ಮೈತ್ರಿಯಿಂದ
ಕೋಪವನ್ನು ಜಯಿಸು
"ಅಕ್ರೋಧದಿಂದ ಕ್ರೋಧವನ್ನು
ಜಯಿಸು,
ಅಸಾಧುವಾದುದನ್ನು
(ಕೆಟ್ಟದ್ದನ್ನು) ಒಳ್ಳೆಯತನದಿಂದ ಜಯಿಸು,
ಜಯಿಸು, ಜಿಪುಣನನ್ನು ದಾನದಿಂದಲೇ
ಸತ್ಯದಿಂದಲೇ
ಸುಳ್ಳುಗಾರರನ್ನು ಜಯಿಸು." (223)
ಗಾಥ ಪ್ರಸಂಗ 17:3
ಉತ್ತರಾಳ ಮೈತ್ರಿಯ
ಮಹಾನ್ ಶಕ್ತಿ
ರಾಜಗೃಹದ ವಾಸಿಯಾಗಿದ್ದ ಉತ್ತರಾಳು ರೈತ
ಪುಣ್ಯನ ಮಗಳಾಗಿದ್ದಳು. ಪುಣ್ಣ (ಪುಣ್ಯ)ನು ಶ್ರೀಮಂತ ಸುಮನನಲ್ಲಿ ಕೆಲಸ ಮಾಡುತ್ತಿದ್ದನು.
ಒಂದುದಿನ ಪುಣ್ಯ ಮತ್ತು ಆತನ ಹೆಂಡತಿ ಪೂಜ್ಯ ಸಾರಿಪುತ್ತರಿಗೆ ಆಹಾರವನ್ನು ನೀಡಿದರು. ಆಗ
ಸಾರಿಪುತ್ರರು ಆಗಷ್ಟೇ 'ನಿರೋಧ ಸಮಾಪತ್ತಿ'ಯಿಂದ ಹೊರಬಂದಿದ್ದರು. (ನಿರೋಧ ಸಮಾಪತ್ತಿ ಎಂದರೆ ನಿಬ್ಬಾಣ
ಸಾಕ್ಷಾತ್ಕಾರವೇ ಆಗಿದೆ). ಆಗ ನೀಡಿದ ದಾನದಿಂದಾಗಿ ಮಹತ್ಫಲ ಸಿಗುವುದು. ಹೀಗಾಗಿ ಪುಣ್ಣ ಆ ಪುಣ್ಯ
ಫಲದಿಂದಾಗಿ ತಕ್ಷಣವೇ ಶ್ರೀಮಂತನಾಗಿಬಿಟ್ಟನು. ಆತನು ಹೊಲದಲ್ಲಿ ಹೂಳುತ್ತಿರುವಾಗ ಆತನಿಗೆ
ಚಿನ್ನವು ಸಿಕ್ಕತು. ಮತ್ತು ರಾಜನು ಸಹಾ ಆತನಿಗೆ ಅಧಿಕೃತವಾಗಿ ರಾಜಸರಾಫನೆಂದು ಘೋಷಿಸಿಬಿಟ್ಟನು.
ಒಂದು ಸಂದರ್ಭದಲ್ಲಿ ಪುಣ್ಯನ ಕುಟುಂಬವು ಭಗವಾನರಿಗೆ ಮತ್ತು ಭಿಕ್ಷುಗಳಿಗೆ ಏಳು ದಿನಗಳ ಕಾಲ
ಆತಿಥ್ಯ ನೀಡಿತು. ಹಾಗು ಏಳನೆಯ ದಿನದಂದು ಭಗವಾನರ ಬೋಧನೆ ಆಲಿಸಿ ಆ ಕುಟುಂಬದ ಮೂವರು ಸೋತಪತ್ತಿ
ಫಲದಲ್ಲಿ ಪ್ರತಿಷ್ಠಿತರಾದರು. ನಂತರ ಉತ್ತರಾಳು ಶ್ರೀಮಂತ ಸುಮನನ ಮಗನೊಂದಿಗೆ ವಿವಾಹವಾದಳು. ಆದರೆ
ಅವರು ಬೌದ್ಧರಾಗಿರಲಿಲ್ಲ. ಹೀಗಾಗಿ ಉತ್ತರಾಳು ಅಲ್ಲಿ ಸಂತೃಪ್ತವಾಗಿರಲಿಲ್ಲ. ಒಮ್ಮೆ ಆಕೆ ತನ್ನ
ತಂದೆಯೊಂದಿಗೆ ಹೀಗೆ ಹೇಳಿದಳು: "ಅಪ್ಪಾ, ನನಗೇಕೆ ಇಂತಹ ಪಂಜರದಲ್ಲಿ ಹಾಕಿಬಿಟ್ಟೆ. ಇಲ್ಲಿ ನಾನು ಯಾವ ಭಿಕ್ಷುವನ್ನು ನೋಡಿಲ್ಲ ಹಾಗು
ಯಾವ ಭಿಕ್ಷುವಿಗೂ ದಾನವನ್ನೇ ನೀಡಿಲ್ಲ" ಈ ಮಾತುಗಳನ್ನು ಕೇಳಿ ತಂದೆಗೂ ಅನುಕಂಪವಾಗಿ ಆತನು
ಮಗಳಿಗಾಗಿ 15000 ರೂ.ಗಳನ್ನು ನೀಡಿದನು. ಗಂಡನ ಅಪ್ಪಣೆ ಪಡೆದು ಈ ಹಣದಿಂದ ಆಕೆಯು ಪತಿಗಾಗಿ
ಸಿರಿಮಾ ಎಂಬ ವಾರಾಂಗನೆಯನ್ನು ಏಪರ್ಾಟು ಮಾಡಿ 15 ದಿನಗಳ ಕಾಲ ಪತಿಗೆ ಸೇವೆ ಮಾಡಲು ಆಕೆಗೆ
ನೇಮಿಸಿದಳು.
ನಂತರ ಉತ್ತರಾಳು ತಾನು 15 ದಿನಗಳ ಕಾಲ
ಭಗವಾನರಿಗೆ ಮತ್ತು ಭಿಕ್ಷುಗಳಿಗೆ ಆಹಾರ ದಾನ ನೀಡಿದಳು. 15ನೇ ದಿನದಂದು ಆಕೆಯು ಅಡುಗೆ ಮನೆಯಲ್ಲಿ
ಆಹಾರ ಸಿದ್ಧಪಡಿಸುತ್ತಿರುವುದನ್ನು ಕಂಡು ಹೀಗೆ ಯೋಚಿಸಿದನು. "ಈ ಉತ್ತರ ಅದೆಷ್ಟು
ಮೂರ್ಖಳಾಗಿದ್ದಾಳೆ, ಈಕೆಗೆ ಸಂತೋಷವಾಗಿರುವುದು
ಹೇಗೆ ಎಂಬುದೇ ತಿಳಿದಿಲ್ಲ. ಕೇವಲ ದಾನಗಳಲ್ಲಿಯೇ ಇರುತ್ತಾಳೆ, ನಂತರ ನಕ್ಕುಬಿಟ್ಟನು. ಆತನು ಉತ್ತರಾಳಿಗೆ ಕಂಡು ನಗೆಬೀರಿದ್ದನ್ನು
ಸಿರಿಮಾ ನೋಡಿದಳು. ಆಕೆಗೆ ಅತಿಯಾದ ಅಸೂಯೆಯು ಉಂಟಾಯಿತು. ತಾನು ಕೇವಲ ಬಾಡಿಗೆ ಪತ್ನಿ ಎಂಬುದನ್ನು
ಆಕೆ ಮರೆತಳು. ಸಿರಿಮಾಳು ಅಡುಗೆ ಮನೆಗೆ ನುಗ್ಗಿ, ಅಲ್ಲಿ ಕುದಿಯುತ್ತಿದ್ದ ಎಣ್ಣೆಯ ಪಾತ್ರೆ ಎತ್ತಿಕೊಂಡಳು. ನಂತರ ಉತ್ತರಾಳ ತಲೆಯ ಮೇಲೆ
ಸುರಿಯುವ ಉದ್ದೇಶದಿಂದ ಅವಳತ್ತ ಧಾವಿಸಿದಳು. ಉತ್ತರಾಳಲ್ಲಿ ಏನೋ ಅಪಾಯ ಮುನ್ಸೂಚನೆ ಉಂಟಾಯಿತು.
ತಕ್ಷಣ ಆಕೆಗೆ ಸಿರಿಮಾಳು ಬಿಸಿಯಾಗಿರುವ ಎಣ್ಣೆಯನ್ನು ಸುರಿಯಲು ಬರುತ್ತಿದ್ದಾಳೆ ಎಂದು
ಅರ್ಥವಾಯಿತು. ತಕ್ಷಣ ಆಕೆಯು ಈ ರೀತಿಯ ಸತ್ಯಕ್ರಿಯೆ ಮಾಡಿದಳು "ನನ್ನಲ್ಲಿ ಸಿರಿಮಾಳ ಮೇಲೆ
ಯಾವುದೇ ರೀತಿಯ ದ್ವೇಷವೂ ಇಲ್ಲ, ಈ ಸತ್ಯವಚನದಿಂದಾಗಿ ನನಗೆ ಯಾವುದೇ ಸುಡುವ ಅನುಭವ ಆಗದಿರಲಿ, ಹಾಗೊಂದು ವೇಳೆ ನಾನು ಸಿರಿಮಾಳಿಗೆ ದ್ವೇಷಿಸಿದ್ದೇ ಆಗಿದ್ದರೆ,
ಈ ಬಿಸಿ ಎಣ್ಣೆಯ ನನಗೆ ಸುಡಲಿ". ಆಗ ಸಿರಿಮಾಳು
ಬಿಸಿಯಾದ ಎಣ್ಣೆಯನ್ನು ಉತ್ತರಾಳ ತಲೆಯ ಮೇಲಿಂದ ಸುರಿದೇಬಿಟ್ಟಳು. ಆಶ್ಚರ್ಯ ! ಆ ಬಿಸಿ ಎಣ್ಣೆಯು
ಆಕೆಗೆ ಅಣುಮಾತ್ರವೂ ಹಾನಿ ಉಂಟುಮಾಡಿರಲಿಲ್ಲ. ಅದು ಸತ್ಯವೇ ಆಗಿತ್ತು. ಹೀಗಾಗಿಯೇ ಉತ್ತರಾಳ
ಮೈತ್ರಿ, ದ್ವೇಷರಹಿತತೆ, ಸತ್ಯಕ್ರಿಯೆ ಸಮ್ಮಿಲನಗೊಂಡು ಆಕೆಗೆ ಸಂರಕ್ಷಿಸಿತು.
ಆದ್ದರಿಂದಲೇ ಆಕೆಗೆ ಬಿಸಿ ಎಣ್ಣೆಯು ಸಹಾ ತಣ್ಣೀರಿನಂತೆ ಅನುಭವವಾಯಿತು. ಆಗ ಸಿರಿಮಾಳು "ಈ
ಎಣ್ಣೆಯು ತಣ್ಣದ್ದಾಗಿರಬೇಕು, ಆದ್ದರಿಂದಲೇ ಆಕೆಗೆ ಏನೂ ಆಗಲಿಲ್ಲ" ಎಂದು ಭಾವಿಸಿ ಮತ್ತೊಂದು ಪಾತ್ರೆಯ ಬಿಸಿಯಾದ
ಎಣ್ಣೆಯನ್ನು ಎತ್ತಿಕೊಳ್ಳಲು ಹೋದಳು. ತಕ್ಷಣ ಉತ್ತರಾಳ ಸೇವಕಿಯರು ಸಿರಮಾಳನ್ನು ತಡೆದು ಹಿಡಿದು
ಬಾರಿಸಿದರು. ಆಗ ಉತ್ತರಾಳೇ ಅವರನ್ನು ತಡೆದು, ಸಿರಿಮಾಗೆ ಉಪಚಾರ ಮಾಡಿದಳು.
ಆಗ ಸಿರಿಮಾಗೆ ತನ್ನ ನಿಜಸ್ಥಿತಿ
ಅರಿವಾಯಿತು. ಹಾಗು ತಾನು ಉತ್ತರಾಳಿಗೆ ಮಾಡಿದ ಅನ್ಯಾಯಕ್ಕೆ ಪಶ್ಚಾತ್ತಾಪಪಟ್ಟಳು. ಮತ್ತು
ಆಕೆಯಲ್ಲಿ ಕ್ಷಮೆಯಾಚಿಸಿದಳು. ಆಗ ಉತ್ತರಾಳು ಹೀಗೆ ಹೇಳಿದಳು: "ಕೇವಲ ನನ್ನ ಮಹಾತಂದೆಯು
ಒಪ್ಪಿದರೆ ಮಾತ್ರ ನಾನು ನಿನಗೆ ಕ್ಷಮಿಸುವೆ" ಎಂದಳು. ಆಗ ಆಕೆಯು ಆ ಮಹಾತಂದೆಯನ್ನು
ಭೇಟಿಮಾಡಲು ಒಪ್ಪಿದಳು. ಆ ಮಹಾತಂದೆಯು ಬುದ್ಧರಲ್ಲದೆ ಬೇರಾರು ಆಗಿರಲಿಲ್ಲ. ಆಕೆಯು ಜನ್ಮಗಳಿಂದ
ಪಾರುಮಾಡುವ ಬುದ್ಧರನ್ನೇ ತನ್ನ ತಂದೆ ಎಂದು ಮಾಮರ್ಿಕವಾಗಿ ಹೇಳಿದ್ದಳು. ಧಮ್ಮ ಬೋಧಿಸಿದಂತಹ
ಸತ್ಯದ ಅರಿವು ಮೂಡಿಸುವಂತಹ ಬುದ್ಧರನ್ನೇ ಆಕೆಯು ತಂದೆ ಎಂದು ಭಾವಿಸಿದ್ದಳು. ಸಿರಿಮಾಳು
ಬುದ್ಧರನ್ನು ಕಾಣಲು ಇಚ್ಛಿಸಿದಳು. ಹೀಗಾಗಿ ಉತ್ತರಾಳು ಭಗವಾನರಿಗೆ ಮತ್ತು ಭಿಕ್ಷುಗಳಿಗೆ
ಉತ್ತರಾಳ ಮನೆಯಲ್ಲಿಯೇ ಸಿರಿಮಾಳು ದಾನ ಅಪರ್ಿಸುವಂತೆ ಏಪರ್ಾಡು ಮಾಡಿದಳು.
ಭಗವಾನರು ಅಲ್ಲಿಗೆ ಬಂದರು, ಆತಿಥ್ಯವನ್ನು ಪಡೆದರು. ಆಹಾರ ಸೇವನೆಯ ನಂತರ ಸಿರಿಮಾ ಮತ್ತು
ಉತ್ತರಾಳ ನಡುವೆ ನಡೆದುದೆಲ್ಲವನ್ನು ಭಗವಾನರಿಗೆ ತಿಳಿಸಲಾಯಿತು. ನಂತರ ಸಿಮಾಳು ತನ್ನ ಅಪರಾಧಕ್ಕೆ
ಕ್ಷಮೆ ಯಾಚಿಸಿದಳು. ಬುದ್ಧರಲ್ಲಿ ಉತ್ತರಾಳಿಂದ ಕ್ಷಮೆ ನೀಡಿಸಬೇಕೆಂದು ಯಾಚಿಸಿದಳು.
ಆಗ ಭಗವಾನರು ಉತ್ತರಾಳಿಗೆ ಹೀಗೆ
ಪ್ರಶ್ನಿಸಿದರು: "ಓ ಉತ್ತರಾ, ಸಿರಿಮಾಳು ನಿನ್ನ ಮೇಲೆ ಬಿಸಿಯಾದ ಬೆಣ್ಣೆಯ ಎಣ್ಣೆಯು ಸುರಿದಾಗ ಯಾವರೀತಿಯ ಅನುಭೂತಿ ಪಡೆದೆ?"
"ಭಗವಾನ್, ಸಿರಿಮಾಳು ನನ್ನ ದಾನಾದಿ ಪುಣ್ಯಕಾರ್ಯಕ್ಕೆ ಸಹಾಯಕಳಾಗಿಯೇ (ನನ್ನ
ಪತಿಯೊಂದಿಗೆ) ಇದ್ದುದರಿಂದಾಗಿ ನಾನಂತು ಆಕೆಯ ಮೇಲೆ ಕೃತಜ್ಞಳಾಗಿದ್ದೆ ಹೊರತು ಲವಲೇಶವೂ
ಆಕೆಯಲ್ಲಿ ದ್ವೇಷಾಸೂಯೆಯಿಂದ ಕೂಡಿರಲಿಲ್ಲ. ನಾನು ಆಕೆಯಲ್ಲಿ ಮೈತ್ರಿಯುತ ಚಿತ್ತದಿಂದಲೇ
ಇದ್ದೆನು. ಮೈತ್ರಿಯನ್ನು ಆಕೆಯತ್ತ ಪ್ರಸಾರ ಮಾಡುತ್ತಿದ್ದೆನು."
ಆಗ ಭಗವಾನರು ಆಕೆಗೆ ಹೀಗೆ ಪ್ರಶಂಸಿಸಿದರು:
"ಸಾಧು, ಸಾಧು ಉತ್ತರಾ ಸಾಧು,
ಯಾವುದೇ ದ್ವೇಷ ಹೊಂದಿಲ್ಲದೆ ನಿನಗೆ ಹಾನಿ ಮಾಡಿದವರ ಮೇಲೆಯೇ
ಮೈತ್ರಿಯಿಂದ ಜಯಿಸಿರುವ, ನಿನ್ನ ಸಹಾಯ ದಾನಗಳಿಂದ
ಸ್ವಾರ್ಥದಿಂದಿರುವವರ ಮೇಲೆ ಜಯಿಸಿರುವೆ. ಸತ್ಯಕ್ರಿಯೆಯನ್ನು ಆಚರಿಸುತ್ತ ಸತ್ಯವನ್ನೇ ನುಡಿದು
ಸುಳ್ಳಗಾರರನ್ನು ಜಯಿಸಿರುವೆ" ಎಂದು ಹೇಳಿ ಈ ಗಾಥೆಯನ್ನು ನುಡಿದರು. ನಂತರ ಉತ್ತರಾಳು ಈ
ಘಟನೆ ನಡೆದಿರುವಾಗಲೇ ಕ್ಷಮಿಸಿದ್ದಳು. ಆದರೆ ಈಗ ಭಗವಾನರ ಸಮ್ಮುಖದಲ್ಲಿ ಭಗವಾನರ ಆದೇಶದಂತೆ
ಮೌಖಿಕವಾಗಿಯು ಕ್ಷಮಿಸಿದಳು.
No comments:
Post a Comment