ಸುಚಾರಿತ್ರ್ಯರು ತಮ್ಮನ್ನು ದಮಿಸಿಕೊಳ್ಳುತ್ತಾರೆ
ನೀರಗಂಟಿಯು ನೀರಿಗೆ
ಮಾರ್ಗದರ್ಶನ ನೀಡುತ್ತಾರೆ. ಬಿಲ್ಲುಗಾರರು ಬಾಣಗಳಿಗೆ ನೇರಾಕಾರವನ್ನು ನೀಡುತ್ತಾರೆ. ಬಡಗಿಗಳು
ಮರದ ತುಂಡಿಗೆ ರೂಪ ನೀಡುತ್ತಾರೆ ಹಾಗು ಸುಚಾರಿತ್ರವುಳ್ಳವರು ತಮ್ಮನ್ನು ದಮಿಸಿಕೊಳ್ಳುತ್ತಾರೆ. (145)
ಗಾಥ ಪ್ರಸಂಗ 10:11
ಸುಖ ಸಮಣೇರನ ಸಾಧನೆ
ಸುಖನೆಂಬ ಏಳನೆಯ ವಯಸ್ಸಿನ ಬಾಲಕನು ಪರಮಪೂಜ್ಯ
ಸಾರಿಪುತ್ರರಲ್ಲಿ ಸಾಮಣೇರ ದೀಕ್ಷೆ ತೆಗೆದುಕೊಂಡಿದ್ದನು. ಆತನು ಸಂಘಕ್ಕೆ ಸೇರಿದ ಎಂಟನೆಯ
ದಿನದಂದು ಸಾರಿಪುತ್ರರೊಡನೆ ಆಹಾರ ಸೇವನೆಗೆ ಹೊರಟಿದ್ದನು. ಆಗ ದಾರಿಯಲ್ಲಿ ಕೆಲವು ರೈತರು
ಗದ್ದೆಗಳಿಗೆ ನೀರನ್ನು ಹಾಯಿಸುತ್ತಿದ್ದರು. ಇನ್ನೂ ಮುಂದೆ ಹೊರಟಾಗ ಬಿಲ್ಲುಗಾರರು ಬಾಣಗಳನ್ನು
ನೇರ ಮಾಡುತ್ತಿದ್ದರು. ಮತ್ತಷ್ಟು ಮುಂದೆ ಹೊರಟಾಗ ಅಲ್ಲಿ ಬಡಗಿಗಳು ಮರದ ತುಂಡಿಗೆ ಚಕ್ರ ಇತ್ಯಾದಿ
ಆಕಾರಗಳನ್ನು ನೀಡುತ್ತಿದ್ದರು.
ಆಗ ಆ ಬಾಲಕನು ಸಾರಿಪುತ್ರರಲ್ಲಿ ಈ ಪ್ರಶ್ನೆ ಕೇಳಿದನು:
ಭಂತೆ, ಈ ಜಡವಸ್ತುಗಳಿಗೆ ಒಬ್ಬ
ಇದ್ದಲ್ಲಿಗೆ ನಿದರ್ೆಶಿಸಬಹುದೇ ಅಥವಾ ತನ್ನಿಚ್ಛೆಯಂತೆ ನಿಮರ್ಿಸಬಹುದೇ?
ಓ ಸುಖ, ಮಾನವ ಅತಿ ಪ್ರಜ್ಞಾವಂತ, ಆತನು
ತನ್ನಿಚ್ಛೆಯಂತೆ ಈ ಜಡವಸ್ತುಗಳಿಗೆಲ್ಲಾ ರೂಪಿಸಬಲ್ಲ, ನಿಮರ್ಿಸಬಲ್ಲ.
ಆಗ ಆ ಬಾಲಕನು ಹೀಗೆ ಯೋಚಿಸಿದನು: ಬಾಹ್ಯದ ಜಡ
ವಸ್ತುಗಳಿಗೆ ತನ್ನಿಷ್ಟದಂತೆ ಆಕಾರ ನೀಡಬಹುದಾದರೆ, ಆಂತರ್ಯದ ಮನಸ್ಸನ್ನು ಏಕೆ ನನ್ನ ಇಷ್ಟದಂತೆ ರೂಪಿಸಬಾರದು? ದೊಂಬರಾಟದವರು ಶರೀರವನ್ನು ಪಳಗಿಸುವಂತೆ ಏತಕ್ಕಾಗಿ
ನಾನು ನನ್ನ ಮನಸ್ಸನ್ನು ಪಳಗಿಸಬಾರದು? ನಾನು ನನ್ನ
ಮನಸ್ಸನ್ನು ಈ ಕ್ಷಣದಿಂದಲೇ ಪ್ರಶಾಂತವಾಗಿ ನಿಮರ್ಿಸುವೆನು. ಅಷ್ಟೇ ಅಲ್ಲ, ಮನಸ್ಸಿನ ಎಲ್ಲ ಕ್ರಿಯೆಗಳನ್ನು ಗಮನಿಸಿ, ಜ್ಞಾನ ಗಳಿಸುವೆನು ಎಂದು ನಿರ್ಧರಿಸಿದನು.
ಹೀಗಾಗಿ ಆ ಬಾಲಕನು ವಿಹಾರಕ್ಕೆ ಹಿಂತಿರುಗಲು ಅನುಮತಿ
ಬೇಡಿದನು. ನಂತರ ಅಲ್ಲಿ ಸಾಧನೆ ಆರಂಭಿಸಿದನು.
ಅದೇದಿನ ಮುಂಜಾನೆ ಬುದ್ಧ ಭಗವಾನರು ತಮ್ಮ
ಗಂಧಕುಟೀರದಲ್ಲಿ ಇಂದು ಯಾರ್ಯಾರು ಜ್ಞಾನವನ್ನು ಗಳಿಸುವರು ಎಂದು ಅನ್ವೇಷಿಸಿದಾಗ ಅವರಿಗೆ ಸುಖ
ಕಾಣಿಸುತ್ತಾನೆ. ಆಗ ಭಗವಾನರಿಗೆ ಇಂದು ಆತನು ಅರಹಂತನೇ ಆಗುವನು ಎಂದು ಖಚಿತವಾಯಿತು. ಆತನಿಗೆ
ಸಹಾಯ ಮಾಡಲೆಂದು ಭಗವಾನರು ಆತನ ಕೋಣೆಯತ್ತ ಬಂದರು. ಏಕೆಂದರೆ ಆ ಸಮಯದಲ್ಲಿ ಸಾರಿಪುತ್ರರು ಆ
ಬಾಲಕನಿಗೆ ಆಹಾರ ನೀಡಲೆಂದು ಬರುತ್ತಿದ್ದರು. ಆ ವೇಳೆಗಾಗಲೇ ಆ ಬಾಲಕನು ಮೂರು ಲೋಕೋತ್ತರ ಫಲಗಳನ್ನು
ಪ್ರಾಪ್ತಿಮಾಡಿಯಾಗಿತ್ತು. ಇನ್ನು ಅರಹಂತ ಆಗುವುದು ಬಾಕಿಯಿತ್ತು. ಸಾರಿಪುತ್ರರು ಆಗ
ಅಡ್ಡಿಪಡಿಸಿದರೆ ಮುಂದೆ ಅರಹಂತನಾಗಲು ಬಹಳ ಸಮಯ ಬೇಕಾಗುತ್ತಿತ್ತು. ಆದ್ದರಿಂದಾಗಿ ಭಗವಾನರು
ಬಾಗಿಲಲ್ಲೇ ಸಾರಿಪುತ್ರನಿಗೆ ನಾಲ್ಕು ಪ್ರಶ್ನೆಗಳನ್ನು ಹಾಕಿದರು. ಆಗ ಪೂಜ್ಯ ಸಾರಿಪುತ್ರರು
ನಾಲ್ಕು ಪ್ರಶ್ನೆಗಳಿಗೆ ಉತ್ತರಿಸುವಷ್ಟರಲ್ಲಿ ಆ ಬಾಲಕನು ಅರಹತ್ವವನ್ನು ಸಾಧಿಸಿಬಿಟ್ಟನು.
ಈಗ ಭಗವಾನರು ಸಾರಿಪುತ್ರರಿಗೆ ಸಾರಿಪುತ್ರ, ಈಗ ಆ ಬಾಲಕನಿಗೆ ಆಹಾರ ನೀಡು ಎಂದರು. ಅದೇವೇಳೆ ಆ
ಬಾಲಕನು ಹೊರಬಂದು ಪೂಜ್ಯರಿಗೆ ವಂದಿಸಿದನು.
ಸಂಜೆ ವೇಳೆ ಭಿಕ್ಷುಗಳು ಚಚರ್ಿಸುವಾಗ ಭಗವಾನರು
ಅಲ್ಲಿಗೆ ಬಂದರು. ಆಗ ಭಿಕ್ಷುಗಳು ಹೀಗೆ ಪ್ರಶ್ನಿಸಿದರು. ಭಗವಾನ್ ಇಂದು ಹಗಲು ಉದ್ದವಾಗಿತ್ತು,
ಸಂಜೆ ಮಂದವಾಗಿದೆ. ಆದರೆ ಆ ಬಾಲಕ ಆಹಾರ ತಿಂದನಂತರ,
ಸೂರ್ಯನು ಪರಾಕಾಷ್ಠೆಯನ್ನು ನಮ್ಮ ಕಣ್ಣೆದುರಿನಲ್ಲಿಯೇ
ವೇಗವಾಗಿ ದಾಟಿದನು.
ಆಗ ಭಗವಾನರು ಇಂತೆಂದರು: ಭಿಕ್ಷುಗಳೇ, ಪುಣ್ಯಶಾಲಿಗಳು ಧ್ಯಾನದಲ್ಲಿ ನಿರತರಾಗಿರುವಾಗ ಇಂಥಹದು
ಅದ್ಭುತ ಸದಾ ಸಂಭವಿಸುತ್ತದೆ. ಇಂದು ಸುಖ ಸಾಮಣೇರನು ರೈತರು ನೀರು ಹಾಯುವಿಕೆ, ಬಿಲ್ಲುಗಾರರು ಬಾಣವನ್ನು ನೇರವಾಗಿಸುವಿಕೆ ಮತ್ತು
ಬಡಗಿಗಳು ಮರದಿಂದ ಆಕಾರ ರೂಪಿಸುವಂತೆ ಕಂಡು ಆತನು ತನ್ನನ್ನು ದಮಿಸಿಕೊಂಡು ಅರಹಂತನೇ ಆಗಿದ್ದಾನೆ
ಎಂದು ಪ್ರಶಂಸಿಸಿ ಈ ಮೇಲಿನ ಗಾಥೆಯನ್ನು ನುಡಿದರು.
No comments:
Post a Comment