Wednesday 31 December 2014

dhammapada/appamadavagga/2.3/cullapanthaka's mind power

ಪ್ರಯತ್ನದಿಂದಲೇ ಪರಮಾರ್ಥ
ತನ್ನ ಪ್ರಯತ್ನದಿಂದ, ಎಚ್ಚರಿಕೆಯಿಂದ ಸಂಯಮದಿಂದ ಮತ್ತು ಧರ್ಮದಿಂದಾಗಿ ಮೇಧಾವಿಯು ಪ್ರವಾಹವು ಪೀಡಿಸದಂತಹ ದ್ವೀಪವನ್ನಾಗಿ ಮಾಡಿಕೊಳ್ಳಲಿ.     (25)
ಗಾಥ ಪ್ರಸಂಗ 2:3
ಚುಲ್ಲಪಂಥಕನ ಚಮತ್ಕಾರ

                ಇಬ್ಬರು ಸೋದರರು ಭಿಕ್ಷುಗಳಾಗಿದ್ದರು. ಹಿರಿಯವ ಅರಹಂತ ನಾಗಿದ್ದನು. ಕಿರಿಯವ ಇನ್ನೂ ಸಾಮಣೇರನಾಗಿದ್ದನು. ಕಿರಿಯ ಚುಲ್ಲಪಂಥಕನು 4 ತಿಂಗಳು ಆದರೂ ಇನ್ನೂ 1 ಗಾಥೆಯನ್ನು ಸಹಾ ಕಲಿಯಲಾಗಲಿಲ್ಲ. ಎಷ್ಟೇ ಕಂಠಪಾಠ ಮಾಡಿದರೂ ಅದನ್ನು ಮರೆಯುತ್ತಿದ್ದನು. ಅದಕ್ಕೆ ಹಿರಿಯನಾದ ಮಹಾಪಂಥಕ ಕಿರಿಯನಿಗೆ ನೀನು ಗೃಹಸ್ಥನಾಗಲು ಅರ್ಹ ಹೊರತು ಧ್ಯಾನಿಯಾಗಲು ಅಲ್ಲವೇ ಅಲ್ಲ, ನೀನು ಹೊರಟು ಹೋಗು ಎಂದು ಹೇಳಿದನು.
                ಆತನು ಗ್ರಹಸ್ಥನಾಗಲು ಮನಸ್ಸಿಲ್ಲದೆಯೇ ಬೇರೇನೂ ತೋಚದೆ ಹೊರಡಲು ಸಿದ್ಧನಾದನು. ದ್ವಾರದಲ್ಲಿ ಬುದ್ಧ ಭಗವಾನರು ಕಾಣಿಸಿಕೊಂಡರು. ವಿಷಯ ತಿಳಿದು ನಾನು ಹೇಳಿದಂತೆ ಮಾಡು ಬಾ ಚುಲ್ಲಪಂಥಕ ಎಂದು ಹೇಳಿ ಗಂಧಕುಟಿಯ ಬಾಗಿಲಲ್ಲಿ ಪೂವರ್ಾಭಿಮುಖವಾಗಿ ಧ್ಯಾನಕ್ಕೆ ಕುಳ್ಳಿರಿಸಿದರು. ಆತನ ಕೈಗೆ ಪರಿಶುದ್ಧವಾದ ಬಿಳಿಯ ಕರವಸ್ತ್ರ ಸೃಷ್ಟಿಸಿ ನೀಡಿದರು. ಚುಲ್ಲಪಂಥಕ ಈ ಬಿಳಿಯ ವಸ್ತ್ರಕ್ಕೆ ಕೈಯಿಂದ ಉಜ್ಜುತ್ತಾ ರಜೋಹರಣಂ ಎಂದು ಜಪಿಸುತ್ತಾ ಕುಳಿತಿರು ಎಂದರು. (ರಜೋಹರಣಂ ಎಂದರೆ ಕೊಳೆಯ ನಿಮರ್ೂಲನೆ). ಆತ ಹಾಗೆಯೇ ಮಾಡುತ್ತಾ ಆತನ ಬಿಳಿ ವಸ್ತ್ರ ಕಪ್ಪಗೆ ತಿರುಗಿತ್ತು. ಆತ ಆಗಲೇ ಸಮಾಧಿ ಸಿದ್ಧಿಸಿದ್ದನು. ನಂತರ ಆತನು ಬಿಳಿವಸ್ತ್ರ ಕಪ್ಪಗೆ ಆಗಿರುವುದನ್ನು ಕಂಡು ಈ ರೀತಿ ಚಿಂತಿಸಿದನು.
                ಈ ವಸ್ತ್ರವು ಶುಚಿಯಾಗಿಯೇ ಇತ್ತು. ಆದರೆ ಈ ಅಸ್ತಿತ್ವದಿಂದಾಗಿ ಕಪ್ಪಾಯಿತು. ಈ ಕಾರಣದಿಂದಾಗಿ ಇದು ಕೊಳೆಯಾಯಿತು ಆತ ಹಾಗೆಯೇ ಪಂಚಖಂಧಗಳ (ದೇಹ ಮನಸ್ಸಿನ) ಬಗ್ಗೆ ಅರಿವನ್ನು ಆಳವಾಗಿ ಪಡೆಯಲು ಪ್ರಾರಂಭಿಸಿದನು. ನಂತರ ಹಾಗೆಯೇ ಅರಹಂತರ ಮಾರ್ಗದಲ್ಲಿ ತಲ್ಲೀನನಾದನು.
                ಆಗ ಭಗವಾನರು ಈ ಗಾಥೆಗಳನ್ನು ಈ ಅರ್ಥದಲ್ಲಿ ಹೇಳಿದರು.
                ಈ ಕೊಳೆಯು ಜರವಲ್ಲ, ನಿಜವಾದ ಕೊಳೆ ಲೋಭವಾಗಿದೆ/ದ್ವೇಷವಾಗಿದೆ/ಮೋಹ ಆಗಿದೆ. ಈ ಮೂರು ಅಕುಶಲಗಳಿಗೆ ಕೊಳೆಯೆಂದು ಕರೆಯುತ್ತಾರೆ ಹೊರತು ಬಟ್ಟೆಯ ಕೊಳೆಯನ್ನಲ್ಲ. ಯಾವ ಜ್ಞಾನಿಯು ಈ 3 ಅಕುಶಲವಾದ ಲೋಭ, ದ್ವೇಷ ಮತ್ತು ಮೋಹಗಳನ್ನು ವಜರ್ಿಸುವರೋ ಅವರು ವಿಗತರಜಸ್ಸ (ರಾಗದ್ವೇಷರಹಿತ ಮೋಹರಹಿತರು)ರ ಶಾಸನದಲ್ಲಿ ವಿಹರಿಸುವರು.
                ತಕ್ಷಣ ಪೂಜ್ಯ ಚೂಲಪಂಥಕ ನವಲೋಕೋತ್ತರ ಸ್ಥಿತಿ ಪ್ರಾಪ್ತಿ ಮಾಡಿದರು. ಹಾಗೆಯೇ 4 ಪಟಿಸಂಬಿದ ಜ್ಞಾನಸಹಿತ ಪ್ರಾಪ್ತಿ ಮಾಡಿದರು. ಜೊತೆಗೆ ಅಭಿಜ್ಞಾಗಳನ್ನು ಪ್ರಾಪ್ತಿ ಮಾಡಿದನು.
                ನಂತರ ಭಗವಾನರು ಜೀವಕನ ಮನೆಗೆ ಭಿಕ್ಷು ಸಂಘಸಹಿತ ಹೋದರು. ಆಗ ಜಿವಕನು ಬುದ್ಧರಿಗೆ ದಕ್ಷಿಣೋದಕ ತಂದರು. ಆಗ ಭಗವಾನರು ಜೀವಕ ವಿಹಾರದಲ್ಲಿ ಇನ್ನೂ ಭಿಕ್ಷುಗಳಿದ್ದಾರೆ ಎಂದರು. ಜೀವಕನ ಸೇವಕನು ಅಮ್ರವನಕ್ಕೆ ಬಂದನು ಅದೇವೇಳೆಯಲ್ಲಿ ಈ ಇಡೀ ಸನ್ನಿವೇಶ ಚುಲ್ಲಪಂಥಕನಿಗೆ ದಿವ್ಯದೃಷ್ಟಿಯಲ್ಲಿ ಅರಿವಾಯಿತು. ಆತ ತನ್ನ ಇದ್ಧಿಶಕ್ತಿಯಿಂದ ಸಹಸ್ರಾರು ತನ್ನಂತೆ ಶರೀರಗಳನ್ನು ಸೃಷ್ಟಿಸಿದನು. ಹಾಗು ಪ್ರತಿ ಚುಲ್ಲಪಂಥಕ ವಿಭಿನ್ನ ಕೆಲಸ ಮಾಡುತ್ತಿದ್ದರು. ಸೇವಕನು ಬಂದು ಚುಲ್ಲಪಂಥಕನಿಗೆ ಶಾಸ್ತರು ಕರೆಯುತ್ತಿದ್ದಾರೆ ಎಂದನು. ಆಗ ಸಹಸ್ರ ಮಂದಿಯು ನಾನು ಚುಲ್ಲಪಂಥಕ ಎಂದರು. ಆಗ ಸೇವಕ ಹಿಂತಿರುಗಿ ಭಂತೆ ಎಲ್ಲರೂ ಚುಲ್ಲಪಂಥಕರೇ. ಆಗ ಭಗವಾನರು ಸೇವಕನಿಗೆ ಮೊದಲು ಯಾರು ಚುಲ್ಲಪಂಥಕ ಎನ್ನುವರೋ ಅವರ ಕೈಯನ್ನು ಹಿಡಿದುಕೋ. ಉಳಿದವರು ಮಾಯಾ ಆಗುತ್ತಾರೆ. ನಂತರ ಹಾಗೇ ಆಯಿತು. ನಂತರ ಚುಲ್ಲಪಂಥಕ ಭಿಕ್ಷೆ ಸ್ವೀಕರಿಸಿದರು. ಇಲ್ಲಿಯೂ ಒಂದೇ ದಿನದಲ್ಲಿ ಇಷ್ಟೊಂದು ಬದಲಾವಣೆ ಮಾಡಿಸಿದರು.

                ಆ ಸಂದರ್ಭದಲ್ಲಿ ಭಗವಾನರು ಈ ಗಾಥೆಯನ್ನು ನುಡಿದರು. 

No comments:

Post a Comment