ಮಿತಿಮೀರಿದವನ
ಕರ್ಮಗಳು ದುರ್ಗತಿಗೆ ಕರೆದೊಯ್ಯುತ್ತದೆ
"ಹೇಗೆ
ಕಬ್ಬಿಣದಲ್ಲಿ ಹುಟ್ಟಿದ ತುಕ್ಕು,
ಕಬ್ಬಿಣವನ್ನೇ
ತಿಂದುಹಾಕುವಂತೆ,
ಹಾಗೆಯೇ ಮಿತಿಮೀರಿದ
ಚಾರಿತ್ರ್ಯದವನ
ಕರ್ಮಗಳೇ ಆತನಿಗೆ
ದುಗ್ಗತಿಗೆ ಸೇರಿಸುತ್ತವೆ." (240)
ಗಾಥ ಪ್ರಸಂಗ 18:3
ಭಿಕ್ಷುವು ತಿಗಣೆಯಾದ
ಕಥೆ
ಗೌರವಾನ್ವಿತ ಕುಟುಂಬದ ಯುವಕನೊಬ್ಬನು,
ಸಾಂಸಾರಿಕ ಜೀವನ ತ್ಯಜಿಸಿ ಭಿಕ್ಷುವಾದನು. ಎಲ್ಲರೂ ಆತನಿಗೆ
ಭಿಕ್ಖು ತಿಸ್ಸ ಎಂದು ಕರೆಯುತ್ತಿದ್ದರು. ಒಮ್ಮೆ ತಿಸ್ಸನು ವಿಹಾರದಲ್ಲಿದ್ದಾಗ ಅವನಿಗೆ 8 ಮೊಳ
ಉದ್ದದ ಬಟ್ಟೆಯು ಸಿಕ್ಕಿತು. ನಂತರ ಅವನು ಒಂದುದಿನ ಅದನ್ನು ತನ್ನ ತಂಗಿಗೆ ನೀಡಿದನು. "ಈ
ಬಟ್ಟೆಯು ನನ್ನ ಸೋದರನಿಗೆ ಸರಿಹೊಂದದು" ಎಂದು ಆ ತಂಗಿಯು ಯೋಚಿಸಿ ಹರಿತವಾದ ಕತ್ತಿಯಿಂದ
ಅನೇಕ ಪಟ್ಟಿಗಳಂತೆ ಕತ್ತರಿಸಿದಳು. ನಂತರ ಅವನ್ನು ಕುಟ್ಟಿ, ಎಳೆಗಳೆನ್ನು ತೆಗೆದು, ನಂತರ ಚೀವರ ವಸ್ತ್ರವನ್ನು ರೂಪಿಸಿದಳು. ಅದೇವೇಳೆ ತಿಸ್ಸನು ತಮ್ಮ ಸೋದರಿಯಲ್ಲಿ ಹೀಗೆ
ಕೇಳಿದನು: "ಆ ವಸ್ತ್ರವನ್ನು ನೀಡು, ನಾನು ಅದರಿಂದಾಗಿ ಚೀವರ ತಯಾರಿಸಬೇಕಾಗಿದೆ" ಎಂದನು. ಆಗ ಆಕೆಯು 9 ಮೊಳ ಉದ್ದದ
ಚೀವರವನ್ನು ಆತನ ಕೈಯಲ್ಲಿ ಇರಿಸಿದಳು. "ನನ್ನದು ಎಂಟು ಮೊಳ ಉದ್ದದ ವಸ್ತ್ರ, ಇದಲ್ಲ." "ಭಂತೆ ಇದು ನಿಮ್ಮ ವಸ್ತ್ರವೇ"
ಎಂದು ಆಕೆಯು ನಡೆದ ವಿಷಯವೆಲ್ಲಾ ತಿಳಿಸಿದಳು. ನಂತರ ಆತನು ಅಲ್ಲಿಯೇ ಅನ್ನ, ಗಂಜಿ ಇತ್ಯಾದಿ ಸೇವಿಸಿ ಚೀವರ ನಿಮರ್ಾತನಿಗೆ ಆ
ವಸ್ತ್ರವನ್ನು ನೀಡಿದನು. ಆ ವಸ್ತ್ರವನ್ನು ಆತನು ಸುಂದರ ಚೀವರವಾಗಿ ರೂಪಿಸಿದನು. ಆ ವಸ್ತ್ರದಲ್ಲಿ
ಅತಿ ಮೋಹಗೊಂಡು ಮರುದಿನ ಧರಿಸಲು ನಿರ್ಧರಿಸಿದನು. ಆದರೆ ಅಂದು ರಾತ್ರಿ ಆತನಿಗೆ ತಿಂದ ಆಹಾರವು
ಅಜೀರ್ಣವಾಗಿ ಆತನು ಅಂದೇ ಸತ್ತುಹೋದನು.
ಹಾಗೆಯೇ ವಸ್ತ್ರದ ಮೇಲಿನ ಮೋಹದಿಂದಾಗಿ ಅದೇ
ಚೀವರದಲ್ಲಿ ತಿಗಣೆಯಾಗಿ ಹುಟ್ಟಿದನು. ಆತನ ಶವಸಂಸ್ಕಾರವೆಲ್ಲಾ ಮುಗಿಯಿತು. "ಆತನು
ರೋಗಿಯಾಗಿದ್ದಾಗ ಯಾರೊಬ್ಬರೂ ಈತನನ್ನು ನೋಡಿಕೊಳ್ಳದ ಕಾರಣ, ಈ ಚೀವರವು ಸಮೂಹಕ್ಕೆ ಸೇರುತ್ತದೆ. ಆದ್ದರಿಂದ ಇದನ್ನು ನಮ್ಮಲ್ಲಿಯೇ
ಹಂಚಿಕೊಳ್ಳೋಣ" ಎಂದು ಭಿಕ್ಷುಗಳು ತೀಮರ್ಾನಿಸುತ್ತಿದ್ದರು.
ಅವರ ಮಾತುಗಳನ್ನು ಕೇಳಿಸಿಕೊಂಡ ತಿಗಣೆಯು
"ಈ ಭಿಕ್ಷುಗಳು ನನ್ನ ಆಸ್ತಿಯನ್ನು ಲೂಟಿ ಹೊಡೆಯುತ್ತಿದ್ದಾರಲ್ಲ" ಎಂದು ಜೋರಾಗಿ
ಕಿರುಚುತ್ತಾ, ಆ ವಸ್ತ್ರದಲ್ಲಿ ಈ
ಕಡೆಯಿಂದ ಆಕಡೆಗೆ ಅಡ್ಡಾಡಿತು. ಬೇರೆಯವರಿಗೆ ಇದರ ಬಗ್ಗೆ ಒಂದು ಚೂರೂ ತಿಳಿಯದಿದ್ದರೂ, ಗಂಧಕುಟಿಯಲ್ಲಿ ಭಗವಾನರು ತಮ್ಮ ದಿವ್ಯಕರ್ಣದಿಂದ ಆ ತಿಗಣೆಯ
ಚೀರಾಟ ಕೇಳಿಸಿಕೊಂಡರು. ತಕ್ಷಣ ಅವರು ಪೂಜ್ಯ ಆನಂದರಿಗೆ ಕರೆಸಿ ಹೀಗೆ ಹೇಳಿದರು: "ಆನಂದ,
ಆ ಭಿಕ್ಷುಗಳಿಗೆ ತಿಸ್ಸನ ಚೀವರವನ್ನು ಏಳು ದಿನಗಳವರೆಗೆ
ಹಾಗೇ ಇಡಲು ಆಜ್ಞಾಪಿಸು". ಅದರಂತೆಯೇ ಪೂಜ್ಯರು ಆಜ್ಞೆ ನೀಡಿದರು.
ಏಳು ದಿನಗಳ ನಂತರ ಆ ತಿಗಣೆಯು ಸತ್ತು
ತುಸಿತಾ ದೇವತೆಗಳೊಂದಿಗೆ ಪುನರ್ಜನ್ಮಿಸಿತು. ಆ ದೇವತೆಗಳಲ್ಲಿ ಒಂದಾಯಿತು. ಆಗ ಭಗವಾನರು
ಭಿಕ್ಷುಗಳಿಗೆ "ತಿಸ್ಸನ ಚೀವರವನ್ನು ಹಲವು ಭಾಗಗಳಾಗಿ ಹಂಚಿಕೊಳ್ಳಿ" ಎಂದರು.
ಅದರಂತೆಯೇ ನಡೆದುಕೊಂಡ ಭಿಕ್ಷುಗಳು ತಮ್ಮಲ್ಲಿಯೇ ಚಚರ್ಿಸಲಾರಂಭಿಸಿದರು. "ಏತಕ್ಕಾಗಿ
ಭಗವಾನರು ತಿಸ್ಸನ ಚೀವರವನ್ನು ಏಳು ದಿನಗಳ ಕಾಲ ಪಕ್ಕಕ್ಕೆ ಇಟ್ಟರು?" ಎಂದು.
ಅಲ್ಲಿಗೆ ಬಂದ ಭಗವಾನರು ಅದಕ್ಕೆ ಹೀಗೆ
ಉತ್ತರ ನೀಡಿದರು: "ಭಿಕ್ಷುಗಳೇ, ತಿಸ್ಸಾ ಭಿಕ್ಷುವು ಚೀವರಕ್ಕೆ ಅತಿ ಆಸಕ್ತಿ ಹೊಂದಿದ್ದರಿಂದಾಗಿ ಆತನು ತನ್ನ ವಸ್ತ್ರದಲ್ಲೇ
ತಿಗಣೆಯಾಗಿ ಪುನರ್ಜನ್ಮ ತಾಳಿದನು ಹಾಗು ನೀವುಗಳು ಆತನ ಚೀವರ ಹಂಚಬೇಕೆಂದು ನಿರ್ಧರಿಸಿದಾಗ 'ನನ್ನ ಆಸ್ತಿಯನ್ನು ಈ ಭಿಕ್ಷುಗಳು ಲೂಟಿ
ಹೊಡೆಯುತ್ತಿದ್ದಾರಲ್ಲ' ಎಂದು
ಕಿರುಚುತ್ತಿದ್ದನು. ಆಗ ನೀವೇನಾದರೂ ಚೀವರ ಹಂಚಿಕೊಂಡಿದ್ದರೆ ನಿಮ್ಮ ಮೇಲೆ ದ್ವೇಷವನ್ನು
ಕಾರುತ್ತಿದ್ದನು. ಹಾಗೇ ಆಗಿದ್ದರೆ ಆತನು ನಂತರ ನರಕದಲ್ಲಿ ಹುಟ್ಟುತ್ತಿದ್ದನು; ಹೀಗಾಗಿ ನಾನು ನಿಮಗೆ 'ಏಳು ದಿನಗಳ ಕಾಲ ಪಕ್ಕಕ್ಕಿಡಿ' ಎಂದು ಆಜ್ಞಾಪಿಸಿದೆನು. ಆದರೆ ಆತನು ಈಗ ತುಸಿತಾ ದೇವನಾಗಿ
ಹುಟ್ಟಿದ್ದಾನೆ. ಹೀಗಾಗಿ ನಾನು ನಿಮಗೆ ಹಂಚಿಕೊಳ್ಳಲು ಆಜ್ಞಾಪಿಸಿದೆನು."
"ಭಿಕ್ಷುಗಳೇ, ತೃಷ್ಣೆಯು ಲೋಕದಲ್ಲಿ ದುಃಖಕಾರಿಯಾಗಿದೆ. ಹೇಗೆ ತುಕ್ಕು
ಕಬ್ಬಿಣವನ್ನೇ ತಿಂದುಹಾಕುವುದೋ ಹಾಗೆಯೇ ಅತಿ ಆಸಕ್ತಿಯು (ತೃಷ್ಣೆಯು) ಜೀವಿಗಳಲ್ಲಿ ಉಂಟಾದಾಗ
ಜೀವಿಗಳು ದುಃಖ ಮತ್ತು ನರಕ ಇತ್ಯಾದಿ ಅನುಭವಿಸುತ್ತಾರೆ" ಎಂದು ನುಡಿದು ಈ ಮೇಲಿನ ಗಾಥೆ
ನುಡಿದರು.
No comments:
Post a Comment