ಪೂಜ್ಯರಿಗೆ ಗೌರವಿಸುವುದರಿಂದ ಲಾಭವಿದೆ
ಶೀಲವಂತರಿಗೆ
ಅಭಿವಂದಿಸುವ, ನಿತ್ಯವೂ ಅಂತಹ
ವೃದ್ಧರಿಗೆ ಗೌರವಿಸುವುದರಿಂದಾಗಿ ನಾಲ್ಕು ಧಮ್ಮಗಳು ವಧರ್ಿಸುತ್ತದೆ. ಅವೆಂದರೆ: ಆಯಸ್ಸು,
ವರ್ಣ, ಸುಖ ಮತ್ತು ಬಲ. (109)
ಗಾಥ ಪ್ರಸಂಗ 8:8
ಆಯುವರ್ಧನ ಕುಮಾರನ ವಿಲಕ್ಷಣ ಘಟನೆ
ಆಗ ಇಬ್ಬರು ಋಷಿಗಳು ಜೊತೆಯಲ್ಲಿಯೇ ತಪಸ್ಸನ್ನು
ಆಚರಿಸುತ್ತಿದ್ದರು. ಅವರಲ್ಲಿ ಒಬ್ಬನಿಗೆ ಋಷಿಜೀವನ ಬೇಸರವಾಗಿ ಗೃಹಸ್ಥನಾದನು. ಮುಂದೆ ಆತನು ತನ್ನ
ಪತ್ನಿ ಮತ್ತು ಮಗುವಿನೊಂದಿಗೆ ಆ ಋಷಿಗೆ ಗೌರವಿಸಲು ಬಂದಾಗ ಆತನು ಪತಿಪತ್ನಿಯರಿಗೆ ಮಾತ್ರ
ದೀಘರ್ಾಯುಸ್ಸು ಉಂಟಾಗಲಿ ಎಂದು ಹಾರೈಸಿ, ಮಗುವಿಗೆ ಮಾತ್ರ
ಏನೂ ಹೇಳಲಿಲ್ಲ. ಅದಕ್ಕೆ ಆತನ ಬಳಿಯಲ್ಲಿ ಕಾರಣವನ್ನು ಕೇಳಿದಾಗ, ಆ ಮಗುವು ಏಳು ದಿನ ಮಾತ್ರ ಬದುಕುವುದು ಎಂದು, ಅದನ್ನು ರಕ್ಷಿಸುವ ಮಾರ್ಗ ತನಗೆ ತಿಳಿಯದೆಂದು
ಹೇಳಿದನು.
ಆಗ ಭೀತರಾದ ಆ ದಂಪತಿಗಳು ಮಗುವನ್ನು ತೆಗೆದುಕೊಂಡು
ಬುದ್ಧರ ಬಳಿಗೆ ಬಂದರು. ಬುದ್ಧರು ಸಹಾ ಆ ದಂಪತಿಗಳಿಗೆ ದೀಘರ್ಾಯುಷ್ಮಾನ್ಭವ ಎಂದು ಹೇಳಿ,
ಆ ಮಗುವಿಗೆ ಏನೂ ಹೇಳಲಿಲ್ಲ. ಆಗ ಭೀತರಾದ ಅವರಿಗೆ
ಬುದ್ಧರು ಆ ಮಗುವನ್ನು ಮರಣದಿಂದ ಪಾರುಮಾಡಲು ಮಾರ್ಗವೊಂದು ತಿಳಿಸಿದರು. ಅದೇನೆಂದರೆ ಮನೆಯ ಮುಂದೆ
ಗುಡಾರವೊಂದನ್ನು ನಿಮರ್ಿಸಿ, ಮೆತ್ತನೆಯ ಹಾಸಿಗೆಯ
ಮೇಲೆ ಆ ಮಗುವನ್ನು ಮಲಗಿಸಿ, ಏಳು ದಿನಗಳ ಕಾಲ
ಪರಿತ್ತ (ರಕ್ಷಣಾ ಸೂತ್ರ) ಸುತ್ತಗಳನ್ನು ಪಠಿಸಲು ಕಳುಹಿಸಿದರು. ಮತ್ತು ಏಳನೆಯ ದಿನಕ್ಕೆ ಬುದ್ಧ
ಭಗವಾನರು ಸ್ವತಃ ಅಲ್ಲಿಗೆ ಬಂದರು. ಅದರಿಂದಾಗಿ ದೇವತೆಗಳೆಲ್ಲರೂ ಸಹಾ ಅಲ್ಲಿಗೆ ಬಂದುಬಿಟ್ಟರು.
ಆಗ ಮಗುವಿನ ಪ್ರಾಣಕ್ಕಾಗಿ ಅವಕಾಶ ಕಾಯುತ್ತಿದ್ದ ಅವರುದ್ದಕ ಪ್ರೇತವು ಮಗುವಿನಿಂದ ಏಳು ಯೋಜನ
ದೂರಕ್ಕೆ ಪರಾರಿಯಾಯಿತು. ನಂತರವು ಇಡೀ ರಾತ್ರಿ ಪರಿತ್ತಗಳ ಪಠಣ ಮುಂದುವರೆಯಿತು. ಮಾರನೆಯದಿನ
ದಂಪತಿಗಳು ಮಗುವನ್ನು ಎತ್ತಿಕೊಂಡು ಬುದ್ಧರ ಬಳಿಗೆ ಬಂದರು. ಆಗ ಭಗವಾನರೂ ಮೂವರಿಗೂ ದೀರ್ಘ ಆಯಸ್ಸು
ಪ್ರಾಪ್ತಿಯಾಗಲಿ ಎಂದು ಹಾರೈಸಿದರು.
ಮುಂದೆ ಆ ಮಗುವು 120 ವರ್ಷಗಳ ಕಾಲ ಬಾಳಿತು. ಆ ಮಗುವು, ಯುವಕನಾಗಿ 500 ಉಪಾಸಕರೊಂದಿಗೆ
ಬುದ್ಧರ ಬಳಿಗೆ ಬಂದನು. ಆಗ ಭಿಕ್ಷುಗಳು ಗುರುತು ಹಿಡಿದು, ಬುದ್ಧರೊಂದಿಗೆ ಆಯುವೃದ್ಧಿಯಾಗುವಂತಹ ಪರ್ಯಾಯ ವಿಧಾನ ಇದೆಯೆ?
ಎಂದು ಪ್ರಶ್ನಿಸಿದಾಗ, ಭಗವಾನರು ಈ ಮೇಲಿನ ಗಾಥೆಯನ್ನು ನುಡಿದರು.
No comments:
Post a Comment