ಪಾಪವನ್ನು ಅಲ್ಪವೆಂದು ಭಾವಿಸಬೇಡಿ
ಪಾಪವನ್ನು ಈ ರೀತಿ
ಹಗುರವಾಗಿ ಪರಿಗಣಿಸದಿರಿ, ಅದು ನನಗೆ ಬರಲಾರದು
ಎಂದು. ನೀರಿನ ಗಡಿಗೆಯು ಸಹಾ ಹನಿಗಳಿಂದ ಹೇಗೆ ತುಂಬುವುದೋ, ಹಾಗೆಯೇ ಮೂರ್ಖನು ಸಹಾ ಅಲ್ಪ ಅಲ್ಪವಾಗಿಯೇ ಪಾಪದಿಂದ ತನ್ನನ್ನು
ತುಂಬಿಸಿಕೊಳ್ಳುತ್ತಾನೆ. (121)
ಗಾಥ ಪ್ರಸಂಗ 9:5
ಜೇತವನದಲ್ಲಿ ನಿರ್ಲಕ್ಷ ಭಿಕ್ಷುವೊಬ್ಬನಿದ್ದನು. ಆತನು
ಪ್ರತಿಯೊಂದು ಕಾರ್ಯದಲ್ಲೂ ಅಲಕ್ಷ ಮಾಡುತ್ತಿದ್ದನು. ವಿಹಾರದ ಕಾರ್ಯಗಳಲ್ಲಿಯೂ ಸೋಮಾರಿತನ ತೋರುತ್ತಿದ್ದನು.
ಆತನ ವಿಹಾರದ ಪೀಠೋಪಕರಣ ಅಥವಾ ಹಾಸಿಗೆಯೇ ಇರಲಿ, ಆತನು ಅವನ್ನು ಆಚೆಯೇ ಬಿಟ್ಟುಬಿಡುತ್ತಿದ್ದನು. ಅವೆಲ್ಲಾ ಬಿಸಿಲಿಗೆ, ಮಳೆಗೆ, ಗೆದ್ದಲಿಗೆ ಗುರಿಯಾಗುತ್ತಿದ್ದವು. ಭಿಕ್ಷುಗಳು ಆತನ ಮಿತಿಮೀರಿದ ನಿರ್ಲಕ್ಷದ ಬಗ್ಗೆ
ವಿಚಾರಿಸಿದರೆ ಆತನು ಹೀಗೆ ಉತ್ತರಿಸುತ್ತಿದ್ದನು. ನನಗೆ ಇವೆಲ್ಲಾ ನಾಶಗೊಳಿಸಬೇಕೆಂಬ ಉದ್ದೇಶವಿಲ್ಲ,
ಇದು ಸ್ವಲ್ಪ ಹಾನಿಯಾಗಿದೆ, ಅಷ್ಟೇತಾನೆ? ಹೀಗೆಯೇ ಆತನು
ವತರ್ಿಸತೊಡಗಿದಾಗ, ಈತನ ಬಗ್ಗೆ ದೂರು
ಬುದ್ಧರ ಬಳಿಗೆ ಬಂದಿತು. ಭಗವಾನರು ಆತನಿಗೆ ಕರೆಸಿ ಹೀಗೆ ನುಡಿದರು.
ಓ ಭಿಕ್ಷುವೇ, ಈ ರೀತಿ ನಿರ್ಲಕ್ಷದಿಂದ ವತರ್ಿಸಬೇಡ. ಪಾಪಗಳ ಬಗ್ಗೆ ಮತ್ತು
ತಪ್ಪುಗಳ ಬಗ್ಗೆ ಹಗುರವಾದ ಧೋರಣೆ ತಾಳಬೇಡ, ಪಾಪ ಮತ್ತು ತಪ್ಪುಗಳು ಎಷ್ಟೇ ಅಲ್ಪವಾಗಿರಲಿ, ಅವನ್ನೆಲ್ಲಾ
ಪುನರಾವತರ್ಿಸಿದರೆ ಅವು ಬೃಹತ್ ರೂಪ ಪಡೆಯುವುವು ಎಂದು ಹೇಳಿ ಈ ಮೇಲಿನ ಗಾಥೆಯನ್ನು ನುಡಿದರು
No comments:
Post a Comment