Saturday, 25 April 2015

dhammapada/dandavagga/10.3/youths

ಹಿಂಸೆಯಲ್ಲಿ ಆನಂದ ಬೇಡ
ಸುಖ ಕಾಮನೆಗಳಿಂದ ಕೂಡಿರುವ ಜೀವಿಗಳನ್ನು  ಯಾರು ಸುಖ ಬಯಸುವವನಾಗಿಯೂ ದಂಡಗಳಿಂದ ಹಿಂಸಿಸುವನೋಆತನು ಮುಂದೆ ಸುಖ ಪಡೆಯಲಾರನು.    (131)
ಸುಖ ಕಾಮನೆಗಳಿಂದ ಕೂಡಿರುವ ಜೀವಿಗಳನ್ನು ಯಾರು ಹಿಂಸಿಸುವುದಿಲ್ಲವೋ, ಅಂತಹ ಸುಖಾಪೇಕ್ಷಿಗೆ ಮುಂದೆ ಸುಖವು ಲಭ್ಯವಾಗುವುದು.     (132)
ಗಾಥ ಪ್ರಸಂಗ 10:3
ಹಾವನ್ನು ಹಿಂಸಿಸುತ್ತಿದ್ದ ಯುವಕರು



                ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿ ಆಹಾರಕ್ಕಾಗಿ ವಿಹರಿಸುತ್ತಿರುವಾಗ, ಯುವಕರ ಗುಂಪೊಂದು ಹಾವಿಗೆ ದಂಡಗಳಿಂದ ಹೊಡೆಯುತ್ತಿರುವುದು ಕಂಡರು. ಆ ಕೃತ್ಯವನ್ನು ತಡೆದರು. ನಂತರ ಹೀಗೇಕೆ ಮಾಡುತ್ತಿರುವಿರಿ ಎಂದು ಪ್ರಶ್ನಿಸಿದಾಗ ಅವರು ಹೀಗೆ ನುಡಿದರು: ಈ ಹಾವು ನಮಗೆ ಕಚ್ಚಬಹುದೆಂಬ ಭೀತಿಯಿಂದ ಹೀಗೆ ಹಿಂಸಿಸುತ್ತಿರುವೆವು. ಆಗ ಭಗವಾನರು ಅವರಿಗೆ ಹೀಗೆ ಹೇಳಿದರು: ನೀವು ಹಿಂಸೆ ಬಯಸದಿದ್ದರೆ ನೀವು ಸಹಾ ಪರರಿಗೆ ಹಿಂಸಿಸಬೇಡಿರಿ, ನೀವು ಹಿಂಸಿಸಿದರೆ ಪರಿಣಾಮವಾಗಿ ಮುಂದೆ ನೀವು ಸುಖ ಪಡೆಯಲಾರಿರಿ ಎಂದು ಹೇಳಿ ಈ ಮೇಲಿನ ಗಾಥೆ ನುಡಿದರು. ಅದರ ಪರಿಣಾಮದಿಂದಾಗಿ ಆ ಯುವಕರು, ಹಿಂಸೆಯ ದುಷ್ಟರಿಣಾಮಗಳನ್ನು ಪ್ರತಿಬಿಂಬಿಸಿ, ಅವರೆಲ್ಲರೂ ಸೋತಾಪತ್ತಿಫಲ ಪ್ರಾಪ್ತಿ ಮಾಡಿದರು. 

No comments:

Post a Comment