ಪರರ
ತಪ್ಪುಗಳು ಸದಾ ಸುದರ್ಶನೀಯ
"ಪರರ ತಪ್ಪುಗಳು
ಸುಲಭವಾಗಿ ದರ್ಶನವಾಗುತ್ತದೆ,
ಆದರೆ ತನ್ನ ತಪ್ಪುಗಳು
ಅತಿಕಷ್ಟಕರವಾಗಿ ದರ್ಶನವಾಗುತ್ತದೆ
ಪರರ ತಪ್ಪುಗಳನ್ನು
ಹೊಟ್ಟಿನಂತೆ ತೂರುವರು, ಆದರೆ
ತನ್ನ ತಪ್ಪುಗಳನ್ನು
ಚಾಲಾಕಿನ ಪಕ್ಷಿ ಬೇಟೆಗಾರನು ಎಲೆ ಮತ್ತು
ಕೊಂಬೆಗಳಲ್ಲಿ
ಅಡಗುವಂತೆ ಮರೆಯಾಗುವನು." (252)
ಗಾಥ ಪ್ರಸಂಗ 18:10
ಮೆಂಡಕನ ಜ್ಞಾನೋದಯ
ಒಮ್ಮೆ ಭಗವಾನರು ಅಂಗ ಮತ್ತು ಉತ್ತರ
ರಾಜ್ಯಗಳ ಕಡೆಗೆ ಪ್ರಯಾಣಿಸಿದ್ದರು. ಅಂದು ಮುಂಜಾನೆಯೇ ಭಗವಾನರಿಗೆ ಮೆಂಡಕ ಶ್ರೇಷ್ಠಿಗೆ
ಜ್ಞಾನೋದಯದ ಕಾಲ (ಸೋತಪತ್ತಿ ಫಲ) ಪಕ್ವವಾಗಿ ಬಂದಿದೆ ಎಂದು ತಿಳಿದುದರಿಂದಾಗಿ ಅವರು
ಭದ್ದಿಯಾನಗರಕ್ಕೆ ಬಂದರು. ಅಲ್ಲಿ ಅಂದು ಮೆಂಡಕ ಮಾತ್ರವಲ್ಲದೆ ಆತನ ಪತ್ನಿ, ಆತನ ಪುತ್ರ, ಆತನ ಸೊಸೆ, ಆತನ ಮೊಮ್ಮಗಳಾದ
ವಿಶಾಖೆ ಮತ್ತು ಸೇವಕನು ಒಟ್ಟಾರೆ ಈ ಆರು ಜನರು ಸೋತಪತ್ತಿ ಫಲ ಪಡೆಯುವರೆಂದು ಭಗವಾನರಿಗೆ
ತಿಳಿದಿತ್ತು.
ಮೆಂಡಕನು ಅತ್ಯಂತ ಶ್ರೀಮಂತ
ವ್ಯಕ್ತಿಯಾಗಿದ್ದನು. ಆತನ ಮನೆಯ ಹಿಂಭಾಗದಲ್ಲಿ ಅಪಾರ ಸಂಖ್ಯೆಯ ಮೇಕೆಯ ಗಾತ್ರದ ಮೇಕೆಯ ಸ್ವರ್ಣ
ವಿಗ್ರಹಗಳು ದೊರೆತವು. ಆದ್ದರಿಂದಲೇ ಆತನನ್ನು ಮೆಂಡಕ (ಮೇಕೆ) ಎಂದು ಎಲ್ಲರೂ ಕರೆಯಲಾರಂಭಿಸಿದರು.
ಅಷ್ಟೇ ಅಲ್ಲದೆ ಆತನು ಹಿಂದಿನ ಜನ್ಮವೊಂದರಲ್ಲಿ ವಿಪ್ಪಸಿ ಬುದ್ಧರಿಗೆ ವಿಹಾರವೊಂದನ್ನು ಮತ್ತು
ಸಭಾಂಗಣವೊಂದನ್ನು ನಿಮರ್ಿಸಿ ದಾನ ನೀಡಿದ್ದನು. ಹಾಗೆಯೇ ನಾಲ್ಕು ತಿಂಗಳಿನ ಕಾಲ ವಿಪ್ಪಸ
ಬುದ್ಧರಿಗೆ ಮತ್ತು ಸಂಘಕ್ಕೆ ದಾನ ನೀಡಿದ್ದನು. ಮೆಂಡಕನು ತನ್ನ ಇನ್ನೊಂದು ಹಿಂದಿನ ಜನ್ಮದಲ್ಲಿ
ಬನಾರಸ್ನ ಶ್ರೀಮಂತನಾಗಿದ್ದನು. ಆಗ ಎಲ್ಲೆಡೆ ಬರಗಾಲ ಆಕ್ರಮಿಸಿತ್ತು. ಒಂದುದಿನ ಅವರು ತನ್ನ
ಕುಟುಂಬಕ್ಕೆ ಸಾಕಾಗುವಷ್ಟು ಆಹಾರವನ್ನು ಅಡುಗೆ ಮಾಡಿದ್ದರು. ಆಗ ಆ ಸಮಯದಲ್ಲಿ ಪಚ್ಚೇಕ ಬುದ್ಧರು
ದ್ವಾರದ ಬಳಿಗೆ ಬಂದರು. ಆಗ ಮೆಂಡಕನು ಇಡೀ ಆಹಾರವೆಲ್ಲಾ ಆ ಪಚ್ಚೇಕ ಬುದ್ಧರಿಗೆ ಅಪರ್ಿಸಿದರು. ಆಗ
ಆತನ ಶ್ರದ್ಧೆಯಿಂದಾಗಿ ಹಾಗು ಪಚ್ಚೇಕ ಬುದ್ಧರ ಬಲದಿಂದಾಗಿ ಆ ಆಹಾರ ಪಾತ್ರೆಯು ಪುನಃ ತುಂಬಿತು.
ಅಷ್ಟೇ ಅಲ್ಲ, ಆತನ ಆಹಾರ
ಉಗ್ರಾಣವೆಲ್ಲಾ ದಾನ್ಯಗಳಿಂದ ತುಂಬಿತು.
ಮೆಂಡಕನ ಕುಟುಂಬದವರು ಭದ್ದಿಯಾನಗರಕ್ಕೆ
ಭಗವಾನರು ಬರುವುದನ್ನು ಕೇಳಿದರು. ಅವರೆಲ್ಲರೂ ಭಗವಾನರಿಗೆ ವಂದಿಸಲು ಹೊರಟರು. ಆಗ ದಾರಿಯಲ್ಲಿ
ಅವರಿಗೆ ಅನ್ಯಮತದವರು ಹೀಗೆ ಹೇಳಿದರು: "ಓ ಗೃಹಸ್ಥನೇ, ನಿನಗೆ ಏನಾಗಿದೆ. ನೀನು ಶಾಶ್ವತ ಆತ್ಮಗಳನ್ನು ನಂಬುವವನಾಗಿದ್ದು,
ಶಾಶ್ವತವಾದ ನಿತ್ಯ ಶುದ್ಧ ನಿತ್ಯಮುಕ್ತ ಆತ್ಮವನ್ನು ನಂಬದ
ಗೋತಮ ಬುದ್ಧರ ಬಳಿಗೆ ಹೋಗುವೆಯಾ?" ಹೀಗೆ ಹಲವಾರು ರೀತಿಯಲ್ಲಿ ಆತನ ಉದ್ದೇಶವನ್ನು ನಿರುತ್ಸಾಹಗೊಳಿಸಿದರು. ಅವರು ಆ
ಮತಾವಲಂಬಿಗಳು ಏನೆಲ್ಲಾ ಹೇಳಿದರೂ ಸಹಾ ಆತನು ಕುಟುಂಬ ಸಮೇತ ಭಗವಾನರನ್ನು ವಂದಿಸಿ ಭೇಟಿಮಾಡಿದನು.
ನಂತರ ಗೌರವಯುತವಾಗಿ ಒಂದೆಡೆ ಕುಳಿತನು. ನಂತರ ಭಗವಾನರು ಆತನಿಗೆ ಕ್ರಮವಾಗಿ ಧಮ್ಮವನ್ನು
ಬೋಧಿಸಿದರು. ಆಗ ಆ ಬೋಧನೆಯನ್ನು ಆಲಿಸಿ ಮೆಂಡಕ, ಆತನ ಪತ್ನಿ ಚಂದಪದುಮಾ, ಮಗ ದನಂಜಯ, ಸೊಸೆ ಸುಮನದೇವಿ,
ಮೊಮ್ಮಗಳು ವಿಸಾಖಾ ಮತ್ತು ಸೇವಕ ಪುಣ್ಣ ಈ ಆರು ಜನರು
ಸೋತಪತ್ತಿ ಫಲ ಪಡೆದರು. ಜ್ಞಾನೋದಯ ಹೊಂದಿದರು. ಆಗ ಮೆಂಡಕನು ಭಗವಾನರಿಗೆ ದಾರಿಯಲ್ಲಿ ಬೇರೆ ಮತಾವಲಂಬಿಗಳಿಂದ ಆದ ತಡೆಗಳನ್ನು, ಆರೋಪಗಳನ್ನು ತಿಳಿಸಿದನು.
ಆಗ ಭಗವಾನರು ಆತನಿಗೆ ಹೀಗೆ ನುಡಿದರು:
"ಶಿಷ್ಯನೇ, ಜನರಿಗೆ ತಮ್ಮ ದೋಷಗಳು
ಅರಿವಿಗೆ ಬರವು, ಅವರು ಸದಾ ಪರರ ಕೊರತೆ
ಮತ್ತು ತಪ್ಪುಗಳನ್ನು ಹೇಳುವುದರಲ್ಲಿ ತಲ್ಲೀನರಾಗಿದ್ದಾರೆ. ಇದು ಸ್ವಾಭಾವಿಕವಾಗಿದೆ" ಎಂದು
ನುಡಿದು, ಈ ಮೇಲಿನ ಗಾಥೆಯನ್ನು ನುಡಿದರು.
No comments:
Post a Comment