂಪಸ್ಸು ಕಾಡಿನಲ್ಲಿ ತಂಗುವ ಅವಕಾಶ ಒದಗಿಬಂತು. ಅಲ್ಲಿ ಅವರಿಗೆ ಚುಲ್ಲಕಾಲರವರ ಪತ್ನಿಯರು ಔತಣಕ್ಕೆ ಆಹ್ವಾನಿಸಿದರು. ಹಾಗೆಯೇ ಆಹಾರ ಬಡಿಸಿದರು. ಅಲ್ಲಿ ಚುಲ್ಲಕಾಲನಿಗೆ ಆಕಷರ್ಿಸಿ ವಶಮಾಡಿಕೊಂಡು ಗೃಹಸ್ಥನನ್ನಾಗಿ ಮಾಡಿಕೊಂಡರು.
                ಮಾರನೆಯದಿನ ಮಹಾಕಾಲನ ಪತ್ನಿಯರು ಇದರಿಂದ ಪ್ರೇರಣೆ ಹೊಂದಿ ಅವರೂ ಸಹ ಔತಣಕ್ಕೆ ಆಹ್ವಾನಿಸಿದರು. ಔತಣದ ನಂತರ ಅವರು ಬುದ್ಧರಲ್ಲಿ ಮಹಾಕಾಲನನ್ನು ಅನುಮೋದನೆ ಮಾಡಲು ಉಳಿಯುವಂತೆ ಕೇಳಿಕೊಂಡರು. ಆಗ ಬುದ್ಧರು ಮತ್ತು ಸಂಘವು ಮಹಾಕಾಲನನ್ನು ಬಿಟ್ಟು ಹೊರಟರು.
                ನಂತರ ಆ ಪತ್ನಿಯರು ಮಹಾಕಾಲನನ್ನು ವಶಪಡಿಸಲು ಪ್ರಯತ್ನಿಸಿದರು. ಆದರೆ ಅರಹಂತರಾದ ಮಹಾಕಾಲರವರು ಗಾಳಿಯಲ್ಲಿ ತೇಲಿ ಹಾಗೆಯೇ ಹಾರಿ ಬುದ್ಧರಲ್ಲಿಗೆ ಬಂದು ವಂದಿಸಿದರು. ಆ ಸಮಯದಲ್ಲಿ ಭಿಕ್ಷುಗಳು ಈ ಅಣ್ಣ ತಮ್ಮಂದಿರ ಬಗ್ಗೆ ಚಚರ್ಿಸುವಾಗ ಬುದ್ಧರು ಈ ಗಾಥೆಯನ್ನು ನುಡಿದರು

dhammapada/yamaka vagga/1:5/kosambi monks

ಯೋಗ್ಯ ಚಿಂತನೆಯಿಂದ ಯುದ್ಧಗಳು (ಜಗಳ) ನಿಲ್ಲುತ್ತವೆ
ಪರರು ತಾವು ಸಾವಿನ ವಶವಾಗುತ್ತೇವೆ ಎಂದು ಅರಿತಿಲ್ಲ. ಯಾರು ಇದನ್ನು ಅರಿತಿರುವರೋ ಅವರ ಜಗಳಗಳು ಶಮನಗೊಳ್ಳುತ್ತವೆ    (6)
ಗಾಥ ಪ್ರಸಂಗ 1:5
ಕೋಸಂಬಿಯ ಕಲಹಪ್ರಿಯ ಭಿಕ್ಷುಗಳು

                ಕ್ಷುಲ್ಲಕ ಕಾರಣದಿಂದ ಕೋಸಂಬಿಯ ಭಿಕ್ಷುಗಳಲ್ಲಿ ದುಭರ್ಾಗ್ಯಯುತ ಕಲಹ ಹಬ್ಬಿತು. ವಿನಯದ ಗುರುವಿನ ಗುಂಪಿಗೂ ಧಮ್ಮದ ಗುರುವಿನ ಗುಂಪಿಗೂ ವಿನಯದ ಚಿಕ್ಕ ನಿಯಮದ ಕಾರಣಕ್ಕಾಗಿ ಕಲಹ ಉಂಟಾಯಿತು. ಅವರು ಬುದ್ಧರ ಬುದ್ಧಿವಾದವನ್ನು ಕೇಳಲಿಲ್ಲ. ಆದರೆ ಬುದ್ಧರಿಗೆ ಅವರು ನಿಧಾನವಾಗಿ ಸರಿಹೋಗುತ್ತಾರೆಂದು ತಿಳಿದಿತ್ತು. ಅಂತಹ ಪರಿಸ್ಥಿತಿ ಉಂಟುಮಾಡಲು ಅವರು ಕೋಸಂಬಿಯನ್ನು ಬಿಟ್ಟು ಕಾಡಿನತ್ತ ಹೋಗಿ ವಷರ್ಾವಾಸ ಕಳೆದರು. ಅಲ್ಲಿ ಅವರಿಗೆ ಆನೆ ಮತ್ತು ಕಪಿಯೊಂದು ಸೇವೆಮಾಡಿತು. ಆನೆಯೊಂದು ಬಂದು ಭಗವಾನರಿಗೆ ಸೇವೆ ಸಲ್ಲಿಸುತ್ತಿರುವುದನ್ನು ಕಪಿಯು ಕಂಡಿತು. ಅದೂ ಸಹಾ ಭಗವಾನರಿಗೆ ದಾನ ನೀಡಲು ಇಚ್ಛಿಸಿತು. ಅದು ಮರದಿಂದ ಮರಕ್ಕೆ ಹಾರಿ ಜೇನನ್ನು ಕಿತ್ತು ಬುದ್ಧರಿಗೆ ನೀಡಿತು. ಹಾಗು ಬುದ್ಧರು ಜೇನನ್ನು ತಿಂದರೋ ಅಥವಾ ಇಲ್ಲವೋ ಎಂದು ಪರೀಕ್ಷಿಸಿತು. ಅವರು ಸೇವಿಸದೆ ಇದ್ದಾಗ ಅದು ಹತ್ತಿರ ಬಂದು ಜೇನನ್ನು ಪರೀಕ್ಷಿಸಿ ಅದರಲ್ಲಿದ್ದ ಜೇನಿನ ಎಲ್ಲಾ ಮೊಟ್ಟೆಗಳನ್ನು ನಯವಾಗಿ ತೆಗೆದು ಮತ್ತೆ ಬುದ್ಧರಿಗೆ ಸಮಪರ್ಿಸಿತು. ಈ ಸಾರಿ ಬುದ್ಧರು ಸೇವಿಸಿದಾಗ ಅದು ಸಂತೋಷಿಸಿತು.
                ಗೃಹಸ್ಥರಿಗೆ ಬುದ್ಧರು ನಾಡಿನಲ್ಲಿ ಇಲ್ಲದಿರುವ ಕಾರಣ ತಿಳಿಯಿತು. ಅವರು ಭಿಕ್ಷುಗಳಿಗೆ ಆಹಾರ ದಾನ ನೀಡಲು ನಿರಾಕರಿಸಿದರು. ಆಗ ಭಿಕ್ಷುಗಳಿಗೆ ತಮ್ಮ ತಪ್ಪಿನ ಅರಿವಾಯಿತು. ಅವರು ಪಶ್ಚಾತ್ತಾಪಪಟ್ಟರು ಮತ್ತೆ ಒಂದಾದರು. ಆದರೂ ಸಹಾ ಕೋಸಂಬಿಯ ಉಪಾಸಕರು ಭಿಕ್ಷುಗಳಿಗೆ ಆಹಾರವನ್ನು ನೀಡಲಿಲ್ಲ, ಸತ್ಕರಿಸಲಿಲ್ಲ. ಏಕೆಂದರೆ ಅವರಿಗೆ ಬುದ್ಧರು ಬೇಕಾಗಿತ್ತು. ಬುದ್ಧರ ಬಳಿ ಭಿಕ್ಷುಗಳು ಕ್ಷಮೆಯಾಚಿಸಬೇಕಾಗಿತ್ತು. ಹೀಗೆ ಆ ವರ್ಷವಾಸವನ್ನು ಭಿಕ್ಷುಗಳು ಅತಿ ದುದರ್ೆಸೆಯಿಂದ ಕಳೆದರು.

                ವರ್ಷವಾಸದ ಕೊನೆಯಲ್ಲಿ ಆನಂದ ಮತ್ತಿತರ ಹಿರಿಯ ಭಿಕ್ಷುಗಳು ಕೋಸಂಬಿಯ ಭಿಕ್ಷುಗಳು ಬದಲಾಗಿರುವುದನ್ನು, ಕ್ಷಮೆ ಯಾಚಿಸಿರುವುದನ್ನು ತಿಳಿಸಿದರು. ನಂತರ ಭಗವಾನರು ಶ್ರಾವಸ್ಥಿಗೆ ಹಿಂತಿರುಗಿದರು. ಅಲ್ಲಿ ಭಿಕ್ಷುಗಳು ಬಂದು ಕ್ಷಮೆ ಯಾಚಿಸಿದರು. ಆಗ ಭಗವಾನರು ಮೇಲಿನ ಗಾಥೆಯನ್ನು ತಿಳಿಸಿದರು. 

dhammapada/yamaka vagga/1:4/kaala yakkhini

ಪ್ರೀತಿ (ಮೆತ್ತಾ) ಯಿಂದ ಕೋಪವನ್ನು ಜಯಿಸಬಹುದು
ವೈರದಿಂದ ವೈರ್ಯವು ಈ ಜಗತ್ತಿನಲ್ಲಿ ಎಂದೂ ಶಮನವಾಗುವುದಿಲ್ಲ. ಅವೈರದಿಂದ (ಪ್ರೀತಿಯಿಂದ) ಮಾತ್ರ ಶಮನವಾಗುತ್ತದೆ. ಇದೇ ಸನಾತನ ಧಮ್ಮವಾಗಿದೆ      (5)
ಗಾಥ ಪ್ರಸಂಗ 1:4
ಹಲವಾರು ಜನ್ಮಗಳವರೆಗೆ ಮುಂದುವರೆದ ದ್ವೇಷ (ಕಾಲ ಯಕ್ಷಿಣಿ)

                ಒಮ್ಮೆ ಒಬ್ಬ ಗೃಹಸ್ಥನಿಗೆ ಬಂಜೆಯಾದ ಹೆಂಡತಿಯಿದ್ದಳು. ಆಕೆಯು ಮಕ್ಕಳನ್ನು ಹಡೆಯದ ಕಾರಣ ಮತ್ತು ತನ್ನ ಗಂಡನು ಕೆಟ್ಟದಾಗಿ ವತರ್ಿಸಬಹುದೆಂಬ ಭೀತಿಯಿಂದ ಆಕೆಯೇ ಒಂದು ಹೆಣ್ಣನ್ನು ಆಯ್ಕೆಮಾಡಿ ಮದುವೆ ಮಾಡಿಸಿದಳು. ಆದರೆ ಆ ನವವಧುವು ಗಭರ್ಿಣಿಯಾಗುವ ಚಿಹ್ನೆ ಕಂಡುಬಂದಾಗ ಆಕೆ ಆಹಾರದಲ್ಲಿ ಕೆಲವು ಔಷಧಿ ಮಿಶ್ರಣ ಮಾಡಿ ಗರ್ಭಪಾತ ಮಾಡಿಸುತ್ತಿದ್ದಳು. ಇದೇರೀತಿ 2 ಬಾರಿ ಮಾಡಿದಳು. 3ನೆಯ ಬಾರಿ ಆಕೆ ಗಭರ್ಿಣಿಯಾದಾಗ ತನ್ನ ಸವತಿಗೆ ಈ ವಿಷಯವನ್ನು ತಿಳಿಸಲಿಲ್ಲ. ಆದರೆ ನಿಧಾನವಾಗಿ ಆ ವಿಷಯ ತಿಳಿದುದರಿಂದಾಗಿ ಆ ಹಿರಿಯ ಸವತಿಯು ಗರ್ಭಪಾತ ಮಾಡಿಸಿದಳು. ದುಷ್ಟರಿಣಾಮವಾಗಿ ಆ ಎರಡನೆಯ ಹೆಂಡತಿಯು ಮಗುವಿಗೆ ಜನ್ಮ ನೀಡುವಾಗ ಸತ್ತಳು. ಆದರೆ ಸಾಯುವಾಗ ಆಕೆಯು ಬಂಜೆಯೊಂದಿಗೆ ಸೇಡು ತೀರಿಸುವೆ ಎಂದು ಪ್ರತಿಜ್ಞೆ ಮಾಡಿ ಸತ್ತಳು. ಈ ರೀತಿಯಾಗಿ ಆ ವೈರವು ಪ್ರಾರಂಭವಾಯಿತು.

                ಮುಂದಿನ ಜನ್ಮದಲ್ಲಿ ಅವರಿಬ್ಬರು ಕೋಳಿ ಮತ್ತು ಬೆಕ್ಕು ಆಗಿ ಜನ್ಮಿಸಿದರು. ಬೆಕ್ಕು ಕೋಳಿಯನ್ನು ತಿಂದಿತು. ನಂತರ ಇನ್ನೊಂದು ಜನ್ಮದಲ್ಲಿ ಜಿಂಕೆ ಮತ್ತು ಚಿರತೆಯಾಗಿ ಹುಟ್ಟಿದರು. ಚಿರತೆಯು ಜಿಂಕೆಯನ್ನು ತಿಂದಿತು. ನಂತರ ಮುಂದಿನ ಜನ್ಮದಲ್ಲಿ ಶ್ರಾವತ್ತಿಯ ಶ್ರೇಷ್ಠಿಯ ಮಗಳು ಗರ್ಭವತಿಯಾಗಿ ನಂತರ ಮಗುವಿನ ತಾಯಿಯಾದಳು. ಆ ಮಗುವನ್ನು ತಿನ್ನಲು ಯಕ್ಷಿಣಿಯು ಧಾವಿಸಿದಳು. ಆಕೆ ರಕ್ಷಣೆಗಾಗಿ ಮಗುವನ್ನು ಎತ್ತಿಕೊಂಡು ಓಡಿದಳು. ಕೊನೆಗೆ ಓಡುತ್ತಾ ಜೇತವನದಲ್ಲಿ ಧರ್ಮಬೋಧನೆ ಮಾಡುತ್ತಿದ್ದ ಬುದ್ಧರ ಬಳಿಗೆ ಬಂದು ಅವರ ಪಾದದ ಬಳಿ ಮಗುವನ್ನು ಇಟ್ಟು ಬುದ್ಧರ ರಕ್ಷಣೆ ಬೇಡಿದಳು. ಯಕ್ಷಿಣಿಗೆ ವಿಹಾರದಲ್ಲಿ ಪ್ರವೇಶಿಸಲು ಸಾಧ್ಯವಾಗಲಿಲ್ಲ. ನಂತರ ಬುದ್ಧರು ಇಬ್ಬರನ್ನೂ ಕರೆಸಿ ಹಿಂದಿನ ಜನ್ಮದ ವಿಷಯ ತಿಳಿಸಿ, ಮೈತ್ರಿಯ ಲಾಭ ತಿಳಿಸಿ, ಮೇಲಿನ ಗಾಥೆ ಹೇಳಿ ಇಬ್ಬರಲ್ಲೂ ಮೈತ್ರಿಯನ್ನು ಪ್ರತಿಷ್ಠಾಪಿಸಿದರು. ಇಬ್ಬರೂ ತಮ್ಮ ತಮ್ಮ ತಪ್ಪನ್ನು ಒಪ್ಪಿ ಸ್ನೇಹದಿಂದಿರಲು ಒಪ್ಪಿದರು. ನಂತರ ಬುದ್ಧರು ಗೃಹಿಣಿಗೆ ಆಕೆಯ ಮಗುವನ್ನು ಯಕ್ಷಿಣಿಗೆ ನೀಡುವಂತೆ ಹೇಳಿದರು. ಗೃಹಿಣಿಗೆ ಭಯವಾಯಿತು. ಆದರೂ ಬುದ್ಧರ ಮೇಲಿನ ಭಕ್ತಿ ಮತ್ತು ಶ್ರದ್ಧೆಯಿಂದಾಗಿ ಆಕೆ ಯಕ್ಷಿಣಿಗೆ ತನ್ನ ಮಗುವನ್ನು ನೀಡಿದಳು. ಆ ಮಗುವನ್ನು ಯಕ್ಷಿಣಿಯು ವಾತ್ಸಲ್ಯದಿಂದ ಎತ್ತಿ ಮುದ್ದಾಡಿ, ಅಪ್ಪಿ ವಾತ್ಸಲ್ಯಧಾರೆ ಹರಿಸಿ ಮರಳಿ ಆ ತಾಯಿಗೆ ನೀಡಿದಳು. ಈ ರೀತಿಯಾಗಿ ಎರಡೂ ಕಡೆಯಲ್ಲೂ ಸ್ನೇಹ ಶಾಂತಿಯು ನೆಲೆಸಿತು.

dhammapada/yamaka vagga/1:3/monk tissa story

ಸೇಡು ಶಾಂತಿಯನ್ನು ನೀಡದು
ನನಗೆ ಬೈದನು, ನನಗೆ ಹೊಡೆದನು, ನನಗೆ ಸೋಲಿಸಿದನು, ನನ್ನಿಂದ ಕಸಿದುಕೊಂಡನು ಎಂದು ಇಂತಹ ಯೋಚನೆಗಳಿಂದ ಕೂಡಿರುವವನ ವೈರವು ಶಮನವಾಗದು.     (3)
ನನಗೆ ಬೈದನು, ನನಗೆ ಹೊಡೆದನು, ನನಗೆ ಸೋಲಿಸಿದನು, ನನ್ನಿಂದ ಕಸಿದುಕೊಂಡನು ಎಂದು ಯಾರು ಇಂತಹ ಯೋಚನೆಗಳಿಂದ ಕೂಡಿರುವುದಿಲ್ಲವೋ ಅಂತಹವರ ವೈರವು ಶಮನವಾಗುತ್ತದೆ.         (4)
ಗಾಥ ಪ್ರಸಂಗ 1:3
ದ್ವೇಷಿ ವೃದ್ಧ (ತಿಸ್ಸ)

                ಬುದ್ಧರ ಸಂಬಂಧಿಯಾದ ತಿಸ್ಸನೆಂಬ ಭಿಕ್ಷುವು ವೃದ್ಧಾಪ್ಯದಲ್ಲಿ ಭಿಕ್ಷುವಾದರು. ಅವರು ಹಿರಿಯ ಭಿಕ್ಷುವಾಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತಿದ್ದರು. ಆದರೆ ಇನ್ನೊಂದೆಡೆ ಅವರೇ ಹಿರಿಯ ಭಿಕ್ಷುಗಳಿಗೆ ಗೌರವ ನೀಡುತ್ತಿರಲಿಲ್ಲ. ಭಿಕ್ಷು ಸಂಘದಲ್ಲಿ ಹಿರಿತನವು ಅವರು ಸಂಘಕ್ಕೆ ಸೇರಿದಾಗಿನಿಂದ ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ. ತಿಸ್ಸರವರು ಯುವ ಭಿಕ್ಷುಗಳೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದರು. ಯಾರಾದರೂ ಅವರಿಗೆ ಈ ರೀತಿಯ ವರ್ತನೆಯ ಬಗ್ಗೆ ನಿಂದಿಸಿದರೆ, ಅವರು ತೀರ ಕ್ಷೊಭೆಗೊಂಡು, ಅತ್ತುಕೊಂಡು ಬುದ್ಧರ ಬಳಿಗೆ ಬಂದು ದೂರನ್ನು ನೀಡುತ್ತಿದ್ದರು. ಬುದ್ಧರಿಗೆ ಇಡೀ ಪರಿಸ್ಥಿತಿಯ ಅರಿವಾಯಿತು. ಅವರು ತಿಸ್ಸನಿಗೆ ವರ್ತನೆಯನ್ನು ಬದಲಿಸುವಂತೆ ಬುದ್ಧಿವಾದ ನೀಡಿದರು. ದ್ವೇಷಕ್ಕೆ ಪ್ರತಿಯಾಗಿ ದ್ವೇಷ ಮಾಡದಿರುವಂತೆ, ಅದ್ವೇಷದಿಂದಲೇ ದ್ವೇಷವು ನಶಿಸುತ್ತದೆ ಎಂದು ತಿಳಿಸಿದರು. ಈ ಗಾಥೆಯು ಆಗ ನುಡಿದಿದ್ದಾಗಿದೆ.
*    *    *
                ನಂತರ ಬುದ್ಧರು ತಿಸ್ಸನ ಬಗ್ಗೆ ಆತ ಹಿಂದಿನ ಜನ್ಮದಲ್ಲೂ ಹೀಗೆಯೇ ಹಠಮಾರಿ ಯಾಗಿದ್ದನೆಂದು ತಿಳಿಸಿದರು. ಆತ ಹಿಂದಿನ ಜನ್ಮದಲ್ಲಿ ದೇವಲ ಎಂಬ ಋಷಿಯಾಗಿದ್ದನು. ಆತನು ಆಪಾರ್ಥತೆಯಿಂದಾಗಿ ಶುದ್ಧ ಗುರುವಿಗೆ ಶಪಿಸಿದ್ದನು. ನಂತರ ರಾಜನ ಮಧ್ಯಸ್ಥಿಕೆ ಮತ್ತು ಒತ್ತಾಯದಿಂದಲೂ ಆತ ಗುರುವಿನೊಂದಿಗೆ ಕ್ಷಮೆಯಾಚಿಸಲಿಲ್ಲ. ಕೊನೆಗೆ ರಾಜನು ಭೌತಿಕ ಬಲಪ್ರಯೋಗದಿಂದ ಕ್ಷಮೆಯಾಚಿಸುವಂತೆ ಮಾಡಿದನು

Monday 20 October 2014

dhammapada 1.2 verse and background story

ಒಳಿತು ಒಳಿತಿಗೆ ಜನ್ಮ ನೀಡುತ್ತದೆ
ಮನಸ್ಸು ಎಲ್ಲಾ (ಕುಶಲ) ಸ್ಥಿತಿಗಳಿಗೆ ಮುಂದಾಳಾಗಿದೆ. ಮನಸ್ಸೇ ನಾಯಕವಾಗಿದೆ. ಮನಸ್ಸಿನಿಂದಲೇ ಅವೆಲ್ಲವೂ ನಿಮರ್ಿತವಾಗಿದೆ. ಒಬ್ಬನು ಪರಿಶುದ್ಧ ಮನಸ್ಸಿನಿಂದ ಮಾತನಾಡಿದರೆ ಅಥವಾ ಕಾರ್ಯ ಮಾಡಿದರೆ ಆತನಿಗೆ ಸುಖವು ಎಂದೆಂದಿಗೂ ಹಿಂಬಾಲಿಸುವ ನೆರಳಿನಂತೆ ಹಿಂಬಾಲಿಸುತ್ತದೆ.
          (2)
ಗಾಥ ಪ್ರಸಂಗ 1:2
ಬುದ್ಧ ದರ್ಶನದ ಮಹತ್ವತೆ (ಮಥ್ಥ ಕುಂಡಲಿ)
                ಮಥ್ಥ ಕುಂಡಲಿ ಎಂಬ ಬ್ರಾಹ್ಮಣ ಯುವಕನಿದ್ದನು. ಆತನ ತಂದೆಯು ಪರಮ ಜಿಪುಣನಾಗಿದ್ದನು. ಆತನು ಎಂದಿಗೂ ಯಾರಿಗೂ ದಾನವನ್ನೇ ನೀಡಿರಲಿಲ್ಲ. ಆತನ ಮಗನಿಗಾಗಿ ನೀಡಿದ್ದ ಚಿನ್ನದ ಆಭರಣಗಳನ್ನು ಸಹಾ ಕುಶಲಕಮರ್ಿಗಳಿಗೆ ಭತ್ಯೆ ನೀಡಬೇಕಾಗುತ್ತದೆ ಎಂದು ಸ್ವತಃ ನಿಮರ್ಿಸಿದ್ದನು.
                ಒಂದುದಿನ ಮಥ್ಥ ಕುಂಡಲಿಗೆ ಕಾಮಾಲೆ ರೋಗ ಬಂದಿತು. ಹಣದ ಮೇಲಿನ ಆಸೆಯಿಂದ ಆತನ ತಂದೆಯು ವೈದ್ಯನಿಗೂ ತೋರಿಸಲಿಲ್ಲ. ಆತನಿಗೆ ತನ್ನ ಮಗನು ಅಂತಿಮ ಕ್ಷಣಗಳ ಸ್ಥಿತಿಗೆ ಬಂದಿರುವುದನ್ನು ಕಂಡು ಆತನು ಮಗನನ್ನು ಹೊರಗಡೆಯ ವರಾಂಡದಲ್ಲಿ ಇರಿಸಿದ. ಅದಕ್ಕೆ ಕಾರಣವೇನೆಂದರೆ ಬರುವ ಜನರಿಗೆ ತನ್ನ ಐಶ್ವರ್ಯ ತಿಳಿಯದಿರಲಿ ಎಂದು.
                ಬುದ್ಧ ಭಗವಾನರು ಪ್ರಾತಃ ಕಾಲದಲ್ಲಿ ಮಹಾ ಕರುಣಾ ಸಮಾಪತ್ತಿಯಲ್ಲಿ ಮಥ್ಥ ಕುಂಡಲಿಯ ದೀನ ಸ್ಥಿತಿಯನ್ನು ಕಂಡರು. ಆತನಿಗಾಗಿ ಆತನ ಮನೆಯ ಬಾಗಿಲಿನ ಬಳಿ ನಿಂತರು. ನಂತರ ಬುದ್ಧ ಭಗವಾನರು ಆತನ ಗಮನ ತಮ್ಮತ್ತ ತಿರುಗಿಸಲು ಕಿರಣವೊಂದನ್ನು ಕಳುಹಿಸಿದರು. ಆಗ ಆ ಯುವಕ ತನ್ನ ಗಮನ ಬುದ್ಧರೆಡೆಗೆ ಹರಿಸಿದನು. ಬುದ್ಧರನ್ನು ನೋಡಿದನು. ಆತನ ಶರೀರ ಬಹಳ ದುರ್ಬಲವಾಗಿತ್ತು. ಆದರೆ ಶ್ರದ್ಧೆಯುಕ್ಕಿ ಆನಂದಿತನಾದನು. ಬುದ್ಧ ಭಕ್ತಿಯ ಆನಂದದಿಂದಲೇ ಆತನು ಮೃತ್ಯುವಶವಾದನು. ಪರಿಣಾಮವಾಗಿ ಆತನು ತಾವತಿಂಸ ದೇವಲೋಕದಲ್ಲಿ ಜನಿಸಿದನು.
                ಆತನು ಆ ದಿವ್ಯಸ್ಥಿತಿಯ ಸ್ಥಾನದಿಂದಲೇ ತನ್ನ ತಂದೆಯು ಸ್ಮಶಾನದಲ್ಲಿ ಅಳುತ್ತಿರುವುದನ್ನು ಕಂಡನು. ಆಗ ವೃದ್ಧನ ಬಳಿ ತನ್ನ ಹಿಂದಿನ ಆಕಾರದಿಂದ ಕಾಣಿಸಿದನು. ಮತ್ತು ತನ್ನ ವೃತ್ತಾಂತ ತಿಳಿಸಿ ಬುದ್ಧರ ಬಳಿಗೆ ಬೋಧನೆ ಕೇಳಲು ಪ್ರೋತ್ಸಾಹಿಸಿದನು. ಆತನು ಅದರಂತೆಯೇ ನಡೆದುಕೊಂಡನು. ಆತನಿಗೆ ಬೋಧನೆಯ ಶ್ರೇಷ್ಠತೆ ಅರಿವಾಗಿ ಆತನ ಜಿಪುಣತೆ ನಾಶವಾಗಿ, ಆತ ಅಂದಿನಿಂದ ದಾನಿಯಾದನು.
                ನಂತರ ಈ ವಿಷಯವು ಎಲ್ಲಾ ಕಡೆ ದೃಢವಾಯಿತು. ಏನೆಂದರೆ ಒಬ್ಬನು ದಾನ, ಶೀಲ ಇಲ್ಲದೆಯೂ ಬುದ್ಧರ ಮೇಲಿನ ಶ್ರದ್ಧಾಭಕ್ತಿಯ ಆನಂದದಿಂದ ಒಂದುವೇಳೆ ಅದೇ ಸಮಯದಲ್ಲಿ ಮೃತ್ಯು ಹೊಂದಿದರೆ ಆತನಿಗೆ ಸುಗತಿಯು ಲಭಿಸುವುದು.

                ಈ ಗಾಥೆಯು ಆ ಸಮಯದಲ್ಲಿ ನುಡಿದುದ್ದಾಗಿದೆ

dhammapada 1.1 verse and story in kannada

zsÀªÀÄä¥ÀzÀ UÁxÀ ¥Àæ¸ÀAUÀUÀ¼ÀÄ
. ಯಮಕ ವಗ್ಗ


ಕೆಡಕು ಕೆಡಕಿಗೆ ಜನ್ಮ ನೀಡುತ್ತದೆ
ಮನಸ್ಸು ಎಲ್ಲಾ (ಅಕುಶಲ) ಸ್ಥಿತಿಗಳಿಗೆ ಮುಂದಾಳಾಗಿದೆ. ಮನಸ್ಸೇ ನಾಯಕವಾಗಿದೆ. ಮನಸ್ಸಿನಿಂದಲೇ ಅವೆಲ್ಲವೂ ನಿಮರ್ಿತವಾಗಿದೆ. ಒಬ್ಬನು ಪ್ರದುಷ್ಟ ಮನಸ್ಸಿನಿಂದ ಮಾತನಾಡಿದರೆ ಅಥವಾ ಕಾರ್ಯ ಮಾಡಿದರೆ ಆತನಿಗೆ ದುಃಖವು ಎತ್ತಿನ ಬಂಡಿಯಲ್ಲಿ ಎತ್ತಿನ ಕಾಲನ್ನು ಹಿಂಬಾಲಿಸುವ ಚಕ್ರದಂತೆ ಹಿಂಬಾಲಿಸುತ್ತದೆ.  (1)
ಗಾಥ ಪ್ರಸಂಗ 1:1
ಕಣ್ಣಿನ ದೃಷ್ಟಿ ಕಳೆದುಕೊಂಡ ಅರಹಂತ (ಚಕ್ಕುಪಾಲ)

                ಒಂದು ದಿನ ಪೂಜ್ಯ ಚಕ್ಕುಪಾಲರವರು ಬುದ್ಧರಿಗೆ ವಂದಿಸಲು ಜೇತವನ ವಿಹಾರಕ್ಕೆ ಬಂದರು. ಅವರು ಅಂಧರಾಗಿದ್ದರು. ಅವರು ನಡಿಗೆಯ ಧ್ಯಾನವನ್ನು ಮಾಡುತ್ತಿರುವಾಗ ಆಕಸ್ಮಿಕವಾಗಿ ಕೆಲವು ಕೀಟಗಳನ್ನು ತುಳಿದರು. ಮಾರನೆಯದಿನ ಕೆಲವು ಭಿಕ್ಷುಗಳು ಸತ್ತ ಕೀಟಗಳನ್ನು ಕಂಡರು. ಅವರು ಚಕ್ಕುಪಾಲನ ಬಗ್ಗೆ ಸಂಶಯವನ್ನು ಹೊಂದಿ ಬುದ್ಧರ ಬಳಿಗೆ ಬಂದು ದೂರು ಹೇಳಿದರು. ಆಗ ಬುದ್ಧರು ಅವರಿಗೆ ಚಕ್ಕುಪಾಲ ಉದ್ದೇಶಪೂರ್ವಕವಾಗಿ ಕೊಲ್ಲುತ್ತಿರುವುದು ನೀವು ನೋಡಿರುವಿರಾ? ಇಲ್ಲ ಭಂತೆ.
                ನೀವು ಹೇಗೆ ಆತನು ಕೊಲ್ಲುತ್ತಿರುವುದು ಕಾಣಲಿಲ್ಲವೋ ಹಾಗೆಯೇ ಆತನು ಸಹಾ ಕೀಟಗಳನ್ನು ಕಾಣಲಿಲ್ಲ. ಜೊತೆಗೆ ಆತನು ಅರಹಂತ, ಆತನಿಂದ ಹತ್ಯೆ ಅಸಾಧ್ಯವಾಗಿದೆ. ಆಗ ಭಿಕ್ಷುಗಳು ಚಕ್ಕುಪಾಲನ ಅಂಧತ್ವಕ್ಕೆ ಕಾರಣ ಕೇಳಿದರು. ಆಗ ಬುದ್ಧರು ಆತನ ಹಿಂದಿನ ಜನ್ಮ ವೃತ್ತಾಂತ ತಿಳಿಸಿದರು. ನಂತರ ಮೇಲಿನ ಗಾಥೆಯನ್ನು ಹೇಳಿದರು.
*    *    *

                ಚಕ್ಕುಪಾಲರವರು ಹಿಂದಿನ ಜನ್ಮದಲ್ಲಿ ವೈದ್ಯರಾಗಿದ್ದರು. ಆಗ ಅವರು ಒಬ್ಬ ಮಹಿಳೆಗೆ ಉದ್ದೇಶಪೂರ್ವಕವಾಗಿ ಕುರುಡಿಯನ್ನಾಗಿಸಿದ್ದರು. ಆಕೆಗೆ ಕಣ್ಣಿನ ತೊಂದರೆಯಿತ್ತು, ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ವೈದ್ಯರು ವಾಸಿ ಮಾಡಿದರೆ ಆಕೆಯು ಮತ್ತು ಆಕೆಯ ಮಕ್ಕಳು ಅವರಿಗೆ ಅಜನ್ಮ ಸೇವಕರಾಗುವುದಾಗಿ ವಚನ ನೀಡಿದ್ದಳು. ಆದರೆ ಆಕೆಗೆ ಕಣ್ಣು ಚೆನ್ನಾಗಿ ಕಾಣಿಸಲಾರಂಭಿಸಿದರೂ ಆಕೆ ಇನ್ನೂ ಕೆಟ್ಟಿದೆ ಎಂದು ನಟಿಸಲಾರಂಭಿಸಿದಳು. ಇದು ವೈದ್ಯರಿಗೆ ಅರಿವಾಗಿ ಇನ್ನೊಂದು ಕೆಟ್ಟ ಮುಲಾಮನ್ನು ನೀಡಿದರು. ಅದರಿಂದಾಗಿ ಆಕೆಯ ಕಣ್ಣು ಶಾಶ್ವತವಾಗಿ ಹೊರಟುಹೋಯಿತು. ಅದರ ಫಲಿತಾಂಶವೇ ಈ ಜನ್ಮದಲ್ಲಿ ಆತನು ಕುರುಡನಾದನು.