Tuesday 23 December 2014

dhammapada/appamadavagga/2.2/kumbhagosara

ಯತ್ನಶಾಲಿಯು ಉನ್ನತವಾಗಿ ಯಶಸ್ವಿಯಾಗುತ್ತಾನೆ
ಪ್ರಯತ್ನಶೀಲನ, ಸ್ಮೃತಿವಂತನ, ಶುಚಿಕರ್ಮನ, ಸಂಯಮಶೀಲನ, ವಿಚಾರವಂತನ ಮತ್ತು ಧಮ್ಮಜೀವಿಯ ಯಶಸ್ಸು ಸದಾ ಬೆಳೆಯುತ್ತಿರುತ್ತದೆ.            (24)
ಗಾಥ ಪ್ರಸಂಗ 2:2
ಶ್ರೀಮಂತನ ಧ್ವನಿಯ ವಿಶಿಷ್ಟತೆ (ಕುಂಭಗೋಸರ)

                ಒಮ್ಮೆ ರಾಜಗೃಹದಲ್ಲಿ ಪ್ಲೇಗ್ ರೋಗವು ಭೀಕರವಾಗಿ ತಾಂಡವವಾಡಿತು. ಆಗ ನಗರದ ಲೇವಾದೇವಿಯವ, ಆತನ ಹೆಂಡತಿ ಮತ್ತು ಇತರರು ಆ ಭೀಕರ ರೋಗಕ್ಕೆ ಸಿಲುಕಿದರು. ಆಗ ಅವರು ರೋಗ ಬಾಧಿಸದಿದ್ದ ಕಿರಿಯ ಮಗನಾದ ಕುಂಭಗೋಸಕನನ್ನು ಕರೆದು ಮಗು ಪ್ಲೇಗ್ ರೋಗವು ಪೂರ್ಣವಾಗಿ ಇನ್ನಿಲ್ಲವಾದಾಗ ಪುನಃ ಈ ನಗರಕ್ಕೆ ಬಾ, ಇಲ್ಲಿದ್ದರೆ ನೀನು ಸಹಾ ಸಾಯುವೆ ಎಂದು ತಮ್ಮ ಐಶ್ವರ್ಯವನ್ನು ಬಚ್ಚಿಟ್ಟ ಸ್ಥಳ ಆತನಿಗೆ ತೋರಿಸಿದರು. ಆತ ಅದರಂತೆಯೇ ನಡೆದುಕೊಂಡನು. ಕೊನೆಗೆ ಬಹಳ ವರ್ಷಗಳ ಕಾಲದನಂತರ ಆತನು ನಗರಕ್ಕೆ ಹಿಂತಿರುಗಿದನು.
                ಆದರೆ ಆತನನ್ನು ಯಾರೂ ಗುರುತಿಸಲಿಲ್ಲ. ನಂತರ ಆತನು ತಂದೆ-ತಾಯಿಗಳು ಐಶ್ವರ್ಯವನ್ನು ಬಚ್ಚಿಟ್ಟ ಸ್ಥಳವನ್ನು ನೋಡಿದನು, ಅದು ಸುರಕ್ಷಿತವಾಗಿತ್ತು. ಆದರೆ ಆತನು ಅದನ್ನು ತೆಗೆಯುವ ಪ್ರಯತ್ನ ಮಾಡಲಿಲ್ಲ. ಏಕೆಂದರೆ ಆತನು ಅದನ್ನು ತೆಗೆದರೆ ಜನರು ಆತನ ಬಗ್ಗೆ ಮಿಥ್ಯ ಮಾರ್ಗದಿಂದ ಹಣ ಸಂಪಾದಿಸಿದನೆಂದು ಅವರು ಪಾಲು ಕೇಳುವ ಸಾಧ್ಯತೆಯಿತ್ತು. ಅಥವಾ ರಾಜನಿಗೆ ಹೇಳುವ ಸಾಧ್ಯತೆಯು ಇತ್ತು. ಆಗ ಈತನ ಪೂರ್ವಪರ ತಿಳಿಯದೆ ರಾಜನು ಆಸ್ತಿ ವಶಪಡಿಸಿಕೊಳ್ಳವ ಸಾಧ್ಯತೆಯಿತ್ತು. ಆದ್ದರಿಂದ ಆತನು ನಿಧಿಯನ್ನು ತೆರೆಯದೆ, ತನ್ನನ್ನು ಪೋಷಿಸಿಕೊಳ್ಳಲು ಮಾರ್ಗ ಹುಡುಕಿದನು. ಆಗ ಆತನು ಜನರಿಗೆ ಎಬ್ಬಿಸುವ ಕೆಲಸದಲ್ಲಿ ಸೇರಿಕೊಂಡನು. ಆತ ಪ್ರತಿನಿತ್ಯ ಜನರಿಗೆ ಏಳಿ ಇದು ಎದ್ದೇಳುವ ಸಮಯ ಅಥವಾ ಆಹಾರವನ್ನು ಸಿದ್ಧಪಡಿಸುವ ಸಮಯ ಅಥವಾ ಬಂಡಿಗಳನ್ನು ಏರುವ ಸಮಯ ಎಂದು ಜಾಗೃತಿಪಡಿಸುತ್ತಿದ್ದನು. ಆತನದು ನಗರದಲ್ಲಿ ಕೂಗುವ ಕೆಲಸವಾಗಿತ್ತು. ಏಕೆಂದರೆ ಆ ಕಾಲದಲ್ಲಿ ಅಲಾರಾಂ ಗಡಿಯಾರಗಳು ಇರಲಿಲ್ಲ.
                ಒಂದುದಿನ ರಾಜ ಬಿಂಬಸಾರನು ಆತನನ್ನು ನೋಡಿದನು, ರಾಜನಿಗೆ ಧ್ವನಿ ಕೇಳಿಯೇ ವ್ಯಕ್ತಿಗಳನ್ನು ಅಳೆಯುವಷ್ಟು ಸಾಮಥ್ಯವಿತ್ತು. ಕುಂಭಗೋಸಕನ ಧ್ವನಿ ಕೇಳಿ ಬಿಂಬಸಾರನಿಗೆ ಇದು ಐಶ್ವರ್ಯಶಾಲಿಯ ಧ್ವನಿ ಎಂದು ತನಗೆ ತಾನೇ ಹೇಳಿಕೊಂಡನು. ಅದನ್ನು ಕೇಳಿದ ರಾಜ ದಾಸಿಯೊಬ್ಬಳು ಆತನನ್ನು ಶೋಧಿಸಲು ಒಬ್ಬನನ್ನು ಕಳುಹಿಸಿದಳು. ಆದರೆ ಆತನು ಕೇವಲ ಕೂಗುವವ ಎಂದು ಗೊತ್ತಾಯಿತು. ಆದರೆ ಅದನ್ನು ರಾಜನಿಗೆ ತಿಳಿಸಿದಾಗಲು ರಾಜನು ದೃಢವಾಗಿ ಅದು ಖಂಡಿತವಾಗಿ ಐಶ್ವರ್ಯವಂತನ ಧ್ವನಿಯೇ ಎಂದು ಹೇಳಿದನು. ಮತ್ತೆ ಪರಿಶೋಧನೆ ನಡೆಸಿಯೂ ಆತನು ಶ್ರೀಮಂತನಲ್ಲವೆಂದು ತಿಳಿಸಲಾಯಿತು. ಆಗ ರಾಜದಾಸಿಯು ಸ್ವತಃ ತಾನೇ ಕಂಡುಹಿಡಿಯುವೆ ಎಂದು ತಿಳಿಸಿ ತನ್ನ ಮಗಳೊಂದಿಗೆ ಅಲ್ಲಿಗೆ ಬಂದಳು. ನಾವು ಯಾತ್ರಿಕರು ನಮಗೆ ಇರಲು ಸ್ಥಳನೀಡಿ ಎಂದು ಕೇಳಿಕೊಂಡು ಅಲ್ಲಿ ವಾಸ ಮಾಡಿದಳು. ಆ ಸಂದರ್ಭದಲ್ಲಿ ರಾಜನು ಒಂದು ಆಜ್ಞೆಯನ್ನು ಹೊರಡಿಸಿದನು. ಏನೆಂದರೆ ಒಂದು ಸಮಾರಂಭದ ವಿಶೇಷತೆಗಾಗಿ ಪ್ರತಿ ಕಾಮರ್ಿಕನು ತನ್ನ ಕಾಣಿಕೆಯನ್ನು ರಾಜ್ಯಕ್ಕೆ ನೀಡುವುದು. ಆದರೆ ಕುಂಭಗೋಸಕನ ಬಳಿ ಆ ಸಮಯದಲ್ಲಿ ಯಾವುದೇ ಹಣವಿರಲಿಲ್ಲ. ಆದ್ದರಿಂದಾಗಿ ಆತನು ಅಡಗಿಸಿಟ್ಟ ಸ್ಥಳದಿಂದ ಒಂದೆರಡು ಚಿನ್ನದ ನಾಣ್ಯಗಳನ್ನು ತೆಗೆಯಬೇಕಾಯಿತು ಮತ್ತು ಅದನ್ನು ನೀಡುವಂತೆ ಆತನು ದಾಸಿಗೆ ನೀಡಿದ್ದರಿಂದ ಆಕೆಯು ಅದನ್ನು ರಾಜನಿಗೆ ಒಪ್ಪಿಸಿದಳು. ಆಗ ರಾಜನು ವಿಚಾರಣೆಗಾಗಿ ಆತನನ್ನು ಕರೆಸಿದನು ಮತ್ತು ರಾಜನು ಆತನಿಗೆ ನೀನು ನಿರಪರಾಧಿಯಾಗಿದ್ದರೆ ನಿನಗೆ ಯಾವ ಹಾನಿಯೂ ಇಲ್ಲ ಸತ್ಯವನ್ನು ಹೇಳು ಎಂದು ನುಡಿದಾಗ ಆ ಯುವಕನು ತನ್ನ ತಂದೆಯು ಇದೇ ನಗರದ ಲೇವಾದೇವಿಯವ ಎಂದು ಹೇಳಿ ತನ್ನ ವೃತ್ತಾಂತವನ್ನೆಲ್ಲಾ ತಿಳಿಸಿದನು. ಅದನ್ನು ಕೇಳಿದ ಬಿಂಬಸಾರನು ಆತನಿಗೆ ನಗರದ ಲೇವಾದೇವಿಯ ಸ್ಥಾನವನ್ನು ನೀಡಿ ತನ್ನ ಮಗಳನ್ನು ನೀಡಿ ವಿವಾಹ ಮಾಡಿಸಿದನು

                ನಂತರ ಬಿಂಬಸಾರನು ತನ್ನ ಅಳಿಯನೊಂದಿಗೆ ಬುದ್ಧರನ್ನು ಕಾಣಲು ಹೊರಟನು. ಅಲ್ಲಿ ಭಗವಾನರಿಗೆ ವಿಷಯವೆಲ್ಲ ತಿಳಿಸಿದನು. ಆಗ ಭಗವಾನರು ಮೇಲಿನ ಗಾಥೆಯನ್ನು ಹೇಳಿದರು. 

No comments:

Post a Comment