Sunday 15 March 2015

dhammapada/arahantavagga/7.6/saariputta

ಪೃಥ್ವಿಯಂತೆ ಅರಹಂತರು ಸಹಾ ಕ್ಷಮಾಶೀಲರು
ಪೃಥ್ವಿಯಂತೆ ಯಾರು ವಿರೋಧವಿಲ್ಲದವನೋ, ಇಂದ್ರಕೀಲದಂತೆ ಯಾರು ಸ್ಥಿರ, ಸುಚಾರಿತ್ರ್ಯನೋ, ಕೆಸರು ಮುಕ್ತ ಸರೋವರದಂತೆ ಪರಿಶುದ್ಧನೋ, ಅಂತಹ ಅಚಲನಿಗೆ ಸಂಸಾರದಲ್ಲಿ ಮುಂದಿನ ಭವವಿಲ್ಲ.      (95)
ಗಾಥ ಪ್ರಸಂಗ 7.6
ಸಾರಿಪುತ್ತರ ಕ್ಷಮಾಶಕ್ತಿ

                ಸಾರಿಪುತ್ತರು ಎಲ್ಲರೊಂದಿಗೆ ಮೈತ್ರಿಯಿಂದ ಕೂಡಿರುತ್ತಿದ್ದರು. ಒಮ್ಮೆ ವರ್ಷವಾಸ ಮುಗಿದನಂತರ ಎಲ್ಲರೂ ಒಂದೇ ಸ್ಥಳದಿಂದ ಬೇರೆ ಬೇರೆ ಸ್ಥಳಗಳಿಗೆ ಹೊರಡತೊಡಗಿದರು. ಅಂತಹ ಸಮಯದಲ್ಲಿ ಸಾರಿಪುತ್ತರು ಎಲ್ಲರೊಂದಿಗೆ ವಿದಾಯ ಹೇಳಿದರು. ಆದರೆ ಒಬ್ಬನನ್ನು ಗಮನಿಸಲಿಲ್ಲ. ಆತನು ಸಾರಿಪುತ್ತರು ತನಗೆ ನಿರ್ಲಕ್ಷಿಸಿದ್ದಾರೆ ಎಂದು ಕುಪಿತನಾದನು. ಆದರೆ ಜೊತೆಗೆ ಸಾರಿಪುತ್ತರವರು ಹೋಗುವಾಗ ಕುಪಿತ ಬಿಕ್ಷುವಿನ ಕಿವಿಗೆ ಸಾರಿಪುತ್ತರವರ ಬಟ್ಟೆಯ ಅಂಚು ತಾಗಿತು. ಇದರಿಂದ ಆತನು ಮತ್ತಷ್ಟು ಕುಪಿತನಾಗಿ ಬುದ್ಧರ ಬಳಿಗೆ ಬಂದು ಸಾರಿಪುತ್ತರ ಬಗ್ಗೆ ಈ ರೀತಿ ಚಾಡಿ ಹೇಳಿದನು ಭಗವಾನ್, ಸಾರಿಪುತ್ತರವರು ನಿಸ್ಸಂಶಯವಾಗಿ ನಾನು ಅಗ್ರ ಶಿಷ್ಯ ಎಂದು ಅಹಂಭಾವಪಡುತ್ತಾರೆ ಮತ್ತು ಅವರು ನನಗೆ ಹೊಡೆದಿದ್ದಾರೆ, ನನ್ನ ಕಿವಿಗೆ ಗಾಯವಾಗಿದೆ. ಈ ರೀತಿ ಮಾಡಿಯೂ ಸಹಾ ಅವರು ನನ್ನೊಂದಿಗೆ ಕ್ಷಮೆಯಾಚಿಸಲಿಲ್ಲ. ಅವರು ಆಹಾರಕ್ಕೆ ಹೊರಟೇ ಹೋದರು ಎಂದು ದೂರನ್ನು ನೀಡಿದನು.
                ಆಗ ಭಗವಾನರು ಸಾರಿಪುತ್ತರನ್ನು ಕರೆಯಿಸಿ ವಿಚಾರಿಸಿದರು. ಅವರು ತಮ್ಮ ಮುಗ್ದತೆ ಈ ರೀತಿ ವ್ಯಕ್ತಪಡಿಸಿದರು ಭಗವಾನ್ ನಾನು ಭಿಕ್ಷುವಾಗಿದ್ದೇನೆ. ನಾನು ಸದಾ ಕಾಯದಲ್ಲಿ ಮನಸ್ಸಿರುವವನಾಗಿದ್ದೇನೆ, ಒಂದುವೇಳೆ ತಪ್ಪು ಎಸಗಿದಲ್ಲಿ ನಾನು ಖಂಡಿತ ಕ್ಷಮೆಯಾಚಿಸುತ್ತಿದ್ದೆನು, ನಾನು ಪೃಥ್ವಿಯಂತೆ ಸಹನಾಶೀಲನಾಗಿದ್ದೇನೆ. ಹೇಗೆ ಪೃಥ್ವಿಗೆ ಎಂತಹ ಕಲ್ಮಶಗಳನ್ನು ಎಷ್ಟೇ ಎಸೆದರೂ ಶಾಂತವಾಗಿರುವುದೋ ಹಾಗೆಯೇ ನಾನು ಇದ್ದೇನೆ. ನಾನು ಬಾಗಿಲಿನ ಗೋಣಿ ಚಾಪೆಯಂತೆ, ಭಿಕ್ಷುಕನಂತೆ, ಕೊಂಬಿಲ್ಲದ ಗೂಳಿಯಂತೆ, ನಾನು ಅಶುಭಾಧ್ಯಾನ ಮಾಡುವವ, ಈ ದೇಹಕ್ಕೆ ನಾನು ಅಂಟಿಲ್ಲ, ಅರಿವಿಲ್ಲದೆ ಏನೋ ತಪ್ಪಾಗಿರಬಹುದು ಎಂದು ಅತ್ಯಂತ ವಿಧೇಯದಿಂದ ಈ ರೀತಿ ಹೇಳಿಕೊಂಡರು.
                ಯಾವಾಗ ಪೂಜ್ಯ ಸಾರಿಪುತ್ತರು ತಮ್ಮ ಸದ್ಗುಣಗಳನ್ನು ಈ ರೀತಿ ಪ್ರಕಟಪಡಿಸಿದಾಗ, ದೂರು ನೀಡಿದ ಭಿಕ್ಷುವಿಗೆ ಅಪಾರ ಪಶ್ಚಾತ್ತಾಪವುಂಟಾಯಿತು. ಆತನು ಬುದ್ಧರ ಕಾಲಿಗೆ ಬಿದ್ದು ತಾನು ಸುಳ್ಳು ಮತ್ತು ಚಾಡಿ ನುಡಿದೆನು ಎಂದು ಕ್ಷಮೆಯಾಚಿಸಿದನು. ಆಗ ಭಗವಾನರು ಸಾರಿಪುತ್ತರಿಗೆ ಈ ರೀತಿ ಹೇಳಿದರು ಸಾರಿಪುತ್ತ, ಈ ದಡ್ಡನಿಗೆ ಕ್ಷಮಿಸಿಬಿಡು, ಇಲ್ಲದೆ ಹೋದರೆ ಈತನ ತಲೆಯು ಏಳು ಭಾಗವಾಗಿ ಸೀಳಿಹೋಗುತ್ತದೆ ಎಂದರು. ಆಗ ಸಾರಿಪುತ್ತರು ಆತನ ಎದುರು ಬಾಗಿ, ಕೈಜೋಡಿಸಿ ಪೂಜ್ಯರೆ, ನಾನು ಈ ಪೂಜ್ಯ ಭಿಕ್ಷುವಿಗೆ ಕ್ಷಮಿಸಿರುವೆನು, ಹಾಗೆಯೇ ಈ ಭಿಕ್ಷುವೂ ಸಹ ನನ್ನಿಂದ ಅಚಾತುರ್ಯದಿಂದ ತಪ್ಪಾಗಿದ್ದರೆ ಕ್ಷಮಿಸಲಿ ಎಂದರು. ಆತನು ಪಶ್ಚಾತ್ತಾಪದಿಂದ ಕ್ಷಮೆಯಾಚಿಸಿದನು.

                ನಂತರ ಈ ವಿಷಯ ಭಿಕ್ಷುಗಳಲ್ಲಿ ಚಚರ್ೆಯ ವಿಷಯವಾಯಿತು. ಎಲ್ಲರೂ ಸಾರಿಪುತ್ತರ ಕ್ಷಮಾಶೀಲತೆಯ ಗುಣಗಾನ ಮಾಡಿದರು. ಅಲ್ಲಿಗೆ ಬಂದ ಭಗವಾನರು ಭಿಕ್ಷುಗಳಲ್ಲಿ ಯಾವ ವಿಷಯವನ್ನು ಚಚರ್ಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು. ಅದಕ್ಕೆ ಭಿಕ್ಷುಗಳು ಉತ್ತರಿಸಿದಾಗ, ಭಗವಾನರು ಸಾರಿಪುತ್ತರಿಗೆ ಹೊಗಳುತ್ತಾ ಈ ಮೇಲಿನ ಗಾಥೆ ನುಡಿದರು. 

No comments:

Post a Comment