ಲಜ್ಜೆರಹಿತನ
ಬಾಳು ಸುಲಭವಾದುದು
"ಲಜ್ಜೆರಹಿತನ
ಬಾಳು ಸುಲಭವಾದುದು,
ಕಾಗೆಯಂತೆ ಪಾಪದಲ್ಲಿ
ಧೈರ್ಯವಂತನು ಮತ್ತು
ಮೇಲೆ ಹಾಯುವವನು,
ಚಾಡಿಕೋರನು, ಜಂಬಕೋರನು
ಪೂರ್ಣವಾಗಿ
ಭ್ರಷ್ಟನಾಗಿರುತ್ತಾನೆ." (244)
"ಪಾಪಲಜ್ಜೆಯುಳ್ಳವನ
ಜೀವನವು ಕಷ್ಟಕರವಾಗಿರುತ್ತದೆ,
ಅಂತಹವ ನಿತ್ಯವೂ
ಶುಚಿತ್ವವನ್ನು ಪರಿಶುದ್ಧತೆಯನ್ನು ಅರಸುತ್ತಾನೆ,
ಅಂತಹವ ವಿರಾಗಿಯೂ
ನಮ್ರನು, ಜೀವನದಲ್ಲಿ ಶುದ್ಧನು
ಹಾಗು
ಚಿಂತನಾಶೀಲನಾಗಿರುತ್ತಾನೆ." (245)
ಗಾಥ ಪ್ರಸಂಗ 18:6
ಚೂಲಸಾರಿ ಮತ್ತು
ಸಾರಿಪುತ್ರರ ನಡುವಿನ ವ್ಯತ್ಯಾಸ
ಒಂದುದಿನ ಚೂಲಿಸಾರಿ ಎಂಬ ಭಿಕ್ಷುವು ತನ್ನ
ವಿಹಾರಕ್ಕೆ ಹಿಂತಿರುಗುತ್ತಿದ್ದನು. ಆತನು ವೈದ್ಯ ವೃತ್ತಿಯನ್ನು ಬಲ್ಲವನಾಗಿದ್ದನು. ಆ ದಿನ ಆತನು
ರೋಗಿಗೆ ಔಷಧ ನೀಡಿ ಪ್ರತಿಫಲವಾಗಿ ಉನ್ನತ ಮಟ್ಟದ ಸ್ವಾದಿಷ್ಟ ಆಹಾರವನ್ನು ಪಡೆದುಕೊಂಡು
ಬರುತ್ತಿದ್ದನು. ದಾರಿಯಲ್ಲಿ ಆತನು ಸಾರಿಪುತ್ರರನ್ನು ಕಂಡನು. ಆತನು ತನ್ನ ಆಹಾರದಲ್ಲಿ ಸ್ವಲ್ಪ
ಭಾಗ ಪಡೆಯಲು ಸಾರಿಪುತ್ರರಿಗೆ ಹೇಳಿದನು. ಹಾಗು ಇದನ್ನು ತಾನು ಪಡೆದ ಬಗೆಯು ಹೇಳಿದನು. ಆಗ
ಸಾರಿಪುತ್ರರು ನಿಶ್ಶಬ್ದರಾಗಿ ಶಾಂತತೆಯಿಂದ ತಮ್ಮ ಹಾದಿಯನ್ನು ಹಿಡಿದರು. ಅವರು ಸಾರಿಯಿಂದ ಆಹಾರ
ಸ್ವೀಕರಿಸಲಿಲ್ಲ. ಏಕೆಂದರೆ ಚೂಲಸಾರಿಯು ಶೀಲದ ಭ್ರಷ್ಟನಾಗಿದ್ದನು.
ಈ ವಿಷಯವನ್ನು ಭಗವಾನರಿಗೆ ತಿಳಿಸಲಾಯಿತು.
ಆಗ ಭಗವಾನರು ಅವರಿಬ್ಬರ ವ್ಯತ್ಯಾಸವನ್ನು ಈ ಮೇಲಿನ ಗಾಥೆಗಳಲ್ಲಿ ಹೀಗೆ ತಿಳಿಸಿದರು.
No comments:
Post a Comment