Saturday, 25 April 2015

dhammapada/dandavagga/10.5/visaaka

ಜರಾ ಮೃತ್ಯುಗಳು ಸವರ್ಾತ್ರಿಕವಾಗಿ ಕಾಡುತ್ತದೆ
ಹೇಗೆ ಗೋಪಾಲನು (ಗೋವುಗಳನ್ನು ಕಾಯುವವನು) ಗೋವುಗಳನ್ನು ಗೋಮಾಳಕ್ಕೆ ಅಟ್ಟುವನೋ ಹಾಗೇ ಜರಾ (ಮುಪ್ಪು) ಮತ್ತು ಮೃತ್ಯುಗಳು ಆಯು ಇರುವ ಜೀವಿಗಳನ್ನು ಜನ್ಮದಿಂದ ಜನ್ಮಕ್ಕೆ ಅಟ್ಟುತ್ತವೆ.          (135)
ಗಾಥ ಪ್ರಸಂಗ 10:5
ಸ್ತ್ರೀಯರ ಧಮ್ಮಪಾಲನೆಯ ಸಾಮಾನ್ಯ ಉದ್ದೇಶಗಳು


                ಭಗವಾನರು ಒಮ್ಮೆ ಪುಬ್ಬಾರಾಮ ವಿಹಾರದಲ್ಲಿ ನೆಲೆಸಿದ್ದರು. ಆಗ ವಿಶಾಖೆಯು ಉಪೋಸಥ ವ್ರತ ಆಚರಿಸಲು 500 ಸ್ತ್ರೀಯರೊಂದಿಗೆ ಬುದ್ಧರ ಬಳಿಗೆ ಬಂದು ಭಕ್ತಿಪೂರ್ವಕವಾಗಿ ವಂದಿಸಿ, ಪೂಜಿಸಿ, ಒಂದೆಡೆ ಕುಳಿತಳು. ಇತರ ಎಲ್ಲಾ ಸ್ತ್ರೀಯರು ಇದೇರೀತಿ ಗೌರವಿಸಿ ಕುಳಿತರು. ಅಂದು ಅಷ್ಠಾಂಗಶೀಲ ಪಾಲಿಸಿ, ದಾನನೀಡಿ, ಧ್ಯಾನದಲ್ಲಿಯೇ ನಿರತರಾಗಿ ಈಗ ಬುದ್ಧ ಭಗವಾನರ ದರುಶನಕ್ಕೆ ಬಂದಿದ್ದರು. ಅಲ್ಲಿ ಬರುವ ಮುನ್ನ ವಿಶಾಖೆಗೆ ಆ ಸ್ತ್ರೀಯರ ಧಮ್ಮಪಾಲನೆಯ ಉದ್ದೇಶ ಅರಿಯಬೇಕೆನ್ನುವ ಇಚ್ಛೆ ಉಂಟಾಯಿತು. ಆಕೆ ವೃದ್ಧ ಸ್ತ್ರೀಯರಿಗೆ ಧಮ್ಮಪಾಲನೆಯ ಉದ್ದೇಶ ಕೇಳಿದಳು. ಅದಕ್ಕೆ ಅವರು ಸುಗತಿ ಪ್ರಾಪ್ತಿಗೆ ಅಂತಹ ದಿವ್ಯಸುಖ ಪಡೆಯಲೆಂದೇ ತಾವು ಉಪೋಸಥ ಆಚರಿಸುತ್ತಿದ್ದೇವೆ ಎಂದರು. ನಂತರ ಆಕೆ ಮಧ್ಯಮ ವಯಸ್ಕರಿಗೆ ಅವರ ಧಮ್ಮಪಾಲನೆಯ ಉದ್ದೇಶ ಕೇಳಿದಳು. ಅದಕ್ಕೆ ಅವರು ಸವತಿಯರ ಕಾಟ, ಇನ್ನಿತರ ಗೃಹ ಸಮಸ್ಯೆಯಿಂದ ಪಾರಾಗಿ ಮನಶ್ಶಾಂತಿ ಗಳಿಸಲೆಂದು ಬಂದಿರುವೆವು ಎಂದರು. ನಂತರ ವಿಶಾಕೆಯು ನವ ವಿವಾಹಿತೆಯರಿಗೆ ಧಮ್ಮಪಾಲನೆಯ ಉದ್ದೇಶ ಹೇಳಿದಾಗ ಅವರು ಉತ್ತಮ ಪುತ್ರ ಸಂತಾನಕ್ಕಾಗಿ ಅಷ್ಠಾಂಗಶೀಲ ಇತ್ಯಾದಿ ಆಚರಿಸುತ್ತಿರುವೆವು ಎಂದಿದ್ದರು ಮತ್ತು ಕನ್ಯೆಯರಿಗೆ ಕೇಳಿದಾಗ ಅವರು ಉತ್ತಮ ಪತಿ ಹೊಂದಲು ಉಪೋಸಥ ವ್ರತ ಕೈಗೊಂಡಿರುವುದಾಗಿ ತಿಳಿಸಿದ್ದರು. ಬುದ್ಧರ ಮುಂದೆ ವಿಶಾಖೆಯು ಅವರೆಲ್ಲಾ ಬಯಕೆಯು ಕೈಗೂಡುವಂತೆ ಪ್ರಾಥರ್ಿಸಿದಳು. ನಂತರ ಧಮ್ಮಾಪಾಲನೆಯ ನಿಜವಾದ ಅರ್ಥವನ್ನು ಭಗವಾನರಲ್ಲಿ ಕೇಳಿದಳು. ಆಗ ಭಗವಾನರು ಜರಾ ಮೃತ್ಯುಗಳ ಭೀಕರತೆ ವಿವರಿಸಿ ಅದರಿಂದ ಪಾರಾಗುವುದಕ್ಕೆ ಎಂದು ನುಡಿದು ನಿಜವಾದ ಸುಖವು ತೃಷ್ಣಾರಹಿತರಾಗುವುದು ಎಂದು ತಿಳಿಸಿ ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment