Monday, 13 July 2015

dhammapada/malavagga/18.2/brahminsgradualprogress

ನಿರಂತರ ಅನುಕ್ರಮವಾಗಿ ಪರಿಶುದ್ಧನಾಗು

"ಅನುಕ್ರಮವಾಗಿ ಮೇಧಾವಿಯು
ಸ್ವಲ್ಪಸ್ವಲ್ಪವಾಗಿ ಕ್ಷಣಕ್ಷಣಕ್ಕೂ,
ಅಕ್ಕಸಾಲಿಗನು ಬೆಳ್ಳಿಯಲ್ಲಿನ ರಜವನ್ನು ತೆಗೆಯುವಂತೆ
ತನ್ನಲ್ಲಿನ ಮಲಗಳನ್ನು ತೆಗೆದುಹಾಕಬೇಕು." (239)

ಗಾಥ ಪ್ರಸಂಗ 18:2
ಬ್ರಾಹ್ಮಣನ ಅನುಕ್ರಮ ಪರಿಶುದ್ಧತೆ

            ರಾಜಗೃಹದಲ್ಲಿ ಬ್ರಾಹ್ಮಣನೊಬ್ಬನಿದ್ದನು. ಆತನು ನಗರಕ್ಕೆ ಹೋಗುತ್ತಿರುವಾಗ ಒಂದು ಸ್ಥಳದಲ್ಲಿ ನಿಂತನು. ಏಕೆಂದರೆ ಅಲ್ಲಿ ಭಿಕ್ಷುಗಳು ತಮ್ಮ ಚೀವರಗಳನ್ನು ಧರಿಸುತ್ತ, ಹೋಗಲು ಸಿದ್ಧರಾಗುತ್ತಿದ್ದರು. ಆಗ ಬ್ರಾಹ್ಮಣನು ಅವರ ಚೀವರವನ್ನು ಗಮನಿಸಿದನು. ಅವು ಹುಲ್ಲಿನ ಮಂಜಿನಿಂದ ತೇವಗೊಂಡಿದ್ದವು. ಹೀಗಾಗಿ ಆ ಬ್ರಾಹ್ಮಣನು ಮಾರನೆಯ ದಿನವೇ ಅಲ್ಲಿ ಹುಲ್ಲು ಇಲ್ಲದಂತೆ ಏಪರ್ಾಟು ಮಾಡಿದನು. ನಂತರ ಅವರ ಚೀವರ ಗಮನಿಸಿದಾಗ ಅವು ಮಣ್ಣಿನಿಂದ ಕೊಳೆಯಾಗಿರುವುದನ್ನು ಗಮನಿಸಿದನು. ಆಗ ಮತ್ತೆ ಆ ಬ್ರಾಹ್ಮಣನು ಅಲ್ಲಿ ಮರಳನ್ನು ಸಿಂಪಡಿಸಿ ಮಣ್ಣು ಮೆತ್ತದಿರುವ ಹಾಗೆ ನೋಡಿಕೊಂಡನು. ಆಗಲೂ ಸಹಾ ಬಿಸಿಲಿನ ಕಾರಣಕ್ಕೆ ಬೆವರಿನಿಂದ ಅವರ ಚೀವರಗಳು ಒದ್ದೆಯಾಗಿರುತ್ತಿದ್ದವು ಅಥವಾ ಮಳೆಯಿಂದಲೂ ಒದ್ದೆಯಾಗಿರುತ್ತಿದ್ದವು. ಹೀಗಾಗಿ ಆ ಬ್ರಾಹ್ಮಣನು ಅವರಿಗಾಗಿ ಒಂದು ಭವನವನ್ನೇ ನಿಮರ್ಿಸಿದನು ಹಾಗು ಭಗವಾನರನ್ನು ಮತ್ತು ಭಿಕ್ಷುಗಳನ್ನು ಆಹ್ವಾನಿಸಿ ಆಹಾರ ದಾನ ಏಪರ್ಾಟು ಮಾಡಿ ನಂತರ ಆ ಭವನವನ್ನು ಭಿಕ್ಷುಗಳಿಗಾಗಿ ಸಮರ್ಪಣೆ ಮಾಡಿದನು.

            ನಂತರ ಆ ಬ್ರಾಹ್ಮಣನು ಭಗವಾನರೊಂದಿಗೆ ತನ್ನ ದಾನ ಸಹಾಯದ ಹಂತಗಳನ್ನು ಅನುಕ್ರಮತೆಯಲ್ಲಿ ಹೇಳಿದನು. ಆಗ ಭಗವಾನರು "ಬ್ರಾಹ್ಮಣ, ಮೇಧಾವಿಯು ಕುಶಲ ಕರ್ಮಗಳನ್ನು ಸ್ವಲ್ಪ ಸ್ವಲ್ಪವಾಗಿ, ಅನುಕ್ರಮವಾಗಿ ಮಾಡುತ್ತ ಸ್ವಾರ್ಥದ ಕಲೆಗಳನ್ನು ತೆಗೆಯುತ್ತ ಹೋಗುತ್ತಾನೆ" ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment