Sunday 15 March 2015

dhammapada/arahantavagga/7.10/temptation

ಅರಹಂತರಿರುವ ಅರಣ್ಯವೂ ಸಹಾ ರಮಣೀಯವೇ
ಜನ ರಮಿಸಲಾಗದ ಅರಣ್ಯವು ರಮಣೀಯವಾದುದ್ದು, ಅಲ್ಲಿ ಕೇವಲ ವೀತರಾಗ (ವೈರಾಗ್ಯ)ರು ಮಾತ್ರ ರಮಿಸುವರು, ಏಕೆಂದರೆ ಅವರು ಕಾಮಗಳನ್ನು ಹುಡುಕುವುದಿಲ್ಲ.   (99)
ಗಾಥ ಪ್ರಸಂಗ 7.10
ಭಿಕ್ಷುಗಳಿಗೆ ಪ್ರಲೋಭನೆ

                ಭಿಕ್ಷುವೊಬ್ಬನು ಬುದ್ಧರಿಂದ ಧ್ಯಾನದ ವಿಷಯ ಪಡೆದುಕೊಂಡು ಉದ್ಯಾನವನದಲ್ಲಿ ಧ್ಯಾನದಲ್ಲಿ ತಲ್ಲೀನನಾದನು. ಅಲ್ಲಿ ಸಂಶಯಸ್ಥ ಚಾರಿತ್ರ್ಯದ ಸ್ತ್ರೀಯೊಬ್ಬಳು ಅಡ್ಡಾಡುತ್ತಾ ಅಲ್ಲಿಗೆ ಬಂದಳು. ಭಿಕ್ಷುವು ಧ್ಯಾನಿಸುವುದನ್ನು ಕಂಡು ಆತನಿಗೆ ಚಾಂಚಲ್ಯವನ್ನುಂಟು ಮಾಡಲು ನಾನಾರೀತಿಯಲ್ಲಿ ಆಸಕ್ತಿ ಹುಟ್ಟಿಸಲು ಪ್ರಯತ್ನಿಸಿದಳು. ಆಗ ಆ ಭಿಕ್ಷುವು ಇದರ ಅರ್ಥ ಏನು ಎಂದು ಧ್ವಂದ್ವದಲ್ಲಿ ಸಿಲುಕಿದನು.

                ಆಗ ಭಗವಾನರಿಗೆ ಈ ಭಿಕ್ಷು ಅಪಾಯದಲ್ಲಿರುವುದನ್ನು ಕಂಡು ತಮ್ಮ ಪ್ರತಿಬಿಂಬದ ಕಿರಣ ಅಲ್ಲಿಗೆ ಕಳುಹಿಸಿ ಪ್ರತ್ಯಕ್ಷರಾಗಿ ಮೇಲಿನ ಗಾಥೆ ತಿಳಿಸಿ ಆತನಿಗೆ ನಿಯಂತ್ರಿಸಿದರು. ನಂತರ ಆ ಭಿಕ್ಷುವು ಅರಹಂತನಾದನು

No comments:

Post a Comment