Monday 20 October 2014

dhammapada 1.1 verse and story in kannada

zsÀªÀÄä¥ÀzÀ UÁxÀ ¥Àæ¸ÀAUÀUÀ¼ÀÄ
. ಯಮಕ ವಗ್ಗ


ಕೆಡಕು ಕೆಡಕಿಗೆ ಜನ್ಮ ನೀಡುತ್ತದೆ
ಮನಸ್ಸು ಎಲ್ಲಾ (ಅಕುಶಲ) ಸ್ಥಿತಿಗಳಿಗೆ ಮುಂದಾಳಾಗಿದೆ. ಮನಸ್ಸೇ ನಾಯಕವಾಗಿದೆ. ಮನಸ್ಸಿನಿಂದಲೇ ಅವೆಲ್ಲವೂ ನಿಮರ್ಿತವಾಗಿದೆ. ಒಬ್ಬನು ಪ್ರದುಷ್ಟ ಮನಸ್ಸಿನಿಂದ ಮಾತನಾಡಿದರೆ ಅಥವಾ ಕಾರ್ಯ ಮಾಡಿದರೆ ಆತನಿಗೆ ದುಃಖವು ಎತ್ತಿನ ಬಂಡಿಯಲ್ಲಿ ಎತ್ತಿನ ಕಾಲನ್ನು ಹಿಂಬಾಲಿಸುವ ಚಕ್ರದಂತೆ ಹಿಂಬಾಲಿಸುತ್ತದೆ.  (1)
ಗಾಥ ಪ್ರಸಂಗ 1:1
ಕಣ್ಣಿನ ದೃಷ್ಟಿ ಕಳೆದುಕೊಂಡ ಅರಹಂತ (ಚಕ್ಕುಪಾಲ)

                ಒಂದು ದಿನ ಪೂಜ್ಯ ಚಕ್ಕುಪಾಲರವರು ಬುದ್ಧರಿಗೆ ವಂದಿಸಲು ಜೇತವನ ವಿಹಾರಕ್ಕೆ ಬಂದರು. ಅವರು ಅಂಧರಾಗಿದ್ದರು. ಅವರು ನಡಿಗೆಯ ಧ್ಯಾನವನ್ನು ಮಾಡುತ್ತಿರುವಾಗ ಆಕಸ್ಮಿಕವಾಗಿ ಕೆಲವು ಕೀಟಗಳನ್ನು ತುಳಿದರು. ಮಾರನೆಯದಿನ ಕೆಲವು ಭಿಕ್ಷುಗಳು ಸತ್ತ ಕೀಟಗಳನ್ನು ಕಂಡರು. ಅವರು ಚಕ್ಕುಪಾಲನ ಬಗ್ಗೆ ಸಂಶಯವನ್ನು ಹೊಂದಿ ಬುದ್ಧರ ಬಳಿಗೆ ಬಂದು ದೂರು ಹೇಳಿದರು. ಆಗ ಬುದ್ಧರು ಅವರಿಗೆ ಚಕ್ಕುಪಾಲ ಉದ್ದೇಶಪೂರ್ವಕವಾಗಿ ಕೊಲ್ಲುತ್ತಿರುವುದು ನೀವು ನೋಡಿರುವಿರಾ? ಇಲ್ಲ ಭಂತೆ.
                ನೀವು ಹೇಗೆ ಆತನು ಕೊಲ್ಲುತ್ತಿರುವುದು ಕಾಣಲಿಲ್ಲವೋ ಹಾಗೆಯೇ ಆತನು ಸಹಾ ಕೀಟಗಳನ್ನು ಕಾಣಲಿಲ್ಲ. ಜೊತೆಗೆ ಆತನು ಅರಹಂತ, ಆತನಿಂದ ಹತ್ಯೆ ಅಸಾಧ್ಯವಾಗಿದೆ. ಆಗ ಭಿಕ್ಷುಗಳು ಚಕ್ಕುಪಾಲನ ಅಂಧತ್ವಕ್ಕೆ ಕಾರಣ ಕೇಳಿದರು. ಆಗ ಬುದ್ಧರು ಆತನ ಹಿಂದಿನ ಜನ್ಮ ವೃತ್ತಾಂತ ತಿಳಿಸಿದರು. ನಂತರ ಮೇಲಿನ ಗಾಥೆಯನ್ನು ಹೇಳಿದರು.
*    *    *

                ಚಕ್ಕುಪಾಲರವರು ಹಿಂದಿನ ಜನ್ಮದಲ್ಲಿ ವೈದ್ಯರಾಗಿದ್ದರು. ಆಗ ಅವರು ಒಬ್ಬ ಮಹಿಳೆಗೆ ಉದ್ದೇಶಪೂರ್ವಕವಾಗಿ ಕುರುಡಿಯನ್ನಾಗಿಸಿದ್ದರು. ಆಕೆಗೆ ಕಣ್ಣಿನ ತೊಂದರೆಯಿತ್ತು, ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ವೈದ್ಯರು ವಾಸಿ ಮಾಡಿದರೆ ಆಕೆಯು ಮತ್ತು ಆಕೆಯ ಮಕ್ಕಳು ಅವರಿಗೆ ಅಜನ್ಮ ಸೇವಕರಾಗುವುದಾಗಿ ವಚನ ನೀಡಿದ್ದಳು. ಆದರೆ ಆಕೆಗೆ ಕಣ್ಣು ಚೆನ್ನಾಗಿ ಕಾಣಿಸಲಾರಂಭಿಸಿದರೂ ಆಕೆ ಇನ್ನೂ ಕೆಟ್ಟಿದೆ ಎಂದು ನಟಿಸಲಾರಂಭಿಸಿದಳು. ಇದು ವೈದ್ಯರಿಗೆ ಅರಿವಾಗಿ ಇನ್ನೊಂದು ಕೆಟ್ಟ ಮುಲಾಮನ್ನು ನೀಡಿದರು. ಅದರಿಂದಾಗಿ ಆಕೆಯ ಕಣ್ಣು ಶಾಶ್ವತವಾಗಿ ಹೊರಟುಹೋಯಿತು. ಅದರ ಫಲಿತಾಂಶವೇ ಈ ಜನ್ಮದಲ್ಲಿ ಆತನು ಕುರುಡನಾದನು.

No comments:

Post a Comment