ಮೌನಿಯೇ
ಮುನಿಯಲ್ಲ
"ಕೇವಲ
ಮೌನಿಯಾಗಿರುವುದರಿಂದಲೇ
ಮೂರ್ಖನು ಮತ್ತು
ಗೊಂದಲದಲ್ಲಿರುವವನು ಮುನಿಯಾಗಿಬಿಡುವುದಿಲ್ಲ,
ಬದಲಾಗಿ, ತುಲವನ್ನು ಹಿಡಿದು ತೂಗಿ
ಶ್ರೇಷ್ಠತೆಯನ್ನು
ಗ್ರಹಿಸಿ, ಸ್ವೀಕರಿಸಿ, ಪಾಪವನ್ನು
ವಜರ್ಿಸುವವನೇ
ಪಂಡಿತನಾಗಿರುತ್ತಾನೆ." (268)
"ಪಾಪವನ್ನು
ಪೂರ್ಣವಾಗಿ ಪರಿತ್ಯಜಿಸುವಂತಹ
ಮುನಿಯೇ
ಮುನಿಯಾಗಿರುತ್ತಾನೆ.
ಯಾವ ಮುನಿಯು ಉಭಯ
ಲೋಕಗಳನ್ನು
ಅರಿಯುತ್ತಾನೋ,
ಅಂತಹವ ಮುನಿಯೆಂದು
ಕರೆಯಲ್ಪಡುತ್ತಾನೆ." (269)
ಗಾಥ ಪ್ರಸಂಗ 19:8
ಮೌನಚಾರಣೆಯ ಪಂಥಿಯರು
ಶ್ರಾವಸ್ತಿಯಲ್ಲಿ ಪರಪಂಥಿಯರ ಗುಂಪೊಂದು
ಇತ್ತು. ಅವರು ಆಹಾರ ಸೇವನೆಯ ನಂತರ ಆತಿಥ್ಯ ನೀಡಿದವರಿಗೆ ಈ ರೀತಿ ಹಾರೈಸುತ್ತಿದ್ದರು.
"ನಿಮಗೆ ಶಾಂತಿ ದೊರೆಯಲಿ, ನಿಮಗೆ ಸುಖ ದೊರೆಯಲಿ, ನಿಮ್ಮ ಆಯಸ್ಸು
ವೃದ್ಧಿಯಾಗಲಿ, ಇಂತಿಂಥ ಸ್ಥಳಗಳಲ್ಲಿ
ಕೆಸರಿದೆ, ಇಂತಿಂಥ ಸ್ಥಳಗಳಲ್ಲಿ ಮುಳ್ಳುಗಳಿವೆ.
ಅಂಥಹ ಕಡೆಗಳಲ್ಲಿ ನೀವು ಸಂಚರಿಸದಿರಿ". ಹೀಗೆ ನುಡಿದು, ಅವರು ಅಲ್ಲಿಂದ ನಿರ್ಗಮಿಸುತ್ತಿದ್ದರು. ಆದರೆ ಭಿಕ್ಷುಗಳು ಮಾತ್ರ
ನಿಶ್ಶಬ್ದವಾಗಿ ಆಹಾರ ಸ್ವೀಕರಿಸಿ ನಿಶ್ಶಬ್ದವಾಗಿಯೇ ಅಲ್ಲಿಂದ ಹೊರಟು ಹೋಗುತ್ತಿದ್ದರು. ಭಗವಾನರು
ಬೋಧಿ ಪ್ರಾಪ್ತಿ ಮಾಡಿದ ಮೊದಲ 20 ವರ್ಷಗಳು ಹೀಗೆಯೇ ನಡೆದವು. ಇದರಿಂದಾಗಿ ದಾನ ಮಾಡಿದ ಜನರಲ್ಲಿ
ಗೊಂದಲವುಂಟಾಯಿತು. "ನಾವು ಪರಪಂಥಿಯರಿಗೆ ದಾನ ಮಾಡಿದಾಗ ಅವರು ಧನ್ಯವಾದ ಆಶೀವರ್ಾದವೆಲ್ಲಾ
ನುಡಿಯುವರು, ಆದರೆ ಈ ಬೌದ್ಧ
ಭಿಕ್ಷುಗಳು ನಿಶ್ಶಬ್ದವಾಗಿಯೇ, ಮೌನವಾಗಿಯೇ ಹೋಗಿಬಿಡುವರಲ್ಲ, ಇದು ಹೇಗೆ?" ಈ ವಿಷಯವನ್ನು
ಭಿಕ್ಷುಗಳು ಭಗವಾನರಿಗೆ ತಲುಪಿಸಿದರು.
ಆಗ ಭಗವಾನರು ಭಿಕ್ಷುಗಳಿಗೆ ಈ ರೀತಿ ತಿಳಿಸಿದರು:
"ಭಿಕ್ಷುಗಳೇ, ಇನ್ನು ನೀವು ಆತಿಥ್ಯ
ಪಡೆಯುವವರ ಹತ್ತಿರ ಮೈತ್ರಿಯಿಂದ ವ್ಯವಹರಿಸಿ, ಆಹಾರ ಸೇವನೆಯ ನಂತರ ಧನ್ಯವಾದ ಅಪರ್ಿಸಿ, ಹಾರೈಸಿ" ಎಂದು ನುಡಿದರು.
ನಂತರ ಭಿಕ್ಷುಗಳು ಹಾಗೆಯೇ ಹಾರೈಸಲು
ತೊಡಗಿದರು. ಆಗ ವಿರೋಧಿಗಳಿಗೆ ಏನೊಂದು ಹೇಳಲು ದಾರಿ ಸಿಗದಂತಾಯಿತು. ಇದರಿಂದಾಗಿ ಉಪಾಸಕರಿಗೆ
ಭಾರಿ ಉತ್ತೇಜನ ಸಿಕ್ಕಿದಂತಾಯಿತು. ಅವರು ಇನ್ನಷ್ಟು ಆತಿಥ್ಯ ನೀಡತೊಡಗಿದರು. ಇದರಿಂದಾಗಿ ಬೌದ್ಧ
ಭಿಕ್ಷುಗಳಿಗೆ ಭಾರಿ ಲಾಭವಾದಂತಾಯಿತು. ಈಗ ಪರಪಂಥೀಯರಿಗೆ ಆತಿಥ್ಯ ತುಸು ಕಷ್ಟಕರವಾಗಿ
ದೊರೆಯಲಾರಂಭಿಸಿತು. ಆಗ ಅವರು ಹೊಸ ಉಪಾಯ ಮಾಡಿದರು. ಅದು ಹೀಗಿತ್ತು: "ನಾವು ಈಗ ಮೌನವಾಗಿ
ಇದ್ದುಬಿಡೋಣ. ನಮ್ಮನ್ನು ಪರರು ಮುನಿಗಳೆಂದು ಭಾವಿಸುವರು, ಆದರೆ ಬೌದ್ಧ ಭಿಕ್ಷುಗಳು ಧಮ್ಮಪ್ರವಚನ ಮಾಡುವುದರಿಂದಾಗಿ ಚೆನ್ನಾಗಿ
ಕಾಣಿಸಲಾರರು."
ಭಗವಾನರಿಗೆ ಅವರ ಈ ನಿಲುವಿನ ಆಚರಣೆಯನ್ನು
ಭಿಕ್ಷುಗಳು ಗಮನಕ್ಕೆ ತಂದರು. ಆಗ ಭಗವಾನರು ಹೀಗೆ ನುಡಿದರು: "ಭಿಕ್ಷುಗಳೇ, ಮೌನಿಯಾದ ಮಾತ್ರಕ್ಕೆ ಮುನಿಗಳಾಗುವುದಿಲ್ಲ, ಭಯದಿಂದಲು ಮೌನಿಗಳಾಗುವರು, ಅಜ್ಞಾನದಿಂದಾಗಿ ಕೆಲವರು ಮೌನಿಗಳಾದರೆ, ನಂಬಿಕೆಯಿಲ್ಲದ ಕಾರಣ ಕೆಲವರು ಮೌನಿಗಳಾಗುವರು. ಕೆಲವರು ತಮ್ಮ
ಜ್ಞಾನವನ್ನು ಹಂಚಲು ಇಷ್ಟಪಡದೆ ಮೌನಿಗಳಾಗುವರು. ಆದ್ದರಿಂದಾಗಿ ನಾನು ಹೇಳುವುದು ಏನೆಂದರೆ
ಪಾಪಗಳನ್ನು ಪೂರ್ಣವಾಗಿ ದಮಿಸಿದವರೇ ಮುನಿಗಳೆಂದು ಕರೆಯಲ್ಪಡುವರು" ಎಂದು ನುಡಿದು ಈ ಮೇಲಿನ
ಗಾಥೆಗಳನ್ನು ನುಡಿದರು.
No comments:
Post a Comment