ದೇಹದಂಡನೆಯಿಂದ ಮುಕ್ತನಾಗಲಾರ
ನಗ್ನವಾಗಿ
ಓಡಾಡುವುದರಿಂದಾಗಲಿ, ಜಟೆ
ಬಿಡುವುದರಿಂದಾಗಲಿ, ಕೊಳಕಾಗಿರುವುದರಿಂದಾಗಲಿ,
ಉಪವಾಸ ಮಾಡುವುದರಿಂದಾಗಲಿ,
ಬರಿನೆಲದ ಮೇಲೆ
ಮಲಗುವುದರಿಂದಾಗಲಿ, ಹಿಮ್ಮಡಿ ಮೇಲೆ
ಕುಳಿತು ದೇಹದಂಡಿಸುವುದರಿಂದಾಗಲಿ, ಧೂಳು ಮತ್ತು ಭಸ್ಮಗಳನ್ನು ಬಳಿದುಕೊಳ್ಳುವುದರಿಂದಾಗಲಿ, ಸಂಶಯದಿಂದ ಮುಕ್ತನಾಗಲಾರ, ಆ ಮರ್ತನು ಶುದ್ಧನಾಗಲಾರ. (141)
ಗಾಥ ಪ್ರಸಂಗ 10:8
ಬಹೂಭಾಂಡಿಕನ ಕಥೆ
ಶ್ರಾವಸ್ತಿಯಲ್ಲಿ ಶ್ರೀಮಂತನೊಬ್ಬನಿದ್ದನು. ಆತನ ಪ್ರಿಯ
ಪತ್ನಿಯು ತೀರಿಹೋದಾಗ ಉಂಟಾದ ಸ್ಮಶಾನ ವೈರಾಗ್ಯದಿಂದಾಗಿ ಆತನು ಭಿಕ್ಷುವಾಗಲು ನಿರ್ಧರಿಸಿದನು.
ಆದರೆ ಸಂಘಕ್ಕೆ ಪ್ರವೇಶಿಸುವ ಬಹುದಿನಗಳ ಮುಂಚೆಯೇ, ಆತನು ವಿಹಾರವೊಂದನ್ನು ಕಟ್ಟಿಸಿದನು. ಅದರಲ್ಲಿ ಅಡುಗೆಮನೆ, ಉಗ್ರಾಣ ಎಲ್ಲವನ್ನೂ ನಿಮರ್ಿಸಿದನು. ಆತನು ಅಲ್ಲಿ
ಪೀಠೋಪಕರಣಗಳು, ಅಡುಗೆ ಪಾತ್ರೆಗಳು
ಹೇರಳವಾಗಿ ಅಕ್ಕಿ, ತೈಲ, ಬೆಣ್ಣೆ, ಇತ್ಯಾದಿಗಳನ್ನು ಸಂಗ್ರಹಿಸಿದನು. ಆತನಿಗೆ ಬೇಕಾದ ತಿಂಡಿಗಳನ್ನು ತನ್ನ
ಅಡುಗೆಯ ದಾಸರಿಂದ ಮಾಡಿಸಿ ತಿನ್ನುತ್ತಿದ್ದನು. ಹೀಗೆ ಆತನು ಭಿಕ್ಷುವಾದರೂ ಸುಖ ಸೌಕರ್ಯದಿಂದ
ಜೀವಿಸುತ್ತಿದ್ದನು. ಏಕೆಂದರೆ ಆತನಲ್ಲಿ ಹಲವಾರು ಸಾಮಗ್ರಿಗಳಿದ್ದವು. ಆದ್ದರಿಂದಾಗಿ ಆತನಿಗೆ
ಎಲ್ಲರೂ ಬಹೂಭಾಂಡಿಕ ಎಂದು ಕರೆಯತೊಡಗಿದರು. ಹೀಗಾಗಿ ಭಿಕ್ಷುಗಳು ಶ್ರೀಮಂತ ಜೀವನ ನಡೆಸುವ
ಆತನನ್ನು ಬುದ್ಧರ ಬಳಿಗೆ ಕರೆದುಕೊಂಡು ಬಂದರು. ನಂತರ ದೂರು ನೀಡಿದರು. ಆಗ ಭಗವಾನರು ಓ ಮಗುವೇ,
ನಾನು ಸರಳ ಜೀವನದ ಬಗ್ಗೆ ಬೋಧಿಸಿರಲಿಲ್ಲವೇ? ಏತಕ್ಕಾಗಿ ಇಷ್ಟೆಲ್ಲಾ ಆಸ್ತಿ ಜೊತೆಗೆ ತುಂಬಿರುವೆ?
ಅಷ್ಟು ಕೇಳಿದ ಕೂಡಲೇ ಕ್ರುದ್ಧನಾದ ಆ ಭಿಕ್ಷುವು
ಮೇಲಂಗಿಯನ್ನು ಸಹಾ ಎಸೆದು ನಿಮ್ಮಿಷ್ಟದಂತೆ ಹೀಗಿರಲೇ ಎಂದನು.
ಆಗ ಭಗವಾನರು ಆತನಿಗೆ ಹೀಗೆ ನುಡಿದರು: ಓ ನನ್ನ
ಪುತ್ರನೇ, ಈ ಜನ್ಮಕ್ಕಿಂತ ಹಿಂದಿನ
ಜನ್ಮದಲ್ಲಿ ನೀನು ಪ್ರೇತವಾಗಿದ್ದೆ. ನೀನು ಪ್ರೇತವಾಗಿರಲು ನಿನ್ನಲ್ಲಿ ಪಾಪಲಜ್ಜೆ ಮತ್ತು
ಪಾಪಭೀತಿ ಇತ್ತು. ಆದರೆ ಈಗ ನೀನು ನನ್ನ ಶಾಸನದಲ್ಲಿದ್ದೂ ಸಹಾ ಏತಕ್ಕಾಗಿ ಪಾಪಲಜ್ಜೆ ಮತ್ತು
ಪಾಪಭೀತಿಯನ್ನು ವಸ್ತ್ರದ ಜೊತೆಗೆ ಎಸೆಯುತ್ತಿರುವೆ?
ತಕ್ಷಣ ಆ ಭಿಕ್ಷುವಿಗೆ ತನ್ನ ತಪ್ಪು ಅರಿವಾಯಿತು.
ಆತನಲ್ಲಿ ಪಾಪಲಜ್ಜೆ ಮತ್ತು ಪಾಪಭೀತಿಯು ಪುನಃ ಸ್ಥಾಪಿತವಾದವು. ಆಗ ಆತನು ಭಗವಾನರನ್ನು ಗೌರವದಿಂದ
ಪೂಜಿಸಿ, ಕ್ಷಮೆಯಾಚಿಸಿದನು. ಆಗ
ಭಗವಾನರು ಉತ್ತರಿಯವಿಲ್ಲದೆ (ಮೇಲಿನ ಚೀವರ) ನಿಲ್ಲುವುದರಿಂದಾಗಲಿ, ನಗ್ನವಾಗುವುದರಿಂದಾಗಲಿ, ಭಸ್ಮ ಬಳಿತದಿಂದಾಗಿ, ಜಟೆಯಿಂದ ಕೂಡಿರುವುದರಿಂದಾಗಲಿ, ನೆಲದ ಮೇಲೆ
ಮಲಗುತ್ತಾ ಮತ್ತು ಆಸನಗಳನ್ನು ಹಾಕುತ್ತ ದೇಹ ದಂಡಿಸುವುದರಿಂದಾಗಲಿ ನೀನು ಪರಿಶುದ್ಧನಾಗಲಾರೆ.
ಸಂಶಯಗಳೆಲ್ಲದರಿಂದ ವಿಮುಕ್ತನಾದಾಗಲೇ ನೀನು ಮಾರ್ಗದಲ್ಲಿ ಪ್ರವೇಶಿಸುತ್ತೀಯೆ ಎಂದು ಹೇಳಿ ಮೇಲಿನ
ಗಾಥೆಯನ್ನು ನುಡಿದರು. ಆಗ ಬಹೂಭಾಂಡಿಕನು ಸೋತಪನ್ನನಾದನು.
No comments:
Post a Comment