ಪರದೋಷಿಯು
ಅಸವಕ್ಷಯಕ್ಕೆ ದೂರ
"ಯಾರು ಪರರ
ದೋಷಗಳನ್ನೇ ಕಾಣುತ್ತಿರುವನೋ,
ನಿತ್ಯ ರೇಗುತ್ತಾ
ಪರರಲ್ಲಿ ಅಪಹಾಸ್ಯ ಮಾಡುವನೋ,
ಅಂತಹವನ ಆಸವಗಳು
(ಕಲ್ಮಶಗಳು) ವಧರ್ಿಸುತ್ತವೆ,
ಆತನು ಆಸವ ಕ್ಷಯದಿಂದ
(ಕಲ್ಮಶ ಕ್ಷಯಕ್ಕೆ) ದೂರವೇ ಇರುತ್ತಾನೆ." (253)
ಗಾಥ ಪ್ರಸಂಗ 18:11
ಉಜ್ಝಾನಸನ್ನಿಯ ದೋಷ
ಹುಡುಕುವಿಕೆ
ಭಂತೆ, ಉಜ್ಝಾನಸನ್ನಿಯು ಸದಾ ಪರರಲ್ಲಿ ದೋಷವನ್ನು ಹುಡಕುತ್ತಾ, ಸದಾ ಪರರನ್ನು ಹಳಿಯುತ್ತಿದ್ದನು. ಭಿಕ್ಷುಗಳು ಈ ವಿಷಯವನ್ನು
ಭಗವಾನರಿಗೆ ತಿಳಿಸಿದರು. ಆಗ ಭಗವಾನರು ಹೀಗೆ ನುಡಿದರು:
"ಭಿಕ್ಷುಗಳೇ, ಯಾರಾದರೊಬ್ಬರು ಪರರಲ್ಲಿ ದೋಷ ಕಂಡು, ಆತನಲ್ಲಿ ಅನುಕಂಪವುಳ್ಳವನಾಗಿ, ಆತನಿಗೆ ಉತ್ತಮವಾದ ರೀತಿಯಲ್ಲಿ ತಿಳಿಸಿ, ತಿದ್ದಿದರೆ ಅದು ಪಾಪವಲ್ಲ, ಹಾಗು ಅದು ಖಂಡನೀಯವೂ ಅಲ್ಲ. ಆದರೆ ಯಾರಾದರೂ ಒಬ್ಬನು ಸದಾ ಪರರಲ್ಲಿ
ದೋಷ ಹುಡುಕುತ್ತಾ, ಪರರನ್ನು ಹಳಿಯುತ್ತಾ,
ಕೇವಲ ತನ್ನ ಸ್ವಪ್ರತಿಷ್ಠೆ ಮತ್ತು ಪರರನ್ನು ಕೀಳು ಮಾಡುವ
ಉದ್ದೇಶದಿಂದ ನೋವು ಮಾಡುವ ಉದ್ದೇಶದಿಂದ ಕೂಡಿದ್ದರೆ ಆತನು ಅಸಮಾನ ಮೇಲು-ಕೀಳು ಮಾಡುವಂತೆ
ತಪ್ಪನ್ನು ತೋರಿಸಿದರೆ ಅದು ಪಾಪವಾಗುತ್ತದೆ ಮತ್ತು ಖಂಡನೀಯವೂ ಆಗುವುದು. ಅಂತಹವನಿಗೆ
ಧ್ಯಾನಸಿದ್ಧಿಯಾಗಲಾರದು, ಅಂತಹವ ಧಮ್ಮವನ್ನು
ಅರಿಯಲಾರನು ಹಾಗು ಅಂತಹವನ ಆಸವಗಳು ವಧರ್ಿಸುತ್ತವೆ" ಎಂದು ಹೇಳಿ ಈ ಮೇಲಿನ ಗಾಥೆಯನ್ನು
ನುಡಿದರು.
No comments:
Post a Comment