Thursday, 23 April 2015

dhammapada/papavagga/9.10/tissa

ಕಮ್ಮದಂತೆ ಜನ್ಮವು ಸಿಗುತ್ತದೆ
ಕೆಲವರು ಗರ್ಭದಲ್ಲಿ ಜನಿಸುವರು, ಪಾಪಕಮರ್ಿಗಳು ನಿರಯದಲ್ಲಿ ಹೊರಟರೆ ಪುಣ್ಯಶಾಲಿಗಳು ಸುಗತಿ ಪಡೆಯುವರು, ಆದರೆ ಆಸವರಹಿತರು ಪರಿನಿಬ್ಬಾಣ ಸಾಧಿಸುವರು.    (126)
ಗಾಥ ಪ್ರಸಂಗ 9:10
ಕರ್ಮಗಳ ಮುಂದಿನ ಗತಿ

          ಶ್ರಾವಸ್ತಿಯಲ್ಲಿ ತಿಸ್ಸನೆಂಬ ಅರಹಂತರು ಇದ್ದರು. ಅದೇ ನಗರದಲ್ಲಿ ರತ್ನ ಹೊಳಪು ಮಾಡುವವನು ತನ್ನ ಪತ್ನಿಯೊಂದಿಗೆ ವಾಸವಾಗಿದ್ದನು. ಪ್ರತಿದಿನವು ಆ ದಂಪತಿಗಳು ಪೂಜ್ಯ ತಿಸ್ಸರಿಗೆ ದಾನ ನೀಡುತ್ತಿದ್ದರು. ಒಂದುದಿನ ರತ್ನಲೇಪನಕಾರನು ಮಾಂಸವನ್ನು ಕೈಯಲ್ಲಿ ಹಿಡಿದಿರುವಾಗ ರಾಜ ಪಸೇನದಿಯ ದೂತನು ಮಾಣಿಕ್ಯದೊಂದಿಗೆ ಅಲ್ಲಿಗೆ ಬಂದನು. ಅದನ್ನು ಕತ್ತರಿಸಿ ಹೊಳಪು ನೀಡಿ ಪುನಃ ರಾಜನಿಗೆ ಹಿಂತಿರುಗಿಸಬೇಕಾಗಿತ್ತು. ರತ್ನ ಹೊಳಪುಗಾರನು ಮಾಣಿಕ್ಯವನ್ನು ಕೈಯಲ್ಲಿ ತೆಗೆದುಕೊಂಡನು. ಆತನ ಕೈಯು ಮಾಂಸ ಮುಟ್ಟಿದ್ದರಿಂದಾಗಿ ರಕ್ತಲೇಪಿತವಾಗಿತ್ತು. ಆತನು ರತ್ನವನ್ನು ಮೇಜಿನ ಮೇಲಿಟ್ಟು ಮನೆಯೊಳಗೆ ಕೈತೊಳೆಯಲು ಹೋದನು. ಆಗ ಆ ಕುಟುಂಬದಲ್ಲಿದ್ದ ಕೊಕ್ಕರೆಯು ರಕ್ತಲೇಪಿತ ಮಾಣಿಕ್ಯವನ್ನು ಕಂಡು ಅದನ್ನು ಮಾಂಸವೆಂದು ಬಗೆದು ಅದನ್ನು ನುಂಗಿಬಿಟ್ಟಿತು. ಇದನ್ನು ಪೂಜ್ಯ ಅರಹಂತರಾದ ತಿಸ್ಸರು ಗಮನಿಸಿದ್ದರು. ರತ್ನಲೇಪನಕಾರ ಅಲ್ಲಿಗೆ ಮರಳಿ ಬಂದಾಗ ಮಾಣಿಕ್ಯ ಆತನಿಗೆ ಕಾಣಲಿಲ್ಲ. ಹೆಂಡತಿಯನ್ನು ವಿಚಾರಿಸಿದಾಗ ಆಕೆಯು ತಿಳಿಯದೆಂದು ಹೇಳಿದಳು. ಪೂಜ್ಯರಿಗೆ ಕೇಳಿದಾಗ ಅವರು ತಾವು ತೆಗೆದುಕೊಳ್ಳಲಿಲ್ಲ ಎಂದು ಹೇಳಿದರು. ರತ್ನ ಲೇಪನಕಾರನಿಗೆ ಸಮಾಧಾನವಾಗಲಿಲ್ಲ. ಆತನಿಗೆ ತಿಸ್ಸರವರ ಮೇಲೆ ಸಂಶಯವುಂಟಾಯಿತು. ಆತನು ಅರಹಂತರ ಮೇಲೆ ಹಿಂಸೆ ನೀಡಲು ನಿರ್ಧರಿಸುವುದನ್ನು ಕಂಡ ಆತನ ಪತ್ನಿಯು ಆತನಿಗೆ ಹಾಗೆ ಮಾಡದಿರುವಂತೆ ಬುದ್ಧಿವಾದ ನೀಡಿದಳು. ಆದರೆ ಅದನ್ನು ಆಲಿಸದ ಆ ಅಕ್ಕಸಾಲಿಗನು ಆ ಪೂಜ್ಯರನ್ನು ಕೋಲಿನಿಂದ ಹಲವಾರುಬಾರಿ ಹೊಡೆದನು. ಅದರಿಂದಾಗಿ ಪೂಜ್ಯರ ಶರೀರದಿಂದ, ತಲೆಯಿಂದ ನಾನಾಕಡೆಯಿಂದ ರಕ್ತ ಸೋರಲಾರಂಭಿಸಿತು. ನೆಲಕ್ಕೆ ಬೀಳುತ್ತಿದ್ದ ರಕ್ತ ಕಂಡು ಆ ಕೊಕ್ಕರೆಯು ಪೂಜ್ಯರ ಬಳಿಗೆ ಬಂದಿತು. ಕೋಪದಲ್ಲಿದ್ದ ರತ್ನ ಲೇಪನಕಾರನು ಆ ಕೊಕ್ಕರೆಗೆ ಜೋರಾಗಿ ಒದ್ದನು. ಆಗ ಅದು ಆ ಕ್ಷಣದಲ್ಲಿ ಸತ್ತಿತು. ಆಗ ಪೂಜ್ಯರು ಗೃಹಪತಿಯೇ ಆ ಪಕ್ಷಿಯು ಜೀವಂತವಾಗಿದೆಯೋ ಅಥವಾ ಸತ್ತುಹೋಯಿತೋ? ಎಂದು ಪ್ರಶ್ನಿಸಿದಾಗ ಆ ರತ್ನಲೇಪನಕಾರನು ನಿಜ ಹೇಳದೆ ಹೋದರೆ ನೀನು ಸಹಾ ಈ ಕೊಕ್ಕರೆಯಂತೆ ಸಾಯುವೆ ಎಂದನು. ಪೂಜ್ಯರು ಕೊಕ್ಕರೆ ಸತ್ತಿರುವುದನ್ನು ಖಚಿತಪಡಿಸಿ ಕೊಂಡು ಓ ಶಿಷ್ಯನೇ, ಈ ಕೊಕ್ಕರೆಯು ಮಾಣಿಕ್ಯವನ್ನು ನುಂಗಿತ್ತು, ಆದರೆ ನಿಜವನ್ನು ಹೇಳಿದರೆ ನೀನು ಕೊಕ್ಕರೆಯನ್ನು ಕೊಲ್ಲುವೆ ಎಂದು ನಾನು ಹೇಳಿರಲಿಲ್ಲ ಎಂದರು.
          ಆಗ ರತ್ನಲೇಪನಕಾರನಿಗೆ ಅಪಾರ ಪಶ್ಚಾತ್ತಾಪವಾಗಿ ಕ್ಷಮೆಯಾಚಿಸಿದನು. ಆ ಪೂಜ್ಯರು ಆತನಿಗೆ ಕ್ಷಮಿಸಿ ಹಾಗೆಯೇ ಪರಿನಿಬ್ಬಾಣ ಪಡೆದರು.

          ಕೆಲದಿನಗಳ ನಂತರ ಭಿಕ್ಷುಗಳು, ಇವರ ಮುಂದಿನ ಗತಿಗಳನ್ನು ಕೇಳಿದಾಗ ಭಗವಾನರು ಹೀಗೆ ಉತ್ತರಿಸಿದರು. ಕೊಕ್ಕರೆಯು ರತ್ನ ಹೊಳಪುಗಾರನ ಮಗನಾಗಿ ಹುಟ್ಟುವುದು, ರತ್ನಹೊಳಪುಗಾರನು ನಿರಯದಲ್ಲಿ ಜನಿಸುವನು, ಆತನ ಪತ್ನಿಯು ಸುಗತಿಯಲ್ಲಿ ಜನಿಸುವಳು, ಆದರೆ ಪೂಜ್ಯ ತಿಸ್ಸರವರು ಈಗಾಗಲೇ ಪರಿನಿಬ್ಬಾಣ ಪಡೆದಿದ್ದಾರೆ ಎಂದು ಹೇಳಿ ಈ ಗಾಥೆಯನ್ನು ಹೇಳಿದರು.

No comments:

Post a Comment