Thursday 19 February 2015

dhammapada/balavagga/5.15/tissa

ವಿಮುಕ್ತಿಯ ಮಾರ್ಗ
ಒಂದು ಮಾರ್ಗ ಲೌಕಿಕತೆಯ ಲಾಭದ್ದು, ಅನ್ಯ ಅನನ್ಯ ಮಾರ್ಗ ನಿಬ್ಬಾಣಗಾಮಿಯದು. ಇವನ್ನು ಸ್ಪಷ್ಟವಾಗಿ ಅರಿತಿರುವ ಬುದ್ಧರ ಶ್ರಾವಕ ಭಿಕ್ಷುವು ಸತ್ಕಾರಗಳಿಗೆ, ಇತ್ಯಾದಿಗಳಿಗೆ ಆನಂದಿತನಾಗದೆ ಏಕಾಂತದಲ್ಲಿ ಅನುರಕ್ತನಾಗಿರುತ್ತಾನೆ.     (75)
ಗಾಥ ಪ್ರಸಂಗ 5:15
ಯೋಗ್ಯ ಭಿಕ್ಷು ಎಲ್ಲರ ಮನ ಗೆಲ್ಲುತ್ತಾನೆ

                ತಿಸ್ಸಾ ಶ್ರಾವಸ್ತಿಯ ಶ್ರೀಮಂತನ ಮಗನಾಗಿದ್ದನು. ತಿಸ್ಸಾ ಇನ್ನೂ ಬಾಲಕನಾಗಿದ್ದಾಗಲೇ ಅವರ ತಂದೆಯ ಅಗ್ರಶ್ರಾವಕ ಸಾರಿಪುತ್ತರನ್ನು ಅನೇಕಬಾರಿ ಆಹಾರಕ್ಕೆ ಆಹ್ವಾನಿಸಿ ಸತ್ಕರಿಸಿದ್ದರು. ತಿಸ್ಸಾ ತನ್ನ ಏಳನೆಯ ಎಳೆ ವಯಸ್ಸಿನಲ್ಲಿಯೇ ಪಬ್ಬಜ್ಜ (ದೀಕ್ಷೆ) ಪಡೆದನು. ಆತನು ಜೇತವನದ ವಿಹಾರದಲ್ಲಿ ಇರುವಾಗ ಆತನ ಬಂಧು-ಮಿತ್ರರು ಆತನಿಗೆ ಕಂಡು ಮಾತನಾಡಿಸಿ, ಆತನಿಗೆ ನಾನಾ ವಿಧವಾದ ಉಡುಗೊರೆಗಳನ್ನು ನೀಡುತ್ತಿದ್ದರು. ಬಾಲಕ ತಿಸ್ಸನಿಗೆ ಇದರಿಂದ ಬೇಸರವಾಗಿ ಬುದ್ಧರಿಂದ ಸಮಾಧಿಯ ವಿಷಯ ಪಡೆದುಕೊಂಡು ಅದನ್ನು ಸಿದ್ಧಿಸಲು ಕಾಡಿಗೆ ಹೊರಟನು. ಆತನಿಗೆ ಎದುರಾಗಿ ಯಾರಾದರು ಹಳ್ಳಿಯವರು ಸಿಕ್ಕಿದರೆ ಸುಖಿಯಾಗಿರಿ, ದುಃಖದಿಂದ ಮುಕ್ತರಾಗಿ ಎಂದು ಹಾರೈಸಿ ತನ್ನ ಹಾದಿಯನ್ನು ಹಿಡಿಯುತ್ತಿದ್ದನು. ಅಷ್ಟೇ ಅಲ್ಲ, ಆತನು ಸಾಧನೆಯಲ್ಲಿ ಅತಿ ಪರಾಕ್ರಮ ಮೆರೆದು ಮೂರು ತಿಂಗಳಲ್ಲೇ ಅರಹಂತನಾದನು.
                ನಂತರ ವಷರ್ಾವಾಸ ಮುಗಿದನಂತರ ಸಾರಿಪುತ್ತ ಮೊಗ್ಗಲಾನ ಮುಂತಾದವರೊಡನೆ ಹಳ್ಳಿಗೆ ಬರುತ್ತಾರೆ. ಅಲ್ಲಿ ಸರ್ವರೂ ಅವರಿಗೆ ಸತ್ಕಾರ ನೀಡುತ್ತಾರೆ. ನಂತರ ಸಾರಿಪುತ್ತರಿಗೆ ಬೋಧಿಸಲು ಕೇಳಿಕೊಳ್ಳುತ್ತಾರೆ. ಆದರೆ ಸಾರಿಪುತ್ತರು ಬೋಧನೆ ನೀಡಲು ಈ ಬಾಲಕನಿಗೆ ಅವಕಾಶ ನೀಡಲು ಹೋದಾಗ ಹಳ್ಳಿಯವರು ಈ ಹುಡುಗ ಕೇವಲ ಸುಖಿಯಾಗಿರಿ, ದುಃಖಮುಕ್ತರಾಗಿ, ಎಂದಷ್ಟೇ ಹೇಳುವನು ಆದ್ದರಿಂದ ಈತನ ಬದಲು ಬೇರೆಯವರಿಗೆ ನೇಮಿಸಿ ಎಂದಾಗಲೂ ಸಾರಿಪುತ್ತರು ತಿಸ್ಸನಿಗೆ ಅವಕಾಶ ನೀಡುತ್ತಾ ಹೀಗೆ ಆಜ್ಞಾಪಿಸುತ್ತಾರೆ. ತಿಸ್ಸಾ ಮಾನವ ಹೇಗೆ ಸುಖ ಪ್ರಾಪ್ತಿಗಳಿಸುತ್ತಾನೆ ಮತ್ತು ಹೇಗೆ ಆತನು ದುಃಖಗಳೆಲ್ಲದವು ಗಳಿಂದ ಮುಕ್ತನಾಗುತ್ತಾನೆ ತಿಳಿಸು ಎನ್ನುತ್ತಾರೆ.
                ಆನಂತರ ವಿಧೇಯ ತಿಸ್ಸನು ಸಭಾಮಂಟಪದಲ್ಲಿ ಧಮ್ಮ ಬೋಧನೆ ಪ್ರಾರಂಭಿಸುತ್ತಾನೆ. ದೇಹ ಮನಸ್ಸುಗಳ ಅರ್ಥವನ್ನು ಇಂದ್ರಿಯಗಳ, ಇಂದ್ರಿಯ ವಿಷಯಗಳ, ಬೋಧಿ ಪಕ್ಖೀಯಗಳ ವಿಷಯಗಳು, ಅರಹತ್ವದ ಹಾದಿ ಮತ್ತು ನಿಬ್ಬಾಣ ಇತ್ಯಾದಿ ವಣರ್ಿಸಿ... ಹೀಗೆ ಅವರು ಅರಹಂತರಾಗಿ ದುಃಖಗಳಿಂದ ಮುಕ್ತರಾಗಿ, ಪರಿಪೂರ್ಣ ಶಾಂತಿ ಪ್ರಾಪ್ತಿಗೊಳಿಸಿ ಜನ್ಮ ಚಕ್ರದಿಂದ ಪಾರಾಗುತ್ತಾರೆ ಎಂದು ವಿವರಿಸುತ್ತಾರೆ.
                ಇದರ ಪರಿಣಾಮವಾಗಿ ಹಳ್ಳಿಯವರು ಆನಂದಿತರಾಗಿ ಪ್ರಭಾವಿತರಾಗುತ್ತಾರೆ, ಶ್ರದ್ಧಾವಂತರಾಗುತ್ತಾರೆ, ಆಶ್ಚರ್ಯಚಕಿತರಾಗುತ್ತಾರೆ. ಇಷ್ಟು ಚಿಕ್ಕವನಾದರು ಅದೆಷ್ಟು ಚೊಕ್ಕವ, ಆತನ ಮಧ್ಯೆಯಲ್ಲಿರುವ ನಾವೇ ಅದೆಷ್ಟು ಧನ್ಯರು ಎಂದು ಭಾವಿಸಿದರು. ಖಂಡಿತವಾಗಿ ಈತನು ನಿಬ್ಬಾಣಗಾಮಿ, ಪ್ರಾಪಂಚಿಕನಲ್ಲ ಎಂದು ಅರಿತರು.

                ಜೇತವನದ ವಿಹಾರದಲ್ಲಿ ತಂಗಿದ್ದಾಗ, ತಿಸ್ಸನಿಗೆ ಸಂಬಂಧಿಸಿದಂತೆ ಈ ಗಾಥೆಯನ್ನು ಭಗವಾನರು ನುಡಿದಿದ್ದರು.

dhammapada/balavagga/5.14/citta

ಅಧಿಕಾರದ ಲೋಭ
ಮೂರ್ಖನು ಮಾತ್ರ ಅಧಿಕಾರ ಬಯಸುತ್ತಾನೆ, ಭಿಕ್ಷುಗಳಲ್ಲಿ, ವಿಹಾರಗಳ ಮೇಲೆ ಪ್ರಾಬಲ್ಯ ಹಾಗು ಕುಟುಂಬಗಳಲ್ಲಿ ಗೌರವಕ್ಕೆ ಹಾತೊರೆಯುತ್ತಾನೆ.            (73)
ನನ್ನ ಬಗ್ಗೆ ಈ ರೀತಿ ಭಾವಿಸಲಿ, ಗೃಹಸ್ಥ ಮತ್ತು ಪಬ್ಬಜಿತರು ಸಹಾ ಯಾವುದೆಲ್ಲಾ ಕಾರ್ಯವಾಗಲಿ ಅದು ನನ್ನಿಂದಲೆ ಆಯಿತು, ಅದು ದೊಡ್ಡದಿರಲಿ ಅಥವಾ ಸಣ್ಣದಿರಲಿ ಅವರೆಲ್ಲರೂ ನನ್ನನ್ನೇ ಅವಲಂಬಿಸಲಿ ಈ ಬಗೆಯ ಲೋಭದಿಂದ ಮೂರ್ಖನ ಸ್ವಾರ್ಥ ಮತ್ತು ಅಹಂಕಾರಗಳು ಉಬ್ಬುತ್ತದೆ.  (74)
ಗಾಥ ಪ್ರಸಂಗ 5:14
ಗೃಹಸ್ಥ ಚಿತ್ತನ ಘಟನೆ

                ಮಚ್ಚಿಕಾಸಂದ ನಗರದಲ್ಲಿ ಚಿತ್ತನೆಂಬ ಗೃಹಸ್ಥನು ಪಂಚವಗರ್ಿಯ ಭಿಕ್ಷುಗಳಲ್ಲಿ ಒಬ್ಬರಾದ ಮಹಾನಾಮರನ್ನು ಕಂಡು ಭಕ್ತಿಪರವಶನಾಗಿ ಅವರಿಗೆ ಆಹಾರ ದಾನ ನೀಡಿದನು, ನಂತರ ಅವರು ಉಪದೇಶ ಕೇಳಿ ಸೋತಪನ್ನನಾದನು. ನಂತರ ಸಂಘದ ಮೌಲ್ಯ ಅರಿವಾಗಿ ತನ್ನ ಪ್ರಿಯವಾದ ಅಂಬಟ್ಟಕ ತೋಪನ್ನು ಸಂಘಕ್ಕೆ ದಾನವಾಗಿ ನೀಡಿದನು, ಆತನು ಪೂಜ್ಯರಿಗೆ ದಾನ ಅಪರ್ಿಸುವಾಗ ಅವರ ಕೈಗೆ ನೀರು ಸುರಿಸುತ್ತಾ ಬುದ್ಧರ ಸಂಘವು ಸ್ಥಿರವಾಗಿ ಸ್ಥಾಪಿಸಲ್ಪಟ್ಟಿದೆ ಎಂದಾಗ ಭೂಮಿಯೇ ಕಂಪಿಸಿತು. ನಂತರ ಮಹಾಶ್ರೇಷ್ಟಿಯು ಆ ತೋಪಿನ ಉದ್ಯಾನವನದಲ್ಲಿ ವಿಹಾರವನ್ನು ಕಟ್ಟಿಸಿದನು, ಅಲ್ಲಿ ನಾಲ್ಕು ದಿಕ್ಕುಗಳಿಂದ ಭಿಕ್ಷುಗಳು ಬರುತ್ತಿದ್ದರು, ಅದೇ ಊರಿನಲ್ಲಿ ಸುಧಮ್ಮನೆಂಬ ಭಿಕ್ಷುವು ನೆಲೆಸಿದ್ದನು.
                ಇದಾದ ಕೆಲಕಾಲದ ನಂತರ ಪ್ರಧಾನ ಶಿಷ್ಯರವರೆಗೂ ಆತನ ಕೀತರ್ಿಯು ಹಬ್ಬಿತು, ಅವರಿಗೆ ಆಹಾರ ದಾನನೀಡಿ, ಅವರಿಂದ ಉಪದೇಶ ಕೇಳಿ ಸಕಾದಗಾಮಿಯಾದನು. ನಂತರ ಅವರಿಗೆ ಸಾವಿರ ಭಿಕ್ಷುಗಳ ಸಮೇತ ಆಹಾರ ದಾನ ನೀಡಿದನು, ಆದರೆ ಆಚಾತುರ್ಯದಿಂದಾಗಿ ಸುಧಮ್ಮರಿಗೆ ಕೊನೆಯಲ್ಲಿ ಆಹ್ವಾನಿಸಿದ್ದನು. ಇದರಿಂದ ಅಸೂಯೆಗೊಂಡು ಸುಧಮ್ಮ ಆಹಾರಕ್ಕೆ ಬರದೆ ಈ ರೀತಿ ಹೇಳಿದನು ಗೃಹಸ್ಥನೇ, ನೀನು ಆಹಾರವನ್ನು ಚೆನ್ನಾಗಿಯೇ ಸಿದ್ಧಪಡಿಸಿರುವೆ, ಆದರೆ ಒಂದನ್ನು ಬಿಟ್ಟಿರುವೆ. ಏನದು ಭಂತೆ ಎಂದು ಕೇಳಿದಾಗ, ಎಳ್ಳಿನ ರೊಟ್ಟಿ ಎಂದು ಉತ್ತರಿಸಿದಾಗ, ಚಿತ್ತನಿಗೆ ಆತನ ಅಹಂಕಾರ ಗೊತ್ತಾಗಿ ಆತನಿಗೆ ಕಾಗೆ ಎಂದು ನಿಂದಿಸಿದನು. ಇದರಿಂದ ಕ್ರುದ್ಧನಾದ ಸುಧಮ್ಮನು ಬುದ್ಧರಲ್ಲಿಗೆ ಬಂದು ಚಾಡಿ ಹೇಳಿದನು. ಆದರೆ ಬುದ್ಧರಿಗೆ ಸರ್ವವೂ ಅರಿವಾಗಿ ಚಿತ್ತನನ್ನು ಕೊಂಡಾಡಿ, ಸುಧಮ್ಮನಿಗೆ ಖಂಡಿಸಿ ಚಿತ್ತನಲ್ಲಿಗೆ ಕ್ಷಮೆಯಾಚಿಸಲು ಕಳುಹಿಸಿದರು. ಆದರೆ ಚಿತ್ತನು ಕ್ಷಮಿಸಲಿಲ್ಲ.
                ಇದರಿಂದಾಗಿ ಆತನು ಬುದ್ಧರಲ್ಲಿಗೆ ಹೋಗಿ ವಿಷಯ ತಿಳಿಸಿದನು, ಬುದ್ಧರಿಗೆ ಚಿತ್ತನು ಕ್ಷಮಿಸಿದ್ದಾನೆ, ಆದರೂ ಸುಧಮ್ಮನ ಅಹಂಕಾರ ತಗ್ಗಿಸಲು ಈ ರೀತಿ ನಟಿಸಿದ್ದಾನೆ ಎಂದು ಅರಿವಾಯಿತು. ಆಗ ಬುದ್ಧರು ಓ ಭಿಕ್ಷುವೆ, ಈ ಒಬ್ಬ ಸಹಭಿಕ್ಷುವಿನ ಸಹಿತ ಹೋಗಿ ಗೃಹಸ್ಥನ ಬಳಿ ಕ್ಷಮೆ ಯಾಚಿಸಿಕೊ, ಯಾವ ಭಿಕ್ಷುವು ಈ ವಾಸಸ್ಥಳ ನನ್ನದು, ಈ ಉಪಾಸಕ ನನ್ನವ, ನನ್ನ ಹಿತೈಷಿ ಎಂದು ಯಾರು ಯೋಚಿಸುವರೊ ಆತನ ಅಹಂ ಮತ್ತು ದ್ವೇಷವು ವೃದ್ಧಿಯಾಗುತ್ತದೆ, ಹೊರತು ಕ್ಷೀಣಿಸುವುದಿಲ್ಲ ಎಂದು ಭಗವಾನರು ನುಡಿದರು.
                ಇದಾದನಂತರ ಸುಧಮ್ಮ ಬುದ್ಧರಿಗೆ ವಂದಿಸಿ, ಪ್ರದಕ್ಷಿಣೆ ಮಾಡಿ ಚಿತ್ತನಲ್ಲಿಗೆ ಕ್ಷಮೆ ಯಾಚಿಸಿದಾಗ ನಾನು ಕ್ಷಮಿಸಿರುವೆ, ಪೂಜ್ಯರೇ, ನೀವು ಸಹಾ ನನ್ನ ತಪ್ಪುಗಳನ್ನು ಕ್ಷಮಿಸಿ ಎಂದರು. ನಂತರ ಸುಧಮ್ಮ ಜಾಗೃತನಾಗಿ ಸ್ವಪರಿಶ್ರಮಯುತನಾಗಿ ಅಭಿಜ್ಞ ಸಹಿತ ಅರ್ಹಂತನಾದನು.
                ಚಿತ್ತನ ಮನಸ್ಸಿನಲ್ಲಿ ಈ ಯೋಚನೆಯುಂಟಾಯಿತು ಬುದ್ಧರನ್ನು ಕಾಣದೆಯೇ ನಾನು ಸೋತಪನ್ನನಾದೆ, ಸಕಾದಗಾಮಿಯಾದೆ, ಇನ್ನು ನಾನು ತಡಮಾಡದೆ ಅವರನ್ನು ದಶರ್ಿಸಲೇಬೇಕು ಎಂದು ಯೋಚಿಸಿ 500 ಬಂಡಿಗಳ ತುಂಬಾ ಅಕ್ಕಿ, ಎಳ್ಳು, ಸಕ್ಕರೆ, ವಸ್ತ್ರಗಳು ಇತ್ಯಾದಿಗಳ ಸಹಿತ ಬುದ್ಧರನ್ನು ಭೇಟಿಮಾಡಿ ಬುದ್ಧ ಮತ್ತು ಸಂಘಕ್ಕೆ ಒಂದು ತಿಂಗಳು ದಾನ ಮಾಡಿದನು. ಆನಂದರವರು ಭಗವಾನರಿಗೆ ಕೇಳಿದರು ಪೂಜ್ಯರೇ, ಆತನು ನಿಮ್ಮನ್ನು ದಶರ್ಿಸಿದರಿಂದಲೆ ಈ ಎಲ್ಲಾ ಗೌರವ ಪಡೆದನೆ? ಆಗ ಬುದ್ಧರು ಈ ರೀತಿ ಉತ್ತರಿಸಿದರು ಆನಂದ ಯೋಗ್ಯ ವ್ಯಕ್ತಿ ಎಲ್ಲೇ ಇರಲಿ, ಆತನು ಗೌರವ ಆದರಗಳನ್ನು ಪಡೆಯುತ್ತಾನೆ.
                ಬುದ್ಧ ಭಗವಾನರು ಜೇತವನದಲ್ಲಿ ತಂಗಿದ್ದಾಗ ಈ ಗಾಥೆಗಳನ್ನು ಪೂಜ್ಯ ಸುಧಮ್ಮ ಮತ್ತು ಗೃಹಸ್ಥ ಚಿತ್ತನ ಬಗ್ಗೆ ಹೇಳಿದರು

dhammapada/balavagga/5.13/maggalana

ಮೂರ್ಖರಿಗೆ ಪಾಂಡಿತ್ಯದಿಂದಲೂ ನಾಶವಿದೆ
ಏನೆಲ್ಲ ಜ್ಞಾನವನ್ನು ಮೂರ್ಖನು ಗಳಿಸಿರುವನೋ, ಅದೆಲ್ಲಾ ಆತನ ಅನರ್ಥಕ್ಕಾಗಿಯೇ. ಅದು ಮೂರ್ಖನ ಪುಣ್ಯವನ್ನು, ತಲೆಯನ್ನು ಕತ್ತರಿಸಿ ಹಾಕುತ್ತದೆ.            (72)
ಗಾಥ ಪ್ರಸಂಗ 5:13
ಹಿಂಸೆಯ ಪರಿಣಾಮ ಪ್ರೇತ

                ಒಮ್ಮೆ ಪೂಜ್ಯ ಮಹಾ ಮೊಗ್ಗಲಾನರವರು ಪ್ರೇತವನ್ನು ಕಂಡರು. ಅದರ ಬಗ್ಗೆ ಬುದ್ಧರಿಗೆ ವಿಚಾರಿಸಿದಾಗ ಭಗವಾನರು ಆ ಪ್ರೇತದ ಬಗ್ಗೆ ಹೀಗೆ ಹೇಳಿದರು.
                ಸತ್ಥಿಕುಟ ಎಂಬುವವನು ಕಲ್ಲು ಎಸೆಯುವುದರಲ್ಲಿ ಕುಶಲಿಯಾಗಿದ್ದನು. ಒಮ್ಮೆ ಆತನು ತನ್ನ ಗುರುವಿನಲ್ಲಿ ತನ್ನ ಕೌಶಲ್ಯವನ್ನು ಪ್ರಯತ್ನಿಸುವೆ ಎಂದಾಗ ಆ ಗುರುವು ಆತನಿಗೆ ಹಸು ಅಥವಾ ಮನುಷ್ಯನಿಗೆ ಮಾತ್ರ ಕಲ್ಲಿನಿಂದ ಹೊಡೆಯಬೇಡ ಎಂದು ಎಚ್ಚರಿಕೆ ನೀಡಿದನು.
                ಒಂದುದಿನ ಪಚ್ಚೇಕ ಬುದ್ಧರು ಆಹಾರಕ್ಕಾಗಿ ದಾರಿಯಲ್ಲಿ ಹೋಗುತ್ತಿದ್ದರು. ಆಗ ಆ ಮೂರ್ಖನು ಅವರನ್ನೇ ಗುರಿಯಾಗಿ ಆರಿಸಿದನು. ಏಕೆಂದರೆ ಅವರನ್ನು ಆತನು ಭಿಕ್ಷುಕನೆಂದು ಭಾವಿಸಿ, ಇವರನ್ನು ಹೊಡೆದರೆ ಅವರನ್ನು ಕೇಳಲು ಯಾವುದೇ ಬಂಧುವಾಗಲಿ, ಪೋಷಕರಾಗಲಿ ಮತ್ತು ಅವರು ಪ್ರಾಣಿಯೂ ಅಲ್ಲ ಎಂದು ಭಾವಿಸಿ ಕಲ್ಲನ್ನು ಅವರತ್ತ ಎಸೆದನು. ಆತನು ಎಸೆದ ಕಲ್ಲಿನ ವೇಗಕ್ಕೆ ಆ ಕಲ್ಲು ಪಚ್ಚೇಕ ಬುದ್ಧರ ಬಲಕಿವಿಯಿಂದ ತೂರಿ ಎಡಕಿವಿಯಲ್ಲಿ ಹೊರಗೆ ಬಂದಿತು. ಆ ನೋವಿನಿಂದ ಅವರು ಪರಿನಿಬ್ಬಾಣ ಪ್ರಾಪ್ತಿಮಾಡಿದರು.
                ಆಗ ಜನರಿಗೆ ಸತ್ಥಿಕೂಟನ ಮೇಲೆ ಅಪಾರ ಕೋಪ ಉಂಟಾಗಿ ಆತನಿಗೆ ಹೊಡೆದು ಕೊಂದರು. ನಂತರ ಅವನು ಅವಿಚಿ ನರಕದಲ್ಲಿ ಹುಟ್ಟಿದನು. ನಂತರ ಅಲ್ಲಿಂದ ಮೃತನಾಗಿ ಗೃದ್ಧಕೂಟದ ಪರ್ವತದ ಬಳಿ ಪ್ರೇತವಾಗಿ ಹುಟ್ಟಿದನು. ಆ ಪ್ರೇತಕ್ಕೆ ನಿರಂತರ ಕೆಂಪಗೆ ಕಾದ ಸುತ್ತಿಗೆಯಿಂದ ಪೆಟ್ಟುಗಳು ಬೀಳುತ್ತಿದ್ದವು.
                ಹೀಗೆ ಭಗವಾನರು ಆ ಪ್ರೇತದ ಬಗ್ಗೆ ಹೇಳಿ ಮೂರ್ಖರಿಗೆ ಯಾವ ಜ್ಞಾನ, ವಿದ್ಯೆಯು ಫಲನೀಡದೆ, ಅವರನ್ನು ಬದಲಾಗಿ ಹಾನಿಯುಂಟುಮಾಡುತ್ತದೆ ಎಂದು ಹೇಳಿ ಮೇಲಿನ ಗಾಥೆ ನುಡಿದರು

dhammapada/balavagga/5.12/peta

ಪಾಪವು ಬೂದಿಮುಚ್ಚಿದ ಕೆಂಡದಂತೆ ಫಲನೀಡಲು ಅವಕಾಶ ಕಾಯುತ್ತದೆ
ಪಾಪಕರ್ಮವು ತಕ್ಷಣ ಫಲ ನೀಡಲಾರದು, ಹಾಲು ತಕ್ಷಣ ಹುಳಿಯಾಗದಂತೆ, ಮೂರ್ಖನಿಗೆ ಬೂದಿಮರೆಯ ಕೆಂಡದಂತೆ, ಮೆಲ್ಲನೆ ಉರಿಯುತ್ತಾ ಸುಡುವುದು          (71)
ಗಾಥ ಪ್ರಸಂಗ 5:12
ಸಪರ್ಾಕೃತಿಯ ಪ್ರೇತದ ಘಟನೆ

                ಒಮ್ಮೆ ಮಹಾಮೊಗ್ಗಲಾನ ಮತ್ತು ಪೂಜ್ಯ ಲಕ್ಕಣ್ಣನವರು ಒಂದು ಸಾವಿರ ಜಟಾಧಾರಿ ಸನ್ಯಾಸಿಗಳ ಸಮೇತ ರಾಜಗೃಹದಲ್ಲಿ ಭಿಕ್ಷಾಟನೆಗೆ ಹೊರಟರು. ಪೂಜ್ಯ ಮೊಗ್ಗಲಾನರವರು ಸರ್ಪಪ್ರೇತವನ್ನು ನೋಡಿ ಮುಗುಳ್ನಗೆ ಬೀರಿದರು. ಇದರ ಬಗ್ಗೆ ಲಕ್ಕಣ್ಣನವರು ವಿಚಾರಿಸಿದಾಗ ಸಹೋದರ ಪ್ರಶ್ನೆ ಕೇಳಲು ಇದು ಸಕಾಲವಲ್ಲ. ಬುದ್ಧರ ಬಳಿ ಹೋಗುವವರೆಗೂ ಸುಮ್ಮನಿದ್ದು ನಂತರ ಕೇಳು ಎಂದರು ಮೊಗ್ಗಲಾನರವರು. ಹಾಗೆಯೇ ಬುದ್ಧರ ಬಳಿಗೆ ಬಂದು ನಮಸ್ಕರಿಸಿ ಕುಳಿತರು. ಆಗ ಲಕ್ಕಣ್ಣನವರು ಮುಗುಳ್ನಗೆಗೆ ಕಾರಣವನ್ನು ಕೇಳಿದಾಗ ಅದಕ್ಕೆ ಮೊಗ್ಗಲಾನರವರು ಈ ರೀತಿ ಉತ್ತರಿಸಿದರು: ಸೋದರ ನನ್ನ ನಗೆಯ ಕಾರಣವೇನೆಂದರೆ ನಾನು ಒಂದು ಸರ್ಪಪ್ರೇತವನ್ನು ಕಂಡೆನು. ಅದರ ತಲೆಯು ಮಾನವನಂತೆ ಇತ್ತು. ಆದರೆ ಮುಂಡವು ಸರ್ಪದಂತೆ ಇತ್ತು. ಅದು 25 ಯೋಜನ ಉದ್ದವಿತ್ತು. ಅದರ ತಲೆಯಿಂದ ಹೊರಟ ಜ್ವಾಲೆಗಳು ಅದರ ಬಾಲವನ್ನು ಮುಟ್ಟುತ್ತಿತ್ತು. ಅದರ ಬಾಲದಿಂದ ಹೊರಟ ಜ್ವಾಲೆಗಳು ಅದರ ತಲೆಯನ್ನು ಮುಟ್ಟುತ್ತಿತ್ತು. ಈ ರೀತಿ ಅದು ಜ್ವಾಲೆಯಿಂದ ಆವೃತವಾಗಿತ್ತು. ಅಲ್ಲಿಯೇ ಇನ್ನೊಂದು ಕಾಗೆಯ ಪ್ರೇತವಿತ್ತು. ಅದೂ ಸಹಾ ಅಷ್ಟೇ ಉದ್ದವಿತ್ತು.
                ಕಾಗೆಯ ಆಕೃತಿಯ ಪ್ರೇತವನ್ನು ಮೊಗ್ಗಲಾನರವರು ಮಾತನಾಡಿಸಿ ಅದರ ಸ್ಥಿತಿ ಕಾರಣ ಕೇಳಿದಾಗ ಆ ಪ್ರೇತವು ಈ ರೀತಿ ಉತ್ತರಿಸಿತ್ತು:
                ನಾನು ಹಿಂದಿನ ಜನ್ಮದಲ್ಲಿ ಪೂಜ್ಯರ ಆಹಾರವನ್ನು ಕದ್ದುತಿಂದು ಅವರಿಗೆ ಉಪಾವಾಸ ನೀಡಿದ ಫಲದಿಂದಾಗಿ ಸತ್ತು ಅವೀಚಿ ನರಕದಲ್ಲಿ ಹುಟ್ಟಿ ನಂತರ ಹೀಗೆ ಫಲವನ್ನು ಈಗ ಈ ರೀತಿ ಅನುಭವಿಸುತ್ತಿರುವೆ ಎಂದಿತು.
                ಪ್ರೇತಸರ್ಪದ ಕತೆಯೂ ಹಾಗೆಯೇ ಇತ್ತು. ಅದು ಹಿಂದಿನ ಜನ್ಮದಲ್ಲಿ ಬನಾರಸ್ನ ವಾಸಿಯಾಗಿದ್ದನು. ಆತನು ವಾಸವಾಗಿರುವ ಕಡೆಯಲ್ಲೇ ಪಚ್ಚೇಕ ಬುದ್ಧರು ವಾಸವಾಗಿದ್ದರು. ಅವರನ್ನು ಕಾಣಲು ಜನರು ಈತನ ಹೊಲವನ್ನು ತುಳಿದು ಹಾದು ಹೋಗುತ್ತಿದ್ದರು. ಈ ರೈತನು ಇದನ್ನು ತಡೆಯಲು ಪ್ರಯತ್ನಿಸಿ ವಿಫಲನಾದನು. ಕೊನೆಗೆ ಆಕ್ರೋಶಗೊಂಡು ಅವರು ಆಹಾರವನ್ನು ಹುಡುಕುತ್ತಾ ನಗರಕ್ಕೆ ಹೋಗಿರುವಾಗ ಪಾತ್ರೆಗಳನ್ನು ಒಡೆದು ವಾಸಸ್ಥಳಕ್ಕೆ ಅಗ್ನಿಯಿಟ್ಟನು. ಆಗ ಜನಗಳಿಗೆ ಅತಿ ಕ್ರೋಧವುಂಟಾಗಿ ಆತನನ್ನು ಕೊಂದರು. ಮರಣದ ನಂತರ ಅವೀಚಿ ನರಕದಲ್ಲಿ ಹುಟ್ಟಿ ನಂತರ ಗೃದಕೂಟ ಪ್ರರ್ವತದಲ್ಲಿ ಪ್ರೇತಸರ್ಪವಾದನು. ಇದಕ್ಕಾಗಿಯೇ ನಾನು ನಗೆ ಬೀರಿದೆ ಎಂದು ಹೇಳಿದರು.
                ಆಗ ಭಗವಾನರು ಈ ರೀತಿ ಹೇಳಿದರು : ಭಿಕ್ಷುಗಳೇ, ಮೊಗ್ಗಲಾನರವರು ಹೇಳಿದ್ದು ನಿಜವಾಗಿದೆ. ನಾನು ಸಹಾ ಅದನ್ನು ಸಂಬೋಧಿಪ್ರಾಪ್ತಿಯ ನಂತರ ನೋಡಿರುವೆ, ಆದರೆ ಬಹುಜನ ಹಿತಕ್ಕಾಗಿ ನಾನು ಹೇಳಿಲ್ಲ. ಏಕೆಂದರೆ ನನ್ನ ಮಾತನ್ನು ನಂಬದವರಿಗೆ ಅದು ಲಾಭಕಾರಿಯಾಗಿಲ್ಲ.

                ಬುದ್ಧ ಭಗವಾನರು ಜೇತವನದಲ್ಲಿ ತಂಗಿದ್ದಾಗ ಈ ಗಾಥೆಯನ್ನು ನುಡಿದರು.

dhammapada/balavagga/5.11/jambuka

ಉಪವಾಸಕ್ಕಿಂತ ಪರಮೋತ್ತರ ಸಾಕ್ಷಾತ್ಕಾರ ಶ್ರೇಷ್ಠಕರ
ಮಾಸ ಮಾಸದಲ್ಲೂ ಕುಶಾಗ್ರದಷ್ಟು ಭೋಜನವನ್ನು ಮೂರ್ಖನು ಸೇವಿಸಬಹುದು. ಆದರೆ, ಆತನು ಸಂಚಿತಧಮ್ಮ (ಆರ್ಯಸತ್ಯಸಾಕ್ಷಾತ್ಕಾರ) ಅರಿತವರ ಹದಿನಾರರ ಒಂದು ಭಾಗದಷ್ಟು ಅರ್ಹತೆಗಳಿಸಲಾರ.           (70)
ಗಾಥ ಪ್ರಸಂಗ 5:11
ಜಂಬುಕನ ಘಟನೆ

                ಜಂಬುಕನು ಶ್ರಾವಸ್ತಿಯ ಶ್ರೀಮಂತ ಮಗನಾಗಿದ್ದನು. ಆದರೆ ತನ್ನ ಪಾಪಕೃತ್ಯಗಳ ಫಲದಿಂದ ಆತನು ಈ ಜನ್ಮದಲ್ಲಿ ವಿಚಿತ್ರವಾದ ಚಟಗಳನ್ನು ಹೊಂದಿದ್ದನು. ಆತನು ಮಗುವಾಗಿದ್ದ ಕಾಲದಿಂದ ನೆಲದಲ್ಲೇ ಮಲಗುತ್ತಿದ್ದನು. ಮತ್ತು ಬೇರೆ ಆಹಾರ ಸೇವಿಸದೆ ತನ್ನ ಮಲವನ್ನೇ ಸೇವಿಸುತ್ತಿದ್ದನು. ಆತನು ದೊಡ್ಡವನಾಗುತ್ತಿದ್ದಂತೆ ಆತನಿಗೆ ಆತನ ತಂದೆ-ತಾಯಿಗಳು ನಗ್ನ ಅಜೀವಕ ತಪಸ್ವಿಗಳ ಬಳಿ ಕಳುಹಿಸಿದ್ದರು. ಆದರೆ ಆ ಅಜೀವಕರು ಸಹಾ ಈತನ ಆಹಾರ ಪದ್ಧತಿ ಕಂಡು ಅಸಹ್ಯಪಟ್ಟು ಆತನನ್ನು ಹೊರದೂಡಿದರು. ಆತನು ರಾತ್ರಿಯಲ್ಲಿ ಮಾನವರ ಮಲ ತಿಂದು, ಹಗಲಿನಲ್ಲಿ ಒಂಟಿಕಾಲಿನಲ್ಲಿ ನಿಂತು ಬಾಯಿ ತೆಗೆದುಕೊಂಡು ಇರುತ್ತಿದ್ದನು. ಕಾರಣ ಕೇಳಿದರೆ ಭೂಮಿಗೆ ಭಾರವಾಗದಿರಲಿ ಎಂದು ಒಂಟಿಕಾಲಿನಲ್ಲಿ ನಿಂತಿದ್ದೆನೆ ಮತ್ತು ಗಾಳಿಯನ್ನೇ ಆಹಾರವಾಗಿ ಸೇವಿಸುವುದ ರಿಂದಾಗಿ ಬಾಯಿ ತೆರೆದಿದ್ದಾನೆ ಎಂದು ಉತ್ತರಿಸುತ್ತಿದ್ದನು. ಅಷ್ಟೇ ಅಲ್ಲದೆ ನಾನು ಎಂದಿಗೂ ಕುಳಿತುಕೊಳ್ಳುವುದಿಲ್ಲ, ನಾನು ಎಂದಿಗೂ ನಿದ್ರಿಸುವುದಿಲ್ಲ ಎಂದು ಜಂಬ ಕೊಚ್ಚಿದ್ದರಿಂದ ಆತನಿಗೆ ಜಂಬುಕ (ನರಿ) ಎಂದು ಹೆಸರಿಸಿದರು.
                ಕೆಲವರು ಅವನನ್ನು ಕಂಡು ಭಕ್ತಿಯಿಂದ ಶ್ರೇಷ್ಠರೀತಿಯ ಆಹಾರಗಳನ್ನು ತಂದರೆ, ಅದನ್ನು ತಿರಸ್ಕರಿಸಿ ನಾನು ಗಾಳಿಯನ್ನಲ್ಲದೆ ಬೇರೇನೂ ಸೇವಿಸಲಾರೆ ಎಂದು ಸ್ವಪ್ರಶಂಸೆ ಮಾಡಿಕೊಳ್ಳುತ್ತಿದ್ದನು. ಬಹಳ ಬಲವಂತ ಮಾಡಿದರೆ, ಕುಶಹುಲ್ಲಿನ ತುದಿಯಷ್ಟು ಮಾತ್ರ ಆಹಾರ ಸೇವಿಸಿ ಈ ರೀತಿ ಹೇಳುತ್ತಿದ್ದ ಈಗ ಹೋಗಿ, ಈ ಅಲ್ಪಾಹಾರದಿಂದ ನಿಮಗೆ ಸಾಕಷ್ಟು ಪುಣ್ಯ ಸಿಗುವುದು ಈ ರೀತಿಯಾಗಿ ಆತನು 55 ವರ್ಷ ಮಲದಿಂದಲೇ ಜೀವಿಸಿದನು.
                ಒಂದುದಿನ ಭಗವಾನರು ಜಂಬುಕನು ಅರಹಂತನಾಗುವ ಪ್ರಚನ್ನತೆಯಿರುವುದು ಅರಿತು ಅತನಲ್ಲಿಗೆ ಹೋಗಿ ಅತನ ವಾಸಸ್ಥಳದಲ್ಲಿ ಒಂದು ರಾತ್ರಿ ಕಳೆಯಲು ಕೇಳಿದರು. ಆತನು ಸಮೀಪದ ಪರ್ವತದ ಗವಿಯನ್ನು ತೋರಿಸಿದನು. ಆ ರಾತ್ರಿಯ ಮೂರು ಜಾವಗಳಲ್ಲಿ ಭಗವಾನರನ್ನು ಭೇಟಿಮಾಡಲು ಚತುಮ್ಮಹಾರಾಜಿಕ ದೇವ, ಸಕ್ಕ ಮತ್ತು ಮಹಾಬ್ರಹ್ಮರು ಬಂದು ಹೋದರು. ಹಾಗೆ ಅವರು ಬಂದಾಗ ಅವರ ಪ್ರಭೆಯಿಂದ ಸುತ್ತಲಿನ ಅರಣ್ಯವೇ ಪ್ರಕಾಶಿಸಿತು. ಆ ಬೆಳಕನ್ನು ಜಂಬುಕನು ಸಹಾ ಮೂರುಬಾರಿ ಕಂಡನು. ಮಾರನೆಯದಿನ ಬೆಳಿಗ್ಗೆ ಅತನು ಭಗವಾನರಲ್ಲಿಗೆ ಹೋಗಿ ಇದರ ಕುರಿತು ಪ್ರಶ್ನಿಸಿದನು.
                ಆತನಿಗೆ ದೇವತೆಗಳು, ಸಕ್ಕ ಮತ್ತು ಮಹಾಬ್ರಹ್ಮರ ವಿಷಯ ತಿಳಿಸಿದಾಗ ಜಂಬುಕನು ಅತಿ ಸ್ಫೂತರ್ಿಗೊಂಡು ಬುದ್ಧರಿಗೆ ವಂದಿಸಿ ಈ ರೀತಿ ಹೇಳಿದನು ನೀವು ನಿಜವಾಗಿ ದೇವ, ಸಕ್ಕ ಮತ್ತು ಮಹಾಬ್ರಹ್ಮರಿಗೆ ಸದಾ ಅದ್ಭುತವಾಗಿ ಕಾಣಿಸುವಿರಿ. ಆದ್ದರಿಂದಲೇ ಅವರು ನಿಮಗೆ ವಂದಿಸುವರು. ನಾನು 55 ವರ್ಷದಿಂದ ಒಂಟಿಕಾಲಿನಲ್ಲಿ ತಪಸ್ಸು ಆಚರಿಸುತ್ತಾ, ಗಾಳಿಯಲ್ಲೇ ಜೀವಿಸುತ್ತಿದ್ದರೂ ನನಗೆ ಯಾವ ದೇವ, ಬ್ರಹ್ಮರೂ ಕಾಣಿಸಲಿಲ್ಲ. ಆಗ ಬುದ್ಧರು ಈ ರೀತಿ ಉತ್ತರಿಸುತ್ತಾರೆ ಓ ಜಂಜುಕೇ, ನೀನು ಪರರಿಗೆ ಮೋಸಗೊಳಿಸಬಹುದು, ಆದರೆ ನನಗೆ ನೀನು ವಂಚಿಸಲಾರೆ. ನನಗೆ ಗೊತ್ತಿದೆ ನೀನು 55 ವರ್ಷಗಳಿಂದ ವಿಸರ್ಜನೆಯನ್ನು ತಿಂದು ನೆಲದ ಮೇಲೆ ಮಲಗುವೆ.
                ಇದನ್ನು ಕೇಳಿದ ಜಂಬುಕ ಹೆದರಿದ ಮತ್ತು ಭಯಗೊಮಡು ಪರರಿಗೆ ತಾನು ಮಾಡಿದ ಮೋಸ ನೆನೆದು ಪರಿತಾಪಪಟ್ಟನು. ಬುದ್ಧಭಗವಾನರ ಪಾದದ ಮೇಲೆ ಬಿದ್ದನು. ಆಗ ಭಗವಾನರು ಆತನಿಗೆ ಹಾಕಿಕೊಳ್ಳಲು ವಸ್ತ್ರವನ್ನು ನೀಡಿದರು. ನಂತರ ಉಪದೇಶವನ್ನು ನೀಡಿದರು. ಪ್ರವಚನದ ಅಂತ್ಯದಲ್ಲಿ ಆತನು ಅರಹಂತನಾದನು ಮತ್ತು ಸಂಘವನ್ನು ಸೇರಿದನು.
                ನಂತರ ಜಂಬುಕನ ಶಿಷ್ಯರಾದ ಅಂಗ ಮತ್ತು ಮಗಧರಿಗೆ ಜಂಬುಕ ಬುದ್ಧಶಿಷ್ಯರಾದುದನ್ನು ಕಂಡು ಆಶ್ಚರ್ಯವಾಯಿತು. ಆಗ ಜಂಬುಕನು ವಿಷಯ ತಿಳಿಸಿ ತಾನು ಕೇವಲ ಬುದ್ಧರ ಶಿಷ್ಯನೆಂದು ಹೇಳಿದಾಗ ಭಗವಾನರು ಜಂಬುಕನ ಹಿಂದಿನ ತಪಸ್ಸು ಉಪವಾಸ ಅರಹತ್ವದ 16ನೇಯ ಒಂದು ಭಾಗಕ್ಕೂ ಸಮವಲ್ಲ ಎಂದು ಹೇಳುತ್ತಾರೆ.

                ಈ ಗಾಥೆಯನ್ನು ಭಗವಾನರು ಜೇತವನದಲ್ಲಿ ತಂಗಿದ್ದಾಗ ಪೂಜ್ಯ ಜಂಬುಕನ ಬಗ್ಗೆ ಹೇಳಿದ್ದರು.

dhammapada/balavagga/5.10/upaalavanna

ಪಾಪಿಯು ಪರಮ ದುಃಖವನ್ನು ಪ್ರಾಪ್ತಿಮಾಡುತ್ತಾನೆ
ಮಧುವಿನಂತೆ ಸಿಹಿಯೆಂದು ಪಾಪವನ್ನು ಮೂರ್ಖನು ಮಾನ್ಯತೆ ಮಾಡಿಕೊಳ್ಳುವನು, ಯಾವಾಗ ಪಾಪಕರ್ಮವು ಫಲವನ್ನು ನೀಡುವುದೋ ಆಗ ಮೂರ್ಖನು ದುಃಖವಶನಾಗುತ್ತಾನೆ.      (69)
ಗಾಥ ಪ್ರಸಂಗ 5:10
ಭಿಕ್ಷುಣಿ ಉತ್ಪಲಾವರ್ಣಳ ಘಟನೆ
                ಶ್ರಾವಸ್ತಿಯ ಶ್ರೀಮಂತನಿಗೆ ಯುವ ಮಗಳಿದ್ದಳು. ಆಕೆ ನೀಲಿ ಕಮಲದಷ್ಟು ಸುಂದರ, ಮೃದು ಮತ್ತು ಸಿಹಿಯಾಗಿದ್ದರಿಂದ ಆಕೆಯನ್ನು ನೀಲಿಕಮಲ ಅಥವಾ ಉತ್ಪಲಾವರ್ಣ (ಉಪ್ಪಲಾವಣ್ಣಾ) ಎಂದು ಕರೆಯುತ್ತಿದ್ದರು. ಆಕೆಯ ಸೌಂದರ್ಯದ ಖ್ಯಾತಿಯನ್ನು ಕೇಳಿ ರಾಜಕುಮಾರರು, ಶ್ರೀಮಂತರು ಹೀಗೆ ಹಲವಾರು ಮಂದಿ ಆಕೆಯನ್ನು ವಿವಾಹವಾಗಲು ಮುಂದೆ ಬಂದರು. ಅದು ಆಕೆಯ ತಂದೆ ಅತಿ ಧ್ವಂದ್ವಕ್ಕೆ ಈಡುಮಾಡಿತು. ಆತ ಹೀಗೆ ಯೋಚಿಸಿದ, ನಾನು ಎಲ್ಲರ ಬಯಕೆಗಳನ್ನು ತೃಪ್ತಿಗೊಳಿಸಲಾರೆ. ಇದರಿಂದ ಪಾರಾಗಲು ಯಾವುದಾದರೂ ಮಾರ್ಗ ಹುಡುಕಲೇಬೇಕು. ಆಕೆಗೆ ಇದು ಕೊನೆಯ ಜನ್ಮವಾಗಿತ್ತು. ಆದ್ದರಿಂದ ಆಕೆಗೆ ತಂದೆಯ ಮಾತುಗಳು ನೂರುಬಾರಿ ಸಂಶ್ಲೇಷಿಸಿದ ಎಣ್ಣೆಯನ್ನು ತಲೆಯ ಮೇಲೆ ಸಿಂಪಡಿಸಿದ ಹಾಗಾಯಿತು. ಆದ್ದರಿಂದ ಆಕೆ ಹೀಗೆ ಹೇಳಿದಳು. ಪ್ರಿಯ ತಂದೆಯೇ ನಾನು ಭಿಕ್ಷುಣಿಯಾಗುತ್ತೇನೆ. ತಂದೆಯು ಧಾಮರ್ಿಕ ಪ್ರವೃತ್ತಿವುಳ್ಳವನಾಗಿದ್ದರಿಂದ ಆಕೆಯನ್ನು ವಿಜೃಂಭಣೆಯಿಂದ ಭಿಕ್ಷುಣಿ ಸಂಘಕ್ಕೆ ಸೇರಿಸಿದನು.
                ಒಂದುದಿನ ಆಕೆಯ ಕರುಣಾಮಂದಿರದ ವಿಹಾರ ಬಾಗಿಲನ್ನು ಮುಚ್ಚುವ ಕೆಲಸ ಸರದಿಯಂತೆ ಈಕೆಯದಾಯಿತು. ನಂತರ ಆಕೆಯು ದೀಪವನ್ನು ಹಚ್ಚಿದಳು ಮತ್ತು ವಿಹಾರವನ್ನು ಗುಡಿಸಿದಳು ನಂತರ ದೀಪದ ಕಾಂತಿಗೆ ಆಕಷರ್ಿತಳಾದಳು ಹಾಗೆಯೇ ದೀಪದ ಜ್ವಾಲೆಗೆ ಮನವನ್ನು ಕೇಂದ್ರೀಕರಿಸಿ ಧ್ಯಾನಮಗ್ನಳಾದಳು. ಸಮಾಧಿಯ ಹಂತಗಳನ್ನು ತಲುಪಿದಳು. ಹಾಗೆಯೇ ಜ್ಞಾನವನ್ನು ಪ್ರಕಾಶಗೊಳಿಸಿ ಅಜ್ಞಾನದ ಅಂಧಕಾರವನ್ನು ದೂರಮಾಡಿ ಅರಹಂತೆಯೂ ಆದಳು.
                ಕೆಲತಿಂಗಳ ನಂತರ ಆಕೆ ಅಂಧವನನವೆಂಬ ದಟ್ಟವಾದ ಕಾಡಿನಲ್ಲಿ ಏಕಾಂತ ಧ್ಯಾನಕ್ಕಾಗಿ ಹೊರಟಳು. ಆಗ ಆಕೆಯ ಚಿಕ್ಕಪ್ಪನ ಮಗನು ಆಕೆಯ ಮೇಲೆ ಅತ್ಯಾಚಾರ ಮಾಡಿದನು. ಆ ಕ್ಷಣದಲ್ಲೇ ಭೂಮಿಯಿಂದ ಸೀಳಿ ಮಹಾಗ್ನಿಯು ಆತನನ್ನು ಸೆಳೆದುಕೊಂಡು ಭೂಗರ್ಭದ ಅವೀಚಿ ನರಕಕ್ಕೆ ಕೊಂಡುಹೋಯಿತು.
                ನಂತರ ಈ ವಿಷಯವನ್ನು ಆಕೆಯು ಇತರ ಭಿಕ್ಷುಣಿಯರ ಬಳಿ ಹೇಳಿದಳು. ಅವರು ಭಿಕ್ಷುಗಳಿಗೆ ಈ ವಿಷಯ ತಿಳಿಸಿದಾಗ ಅವರು ಬುದ್ಧರಿಗೆ ಈ ವಿಷಯ ತಿಳಿಸಿದಾಗ ಭಗವಾನರು ಈ ಗಾಥೆಯನ್ನು ಹೇಳಿದರು. ನಂತರ ಹೀಗೆ ನುಡಿದರು : ಭಿಕ್ಷುಗಳೇ, ಯಾರೇ ಆಗಿರಲಿ ಪಾಪವನ್ನು ಮಾಡುವಾಗ ಅವರಿಗೆ ಜೇನಿನಂತೆ ಸಿಹಿ ಅನುಭವ ಉಂಟಾಗುವುದು. ಆದರೆ ನಂತರ ಅದರ ಕಹಿಕಟು ಫಲವನ್ನು ಅಪಾರವಾಗಿ ಅನುಭವಿಸುತ್ತಾರೆ ಎಂದು ಹೇಳಿ ಉತ್ಪಲಾವರ್ಣಳ ಪವಿತ್ರತೆಯ ಬಗ್ಗೆ ಹೀಗೆ ಹೇಳಿದರು:
                ಭಿಕ್ಷುಗಳೇ, ಈಕೆಯು ತನ್ನ ಕಲ್ಮಶಗಳನ್ನು ತೊಡೆದುಹಾಕಿದ್ದಾಳೆ. ಆಕೆಯಂಥವರು ಭಾವೋದ್ರೇಕವನ್ನು ಬಯಸುವುದಿಲ್ಲ. ಅದಕ್ಕೆ ತೃಣಮಾತ್ರವೂ ಹಾತೊರೆಯುವುದಿಲ್ಲ. ಲವಲೇಶವೂ ಅಂಟುವುದಿಲ್ಲ. ಹೇಗೆಂದರೆ ಕಮಲದ ಮೇಲಿನ ನೀರಿನ ಹನಿಯು ಅದಕ್ಕೆ ಅಂಟದೆ ಕೆಳಗೆ ಬೀಳುವ ಹಾಗೆ ಅರಹಂತರ ಮನವು ಸೂಕ್ಷ್ಮತರದಲ್ಲೂ ಕಲ್ಮಶಗಳಿಗೆ ಅಂಟುವುದಿಲ್ಲ ಎಂದರು.

                ಬುದ್ಧ ಭಗವಾನರು ಜೇತವನದಲ್ಲಿ ತಂಗಿದ್ದಾಗ ಈ ಗಾಥೆಯನ್ನು ಈ ಕೆಳಗಿನ ಪ್ರಸಂಗ ಕುರಿತಂತೆ ನುಡಿದರು.

dhammapada/balavagga/5.9/sumana

ಸುಖವು ಸುಕರ್ಮಗಳಿಂದಲೇ ಬರುತ್ತದೆ
ಅಂತಹ ಕಮ್ಮವನ್ನು ಮಾಡುವುದು ಸಾಧುಕರ, ಯಾವುದೆಂದರೆ ಪಶ್ಚಾತ್ತಾಪ ತರದಂತಹುದು. ಅಂತಹ ಕರ್ಮದಿಂದ ಪ್ರಪುಲ್ಲತೆ ಹಾಗೂ ಸುಮನದಂತಹ ಫಲ (ವಿಪಾಕ) ಅನುಭವಿಸುತ್ತಾರೆ.        (68)
ಗಾಥ ಪ್ರಸಂಗ 5:9
ಸುಮನ ಹೂಗಾರನ ಸುಶ್ರದ್ಧೆ

                ಸುಮನನೆಂಬ ಹೂಗಾರನು ರಾಜಗೃಹದ ರಾಜ ಬಿಂಬಸಾರನಿಗೆ ಪ್ರತಿ ಮುಂಜಾನೆ ಮಲ್ಲಿಗೆಯ ಹೂಗಳನ್ನು ತಲುಪಿಸುತ್ತಿದ್ದನು. ಒಮ್ಮೆ ಆತನು ರಾಜನ ಅರಮನೆಯ ಬಳಿ ಹೋಗುತ್ತಿದ್ದಾಗ ಆತನು ಬುದ್ಧಭಗವಾನರನ್ನು ಕಂಡನು. ಬುದ್ಧರಂತು ದಿವ್ಯಪ್ರಭೆಯಿಂದ ಕಿರಣಗಳನ್ನು ಹೊರಸೂಸುತ್ತಾ ಭಿಕ್ಷುಗಳೊಡನೆ ಆಹಾರಕ್ಕಾಗಿ ಹೋಗುತ್ತಿದ್ದರು. ಬುದ್ಧರ ವೈಭವಯುತ ಪ್ರಕಾಶವನ್ನು ಕಂಡು ಸುಮನನು ಹೂಗಳನ್ನು ಬುದ್ಧರಿಗೆ ಸಮಪರ್ಿಸುವ ಇಚ್ಛೆ ಪ್ರಬಲವಾಗಿ ಉಂಟಾಯಿತು. ಆದರೆ ರಾಜನಿಗೆ ಒಂದುದಿನ ತಪ್ಪಿಸಿದರೆ ಆಗುವ ದುಷ್ಪರಿಣಾಮಗಳು ಮನಕ್ಕೆ ಗೋಚರವಾದರೂ ಆತನು ಈ ರೀತಿ ದೃಢನಿಧರ್ಾರ ಮಾಡಿದನು. ನನಗೆ ರಾಜನು ಗಡಿಪಾರು ಬೇಕಾದರೆ ಮಾಡಲಿ ಅಥವಾ ನನಗೆ ಕೊಲ್ಲಿಸಲಿ ಆದರೆ ನಾನು ಮಾತ್ರ ರಾಜನಿಗೆ ಬದಲಾಗಿ ಬುದ್ಧರಿಗೆ ಹೂಗಳನ್ನು ಸಮಪರ್ಿಸುವೆನು ಎಂದು ನಿರ್ಧರಿಸಿ ಆತನು ಬುದ್ಧರ ಮೇಲೆ, ಹಿಂದೆ, ಹೂಗಳನ್ನು ಹಾರಿಸಿದನು. ಅದ್ಭುತ! ಆ ಹೂಗಳು ನೆಲದ ಮೇಲೆ ಬೀಳಲಿಲ್ಲ, ಗಾಳಿಯಲ್ಲೇ ಇದ್ದವು. ತಲೆಯ ಮೇಲಿನ ಹೂಗಳು ಛತ್ರಿಯಂತೆ ಆಕಾಶದಲ್ಲೇ ನಿಂತಿತು ಮತ್ತು ಪಕ್ಕದಲ್ಲಿ ಹಾಗು ಹಿಂದೆ ಬಿದ್ದ ಹೂಗಳು ಹೂಗೋಡೆಯಮತೆ ಮಾಪರ್ಾಟಾಯಿತು. ಈ ಹೂಗಳ ರಚನೆಯು ಬುದ್ಧರು ನಡೆದರೆ ಅವು ಜೊತೆಯಲ್ಲಿ ಸಾಗುತ್ತಿತ್ತು. ಬುದ್ಧರು ನಿಂತರೆ ಅವು ನಿಶ್ಚಲವಾಗುತ್ತಿತ್ತು. ಜೊತೆಗೆ ಬುದ್ಧರ ಭವ್ಯಪ್ರಭೆಯು ಆರು ಬಣ್ಣಗಳಿಂದ ಪ್ರಕಾಶಿಸಿ ರಾಜಗೃಹದ ವಾಸಿಗಳು ಆನಂದಿತರಾಗಿ ಸಾವಿರಾರು ಜನರು ಗೌರವ ಅಪರ್ಿಸಿದರು. ಇದನ್ನು ಕಂಡ ಸುಮನನ ಮನವು ಸುಮನವಾಗಿ ಆನಂದದಿಂದ ತುಂಬಿದವನಾಗಿ ಇಡೀ ಶರೀರ ಸುಖದಿಂದ ಆವೃತವಾಯಿತು. ಸಮಾಧಿಯ ಅನುಭೂತಿಯನ್ನು ಅನುಭವಿಸಿದನು.
                ಸುಮನನ ಪತ್ನಿಗೆ ಈ ವಿಷಯ ಅರಿವಾಗಿ ರಾಜನ ಹತ್ತಿರ ಕ್ಷಮೆ ಯಾಚಿಸಲು ಹೊರಟಳು. ರಾಜ ಬಿಂಬಸಾರನು ಸಹಾ ಸೋತಪನ್ನನಾಗಿದ್ದನು. ಆತನಿಗೆ ಹೂಗಳ ಬಗ್ಗೆ ಸಂತೋಷದಿಂದಿದ್ದ ಆತನು ಬುದ್ಧರನ್ನು ಕಾಣಲು ಹೊರಬಂದು ಗೌರವವನ್ನು ಅಪರ್ಿಸಿದನು ಹಾಗೂ ಆತನು ಬುದ್ಧರಿಗೆ ಮತ್ತು ಭಿಕ್ಷು ಸಂಘಕ್ಕೆ ಆಹಾರವನ್ನು ಏರ್ಪಡಿಸಿ ಬಡಿಸಿದನು. ನಂತರ ಬುದ್ಧರು ವಿಹಾರಕ್ಕೆ ಹಿಂತಿರುಗಿದರು. ಆಗಲು ಸಹಾ ಆ ಹೂಗಳು ಹಾಗೆಯೇ ಗಾಳಿಯಲ್ಲಿಯೇ ಇದ್ದು ಬುದ್ಧರೊಡನೆ ಚಲಿಸುತ್ತಿತ್ತು. ಜನರು ಸಂಭ್ರಮದ ಜಯಕಾರ ಹಾಕುತ್ತಿದ್ದರು.
                ರಾಜನು ಬುದ್ಧರ ಸಂಗಡ ಸ್ವಲ್ಪದೂರ ಹೊರಟು ನಂತರ ಹಿಂತಿರುಗಿದನು. ಅನಂತರ ಅತನು ಹೂಗಾರನನ್ನು ಕರೆಸಿದನು ಹಾಗೂ ಈ ರೀತಿ ಪ್ರಶ್ನಿಸಿದನು. ಬುದ್ಧರಿಗೆ ಗೌರವಿಸುವಾಗ ನೀನು ಏನೆಂದು ಹೇಳಿಕೊಂಡೆ? ಅದಕ್ಕೆ ಹೂಗಾರನು ಈ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸಿದನು. ಮಹಾಪ್ರಭು ನನ್ನ ಜೀವನವನ್ನು ಸಮಪರ್ಿಸಿ ಗೌರವಿಸಿದೆ ಹಾಗೂ ಈ ರೀತಿ ಹೇಳಿಕೊಂಡೆ ರಾಜನು ಬೇಕಾದರೆ ಗಡಿಪಾರು ಮಾಡಲಿ ಅಥವಾ ಕೊಲ್ಲಿಸಲಿ ಆಗ ರಾಜನು ಆತನಿಗೆ ಈ ರೀತಿ ಹೇಳಿದನು ನೀನು ನಿಜಕ್ಕೂ ಶ್ರೇಷ್ಠ ಮನುಷ್ಯ ಹಾಗೂ ಆತನಿಗೆ ನಾಲ್ಕು ಆನೆಗಳು, ಎಂಟು ಕುದುರೆಗಳು, ಎಂಟು ದಾಸರು, ಎಂಟು ದಾಸಿಯರು, ಅಷ್ಟ ಐಶ್ವರ್ಯಗಳನ್ನು, ಅಷ್ಟರತ್ನಗಳು, ಅಷ್ಟ ಸಹಸ್ರಧನವನ್ನು, ಅಷ್ಟ ಸ್ತ್ರೀಯರನ್ನು, ಅಷ್ಟ ಆಭರಣಗಳನ್ನು, ಅಷ್ಟ ಹಳ್ಳಿಗಳನ್ನು ದಾನವಾಗಿ ನೀಡಿದನು.
                ಪೂಜ್ಯ ಆನಂದರು ತಮ್ಮಲ್ಲಿ ಈ ರೀತಿ ಚಿಂತಿಸಿದರು ಮುಂಜಾನೆಯಿಂದ ಸಂಜೆಯವರೆಗೆ ಸಂಭ್ರಮ ಮತ್ತು ಜಯಕಾರವು ಇತ್ತು ಇದಕ್ಕೆ ಕಾರಣನಾದ ಹೂಗಾರನ ಪುಣ್ಯಫಲ ಯಾವ ರೀತಿಯದು ಆಗಬಹುದು.

                ಆನಂದನ ಮನವನ್ನು ಓದಿದ ಬುದ್ಧರು ಈ ರೀತಿಯ ಭವಿಷ್ಯವಾಣಿ ನೀಡಿದರು. ಆನಂದ, ಆತನು ನನಗೆ ಜೀವಕ್ಕೆ ಹೆದರದೆ ಪೂಜ್ಯಭಾವ ತೋರಿಸಿದ, ಏಕೆಂದರೆ ನನ್ನಲ್ಲಿ ದೃಢಗಾಢ ಭಕ್ತಿ ಇರುವುದರಿಂದಾಗಿ ಈ ಫಲದಿಂದ ಆತನು ದುರ್ಗತಿ ಪಡೆಯಲಾರ. ಹಾಗೂ ಮನುಷ್ಯರ ಮತ್ತು ದೇವತೆಗಳ ಲೋಕಗಳಲ್ಲಿ ಅವರ ಸುಫಲವನ್ನು ಪಡೆಯುತ್ತಾನೆ. ಮುಂದೆ ಭವಿಷ್ಯದಲ್ಲಿ ಆತನು ಪಚ್ಚೇಕ ಬುದ್ಧನಾಗುತ್ತಾನೆ.

Monday 16 February 2015

dhammapada/balavagga/5.8/the former

ಪಶ್ಚಾತ್ತಾಪ ತರುವ ಕರ್ಮ ಮಾಡಬೇಡಿ
ಅಂತಹ ಕಮ್ಮವನ್ನು ಮಾಡುವುದು ಸಾಧುವಲ್ಲ, ಏಕೆಂದರೆ ಅದರಿಂದಾಗಿ ಪಶ್ಚಾತ್ತಾಪ ಪಡಬೇಕಾಗುತ್ತದೆ. ಯಾವುದರಿಂದ ಅಶ್ರುಮುಖನಾಗಿ ರೋಧಿಸಬೇಕಾಗುತ್ತದೋ ಅಂತಹ ವಿಪಾಕದ ಕಮ್ಮವನ್ನು ಮಾಡುವುದು ಒಳ್ಳೆಯದಲ್ಲ.       (67)
ಗಾಥ ಪ್ರಸಂಗ 5:8
ಬುದ್ಧರು ಮುಗ್ಧ ರೈತನನ್ನು ಪಾರು ಮಾಡಿದರು

                ಒಬ್ಬ ರೈತನು ಶ್ರಾವಸ್ತಿಯ ಹತ್ತಿರ ಕೃಷಿ ಮಾಡುತ್ತಿದ್ದನು. ಒಮ್ಮೆ ಕೆಲವು ಕಳ್ಳರು ಶ್ರೀಮಂತನ ಮನೆಯಲ್ಲಿ ಕಳ್ಳತನ ಮಾಡಿದರು. ಆ ಕಳ್ಳರಲ್ಲಿ ಒಬ್ಬ ತನ್ನ ಸಹಚರರಿಗೆ ವಂಚಿಸಿ 1000 ವರಹಗಳ ಚೀಲವನ್ನು ತನ್ನ ಅಂಗಿಯಲ್ಲಿ ಅಡಗಿಸಿಕೊಂಡಿದ್ದನು. ಕಳ್ಳರೆಲ್ಲರು ತಮ್ಮ ಪಾಲನ್ನು ಹಂಚಿಕೊಂಡು ಹೋಗುವಾಗ ವಂಚಕ ಕಳ್ಳನು ತನ್ನ ರಹಸ್ಯ ಚೀಲವನ್ನು ಅರಿವಿಲ್ಲದೆ ಬೀಳಿಸಿಕೊಂಡು ಹೊರಟನು.
                ಪ್ರತಿದಿನದಂತೆ ಬುದ್ಧ ಭಗವಾನರು ಮುಂಜಾನೆ ತಮ್ಮ ಕರುಣಾ ಸಮಾಪತ್ತಿಯಲ್ಲಿ ಯಾರಿಗೆ ಸಹಾಯ ಮಾಡಲಿ ಎಂದು ವೀಕ್ಷಿಸಿದಾಗ ರೈತನಿಗೆ ಸಂಭವಿಸಲಿರುವ ಅನರ್ಥ ವೀಕ್ಷಿಸಿದರು, ಆತನಿಗೆ ಸಹಾಯ ಮಾಡಲು ಆ ರೈತನ ಹೊಲಕ್ಕೆ ನಡೆದರು. ಬುದ್ಧರು ಭಂತೆ ಆನಂದನೊಡನೆ ಆ ಹೊಲದ ಹತ್ತಿರ ಬಂದಾಗ ಆ ರೈತನು ಭಗವಾನರಿಗೆ ವಂದಿಸಿದನು. ನಂತರ ಹೊಲದಲ್ಲಿ ಮತ್ತೆ ಉಳುಮೆ ಮಾಡುತ್ತಿದ್ದನು. ಭಗವಾನರು ಆತನಿಗೆ ಏನನ್ನೂ ಹೇಳದೆ ಆ ಹಣದ ಚೀಲದ ಹತ್ತಿರ ಹೋಗಿ ನಿಂತು ಆನಂದನಿಗೆ ಹೀಗೆ ಹೇಳಿದರು ನೋಡಿದೆಯಾ ಆನಂದ ವಿಷಪೂರಿತ ಸರ್ಪ. ನಾನು ಕಾಣುತ್ತಿದ್ದೇನೆ ಭಂತೆ, ನಿಜಕ್ಕೂ ಅದು ವಿಷಪೂರಿತ ಸರ್ಪವೇ ಎಂದು ಆನಂದರು ಉತ್ತರಿಸಿದರು. ರೈತನು ಈ ಸಂಭಾಷಣೆಯನ್ನು ಕೇಳಿದನು. ಗಾಬರಿಯಿಂದ ಆ ಹಾವನ್ನು ನಾನು ಸಂಹರಿಸುವೆ ಎಂದು ಆತನು ಚುಚ್ಚುಗೋಲನ್ನು ತೆಗೆದುಕೊಂಡು ಆ ಸ್ಥಳದ ಹತ್ತಿರ ಬಂದನು. ಆಗ ಆತನಿಗೆ ಚೀಲದ ಹೊರತು ಬೇರೇನೂ ಕಾಣಲಿಲ್ಲ. ಓಹ್ ಭಗವಾನರು ಈ ಚೀಲವನ್ನು ಕುರಿತೇ ಹೇಳಿರಬೇಕು ಎಂದುಕೊಂಡನು. ಆತನು ಆ ಚೀಲವನ್ನು ಪಕ್ಕದಲ್ಲಿಟ್ಟು ಮತ್ತೆ ಉಳುಮೆ ಆರಂಭಿಸಿದನು.
                ನಂತರ ಭಟರೂ ಕಳ್ಳತನವನ್ನು ಕಂಡುಹಿಡಿದು, ಕಳ್ಳರು ಹಂಚಿಕೊಂಡ ಸ್ಥಳಕ್ಕೆ ಬಂದರು. ಅಲ್ಲಿ ರೈತನ ಪಾದಚಿಹ್ನೆಯನ್ನು ಗುರುತಿಸಿ ಹಾಗೆಯೇ ಆ ಚೀಲವನ್ನು ಕಂಡುಹಿಡಿದರು. ನಂತರ ರೈತನಿಗೆ ಓಹ್ ನೀನು ಆ ಮನೆಯನ್ನು ಕಳ್ಳತನ ಮಾಡಿರುವೆಯಾ ಮತ್ತು ಇಲ್ಲಿ ಉಳುಮೆ ಮಾಡಿಕೊಂಡು ಇರುವೆಯಾ? ನಂತರ ಆತನಿಗೆ ಹೊಡೆಯುತ್ತಾ ರಾಜನ ಬಳಿಗೆ ಕರೆತಂದರು. ರಾಜನು ಆತನಿಗೆ ಮರಣದಂಡನೆ ವಿಧಿಸಿದನು.
                ನಂತರ ಭಟರು ಆತನಿಗೆ ಚಾಟಿಯಲ್ಲಿ ಹೊಡೆಯುತ್ತಾ ಹೋಗುತ್ತಿದ್ದಾಗ ಆತನು ಬುದ್ಧರ ಮತ್ತು ಆನಂದರ ಸಂಭಾಷಣೆಯನ್ನು ಜೋರಾಗಿ ಪುನರಾವರ್ತನೆ ಮಾಡುತ್ತಿದ್ದನು. ನೋಡಿದೆಯಾ ಆನಂದ ವಿಷಪೂರಿತ ಸರ್ಪ, ನಾನು ಕಾಣುತ್ತಿದ್ದೇನೆ ಭಂತೆ, ನಿಜಕ್ಕೂ ಅದು ವಿಷಪೂರಿತ ಸರ್ಪವೇ? ಆಗ ಭಟರು ಹೀಗೆ ಏಕೆ ಹೇಳುತ್ತಿರುವೆ ಎಂದು ಪ್ರಶ್ನಿಸಿದಾಗ ನಾನು ರಾಜನ ಮುಂದೆಯೇ ಹೇಳುತ್ತೇನೆ ಎಂದು ಉತ್ತರಿಸಿದನು.
                ರಾಜನ ಹತ್ತಿರ ನಾನು ಕಳ್ಳನಲ್ಲ ಮಹಾರಾಜರೇ ಎಂದು ಪೂರ್ಣ ವೃತ್ತಾಂತವನ್ನು ತಿಳಿಸಿದನು. ಆಗ ರಾಜನು ಆತನನ್ನು ಕರೆದುಕೊಂಡು ಬುದ್ಧರ ಹತ್ತಿರ ಬಂದು ಇದರ ಬಗ್ಗೆ ವಿಚಾರಿಸಿದಾಗ ಬುದ್ಧರು ಹೌದು ಮಹಾರಾಜ, ನಾನು ಹಾಗೆ ಹೇಳುವಾಗ ಅಲ್ಲಿದ್ದೆ. ಪ್ರಜ್ಞಾವಂತನೊಬ್ಬ ಪಶ್ಚಾತ್ತಾಪಪಡುವಂತಹ ಪಾಪ ಮಾಡಬಾರದು ಎಂದು ಹೇಳಿ ಮೇಲಿನ ಗಾಥೆ ಹೇಳಿದರು. ರಾಜನು ನಿರಪರಾಧಿಯಾದ ರೈತನಿಗೆ ಬಿಡುಗಡೆ ಮಾಡಿದನು.

dhammapada/balavagga/5.7/suppabudda

ಪಾಪಿಯು ತನಗೆ ತಾನೇ ಶತ್ರು
ತನಗೆ ತಾನೇ ಅಮಿತ್ರನಾಗಿ ಮೂರ್ಖರು ತಮ್ಮ ದುಮರ್ೆಧಾಮಿ (ಅಲ್ಪ ಜ್ಞಾನದಿಂದ) ತನದಿಂದ ಕಹಿ ಫಲಗಳನ್ನು ನೀಡುವ ಪಾಪಕರ್ಮಗಳನ್ನು ಮಾಡುತ್ತಾ ಜೀವಿಸುತ್ತಾರೆ.    (66)
ಗಾಥ ಪ್ರಸಂಗ 5:7
ತ್ರಿರತ್ನದಲ್ಲಿ ಕುಷ್ಟರೋಗಿಯ ಶ್ರದ್ಧೆ

                ಸುಪ್ಪ ಬುದ್ಧನೆಂಬ ಕುಷ್ಟರೋಗಿಯು ಬುದ್ಧರ ಬೋಧನೆಯನ್ನು ಆಲಿಸುತ್ತ ಸೋತಪತ್ತಿ ಫಲ ಪಡೆದನು. ಗುಂಪು ಚದುರಿದ ನಂತರ ಆತನು ಬುದ್ಧರತ್ತ ತೆವಳುತ್ತ ಬರತೊಡಗಿದನು. ಆಗ ಇಂದ್ರನಿಗೆ ಕುಷ್ಟರೋಗಿಯನ್ನು ಪರೀಕ್ಷಿಸಬೇಕೆನಿಸಿತು. ಆತ ಕುಷ್ಟರೋಗಿಯ ಪರೀಕ್ಷಿಸಬೇಕೆನಿಸಿತು. ಆತ ಕುಷ್ಟರೋಗಿಯ ಬಳಿಗೆ ಬಂದು ಈ ರೀತಿ ಹೇಳಿದನು. ಸುಪ್ಪಬುದ್ಧ ನೀನು ಬಡವನಾಗಿರುವೆ, ಅದು ಅಲ್ಲದೆ ರೋಗಿಯಾಗಿ ದುಃಖದಲ್ಲಿರುವೆ. ನಾನು ನಿನಗೆ ಅಪರಿಮಿತ ಐಶ್ವರ್ಯ ನೀಡುವೆ, ಕೇವಲ ನೀನು ಬುದ್ಧರು ಬುದ್ಧರೇ ಅಲ್ಲ, ಧಮ್ಮವು ಜ್ಞಾನವೇ ಅಲ್ಲ, ಸಂಘವು ಪವಿತ್ರ ಸಂಘವೇ ಅಲ್ಲ ಎಂದು ಹೇಳಬಲ್ಲೆಯಾ? ಆಗ ಸುಪ್ಪಬುದ್ಧನು ಕೇಳಿದ ಯಾರು ನೀವು?
                ನಾನು ಸಕ್ಕ
                ನಂತರ ಸುಪ್ಪಬುದ್ಧ ಈ ರೀತಿ ಹೇಳಿದನು ಮೂರ್ಖ, ನಾಚಿಕೆಹೀನನೆ, ನನ್ನೊಂದಿಗೆ ಮಾತನಾಡಲು ನೀನು ತಕ್ಕವನಲ್ಲ. ನೀನು ನನಗೆ ಬಡವ, ರೋಗಿ ಎಂದು ಹೇಳಿದೆಯಲ್ಲವೆ, ಕೇಳು, ನಾನು ಸುಖವನ್ನು ಪ್ರಾಪ್ತಿಮಾಡಿದ್ದೇನೆ, ನನ್ನಲ್ಲಿ ಏಳು ಅಮೂಲ್ಯ ಐಶ್ವರ್ಯವಿದೆ. ಅದೆಂದರೆ: ಶ್ರದ್ಧೆ, ಶೀಲ, ಹಿರಿ (ಪಾಪಲಜ್ಞೆ) ಒತಪ್ಪ (ಪಾಪಭೀತಿ) ಸುತ (ಕಲಿಯುವಿಕೆ), ತ್ಯಾಗ (ದಾನ) ಮತ್ತು ಪ್ರಜ್ಞಾ. ಇಂತಹ ಅಮೂಲ್ಯ ಐಶ್ವರ್ಯ ಹೊಂದಿದ ನಾನು ಬಡವನಲ್ಲ.
                ನಂತರ ಇಂದ್ರನು ಭಗವಾನರ ಬಳಿಗೆ ಬಂದು ಈ ಚಚರ್ೆ ತಿಳಿಸಿದನು. ಅದನ್ನು ಕೇಳಿದ ಭಗವಾನರು ಹೀಗೆಂದರು. ಸುಪ್ಪಬುದ್ಧನಂತಹ ಸೋತಪನ್ನರಿಗೆ ಲಕ್ಷ ಇಂದ್ರರು ಬಂದರು ತ್ರಿರತ್ನಗಳಾದ ಬುದ್ಧ, ಧಮ್ಮ ಮತ್ತು ಸಂಘದಿಂದ ದೂರಮಾಡಲಾರರು.
                ಸ್ವಲ್ಪ ಕಾಲದ ನಂತರ ಸುಪ್ಪಬುದ್ಧ ಭಗವಾನರ ಬಳಿಗೆ ಬಂದು ಅದೇ ಚಚರ್ೆಯನ್ನು ತಿಳಿಸಿದನು. ನಂತರ ಭಗವಾನರು ಶುಭಹಾರೈಕೆ ಪಡೆದು ಆತನು ಜೇತವನದಿಂದ ಹಿಂತಿರುಗುತ್ತಿದ್ದನು. ಆಗ ಹಿಂದಿನ ಜನ್ಮದಲ್ಲಿ ಸುಪ್ಪಬುದ್ಧನಿಂದ ಕೊಲ್ಲಲ್ಪಟ್ಟ ವಾರಾಂಗನೆಯೊಬ್ಬಳು ಈ ಜನ್ಮದಲ್ಲಿ ಹಸುವಾಗಿದ್ದಳು. ಆಕೆಗೆ ಸುಪ್ಪಬುದ್ಧನನ್ನು ಕಂಡು ಹಿಂದಿನ ಜನ್ಮ ನೆನಪಾಗಿ ಕ್ರೋಧವುಕ್ಕಿ ಆತನನ್ನು ಕೊಂಬಿನಿಂದ ತಿವಿದು ಸಾಯಿಸಿತು. ಆತನ ಸಾವಿನ ಸುದ್ದಿ ಜೇತವನಕ್ಕೆ ಹಬ್ಬಿತು. ಆತನಿಗೆ ಸ್ತೂಪ ನಿಮರ್ಿಸಲಾಯಿತು.

                ಆತನ ಬಗ್ಗೆ ಭಗವಾನರಲ್ಲಿ ಭಿಕ್ಷುಗಳು ಕೇಳಿದಾಗ ಭಗವಾನರು ಹೀಗೆ ತಿಳಿಸಿದರು. ಸುಪ್ಪಬುದ್ಧನು ಹಿಂದಿನ ಜನ್ಮವೊಂದರಲ್ಲಿ ಪವಿತ್ರ ಮಾನವರಿಗೆ ಉಗಿದಿದ್ದರಿಂದಾಗಿ ಆತನು ಈ ಜನ್ಮದಲ್ಲಿ ಕುಷ್ಟರೋಗಿಯಾಗಿದ್ದನು. ಈ ಜನ್ಮದ ಶೀಲ ಮತ್ತು ಸೋತಪತ್ತಿಯ ಫಲದಿಂದ ಆತನು ತಾವತಿಂಸ ದೇವಲೋಕದಲ್ಲಿ ಹುಟ್ಟಿರುವನು ಎಂದು ತಿಳಿಸಿದರು. ಆಗ ಈ ಗಾಥೆಯನ್ನು ನುಡಿದರು. 

dhammapada/balavagga/5.6/youths of paveyyaka

ಪ್ರಜ್ಞಾವಂತನು ಧಮ್ಮವನ್ನು ಅರಿಯುತ್ತಾನೆ
ಪ್ರಜ್ಞಾವಂತರು ಪಂಡಿತರೊಡನೆ ಕ್ಷಣ ಮುಹೂರ್ತದಷ್ಟು ಕಾಲ ಇದ್ದರೂ ಸಹ ಸೂಪರಸದ ರುಚಿಯನ್ನು ನಾಲಿಗೆಯು ಅರಿಯುವ ಹಾಗೆ ಕ್ಷಿಪ್ರವಾಗಿ ಧಮ್ಮವನ್ನು ಅರಿಯುವರು.     (65)
ಗಾಥ ಪ್ರಸಂಗ 5:6
ಜ್ಞಾನಿಗಳೊಂದಿಗೆ ಲಾಭ ಪಡೆಯುವಿಕೆ

                ಒಂದುದಿನ ಪಾವೆಯ್ಯಕದ 30 ಯುವಕರು ಕಾಡಿನಲ್ಲಿ ನರ್ತಕಿಯೊಂದಿಗೆ ಆನಂದವಾಗಿದ್ದರು. ಆದರೆ ಆ ನರ್ತಕಿಯು ಅವರ ಅಮೂಲ್ಯವಾದ ಆಭರಣಗಳನ್ನು ಅಪಹರಿಸಿ ಪರಾರಿಯಾದಳು. ಆಕೆಯನ್ನು ಹುಡುಕುತ್ತ ಅವರು ಕಾಡಿನಲ್ಲಿದ್ದ ಬುದ್ಧರನ್ನು ಕಂಡರು. ಆಗ ಅವರು ಆಕೆಯನ್ನು ಹುಡುಕುವ ಬದಲು, ಬುದ್ಧರ ಉಪದೇಶದಲ್ಲಿ ತಲ್ಲೀನರಾದರು. ಉಪದೇಶದ ನಂತರ ಅವರು ಸಂಘವನ್ನು ಸೇರಿದರು ಮತ್ತು ಬುದ್ಧರೊಂದಿಗೆ ಜೇತವನಕ್ಕೆ ಹೊರಟರು. ಅಲ್ಲಿದ್ದು ಅವರು ಭಿಕ್ಷು ನಿಯಮಗಳಾದ ಧುತಂಗವನ್ನು ಪಾಲಿಸಿದರು. ನಂತರ ಒಮ್ಮೆ ಬುದ್ಧರು ನೀಡುವ ಅನಮತಗ್ಗ ಸುತ್ತ ಆಲಿಸಿ ಅವರೆಲ್ಲರೂ ಅರಹಂತರಾದರು.

                ಇದು ಭಿಕ್ಷುಗಳಲ್ಲಿ ಚಚರ್ೆಯ ವಿಷಯವಾಯಿತು. ಪಾಪಯ್ಯಕದ ಭಿಕ್ಷುಗಳು ಎಷ್ಟು ಕ್ಷಿಪ್ರವಾಗಿ ಅರಹಂತರಾದರು? ಅಲ್ಲಿಯೇ ಇದ್ದ ಭಗವಾನರು ಆಗ ಮೇಲಿನ ಗಾಥೆ ನುಡಿದರು. 

dhammapada/balavagga/5.5/udhayi

ಮೂರ್ಖನು ಧಮ್ಮವನ್ನು ಅಭಿನಂದಿಸಲಾರ
ಮೂರ್ಖನು ಪಂಡಿತ (ಜ್ಞಾನಿ)ಯೊಡನೆ ಜೀವನಪೂತರ್ಿ ಅನ್ಯೋನ್ಯವಾಗಿದ್ದರೂ ಸಹ ಸೂಪರಸದ ರುಚಿಯನ್ನು ಅದರಲ್ಲಿರುವ ಚಮಚೆಯು ಅರಿಯದ ಹಾಗೆ ಆತನು ಧಮ್ಮವನ್ನು ಅರಿಯಲಾರ.            (64)
ಗಾಥ ಪ್ರಸಂಗ 5:5
ಮೂರ್ಖನು ಜ್ಞಾನಿಯೊಂದಿಗೆ ಲಾಭ ಪಡೆಯಲಾರ

                ಭಿಕ್ಷು ಉದಾಯಿಯು ಆಗಾಗ್ಗೆ ಬಹುಶ್ರುತ ಭಿಕ್ಷುಗಳು ಪ್ರವಚನ ನೀಡುವ ಸ್ಥಳದಲ್ಲಿನ ಪೀಠದಲ್ಲಿ ಕುಳಿತುಕೊಳ್ಳುತ್ತಿದ್ದನು. ಒಮ್ಮೆ ಹಲವು ಭಿಕ್ಷುಗಳು ಇವನನ್ನು ಮಹಾ ವಿದ್ವಾಂಸ ಭಿಕ್ಷು ಎಂದು ಬಗೆದು ಆತನಿಗೆ ಪಂಚಖಂಧಗಳ ಬಗ್ಗೆ ಪ್ರಶ್ನಿಸಿದರು. ಆದರೆ ದಡ್ಡನಾದ ಉದಾಯಿಗೆ ಉತ್ತರ ನೀಡಲು ಬರಲಿಲ್ಲ. ಏಕೆಂದರೆ ಆತನು ಧಮ್ಮವನ್ನು ಅರಿತಿರಲಿಲ್ಲ. ಆಗ ಬೇಟಿ ಮಾಡಿದ ಭಿಕ್ಷುಗಳಿಗೆ ಆಶ್ಚರ್ಯವಾಯಿತು. ಏಕೆಂದರೆ ಬುದ್ಧರ ವಿಹಾರದಲ್ಲೇ ಇರುವಂತಹ ಭಿಕ್ಷುವು ಹೀಗೆ ಏಕೆ ಇರುವನು? ಆತನಿಗೆ ಏಕೆ ಮನಸ್ಸಿನ ಬಗ್ಗೆ ಅಥವಾ ಇಂದ್ರೀಯಗಳ ಬಗ್ಗೆ ತಿಳಿದಿಲ್ಲ?

                ನಂತರ ಅವರು ಬುದ್ಧರೊಡನೆ ಈ ವಿಷಯ ತಿಳಿಸಿದರು. ಆಗ ಭಗವಾನರು ಮೇಲಿನ ಗಾಥೆ ನುಡಿದರು.

dhammapada/balavagga/5.4/pickpocketers

ತನ್ನ ಮೂರ್ಖತ್ವ ತಿಳಿದವ ಮಾತ್ರ ಜ್ಞಾನಿ
ಯಾವ ಮೂರ್ಖನು ತನ್ನ ಮೂರ್ಖತ್ವವನ್ನು ಸ್ವೀಕರಿಸುವನೋ (ತಿಳಿದಿರುವನೋ) ಅಷ್ಟರಮಟ್ಟಿಗೆ ಆತ ಪಂಡಿತನೇ (ಜ್ಞಾನಿ) ಸರಿ. ಮೂರ್ಖನು ಒಂದುವೇಳೆ ತನ್ನನ್ನು ಜ್ಞಾನಿಯೇ ಎಂದು ಭಾವಿಸಿದರೆ ಆತನು ಖಂಡಿತವಾಗಿ ಮೂರ್ಖನೇ ಆಗಿರುತ್ತಾನೆ.           (63)
ಗಾಥ ಪ್ರಸಂಗ 5:4
ಇಬ್ಬರು ಕಿಸೆಚೋರರ ಕತೆ

                ಈ ಗಾಥೆಯನ್ನು ಭಗವಾನರು ಜೇತವನದಲ್ಲಿ ತಂಗಿದ್ದಾಗ, ಇಬ್ಬರು ಕಿಸೆಗಳ್ಳರಿಗೆ ಸಂಬಂಧದ ವಿಷಯದಲ್ಲಿ ಹೇಳಿದರು. ಕಿಸೆಗಳ್ಳರು ಅದೃಷ್ಟವಶಾತ್ ಬುದ್ಧ ಭಗವಾನರ ಬೋಧನೆ ಕೇಳಲು ಹೋದರೂ ಅವರಲ್ಲಿ ಒಬ್ಬ ಬುದ್ಧರಿಂದ ಧಮ್ಮದ ಸಾರವನ್ನು ಗ್ರಹಿಸುತ್ತಿದ್ದರೆ ಮತ್ತೊಬ್ಬ ಕಳ್ಳತನದ ಅವಕಾಶವನ್ನು ಹುಡುಕುತ್ತಿದ್ದನು. ಧಮ್ಮವನ್ನು ಆಸಕ್ತಿಯಿಂದ ಆಲಿಸುತ್ತಿದ್ದವ ಸೋತಪನ್ನ (ಸಂತತ್ವದ ಪ್ರಥಮ ಹಂತ) ಪಡೆದನು. ಆದರೆ ಮತ್ತೊಬ್ಬ ಕಳ್ಳ ಬೋಧನೆ ಆಲಿಸುತ್ತಿದ್ದ ವ್ಯಕ್ತಿಯೋರ್ವನ 5 ನಾಣ್ಯಗಳನ್ನು ಅಪಹರಿಸಿದನು. ಕಳ್ಳನ ಮನೆಯಲ್ಲಿ ಎಂದಿನಂತೆ ಅಡುಗೆ ಸಿದ್ಧವಾಗುತ್ತಿತ್ತು. ಆದರೆ ಧಮರ್ಾಸಕ್ತ ಕಳ್ಳನ ಮನೆಯಲ್ಲಿ ಅಡುಗೆ ಇರಲಿಲ್ಲ. ಇದನ್ನು ಕಂಡ ಕಳ್ಳ ಹಾಗು ಅವನ ಪತ್ನಿಯ ಒಳ್ಳೆಯ ಕಳ್ಳನಿಗೆ ಈ ರೀತಿ ವ್ಯಂಗ್ಯವಾಗಿ ನುಡಿದರು. ನೀನು ಅಪ್ರತಿಮ ಬುದ್ಧಿವಂತ. ಆದ್ದರಿಂದಲೇ ನಿನಗೆ ಬೇಯಿಸಲು ಆಹಾರ ಸಿಗಲಿಲ್ಲ ಆಗ ಆ ಸೋತಪನ್ನನು ಈ ರೀತಿ ಚಿಂತಿಸುತ್ತಾನೆ. ಈ ಮನುಷ್ಯ ಮುರ್ಖನಾಗಿದ್ದ ಕಾರಣದಿಂದಲೇ ತನ್ನನ್ನು ಮೂರ್ಖ ಎಂದು ಅರಿತಿಲ್ಲ ಮತ್ತು ಅಲ್ಲಿಂದ ಜೇತವನಕ್ಕೆ ತನ್ನ ಬಾಂಧವರ ಸಹಿತ ಹೋಗಿ ಬುದ್ಧರಲ್ಲಿ ಈ ಘಟನೆ ನಿವೇದಿಸಿದಾಗ ಭಗವಾನರು ಮೇಲಿನ ಗಾಥೆ ಹೇಳಿದರು