ಪರಿಶುದ್ಧ ಪೂಜೆಯು ಪ್ರಾಣಿ ಬಲಿಗಿಂತ ಸವರ್ೊತ್ತಮವಾದುದು
ಪುಣ್ಯವನ್ನು
ಅಪೇಕ್ಷಿಸುತ್ತಾ ಯಾರು ಈ ಲೋಕದಲ್ಲಿ ಸಂವತ್ಸರಕ್ಕೊಮ್ಮೆ ಯಜ್ಞಗಳನ್ನು ಮಾಡಿದರೂ ಸಹಾ, ಅವ್ಯಾವುದೂ ಸಹಾ ಋಜಗತರನ್ನು ಅಭಿವಂದಿಸುವಂತ ಶ್ರೇಯಸ್ಕರದ
ಲಾಭದ ಕಾಲುಭಾಗಕ್ಕೂ ಸಮವಾಗಲಾರದು. (108)
ಗಾಥ ಪ್ರಸಂಗ 8:7
ಬ್ರಾಹ್ಮಣನ ವ್ಯರ್ಥ ಪ್ರಾಣಿ ಬಲಿ
ಒಮ್ಮೆ ಪೂಜ್ಯ ಸಾರಿಪುತ್ರರು ತಮ್ಮ ಗೆಳೆಯನಾಗಿರುವ
ಬ್ರಾಹ್ಮಣನಿಗೆ ಹೀಗೆ ಪ್ರಶ್ನಿಸಿದರು. ಓ ಬ್ರಾಹ್ಮಣ, ನೀನು ಪುಣ್ಯಕಾರ್ಯಗಳಲ್ಲಿ ತೊಡಗಿರುವೆಯಷ್ಟೆ ?
ಹೌದು ನಾನು ಪ್ರಾಣಿ ಬಲಿಯಂತಹ ಪುಣ್ಯ ಕಾರ್ಯದಲ್ಲಿ
ತೊಡಗಿರುವೆ.
ಓಹ್ ಅದು ಪಾಪ, ಪುಣ್ಯಕಾರ್ಯವಲ್ಲ. ನಾನು ನಿನಗೆ ಭಗವಾನರ ಬಳಿಗೆ ಕರೆದೊಯ್ಯುವೆ,
ನಿನಗೆ ಕನಿಷ್ಟ ಬ್ರಹ್ಮ ಮಾರ್ಗವಾದರೂ ದೊರೆಯುತ್ತದೆ.
ಅಲ್ಲಿಗೆ ಕರೆತಂದ ಸಂದರ್ಭದಲ್ಲಿ ಭಗವಾನರು
ಬ್ರಾಹ್ಮಣನಿಗೆ ಈ ಮೇಲಿನ ಗಾಥೆಯನ್ನು ನುಡಿದರು.
No comments:
Post a Comment