ಇಡೀ ಜೀವನಕ್ಕಿಂತ, ಒಂದೇ
ಒಂದು ದಿನದ ಉತ್ತಮ ಧಮ್ಮವನ್ನು ಅರಿತು ಬದುಕುವುದು ಲೇಸು
ಒಬ್ಬನು ಶತ ವರ್ಷಗಳ
ಕಾಲ ಉತ್ತಮ ಧಮ್ಮವನ್ನು ಅರಿಯದೆ ಜೀವಿಸಬಹುದು, ಆದರೆ ಉತ್ತಮ ಧಮ್ಮವನ್ನು ದಶರ್ಿಸಿದಂತಹವರ ಒಂದೇ ದಿನದ ಜೀವನವು
ಶ್ರೇಷ್ಠಕರವಾಗಿರುತ್ತದೆ. (115)
ಗಾಥ ಪ್ರಸಂಗ 8:14
ಲೌಕಿಕ ಆಸ್ತಿ ಹಂಚಿ ಪಟ್ಟ ವ್ಯಥೆಯಿಂದ, ಮಹತ್ತರ ಗಳಿಕೆಯತ್ತ
ಸಾಗಿದ ತಾಯಿಯ ಪ್ರಸಂಗ
ಶ್ರಾವಸ್ತಿಯಲ್ಲಿನ ದಂಪತಿಗೆ ಏಳು ಪುತ್ರರು ಮತ್ತು ಏಳು
ಪುತ್ರಿಯರಿದ್ದರು. ಆ ಮಕ್ಕಳ ತಂದೆಯು ತೀರಿಹೋದಾಗ, ತಾಯಿಯೇ ಇಡೀ ಆಸ್ತಿಗೆ ವಾರಸುದಾರಳು ಆದಳು. ಆಕೆಗೆ ಎಲ್ಲರೂ ಬಹುಮಕ್ಕಳ
ತಾಯಿ (ಬಹುಪುತ್ತಿಕಾ) ಎಂದು ಕರೆಯುತ್ತಿದ್ದರು. ಆಕೆ ತನ್ನ ಮಕ್ಕಳಿಗೆ ಆಸ್ತಿಯ ಯಾವ ಪಾಲು
ನೀಡದಿದ್ದಾಗ, ಆ ಮಕ್ಕಳೆಲ್ಲರೂ
ತಾಯಿಗೆ ಹೀಗೆ ಹೇಳತೊಡಗಿದರು: ಅಮ್ಮ, ತಂದೆಯಂತು
ತೀರಿಹೋಗಿದ್ದಾರೆ, ಆಸ್ತಿಯನ್ನು
ಹಿಡಿದಿಟ್ಟುಕೊಂಡು ಪ್ರಯೋಜನವೇನು? ನಾವು ನಿನಗೆ
ಸಾಕುವುದಿಲ್ಲವೇ? ಹೀಗೆ ಪದೇ ಪದೇ
ಹೇಳತೊಡಗಿದ್ದರಿಂದಾಗಿ ಆಕೆಗೆ ತನ್ನ ಮಕ್ಕಳ ಮೇಲೆ ನಂಬಿಕೆ ಉಂಟಾಗಿ, ಆಕೆ ತನಗಾಗಿ ಏನನ್ನೂ ಇಟ್ಟುಕೊಳ್ಳದೆ ಇಡೀ ಆಸ್ತಿಯನ್ನು ತನ್ನ
ಮಕ್ಕಳಿಗೆ ಹಂಚಿಬಿಟ್ಟಳು.
ನಂತರ ಆಕೆ ತನ್ನ ಹಿರಿಯ ಮಗನ ಬಳಿ ಇರತೊಡಗಿದಳು.
ಕೆಲದಿನಗಳ ನಂತರ ಹಿರಿಯ ಸೊಸೆಯು ಆಕೆಗೆ ಕೇಳುವಂತೆ ಹೀಗೆ ಚುಚ್ಚುನುಡಿ ಹೇಳಿದಳು: ಅತ್ತೆಯು ನಮಗೆ
ಎರಡುಪಾಲು ನೀಡಿದಂತೆ, ಕೇವಲ ನಮ್ಮೊಂದಿಗೇ
ಇದ್ದಾಳೆ. ಇದನ್ನು ಕೇಳಿದ ಬಹುಪುತ್ತಿಕಾಳು ಎರಡನೆಯ ಮಗನೊಂದಿಗೆ ವಾಸಿಸಿದಳು. ಅಲ್ಲೂ ಹೀಗೆ
ಆದನಂತರ ಬೇರೆ ಮಗನೊಂದಿಗೆ ವಾಸಿಸಿದಳು. ಗಂಡು ಮಕ್ಕಳೆಲ್ಲಾ ಹೀಗೆ ವತರ್ಿಸಿದ ಮೇಲೆ ಆಕೆ ಹೆಣ್ಣು
ಮಕ್ಕಳೊಂದಿಗೆ ವಾಸಿಸಿದಾಗ ಅಲ್ಲೂ ಹೀಗೆಯೇ ಪ್ರತಿಯೊಬ್ಬರು ಗೌರವಿಸದಿದ್ದಾಗ ದುಃಖಿತಳಾದ ಆಕೆಯು
ಭಿಕ್ಷುಣಿಯಾದಳು.
ಆಕೆಗೆ ವಯಸ್ಸಾಗಿದ್ದರೂ ಸಹ, ಆಕೆ ಸೋಮಾರಿಯಾಗಿರಲಿಲ್ಲ. ಭಿಕ್ಷುಣಿ ಜೀವನದ ಕರ್ತವ್ಯದಲ್ಲಿ ಆಕೆ
ಸರಿಯಾಗಿ ಮಾಡತೊಡಗಿದಳು. ಇಡೀ ರಾತ್ರಿ ಧ್ಯಾನಗಳಲ್ಲಿ ಕಳೆಯುತ್ತಿದ್ದಳು. ಕುಳಿತು ಧ್ಯಾನ,
ನಡಿಗೆಯ ಧ್ಯಾನಾವಸ್ಥೆಯಲ್ಲಿ ಆಕೆಯು ಸಮಾಧಿ
ಸಿದ್ಧಿಸಿದಳು. ವಿಪಸ್ಸನವನ್ನು ವೃದ್ಧಿಸಿದಳು, ಧಮ್ಮಪಾಲನೆ, ಧಮ್ಮಚಿಂತನೆ,
ಧಮ್ಮ ಸಾಕ್ಷಾತ್ಕಾರಗಳಲ್ಲಿ ನಿರತಳಾಗಿದ್ದಳು. ಒಂದುದಿನ
ಆಕೆಯು ಧಮ್ಮಾನುಪಸ್ಸನದಲ್ಲಿ ತೊಡಗಿದ್ದಾಗ, ತ್ರಿಲಕ್ಷಣಗಳನ್ನು ಆಳವಾಗಿ ಅರಿಯತೊಡಗಿದಳು.
ಆಗ ಭಗವಾನರು ಮೇಲಿನ ಗಾಥೆಯನ್ನು ನುಡಿದರು. ನಂತರ
ಬಹುಪುತ್ತಿಕಾಳು ಅರಹಂತೆಯಾದಳು.
No comments:
Post a Comment