Sunday, 15 March 2015

dhammapada/arahantavagga/7.10/temptation

ಅರಹಂತರಿರುವ ಅರಣ್ಯವೂ ಸಹಾ ರಮಣೀಯವೇ
ಜನ ರಮಿಸಲಾಗದ ಅರಣ್ಯವು ರಮಣೀಯವಾದುದ್ದು, ಅಲ್ಲಿ ಕೇವಲ ವೀತರಾಗ (ವೈರಾಗ್ಯ)ರು ಮಾತ್ರ ರಮಿಸುವರು, ಏಕೆಂದರೆ ಅವರು ಕಾಮಗಳನ್ನು ಹುಡುಕುವುದಿಲ್ಲ.   (99)
ಗಾಥ ಪ್ರಸಂಗ 7.10
ಭಿಕ್ಷುಗಳಿಗೆ ಪ್ರಲೋಭನೆ

                ಭಿಕ್ಷುವೊಬ್ಬನು ಬುದ್ಧರಿಂದ ಧ್ಯಾನದ ವಿಷಯ ಪಡೆದುಕೊಂಡು ಉದ್ಯಾನವನದಲ್ಲಿ ಧ್ಯಾನದಲ್ಲಿ ತಲ್ಲೀನನಾದನು. ಅಲ್ಲಿ ಸಂಶಯಸ್ಥ ಚಾರಿತ್ರ್ಯದ ಸ್ತ್ರೀಯೊಬ್ಬಳು ಅಡ್ಡಾಡುತ್ತಾ ಅಲ್ಲಿಗೆ ಬಂದಳು. ಭಿಕ್ಷುವು ಧ್ಯಾನಿಸುವುದನ್ನು ಕಂಡು ಆತನಿಗೆ ಚಾಂಚಲ್ಯವನ್ನುಂಟು ಮಾಡಲು ನಾನಾರೀತಿಯಲ್ಲಿ ಆಸಕ್ತಿ ಹುಟ್ಟಿಸಲು ಪ್ರಯತ್ನಿಸಿದಳು. ಆಗ ಆ ಭಿಕ್ಷುವು ಇದರ ಅರ್ಥ ಏನು ಎಂದು ಧ್ವಂದ್ವದಲ್ಲಿ ಸಿಲುಕಿದನು.

                ಆಗ ಭಗವಾನರಿಗೆ ಈ ಭಿಕ್ಷು ಅಪಾಯದಲ್ಲಿರುವುದನ್ನು ಕಂಡು ತಮ್ಮ ಪ್ರತಿಬಿಂಬದ ಕಿರಣ ಅಲ್ಲಿಗೆ ಕಳುಹಿಸಿ ಪ್ರತ್ಯಕ್ಷರಾಗಿ ಮೇಲಿನ ಗಾಥೆ ತಿಳಿಸಿ ಆತನಿಗೆ ನಿಯಂತ್ರಿಸಿದರು. ನಂತರ ಆ ಭಿಕ್ಷುವು ಅರಹಂತನಾದನು

dhammapada/arahantavagga/7.9/revata

ಅರಹಂತರ ವಾಸಸ್ಥಳ ರಮಣೀಯವಾದುದು
ಗ್ರಾಮದಲ್ಲೇ ಆಗಲಿ, ಅರಣ್ಯದಲ್ಲೇ ಆಗಲಿ, ಕಣಿವೆಯಲ್ಲೇ ಆಗಲಿ ಅಥವಾ ಬೆಟ್ಟದಲ್ಲೇ ಆಗಲಿ, ಎಲ್ಲೆಲ್ಲಿ ಅಹರಂತರು ವಿಹರಿಸುವರೋ ಆ ಭೂಮಿಯೆಲ್ಲಾ ಅತಿ ರಮಣೀಯವಾಗಿರುತ್ತದೆ.           (98)
ಗಾಥ ಪ್ರಸಂಗ 7.9
ಸಾರಿಪುತ್ತರ ಕೊನೆಯ ತಮ್ಮ ರೇವತ

                ರೇವತರು ಸಾರಿಪುತ್ತರ ಕೊನೆಯ ತಮ್ಮನಾಗಿದ್ದರು. ಆತನ ಮನೆಯಲ್ಲೇ ಆತನ ಹೊರತು ಎಲ್ಲರೂ ಭಿಕ್ಷುಗಳಾಗಿದ್ದರು. ಆದ್ದರಿಂದಾಗಿ ಆತನ ತಂದೆ-ತಾಯಿಗಳು ತುಂಬಾ ಕಾಳಜಿಯಿಂದ ಆತನ ವಿವಾಹಕ್ಕೆ ಸಿದ್ಧತೆ ನಡೆಸುತ್ತಿದ್ದರು. ರೇವತ ಇನ್ನೂ 12 ವರ್ಷದವನಾಗಿದ್ದನು. ಆತನಿಗೆ ಎಳೆಯ ಕನ್ಯೆಯೊಡನೆ ನಿಶ್ಚಿತಾರ್ಥ ಮಾಡುತ್ತಿದ್ದರು. ಆಗ ಅವರಿಗೆ ದೀಘರ್ಾಯುವಾಗುವಂತೆ ಹರಸಿದರು. ಅದೇವೇಳೆ 125 ವರ್ಷದ ಮುದುಕಿಯನ್ನು ಬಾಲಕ ರೇವತ ವೀಕ್ಷಿಸಿದನು. ತಕ್ಷಣ ಆತನಿಗೆ ಎಲ್ಲಾ ಜೀವಿಗಳು ವೃದ್ಧಾಪ್ಯಕ್ಕೆ ಮತ್ತು ಸಾವಿಗೆ ವಶವಾಗುವುದು ಎಂದು ಜ್ಞಾನೋದಯವಾಯಿತು. ಆಗ ಆತನು ಸಹಾ ತನ್ನ ಅಣ್ಣನಂತೆ ಬಿಕ್ಷುವಾಗಲು ಇಚ್ಛಿಸಿ ಮನೆಯನ್ನು ಬಿಟ್ಟು 30 ಭಿಕ್ಷುಗಳಿರುವ ವಿಹಾರದಲ್ಲಿ ಸೇರಿದನು. ಅಲ್ಲಿ ಆತನು ಸಮಣೀರನಾದನು.
                ರೇವತನು ಭಿಕ್ಷುಗಳಿಂದ ಧ್ಯಾನದ ವಿಷಯ ಸ್ವೀಕರಿಸಿ ವಿಹಾರದಿಂದ ದೂರದಲ್ಲಿರುವ ಕಾಡಿಗೆ ಹೋಗಿ ಅಲ್ಲಿ ಸಾಧನೆ ಆರಂಭಿಸಿದನು. ವಷರ್ಾವಾಸದ ಅಂತ್ಯದಲ್ಲಿ ಆತನು ಅರಹಂತನಾದನು. ಆಗ ಪೂಜ್ಯ ಸಾರಿಪುತ್ತರವರು ಬುದ್ಧರಲ್ಲಿ ರೇವತನನ್ನು ನೋಡುವುದಕ್ಕಾಗಿ ಅಪ್ಪಣೆ ಕೇಳಿದರು. ಆಗ ಬುದ್ಧರು ಸಹಾ ಜೊತೆಯಲ್ಲಿ ಬರುವುದಾಗಿ ಹೇಳಿದರು. ಹೀಗೆ ಭಗವಾನರು, ಸಾರಿಪುತ್ತ, ಶೀವಾಲ ಮತ್ತಿತರ ಭಿಕ್ಷುಗಳು ರೇವತನನ್ನು ಕಾಣಲು ಹೋದರು.
                ಆ ಪ್ರಯಾಣವು ದೀರ್ಘವಾಗಿತ್ತು. ದಾರಿಯು ಬಹಳ ಒರಟಾಗಿತ್ತು ಮತ್ತು ಜನರಿಂದ ಕೂಡಿರಲಿಲ್ಲ. ದಾರಿಯಲ್ಲಿ ದೇವತೆಗಳು ಅವರ ಅವಶ್ಯಕತೆ ಪೂರೈಸಿದರು. ಪ್ರತಿ ಯೋಜನದಲ್ಲೂ ವಿಹಾರವು, ಆಹಾರವು ದೊರೆಯುತ್ತಿತ್ತು. ಆವರು ಪ್ರತಿದಿನ 1 ಯೋಜನ ದೂರ ನಡೆಯುತ್ತಿದ್ದರು.
                ರೇವತನಿಗೆ ದಿವ್ಯದೃಷ್ಟಿಯಿಂದ ಭಗವಾನರು ಬರುವುದು ತಿಳಿದು ಆತನು ಅವರ ಸ್ವಾಗತ, ಸತ್ಕಾರಕ್ಕೆ ಎಲ್ಲಾ ವ್ಯವಸ್ಥೆ ಮಾಡಿದನು. ತನ್ನ ಅತೀಂದ್ರಿಯ ಶಕ್ತಿಯಿಂದ ಆತನು ಬುದ್ಧರಿಗಾಗಿ ವಿಶೇಷ ವಿಹಾರವನ್ನು ನಿಮರ್ಿಸಿದನು ಮತ್ತು ಅವರು ಇರುವಷ್ಟು ಕಾಲ ಎಲ್ಲಾರೀತಿಯ ಸವಲತ್ತುಗಳನ್ನು ಸೃಷ್ಟಿಸಿದನು.
                ನಂತರ ಅಲ್ಲಿಂದ ಹಿಂತಿರುಗಿ ಶ್ರಾವಸ್ತಿಯ ಪುಟ್ಟ ಗ್ರಾಮಕ್ಕೆ ಬಂದು. ಅಲ್ಲಿ ವಿಶಾಖಳಿಂದ ಆತಿಥ್ಯ ಪಡೆದರು. ಆಗ ವಿಶಾಖೆಯು ಭಗವಾನರಲ್ಲಿ ಈ ಪ್ರಶ್ನೆ ಹಾಕಿದಳು. ರೇವತರಿದ್ದ ಅರಣ್ಯ ಸುಖಕರವಾಗಿತ್ತೇ?
                ಅದಕ್ಕೆ ಉತ್ತರವಾಗಿ ಭಗವಾನರು ಈ ಮೇಲಿನ ಗಾಥೆಯನ್ನು ನುಡಿದರು

dhammapada/arahantavagga/7.8/saariputta

ಕೇವಲ ಶ್ರದ್ಧೆಯಿಂದಲೇ ನಿಬ್ಬಾಣ ಸಿಗುವುದಿಲ್ಲ
ಯಾರು ಸುಲಭವಾಗಿ ನಂಬುವವನಲ್ಲವೋ, ಯಾರು ಅನಿಮರ್ಿತ (ಅಕತ) (ನಿಬ್ಬಾಣ)ವನ್ನು ಅರಿತಿರುವನೋ, ಯಾರು ಕೊಂಡಿಗಳನ್ನು ಕತ್ತರಿಸಿರುವನೋ, ಯಾರು ತನ್ನ ಪ್ರಯಾಣವನ್ನು ಅಂತ್ಯ ಮಾಡಿರುವನೋ ಮತ್ತು ಯಾರು ಎಲ್ಲಾ ಬಯಕೆಗಳನ್ನು ವಾಂತಿ ಮಾಡಿರುವನೋ, ಅಂತಹವನು ನಿಜಕ್ಕೂ ಉತ್ತಮ ಪುರುಷನಾಗಿದ್ದಾನೆ.         (97)
ಗಾಥ ಪ್ರಸಂಗ 7.8
ವೈಯಕ್ತಿಕ ಅನುಭವವನ್ನು ಮಾತ್ರ ನಂಬಿ

                30 ಮಂದಿ ಭಿಕ್ಷುಗಳು ಜೇತವನಕ್ಕೆ ಬಂದು ಬುದ್ಧರಿಗೆ ವಂದಿಸಿದರು. ಭಗವಾನರಿಗೂ ಸಹ ಈ ಭಿಕ್ಷುಗಳು ಅರಹಂತರಾಗಲು ಪಕ್ವವಾಗಿದ್ದಾರೆ ಎಂದು ಅರಿವಾಯಿತು. ಆಗ ಅವರು ಸಾರಿಪುತ್ತರನ್ನು ಕರೆಸಿದರು. ಸಾರಿಪುತ್ತರು ಬಂದಾಗ ಅವರು ಹೀಗೆ ಪ್ರಶ್ನಿಸಿದರು.
                ಸಾರಿಪುತ್ತ, ನನ್ನ ಮಗು ನೀನು ಈ ವಿಷಯವನ್ನು ಒಪ್ಪುವೆಯಾ? ಇಂದ್ರೀಯಗಳಲ್ಲಿ ಧ್ಯಾನಿಸಿದಾಗ ಒಬ್ಬನು ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾನೆ?
                ಆಗ ಸಾರಿಪುತ್ರರು ಹೀಗೆ ಉತ್ತರಿಸಿದರು ಭಂತೆ, ನಿಮ್ಮಲ್ಲೇ ಶ್ರದ್ಧೆಯಿದೆ ಎಂಬ ಮಾತ್ರಕ್ಕೆ ನಾನು ಇದನ್ನು ಒಪ್ಪಲಾರೆ. ಯಾರಿಗೆ ವೈಯಕ್ತಿಕವಾಗಿ ಅನುಭವ ಆಗಿಲ್ಲವೋ ಅಂತಹವರು ಪರರಿಂದ ಇದನ್ನು ಒಪ್ಪಬಹುದು.
                ಈ ಉತ್ತರದ ಅರ್ಥವನ್ನು ತಿಳಿಯದ ಭಿಕ್ಷುಗಳು ಹೀಗೆ ಭಾವಿಸಿದರು ಸಾರಿಪುತ್ತರಲ್ಲಿ ಇನ್ನೂ ಮಿಥ್ಯಾ ದೃಷ್ಟಿಗಳು ಪರಿತ್ಯಜಿಸಿಲ್ಲ. ಆದ್ದರಿಂದಲೇ ಅವರಿಗೆ ಬುದ್ಧರಲ್ಲಿ ಶ್ರದ್ಧೆಯಿಲ್ಲ.
                ಆಗ ಬುದ್ಧರು ಅವರ ಮಿಥ್ಯಾಗ್ರಹಿಕೆಯನ್ನು ಹೀಗೆ ಹೇಳಿ ದೂರೀಕರಿಸಿದರು.

                ಭಿಕ್ಷುಗಳೇ, ಸಾರಿಪುತ್ತರವರ ಉತ್ತರದ ಅರ್ಥ ಹೀಗಿದೆ. ಏನೆಂದರೆ, ನಿಬ್ಬಾಣವನ್ನು ಇಂದ್ರೀಯಗಳಲ್ಲಿ ಧ್ಯಾನಿಸಿದಾಗ ಸಾಕ್ಷಾತ್ಕರಿಸಬಹುದು ಎಂಬ ಸತ್ಯವನ್ನು ಸ್ವೀಕರಿಸುತ್ತಾರೆ. ಆದರೆ ಅದು ವೈಯಕ್ತಿಕವಾಗಿ ಅನುಭವಿಸಿದಾಗ ಮಾತ್ರ ಹೊರತು, ನಾನು ಅಥವಾ ಪರರು ಹೇಳಿದ್ದು ಎಂದು ನಂಬಿ ಒಪ್ಪುವುದಿಲ್ಲ. ಸಾರಿಪುತ್ತರಿಗೆ ನನ್ನ ಮೇಲೆ ಶ್ರದ್ಧೆಯಿದೆ. ಹಾಗೆಯೇ ಕುಶಲ ಅಕುಶಲಗಳ ಪರಿಣಾಮಗಳಲ್ಲೂ ಶ್ರದ್ಧೆಯಿದೆ ಎಂದು ಹೇಳಿ ಈ ಗಾಥೆ ನುಡಿದರು.

dhammapada/arahantavagga/7.7/kosambivasitissa

ಅರಹಂತರ ಅಚಲ ಶಾಂತತೆ
ಶಾಂತವು ಆತನ ಮನಸ್ಸು, ಶಾಂತವು ಆತನ ಮಾತು ಮತ್ತು ಕರ್ಮಗಳು ಸಹಾ, ವಿಮುಕ್ತಿಯ ಜ್ಞಾನದಲ್ಲಿ ಪರಿಪೂರ್ಣನು ಆದ ಆತನು ಪ್ರಶಾಂತ ಆಂತರಿಕವುಳ್ಳವನು ಮತ್ತು ಏರಿಳಿತಗಳಲ್ಲಿ ಅಚಲನು ಆಗಿರುತ್ತಾರೆ.       (96)”
ಗಾಥ ಪ್ರಸಂಗ 7.7
ಬಾಲಕನಾದರೂ ಬಲಿಷ್ಠ ಅರಹಂತ

                ಕೋಸಂಬಿಯ ನಿವಾಸಿಯಾದ ತಿಸ್ಸನು ಸಂಘಕ್ಕೆ ಸೇರಿದನು. ಅಂದಿನಿಂದ ಆತನಿಗೆ ಕೋಸಂಬಿವಾಸಿ ತಿಸ್ಸ ಎಂದು ಕರೆಯತೊಡಗಿದರು. ಆತ ವರ್ಷವಾಸ ಕೋಸಂಬಿಯಲ್ಲಿ ಕಳೆಯುವಾಗ ಆತನ ಪೋಷಕ ಉಪಾಸಕ ಆತನಿಗಾಗಿ 3 ಚೀವರಗಳು, ತುಪ್ಪ, ತಾಳೆಯ ಸಕ್ಕರೆ, ಇವೆಲ್ಲಾ ಆತನ ಪಾದದ ಬಳಿ ಇಟ್ಟು ಪೂಜ್ಯರೇ, ನಿಮಗೆ ಸೇವೆ ಸಲ್ಲಿಸಲು ಯಾವ ಸಾಮಣೇರ ಇಲ್ಲವೆಂದು ಕೇಳಿದ್ದೇನೆ, ಆದ್ದರಿಂದ ನನ್ನ ಮಗನಿಗೆ ಸಾಮಣೇರನನ್ನಾಗಿ ಮಾಡಿ, ನಿಮಗೆ ಸೇವೆ ಸಲ್ಲಿಸಲು ಕಳುಹಿಸುತ್ತೇನೆ ಎಂದನು. ತಿಸ್ಸ ಭಿಕ್ಷುವು ಸಹಾ ಸಂತೋಷದಿಂದ ಒಪ್ಪಿದನು. ಆಗ ಆ ಬಾಲಕನಿಗೆ ಕೇವಲ 7 ವರ್ಷ ಮಾತ್ರ ವಯಸ್ಸಾಗಿತ್ತು. ಆಗ ಆ ಬಾಲಕನಿಗೆ ತಲೆ ಬೋಳಿಸಲು ತಲೆಯನ್ನು ನೆನೆಸಲಾಯಿತು. ಅದೇವೇಳೆ ಆತನಿಗೆ ಕಾಯಾಗತಾನುಸತಿ ಧ್ಯಾನವನ್ನು ತಿಳಿಸಿದನು. ಆತ ಕ್ಷೌರ ಕತ್ತಿಯನ್ನು ಆತನ ತಲೆಗೆ ಸ್ಪಶರ್ಿಸುವಾಗಲೇ ಆ ಬಾಲಕನು ಅರಹಂತನಾದನು. ತಿಸ್ಸರವರು ಸಮಣೇರನೊಂದಿಗೆ 15 ದಿನ ಕಾಲ ಕೋಸಂಬಿಯಲ್ಲಿದ್ದರು. ನಂತರ ಬುದ್ಧರನ್ನು ದಶರ್ಿಸುವ ಆಕಾಂಕ್ಷೆಯಿಂದ ಅವರು ಅಲ್ಲಿಂದ ಹೊರಟರು. ದಾರಿಯಲ್ಲಿ ಅವರು ವಿಹಾರವನ್ನು ಪ್ರವೇಶಿಸಿದರು. ಅಲ್ಲಿ ಆ ಬಾಲಕ ರಾತ್ರಿಯಿಡೀ ಧ್ಯಾನದಲ್ಲಿ ತಲ್ಲೀನನಾದನು.
                ಮರುದಿನ ಆ ತಿಸ್ಸ, ಬಾಲಕನನ್ನು ಎಬ್ಬಿಸಲು ಹೋಗಿ, ಬಾಲಕನಿಗೆ ತಾಳೆಯ ಎಲೆಯಿಂದ ಚುಚ್ಚಿದನು. ಆ ಚುಚ್ಚುವಿಕೆಯಿಂದ ಬಾಲಕನಿಗೆ ಒಂದು ಕಣ್ಣು ಹೋಯಿತು. ಆದರೂ ಆ ಬಾಲಕ ಅದನ್ನು ತೋರಿಸಿಕೊಳ್ಳಲಿಲ್ಲ. ಮುಂದೆ ಆ ಬಾಲಕನಿಗೆ ಕೋಸಂಬಿಯ ತಿಸ್ಸನು ಅಪಾರ ಕೆಲಸಗಳನ್ನು ಹೇಳಿ ಮಾಡಿಸಿದನು. ಆದರೂ ಆ ಬಾಲಕ ತಾನು ಅಂಧನಾಗಿದ್ದೇನೆ ಎಂದು ಹೇಳಿಕೊಳ್ಳಲಿಲ್ಲ. ಮರುದಿನ ಒಂದು ಕೈಯಲ್ಲಿ ನೀರು ನೀಡಲು ಹೋದಾಗ ತಿಸ್ಸನಿಗೆ ತನ್ನ ತಪ್ಪಿನಿಂದ ಬಾಲಕ ಅಂಧನಾಗಿರುವುದು ತಿಳಿಯಿತು. ಆಗ ಬಾಲಕ ಎಲ್ಲವನ್ನೂ ತಿಳಿಸಿದನು. ಇಷ್ಟಾದರೂ ಸಹಾ ಬಾಲಕ ವಿಚಲಿತನಾಗಲಿಲ್ಲ. ತಿಸ್ಸ ಬಾಲಕನ ಬಳಿ ಕ್ಷಮೆಯಾಚಿಸಿದನು. ಆದರೆ ಅದಕ್ಕೆ ಬಾಲಕ ಈ ರೀತಿ ಉತ್ತರಿಸಿದನು. ಇದು ನಿಮ್ಮ ತಪ್ಪು ಅಲ್ಲ, ನನ್ನದು ಅಲ್ಲ. ಹಿಂದಿನ ಜನ್ಮದ ಪಾಪದ ಫಲವಾಗಿದೆ. ಆದರೂ ತಿಸ್ಸನಿಗೆ ಅಪಾರ ಪಶ್ಚಾತ್ತಾಪವುಂಟಾಯಿತು. ಆತನು ಬುದ್ಧರ ಬಳಿಗೆ ಬಾಲಕನನ್ನು ಕರೆತಂದು ಭಗವಾನರಲ್ಲಿ ಈ ವಿಷಯವೆಲ್ಲಾ ತಿಳಿಸಿದನು.

                ಭಗವಾನ್ ಈ ಸಮಣೇರನಲ್ಲಿ ಅತ್ಯಂತ ಶ್ರೇಷ್ಠಗುಣಗಳಿವೆ. ಅಂತಹವನನ್ನು ನಾನು ಎಂದೂ ಕಾಣಲಿಲ್ಲ ಎಂದನು. ಆಗ ಭಗವಾನರು ಹೀಗೆಂದರು ನನ್ನ ಮಗು ಅರಹಂತನಾಗಿದ್ದಾನೆ, ಆತ ಎಂದಿಗೂ, ಯಾರಲ್ಲಿಯೂ, ಕೋಪಗೊಳ್ಳುವುದಿಲ್ಲ. ಆತನ ಇಂದ್ರೀಯಗಳು ಶಾಂತವಾಗಿವೆ, ಆತನು ಪರಿಪೂರ್ಣ ಪ್ರಶಾಂತ ಸ್ವರೂಪಿಯಾಗಿದ್ದಾನೆ ಎಂದು ಹೇಳಿ ಈ ಮೇಲಿನ ಗಾಥೆ ನುಡಿದರು. 

dhammapada/arahantavagga/7.6/saariputta

ಪೃಥ್ವಿಯಂತೆ ಅರಹಂತರು ಸಹಾ ಕ್ಷಮಾಶೀಲರು
ಪೃಥ್ವಿಯಂತೆ ಯಾರು ವಿರೋಧವಿಲ್ಲದವನೋ, ಇಂದ್ರಕೀಲದಂತೆ ಯಾರು ಸ್ಥಿರ, ಸುಚಾರಿತ್ರ್ಯನೋ, ಕೆಸರು ಮುಕ್ತ ಸರೋವರದಂತೆ ಪರಿಶುದ್ಧನೋ, ಅಂತಹ ಅಚಲನಿಗೆ ಸಂಸಾರದಲ್ಲಿ ಮುಂದಿನ ಭವವಿಲ್ಲ.      (95)
ಗಾಥ ಪ್ರಸಂಗ 7.6
ಸಾರಿಪುತ್ತರ ಕ್ಷಮಾಶಕ್ತಿ

                ಸಾರಿಪುತ್ತರು ಎಲ್ಲರೊಂದಿಗೆ ಮೈತ್ರಿಯಿಂದ ಕೂಡಿರುತ್ತಿದ್ದರು. ಒಮ್ಮೆ ವರ್ಷವಾಸ ಮುಗಿದನಂತರ ಎಲ್ಲರೂ ಒಂದೇ ಸ್ಥಳದಿಂದ ಬೇರೆ ಬೇರೆ ಸ್ಥಳಗಳಿಗೆ ಹೊರಡತೊಡಗಿದರು. ಅಂತಹ ಸಮಯದಲ್ಲಿ ಸಾರಿಪುತ್ತರು ಎಲ್ಲರೊಂದಿಗೆ ವಿದಾಯ ಹೇಳಿದರು. ಆದರೆ ಒಬ್ಬನನ್ನು ಗಮನಿಸಲಿಲ್ಲ. ಆತನು ಸಾರಿಪುತ್ತರು ತನಗೆ ನಿರ್ಲಕ್ಷಿಸಿದ್ದಾರೆ ಎಂದು ಕುಪಿತನಾದನು. ಆದರೆ ಜೊತೆಗೆ ಸಾರಿಪುತ್ತರವರು ಹೋಗುವಾಗ ಕುಪಿತ ಬಿಕ್ಷುವಿನ ಕಿವಿಗೆ ಸಾರಿಪುತ್ತರವರ ಬಟ್ಟೆಯ ಅಂಚು ತಾಗಿತು. ಇದರಿಂದ ಆತನು ಮತ್ತಷ್ಟು ಕುಪಿತನಾಗಿ ಬುದ್ಧರ ಬಳಿಗೆ ಬಂದು ಸಾರಿಪುತ್ತರ ಬಗ್ಗೆ ಈ ರೀತಿ ಚಾಡಿ ಹೇಳಿದನು ಭಗವಾನ್, ಸಾರಿಪುತ್ತರವರು ನಿಸ್ಸಂಶಯವಾಗಿ ನಾನು ಅಗ್ರ ಶಿಷ್ಯ ಎಂದು ಅಹಂಭಾವಪಡುತ್ತಾರೆ ಮತ್ತು ಅವರು ನನಗೆ ಹೊಡೆದಿದ್ದಾರೆ, ನನ್ನ ಕಿವಿಗೆ ಗಾಯವಾಗಿದೆ. ಈ ರೀತಿ ಮಾಡಿಯೂ ಸಹಾ ಅವರು ನನ್ನೊಂದಿಗೆ ಕ್ಷಮೆಯಾಚಿಸಲಿಲ್ಲ. ಅವರು ಆಹಾರಕ್ಕೆ ಹೊರಟೇ ಹೋದರು ಎಂದು ದೂರನ್ನು ನೀಡಿದನು.
                ಆಗ ಭಗವಾನರು ಸಾರಿಪುತ್ತರನ್ನು ಕರೆಯಿಸಿ ವಿಚಾರಿಸಿದರು. ಅವರು ತಮ್ಮ ಮುಗ್ದತೆ ಈ ರೀತಿ ವ್ಯಕ್ತಪಡಿಸಿದರು ಭಗವಾನ್ ನಾನು ಭಿಕ್ಷುವಾಗಿದ್ದೇನೆ. ನಾನು ಸದಾ ಕಾಯದಲ್ಲಿ ಮನಸ್ಸಿರುವವನಾಗಿದ್ದೇನೆ, ಒಂದುವೇಳೆ ತಪ್ಪು ಎಸಗಿದಲ್ಲಿ ನಾನು ಖಂಡಿತ ಕ್ಷಮೆಯಾಚಿಸುತ್ತಿದ್ದೆನು, ನಾನು ಪೃಥ್ವಿಯಂತೆ ಸಹನಾಶೀಲನಾಗಿದ್ದೇನೆ. ಹೇಗೆ ಪೃಥ್ವಿಗೆ ಎಂತಹ ಕಲ್ಮಶಗಳನ್ನು ಎಷ್ಟೇ ಎಸೆದರೂ ಶಾಂತವಾಗಿರುವುದೋ ಹಾಗೆಯೇ ನಾನು ಇದ್ದೇನೆ. ನಾನು ಬಾಗಿಲಿನ ಗೋಣಿ ಚಾಪೆಯಂತೆ, ಭಿಕ್ಷುಕನಂತೆ, ಕೊಂಬಿಲ್ಲದ ಗೂಳಿಯಂತೆ, ನಾನು ಅಶುಭಾಧ್ಯಾನ ಮಾಡುವವ, ಈ ದೇಹಕ್ಕೆ ನಾನು ಅಂಟಿಲ್ಲ, ಅರಿವಿಲ್ಲದೆ ಏನೋ ತಪ್ಪಾಗಿರಬಹುದು ಎಂದು ಅತ್ಯಂತ ವಿಧೇಯದಿಂದ ಈ ರೀತಿ ಹೇಳಿಕೊಂಡರು.
                ಯಾವಾಗ ಪೂಜ್ಯ ಸಾರಿಪುತ್ತರು ತಮ್ಮ ಸದ್ಗುಣಗಳನ್ನು ಈ ರೀತಿ ಪ್ರಕಟಪಡಿಸಿದಾಗ, ದೂರು ನೀಡಿದ ಭಿಕ್ಷುವಿಗೆ ಅಪಾರ ಪಶ್ಚಾತ್ತಾಪವುಂಟಾಯಿತು. ಆತನು ಬುದ್ಧರ ಕಾಲಿಗೆ ಬಿದ್ದು ತಾನು ಸುಳ್ಳು ಮತ್ತು ಚಾಡಿ ನುಡಿದೆನು ಎಂದು ಕ್ಷಮೆಯಾಚಿಸಿದನು. ಆಗ ಭಗವಾನರು ಸಾರಿಪುತ್ತರಿಗೆ ಈ ರೀತಿ ಹೇಳಿದರು ಸಾರಿಪುತ್ತ, ಈ ದಡ್ಡನಿಗೆ ಕ್ಷಮಿಸಿಬಿಡು, ಇಲ್ಲದೆ ಹೋದರೆ ಈತನ ತಲೆಯು ಏಳು ಭಾಗವಾಗಿ ಸೀಳಿಹೋಗುತ್ತದೆ ಎಂದರು. ಆಗ ಸಾರಿಪುತ್ತರು ಆತನ ಎದುರು ಬಾಗಿ, ಕೈಜೋಡಿಸಿ ಪೂಜ್ಯರೆ, ನಾನು ಈ ಪೂಜ್ಯ ಭಿಕ್ಷುವಿಗೆ ಕ್ಷಮಿಸಿರುವೆನು, ಹಾಗೆಯೇ ಈ ಭಿಕ್ಷುವೂ ಸಹ ನನ್ನಿಂದ ಅಚಾತುರ್ಯದಿಂದ ತಪ್ಪಾಗಿದ್ದರೆ ಕ್ಷಮಿಸಲಿ ಎಂದರು. ಆತನು ಪಶ್ಚಾತ್ತಾಪದಿಂದ ಕ್ಷಮೆಯಾಚಿಸಿದನು.

                ನಂತರ ಈ ವಿಷಯ ಭಿಕ್ಷುಗಳಲ್ಲಿ ಚಚರ್ೆಯ ವಿಷಯವಾಯಿತು. ಎಲ್ಲರೂ ಸಾರಿಪುತ್ತರ ಕ್ಷಮಾಶೀಲತೆಯ ಗುಣಗಾನ ಮಾಡಿದರು. ಅಲ್ಲಿಗೆ ಬಂದ ಭಗವಾನರು ಭಿಕ್ಷುಗಳಲ್ಲಿ ಯಾವ ವಿಷಯವನ್ನು ಚಚರ್ಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು. ಅದಕ್ಕೆ ಭಿಕ್ಷುಗಳು ಉತ್ತರಿಸಿದಾಗ, ಭಗವಾನರು ಸಾರಿಪುತ್ತರಿಗೆ ಹೊಗಳುತ್ತಾ ಈ ಮೇಲಿನ ಗಾಥೆ ನುಡಿದರು. 

dhammapada/arahantavagga/7.5/mahakaccayana

ಸರ್ವ ಇಂದ್ರೀಯ ಸಂಯಮಿಗಳು ಸರ್ವರಿಗೆ ಪ್ರಿಯರಾಗಿರುತ್ತಾರೆ
ಹೇಗೆ ಸಾರಥಿಯಿಂದ ಕುದುರೆಗಳು ಪಳಗಿಸಲ್ಪಟ್ಟಿರುವವೋ ಅದೇ ರೀತಿಯಲ್ಲಿ ಯಾರ ಇಂದ್ರೀಯಗಳು ಶಾಂತವಾಗಿದೆಯೋ, ಅಹಂಕಾರವು ವಜರ್ಿಸಲ್ಪಟ್ಟಿದೆಯೋ, ಅಸವರಹಿತರಾಗಿರುವರೋ ಅಂತಹವರನ್ನು ದೇವತೆಗಳು ಸಹಾ ಪ್ರಿಯರೆಂದು ಭಾವಿಸುತ್ತಾರೆ.            (94)
ಗಾಥ ಪ್ರಸಂಗ 7.5
ಅರಹಂತರನ್ನು ಇಂದ್ರಾದಿ ದೇವತೆಗಳು ಪೂಜಿಸುವರು

                ಒಮ್ಮೆ ವಷರ್ಾವಾಸದ ಕೊನೆಯ ಪೂಣರ್ಿಮೆಯಂದು ಭಗವಾನರು ಮಿಗಾರ ಮಾತಾರವರ ವಿಹಾರದ ಕಟ್ಟಡದಲ್ಲಿ ಕುಳಿತಿದ್ದರು. ಅವರ ಸುತ್ತಲು ಭಿಕ್ಷುಗಳು ಇದ್ದರು. ಆ ಸಮಯದಲ್ಲಿ ಮಹಾ ಕಚ್ಚಾಯನರವರು ಅವಂತಿ ರಾಜ್ಯದಲ್ಲಿದ್ದರು. ಅವರು ದೂರದಲ್ಲಿದ್ದರು ಸಹ ಧಮ್ಮವನ್ನು ಆಲಿಸಲು ಇಲ್ಲಿಗೆ ಬರುತ್ತಿದ್ದರು. ಆದ್ದರಿಂದ ಅವರಿಗಾಗಿ ಒಂದು ಪೀಠವನ್ನು ಖಾಲಿಯಾಗಿಯೇ ಬಿಡಲಾಗಿತ್ತು.
                ಸಕ್ಕರವರು ದೇವೇಂದ್ರನಾಗಿದ್ದರೂ ಅವರು ಬುದ್ಧರ ಬಳಿಗೆ ಬರುವಾಗ ಎರಡು ಲೋಕದ ದೇವತೆಗಳನ್ನು ಬರಮಾಡಿಕೊಂಡು ಬರುತ್ತಿದ್ದರು ಮತ್ತು ಬುದ್ಧರಿಗೆ ದಿವ್ಯವಾದ ಸುಗಂಧಗಳಿಂದ ಮತ್ತು ಹೂಗಳಿಂದ ಪೂಜಿಸುತ್ತಿದ್ದರು. ಈ ಬಾರಿ ಸಕ್ಕರವರು ಬಂದಾಗ ಕಚ್ಚಾಯನರವರ ಪೀಠ ಖಾಲಿಯಾಗಿರುವುದು ಕಂಡು ಪೂಜ್ಯ ಕಚ್ಚಾಯನರವರು ಎಲ್ಲೂ ಕಾಣುತ್ತಿಲ್ಲವಲ್ಲ? ಅವರು ಹತ್ತಿರ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಯೋಚಿಸಿದ ಕ್ಷಣದಲ್ಲೆ, ಕಚ್ಚಾಯರು ಪ್ರತ್ಯಕ್ಷರಾದರು. ಆಗ ಸಕ್ಕರವರು ಪೂಜ್ಯ ಕಚ್ಚಾಯನರ ಪಾದಗಳನ್ನು ಹಿಡಿದುಕೊಂಡು ಆನಂದದಿಂದ ಸುಗಂಧ ಮತ್ತು ಹೂಗಳಿಂದ ಪೂಜಿಸಿದರು.

                ಅದನ್ನು ಕಂಡ ಕೆಲವು ಭಿಕ್ಷುಗಳು ಇದು ಇಂದ್ರನ ಪಕ್ಷಪಾತವೆಂದು ಮಾತನಾಡಿಕೊಂಡಾಗ ಭಗವಾನರು ಭಿಕ್ಷುಗಳೇ, ಕಚ್ಚಾಯನರಂತಹ ಇಂದ್ರೀಯ ಶಾಂತರನ್ನು ಮಾನವರಷ್ಟೇ ಅಲ್ಲ, ದೇವತೆಗಳು ಪ್ರಿಯರೆಂದು ಭಾವಿಸುವರು ಎಂದು ಹೇಳಿ ಈ ಮೇಲಿನ ಗಾಥೆಯನ್ನು ನುಡಿದರು. 

dhammapada/arahantavagga/7.4/anurudda

ಕಶ್ಮಲ ರಹಿತರು ಸ್ವತಂತ್ರರಾಗಿರುತ್ತಾರೆ
ಯಾರ ಅಸ್ರವಗಳು ನಾಶವಾಗಿದೆಯೋ, ಯಾರು ಆಹಾರದಲ್ಲಿ ಅಂಟದೆ ಇರುವರೋ, ಯಾರ ಗಮ್ಯಸ್ಥಾನವು ಶೂನ್ಯವೂ, ಚಿಹ್ನೆರಹಿತವೂ ಆದ ವಿಮುಕ್ತಿಯಾಗಿದೆಯೋ ಅಂತಹವರನ್ನು ಆಕಾಶದಲ್ಲಿರುವ ಪಕ್ಷಿಗಳ ರೀತಿ ನೋಡಲಾಗುವುದಿಲ್ಲ         (93)
ಗಾಥ ಪ್ರಸಂಗ 7.4
ಶುದ್ಧ ಭಿಕ್ಷುವಿಗೆ ದೇವತೆಯ ಸಹಾಯ

                ಒಂದುದಿನ ಪೂಜ್ಯ ಅನುರುದ್ದರವರು ಚೀವರನ್ನು ತಯಾರಿಸಲು ಚಿಂದಿ ಬಟ್ಟೆಗಳನ್ನು ಹುಡುಕಾಡುತ್ತಿದ್ದರು. ಏಕೆಂದರೆ ಅವರ ಹಳೆಯ ಚೀವರ ಹರಿದು ಶಿಥಿಲಗೊಂಡಿತ್ತು. ಆಗ ಅದನ್ನು ಅವರ ಮೂರನೆಯ ಹಿಂದಿನ ಜನ್ಮದ ಪತ್ನಿಯಾದ ಜಾಲಿನಿ ವೀಕ್ಷಿಸಿದಳು. ಆಕೆ ಈಗ ತಾವತಿಂಸ ಲೋಕದ ದೇವತೆಯಾಗಿದ್ದಳು. ಆಗ ಆಕೆಯು ಅವರಿಗಾಗಿ ಮೂರು ವಸ್ತ್ರಗಳ ತುಂಡುಗಳನ್ನು ಅವರು ಹುಡುಕುತ್ತ ಬರುವಲ್ಲಿಗೆ ಇಟ್ಟಳು. ನಂತರ ಹುಡುಕುತ್ತ ಬಂದಂತಹ ಅನುರುದ್ದರವರಿಗೆ ಅದು ಸಿಕ್ಕಾಗ ಅದನ್ನು ವಿಹಾರಕ್ಕೆ ಕೊಂಡು ಹೋದರು. ಆಗ ಅವರಿಗಾಗಿ ಚೀವರ ತಯಾರಿಸಲು ಸ್ವಯಂ ಬುದ್ಧರು, ಅಗ್ರಶಾವಕರು ಮತ್ತು ಹಿರಿಯ ಭಿಕ್ಷುಗಳಿದ್ದರು.
                ನಂತರ ಜಾಲಿನಿಯು ಹಳ್ಳಿಗೆ ಬಂದು ಅಲ್ಲಿನ ಜನರಿಗೆ ಬುದ್ಧರಿಗೆ ಮತ್ತು ಸಂಘಕ್ಕೆ ಸ್ವಾದಿಷ್ಟ ಆಹಾರ ನೀಡುವಂತೆ ಪ್ರೋತ್ಸಾಹಿಸಿದಳು. ಅದರಂತೆಯೇ ಆ ಜನರೆಲ್ಲರೂ ಬುದ್ಧರಿಗೆ ಮತ್ತು ಭಿಕ್ಷು ಸಂಘಕ್ಕೆ ತೃಪ್ತಿಯಾಗುವಷ್ಟು ಸ್ವಾದಿಷ್ಟ ಆಹಾರ ಬಡಿಸಿದರು. ಬೇರೆಡೆಯ ಭಿಕ್ಷುಗಳಿಗೆ ಇದು ಆಶ್ಚರ್ಯವಾಗಿ ಈ ರೀತಿ ಚಚರ್ಿಸಿದರು ಪೂಜ್ಯ ಅನುರುದ್ದರು ತಮ್ಮ ಬಂಧು-ಮಿತ್ರರಲ್ಲಿ ಆಹಾರವನ್ನು ಕೇಳಿರಬಹುದು ಅಥವಾ ಅವರಿಗೆ ತಾವು ಹೆಚ್ಚಿನ ಉಪಾಸಕರನ್ನು ಪಡೆದಿದ್ದೇವೆ ಎಂದು ತೋರಿಸಿಕೊಳ್ಳುವ ಬಯಕೆ ಇದ್ದಿರಬಹುದು ಒಮ್ಮೆ ಅದನ್ನು ಆಲಿಸಿದ ಭಗವಾನರು ಅವರಿಗೆ ಹೀಗೆ ಹೇಳಿದರು ಅರಹಂತರಲ್ಲಿ ಆಸಕ್ತಿಯಿರುವುದಿಲ್ಲ. ಇದಕ್ಕೆ ಅವರ ಹಿಂದಿನ ಜನ್ಮದ ಪತ್ನಿಯೇ ಕಾರಣ ಎಂದು ತಿಳಿಸಿ ಈ ಗಾಥೆಯನ್ನು ನುಡಿದರು

dhammapada/arahantavagga/7.3/bellattisisa

ಭಿಕ್ಷುವಿಗೆ ಆಹಾರದಲ್ಲಿ ಆಸಕ್ತಿ ಬೇಡ
ಯಾರು ಏನನ್ನು ಸಂಗ್ರಹಣೆ ಮಾಡುವುದಿಲ್ಲವೋ, ಯಾರಿಗೆ ಆಹಾರದ ಪೂರ್ಣಸ್ವರೂಪ ತಿಳಿದು ಮಿತಿಯಿಂದಿರುವರೋ, ಯಾರ ಗುರಿಯು ಶೂನ್ಯವೂ, ಚಿಹ್ನೆರಹಿತವೂ ಆದ ವಿಮುಕ್ತಿಯು ಆಗಿದೆಯೋ ಅಂತಹವರ ಗಮ್ಯಸ್ಥಾನವನ್ನು ಆಕಾಶದಲ್ಲಿ ಹಾರಿಹೋಗುವ ಪಕ್ಷಿಗಳ ರೀತಿಯಲ್ಲಿ ಪತ್ತೆಹಚ್ಚಲಾಗುವುದಿಲ್ಲ.       (92)
ಗಾಥ ಪ್ರಸಂಗ 7.3
ಭಿಕ್ಷುಗಳು ಸಂಗ್ರಹಕಾರರಲ್ಲ

                ಪೂಜ್ಯ ಬೆಲ್ಲಟ್ಟಿಸೀಸ ಆಹಾರ ಅನ್ವೇಷಣೆಯಲ್ಲಿ ಹಳ್ಳಿಗೆ ಹೋದರು. ಅಲ್ಲಿ ಆಹಾರ ಸ್ವೀಕರಿಸಿದ ನಂತರ ಮತ್ತೆ ಇನ್ನೊಮ್ಮೆ ಆಹಾರಕ್ಕಾಗಿ ಹೊರಟರು. ಸಾಕಷ್ಟು ಆಹಾರ ಪಡೆದು ವಿಹಾರಕ್ಕೆ ಹಿಂತಿರುಗಿದರು. ನಂತರ ಅವರು ಅಕ್ಕಿಯನ್ನು ಒಣಗಿಸಿ, ಸಂಗ್ರಹಣೆ ಮಾಡಿದರು. ಹೀಗಾಗಿ ಅವರು ದಿನನಿತ್ಯ ಆಹಾರಕ್ಕಾಗಿ ಹೊರಹೋಗುವ ಹಾಗಿರಲಿಲ್ಲ. ಇದರಿಂದಾಗಿ ಅವರು ಎರಡು ಅಥವಾ ಮೂರು ದಿನಗಳಷ್ಟು ಕಾಲ ನಿರಂತರ ಧ್ಯಾನದಲ್ಲಿ ನಿರತರಾಗುತ್ತಿದ್ದರು. ಧ್ಯಾನದಿಂದೆದ್ದು, ಅವರು ಆ ಒಣಗಿದ ಅಕ್ಕಿಯನ್ನು ನೀರಿನಲ್ಲಿ ನೆನೆಸಿ ಅದನ್ನೇ ಸೇವಿಸಿ ಧ್ಯಾನನಿರತರಾಗುತ್ತಿದ್ದರು. ಈ ವಿಷಯವನ್ನು ಗಮನಿಸಿದ ಭಿಕ್ಷುಗಳು ಈತ ಸಂಗ್ರಹಕಾರನೆಂದು ತಿಳಿದು ಭಗವಾನರಲ್ಲಿ ಈ ವಿಷಯವನ್ನು ಗಮನಕ್ಕೆ ತಂದರು. ಏಕೆಂದರೆ ಭಿಕ್ಷುಗಳು ಸಂಗ್ರಹಣೆ ಮಾಡುವಂತಿರಲಿಲ್ಲ.

                ಭಗವಾನರು ಈ ವಿಷಯ ನಿಜವೇ ಎಂದು ವಿಚಾರಿಸಿದಾಗ ಭಿಕ್ಷುವು ತಾನು ಸಂಗ್ರಹಣೆ ಮಾಡಿರುವುದು ಲೋಭಕ್ಕಾಗಿ ಅಲ್ಲ. ಬದಲಾಗಿ ಸಮಯ ಉಳಿಸುವುದಕ್ಕಾಗಿ ಮತ್ತು ಧ್ಯಾನದಲ್ಲಿ ತೊಡಗುವುದಕ್ಕಾಗಿ ಎಂದು ಹೇಳಿದಾಗ ಭಗವಾನರು ಆತನಿಗೆ ನಿದರ್ೊಷಿ ಎಂದು ಹೇಳಿದರು. ನಂತರ ಮೇಲಿನ ಈ ಗಾಥೆಯನ್ನು ನುಡಿದರು. 

dhammapada/arahantavagga/7.2/mahakassapa

ಅರಹಂತರು ಅಂಟುವಿಕೆಯಿಂದ ಮುಕ್ತರಾಗಿರುತ್ತಾರೆ
ಸ್ಮೃತಿವಂತರು ಸದಾ ಯತ್ನಶೀಲರಾಗಿರುತ್ತಾರೆ. ಅವರು ನಿಕೇತನ (ಮನೆಗಳಲ್ಲಿ)ದಲ್ಲಿ ರಮಿಸುವುದಿಲ್ಲ. ಹೇಗೆ ಹಂಸಗಳು ಸರೋವರವನ್ನು ಬಿಟ್ಟು ನಡೆದಂತೆ ಅವರು ಸರ್ವರೀತಿಯ ಗೃಹಗಳನ್ನು ಬಿಟ್ಟು ನಡೆಯುತ್ತಾರೆ. (91)
ಗಾಥ ಪ್ರಸಂಗ 7.2
ಮಹಾಕಸ್ಸಪರವರ ವಿರಾಗತೆ

                ಒಮ್ಮೆ ಭಗವಾನರು ರಾಜಗೃಹದಲ್ಲಿ ಬಹಳ ಭಿಕ್ಷುಗಳ ಜೊತೆ ವಷರ್ಾವಾಸ ಕಳೆದರು. ವಷರ್ಾವಾಸದ ಎರಡು ವಾರಗಳ ಹಿಂದೆ ಭಗವಾನರು ಭಿಕ್ಷುಗಳಿಗೆ ತಾವಿನ್ನು ರಾಜಗೃಹವನ್ನು ಬಿಡುತ್ತಿದ್ದೇವೆ. ಇಲ್ಲಿಂದ ಹೊರಡಲು ಸಿದ್ಧರಾಗಿ ಎಂದು ಹೇಳಿದ್ದರು. ಆಗ ಕೆಲವು ಭಿಕ್ಷುಗಳು ಹೊಸ ಚೀವರಗಳಿಗೆ ಬಣ್ಣ ಹಚ್ಚಿದರು. ಕೆಲವರು ಹಳೆಯ ಚೀವರಗಳಿಗೆ ತೊಳೆದು ಶುಭ್ರ ಮಾಡಿದರು. ಆಗ ವಸ್ತ್ರಗಳನ್ನು ಒಗೆಯುತ್ತಿದ್ದ ಮಹಾಕಸ್ಸಪರವರನ್ನು ಕಂಡು ಅವರು ಈ ರೀತಿ ಚಿಂತಿಸಿದರು. ರಾಜಗೃಹದಲ್ಲಿ ಕಸ್ಸಪರವರಿಗೆ ಗೌರವಿಸಿ ಆಧರಿಸುವವರು ಬಹಳಷ್ಟಿದ್ದಾರೆ. ಅವರು ಇಲ್ಲಿನ ಉಪಾಸಕರಿಗೆ ತೊರೆದು ಬುದ್ಧರೊಂದಿಗೆ ಹೋಗುವುದು ಉಚಿತವೆ?
                15 ದಿನದ ನಂತರ ಬಿಡುವ ಸಂದರ್ಭದಲ್ಲಿ ಬುದ್ಧರು ಎಲ್ಲಾ ಭಿಕ್ಷುಗಳು ರಾಜಗೃಹವನ್ನು ಬಿಡುವುದು ಸರಿಯಲ್ಲ, ಕೆಲವರು ಇಲ್ಲಿದ್ದು ಉಪಾಸಕರಿಗೆ ಸಹಾಯ ಮಾಡಲಿ ಎಂದು ಅವರು ಕಸ್ಸಪರವರನ್ನೇ ಅದಕ್ಕೆ ಆಯ್ಕೆ ಮಾಡಿದರು. ಆಗ ಕಸ್ಸಪ ಮತ್ತು ಅವರ ಶಿಷ್ಯರು ರಾಜಗೃಹದಲ್ಲೇ ಉಳಿದರು.

                ಆಗ ಇತರ ಭಿಕ್ಷುಗಳು ಈ ರೀತಿ ಹೇಳಿಕೊಂಡರು ನಾವು ಎಣಿಸಿದ್ದಂತೆ ಕಸ್ಸಪರವರು ಬುದ್ಧರೊಂದಿಗೆ ಬರುತ್ತಿಲ್ಲ ಆಗ ಬುದ್ಧರಿಗೆ ಎಲ್ಲವೂ ಅರ್ಥವಾಗಿ ಹೀಗೆ ಹೇಳಿದರು ಭಿಕ್ಷುಗಳೇ, ರಾಜಗೃಹದ ಉಪಾಸಕರು ಆಧರಿಸಿ ಆತಿಥ್ಯ ನೀಡುವುದರಿಂದಾಗಿ ಕಸ್ಸಪರವರು ಇಲ್ಲೇ ಉಳಿದ್ದಿದ್ದಾರೆ ಎಂದು ಭಾವಿಸಿರುವಿರಾ, ನೀವು ತಪ್ಪಾಗಿ ಅರ್ಥ ಮಾಡಿ ಕೊಂಡಿರುವಿರಿ. ಕಸ್ಸಪರವರು ಅಂಟುವಿಕೆಗೆ ಅತೀತರು ಎಂದು ಹೇಳಿ ಮೇಲಿನ ಗಾಥೆ ನುಡಿದರು. 

dhammapada/arahantavagga/7.1/jeevaka

                              ಅರಹಂತ ವಗ್ಗ

ಅರಹಂತರಿಗೆ ಭಾವೋದ್ರೇಕದ ಜ್ವರವಿಲ್ಲ
ಯಾರ ಪ್ರಯಾಣವು ಪೂರ್ಣಗೊಂಡಿದೆಯೋ, ಯಾರು ಶೋಕರಹಿತರೊ, ಯಾರು ಸರ್ವದರಿಂದ ವಿಮುಕ್ತರಾಗಿರುವರೋ ಹಾಗು ಯಾರು ಬಂಧನಗಳ ಗಂಟುಗಳಿಂದ ಬಿಡುಗಡೆ ಹೊಂದಿರುವರೋ, ಅಂತಹವರಲ್ಲಿ ಭಾವೋದ್ರೇಕದ ಜ್ವರವು ಇರಲಾರದು.   (90)
ಗಾಥ ಪ್ರಸಂಗ 7.1
ಬುದ್ಧರಿಗೆ ವೈದ್ಯ ಜೀವಕ

                ದೇವದತ್ತನು ಅಜಾತಶತ್ರುವಿನೊಂದಿಗೆ ಕೂಡಿ ಬುದ್ಧರನ್ನು ಕೊಲ್ಲಲು ಪ್ರಯತ್ನಿಸಿದನು. ಆದರೆ ಬುದ್ಧರು ಕೊಲ್ಲಲು ಬಂದ ಪ್ರತಿಯೊಬ್ಬ ಬಿಲ್ಗಾರನನ್ನು ಪರಿವತರ್ಿಸಿದರು. ಆಗ ದೇವದತ್ತನು ಬುದ್ಧಭಗವಾನರಿಗು ಕೊಲ್ಲಲು ತಾನೇ ಮುಂದಾದನು. ಆತನು ಗೃದ್ಧಕೂಟ ಪರ್ವತ (ಬೆಟ್ಟ) ಏರಿ ಬುದ್ಧರಿಗೆ ಕಾಯುತ್ತಿದ್ದನು. ಆಗ ಅಲ್ಲಿಗೆ ಬರುತ್ತಿದ್ದ ಬುದ್ಧರ ಮೇಲೆ ದೊಡ್ಡ ಬಂಡೆ ಮೇಲಿನಿಂದ ತಳ್ಳಿ ಕೆಳಕ್ಕೆ ಉರುಳಿಸಿದನು. ಅದು ಸರಿಯಾಗಿ ಬುದ್ಧರ ಮೇಲೆಯೇ ಬಂದಿತು. ಆದರೆ ಕಡಿದಾದ ಪಾಶ್ರ್ವ ಬಂಡೆಗಳು ಅದನ್ನು ತಡೆಯಿತು. ಆದರೂ ಅಲ್ಲಿ ಡಿಕ್ಕಿ ಹೊಡೆದು ಚೂರೊಂದು ಭಗವಾನರ ಕಾಲಿನ ಹೆಬ್ಬೆರಳಿಗೆ ತಾಕಿ ರಕ್ತ ಹರಿಯತೊಡಗಿತು. ಭೀಕರವಾದ ಗಾಯ ಉಂಟಾಯಿತು. ಆಗ ಬುದ್ಧರನ್ನು ಜೀವಕರ ಬಳಿಗೆ ಕರೆತರಲಾಯಿತು. ಆಗ ಜೀವಕರು ಮುಲಾಮನ್ನು ಹಚ್ಚಿ ಪಟ್ಟಿ ಕಟ್ಟಿದರು. ನಂತರ ಬುದ್ಧರಿಗೆ ಹೀಗೆ ಹೇಳಿದರು: ಭಗವಾನ್ ನಾನು ರೋಗಿಯೊಬ್ಬನನ್ನು ಕಾಣಲು ನಗರಕ್ಕೆ ಹೋಗಬೇಕಾಗಿದೆ. ಆತನನ್ನು ನೋಡಿ ಹಾಗೆಯೇ ಹಿಂತಿರುಗುವೆ, ನಾನು ಬರುವವರೆಗೆ ಈ ಪಟ್ಟಿ ಹೀಗೆ ಇರಲಿ ಎಂದು ಹೇಳಿ ಅಪ್ಪಣೆ ಪಡೆದು ಆತನು ನಗರಕ್ಕೆ ಹೋದರು. ಆದರೆ ಆತನು ಹಿಂತಿರುಗಿ ಬರುವಾಗ ವೇಳೆಯಾಗಿ ನಗರದ ಬಾಗಿಲು ಮುಚ್ಚಿದ್ದರು. ಹೀಗಾಗಿ ಆತನು ಬರಲು ಸಾಧ್ಯವಿರಲಿಲ್ಲ. ಆತ ಆಗ ಈ ರೀತಿ ಪಶ್ಚಾತ್ತಾಪ ಪಡಲಾರಂಭಿಸಿದನು. ಓಹ್ ನನ್ನಿಂದ ಅತಿ ದೊಡ್ಡ ಪಾಪವುಂಟಾಯಿತು. ನಾನು ಬುದ್ಧರ ಕಾಲಿಗೆ ಸಾಮಾನ್ಯ ಮನುಷ್ಯನಿಗೆ ಕಟ್ಟುವ ರೀತಿ ಪಟ್ಟಿ ಕಟ್ಟಿದೆನು. ಈಗ ಅದು ಬಿಚ್ಚುವ ಸಮಯ. ಅದನ್ನು ಈಗ ಬಿಚ್ಚದೆ ರಾತ್ರಿ ಹಾಗೆ ಕಳೆದುಹೋದರೆ ಬುದ್ಧರಿಗೆ ಅಪಾರ ನೋವು ಉಂಟಾಗಬಹುದು ಎಂದು ಪರಿತಪಿಸಿದನು.
                ಅದೇ ವೇಳೆಯಲ್ಲಿ ಭಗವಾನರು ಪೂಜ್ಯ ಆನಂದರಿಗೆ ಹೀಗೆ ಹೇಳಿದರು ಆನಂದ ಜೀವಕನು ಸಂಜೆ ಹಿಂತಿರುಗುವಾಗ ನಿಧಾನವಾಗಿ, ಹೆಬ್ಬಾಗಿಲು ಮುಚ್ಚಲ್ಪಟ್ಟಿದೆ. ಈಗ ಗಾಯದ ಪಟ್ಟಿ ಬಿಚ್ಚುವ ಸಮಯ ಎಂದು ಆತನು ಕೊರಗುತ್ತಿದ್ದಾನೆ. ಆದ್ದರಿಂದ ಈ ಪಟ್ಟಿ ಬಿಚ್ಚು ಆಶ್ಚರ್ಯ! ಬಿಚ್ಚಿದ ನಂತರ ಗಾಯದ ಜೊತೆಗೆ ಗುರುತು ಮಾಯವಾಗಿತ್ತು.
                ಮುಂಜಾನೆ ಜೀವಕನು ಬುದ್ಧರಲ್ಲಿಗೆ ಓಡೋಡಿ ಬಂದನು. ಭಗವಾನ್ ತಾವು ಅಸಾಧ್ಯವಾದ ನೋವು ಏನಾದರೂ ಅನುಭವಿಸಿದಿರೆ?

                ಆಗ ಭಗವಾನರು ಜೀವಕ ಬುದ್ಧರಲ್ಲಿ ಎಲ್ಲ ದುಃಖಗಳು ನಾಶವಾಗಿರುತ್ತದೆ. ಯಾವಾಗ ಬೋಧಿಸತ್ವ ಬುದ್ಧರಾದರೋ ಆಗಲೇ ಎಲ್ಲಾ ದುಃಖಗಳು ನಶಿಸಿಹೋದವು ಎಂದು ಹೇಳಿ ಮೇಲಿನ ಗಾಥೆ ನುಡಿದರು. 

Saturday, 7 March 2015

dhammapada/panditavagga/6.11/bhikkus of kosala

ಶೀಲ-ಧ್ಯಾನದ ಶಿಸ್ತಿನಿಂದಲೇ ನಿಬ್ಬಾಣ
ಮಿಥ್ಯಾದೃಷ್ಟಿಯ ಕಪ್ಪು ಧಮ್ಮವನ್ನು ವಿಸಜರ್ಿಸು, ಸುಪರಿಶುದ್ದಿಯ ಬೆಳಗುವಂತಹದನ್ನು ಅಭಿವೃದ್ಧಿಸು, ಗೃಹತನದಿಂದ ದೂರಾಗಿ, ಅನಿಕೇತನಾಗಿ, ಸಿದ್ಧಿಸಲು ಕಷ್ಟಕರವಾದ ಏಕಾಂತತೆಯಲ್ಲಿ ನೆಲಸಲಿ.           (87)
ಅಂತಹ ವಿಮುಕ್ತಿಯ ಇಚ್ಛೆಗಳಲ್ಲಿ ಸ್ಥಿರನಾಗಿ, ಇಂದ್ರೀಯ ಕಾಮಗಳನ್ನು ತೊರೆದು, ಏನೂ ಇಲ್ಲದವನಾಗಲಿ (ಅಕಿಂಚನ) ಹೀಗೆ ಪಂಡಿತನು ತನ್ನನ್ನು ಚಿತ್ತಕ್ಲೇಷಗಳಿಂದ ಶುದ್ಧೀಕರಿಸಲಿ          (88)
ಯಾರ ಚಿತ್ತವು ಸಂಬೋಧಿ ಅಂಗಗಳಲ್ಲಿ ಸುಅಭಿವೃದ್ಧಿ ಹೊಂದಿದೆಯೋ, ಯಾರು ಹಿಡಿಯುವುದನ್ನು ಬಿಟ್ಟಿರುವವರೋ, ಅಂಟುವಿಕೆಯಿಂದ ರಹಿತರಾಗಲು ಆನಂದಿಸುವರೋ, ಅಂತಹ ಕ್ಷೀಣಾ ಅಸವರಾದ ಪ್ರಜ್ಞಾ-ಜ್ಯೋತಿ ಸ್ವರೂಪವಂತರು ಈ ಲೋಕದಲ್ಲಿಯೇ ಪರಿನಿಬ್ಬಾಣ ಪಡೆಯುತ್ತಾರೆ. (89)
ಗಾಥ ಪ್ರಸಂಗ 6.11
ಬಹಳಷ್ಟು ಮಂದಿ ಈ ಲೋಕಗಳಿಗೆ ಬಂಧಿತರು

                50 ಜನ ಭಿಕ್ಷುಗಳು ಕೋಸಲ ರಾಜ್ಯದಲ್ಲಿ ವಷರ್ಾವಾಸ ಕಳೆದರು. ನಂತರ ಭಗವಾನರನ್ನು ಕಾಣಲು ಜೇತವನಕ್ಕೆ ಬಂದರು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತರು. ನಂತರ ತಮ್ಮ ಅನುಭವಗಳನ್ನು ಹೇಳಿದರು. ಆಗ ಭಗವಾನರು ಅವರಿಗೆ ಈ ಮೇಲಿನ ಗಾಥೆಯಿಂದ ಉಪದೇಶಿಸಿದರು.



dhammapada/panditavagga/6.10/sravatthibhikkhus

ಇಂದ್ರೀಯ ಕ್ಷೇತ್ರ ಜಯಿಸುವುದು ಕಷ್ಟಕರ
ಮನುಷ್ಯರಲ್ಲಿ ಕೆಲವರು ಮಾತ್ರ ಆಚೆಯ ದಡವನ್ನು ದಾಟಿರುವರು, ಮಿಕ್ಕವರೆಲ್ಲಾ ಈ ದಡದಲ್ಲಿಯೇ ಅಡ್ಡಾಡುತ್ತಿರುವರು.       (85)
ಆದರೆ ಯಾರು ಚೆನ್ನಾಗಿ ವಿವರಿಸಲ್ಪಟ್ಟಿರುವ ಈ ಧಮ್ಮವನ್ನು ನಿಷ್ಠೆಯಿಂದ ಪಾಲಿಸಿರುವರೋ, ಅವರು ಮಾತ್ರ ಆಚೆಯ (ನಿಬ್ಬಾಣ) ದಡವನ್ನು ತಲುಪುತ್ತಾರೆ. ಆದರೆ ಇಂದ್ರೀಯಗಳ ಭಾವೋದ್ರೇಕಗಳ ಕ್ಷೇತ್ರವನ್ನು ಜಯಿಸುವುದು ಅತ್ಯಂತ ಕಷ್ಟಕರ.           (86)
ಗಾಥ ಪ್ರಸಂಗ 6.10
ಬಹಳಷ್ಟು ಮಂದಿ ಈ ಲೋಕಗಳಿಗೆ ಬಂಧಿತರು

   ಒಮ್ಮೆ ಶ್ರಾವಸ್ತಿಯ ಒಂದು ಗುಂಪು ಭಿಕ್ಷುಗಳಿಗೆ ಒಟ್ಟಾಗಿ ದಾನ ಮಾಡಿದರು. ಭಿಕ್ಷುಗಳಿಗೆ ನಾನಾರೀತಿಯ ಸತ್ಕಾರ ಮಾಡಿದರು. ಆಗ ಭಿಕ್ಷುಗಳು ಧಮ್ಮಾದಾನ ಮಾಡಲು ನಿರ್ಧರಿಸಿದರು. ಅವರು ಕೆಲವು ಭಿಕ್ಷುಗಳಿಗೆ ರಾತ್ರಿಯಿಡೀ ಬೋಧನೆ ಮಾಡಲು ಆಜ್ಞಾಪಿಸಿ ಹೊರಟರು. ಭಿಕ್ಷುಗಲು ನಿಷ್ಠೆಯಿಂದ ಬೋಧಿಸತೊಡಗಿದರು. ಆದರೆ ಎಲ್ಲರಿಗೂ ರಾತ್ರಿಯಿಡೀ ಬೋಧನೆ ಕೇಳಲು ಸಾಧ್ಯವಾಗಲಿಲ್ಲ. ಬಹಳಷ್ಟು ಜನರು ರಾತ್ರಿಯಿಡೀ ಇರಲು ಆಗದೆ ಮನೆಗೆ ಹಿಂದಿರುಗಿದರು. ಬಹಳಷ್ಟು ಜನರು ಮನೆಗೆ ಹೋಗದಿದ್ದರೂ ತೂಗಾಡಿಕೆ ಮತ್ತು ನಿದ್ರೆಗೆ ಶರಣಾಗತರಾದರು. ಆದರೆ ಕೆಲವರು ಮಾತ್ರ ಬೋಧನೆಯನ್ನು ರಾತ್ರಿಯಿಡೀ ಶ್ರದ್ಧೆಯಿಂದ ಧಮ್ಮವನ್ನು ಆಲಿಸಿದರು.



                ಈ ವಿಷಯವನ್ನು ಭಿಕ್ಷುಗಳು ಬುದ್ಧ ಭಗವಾನರೊಂದಿಗೆ ಹಂಚಿಕೊಂಡರು. ಆಗ ಭಗವಾನರು ಈ ರೀತಿ ಹೇಳಿದರು ಬಹಳಷ್ಟು ಜನರು ಈ ಜಗತ್ತಿಗೆ ಬಂಧಿತರಾಗಿದ್ದಾರೆ. ಕೆಲವರು ಮಾತ್ರ ಆಚೆಯ ದಡಕ್ಕೆ (ನಿಬ್ಬಾಣಕ್ಕೆ) ತಲುಪುವರು ಎಂದು ಹೇಳಿ ಈ ಗಾಥೆಗಳನ್ನು ಹೇಳಿದರು. 

dhammapada/panditavagga/6.9/dhammika

ಮಿಥ್ಯಾ ಮಾರ್ಗದಿಂದ ಯಶಸ್ಸು ಶೋಧಿಸದಿರಿ
ತನಗಾಗಿಯಾಗಲಿ ಅಥವಾ ಪರರಿಗಾಗಿ ಆಗಲಿ ಆತನು ಪುತ್ರ ಇಚ್ಛೆಯಾಗಲಿ, ಧನದ ಇಚ್ಛೆಯಾಗಲಿ ಅಥವಾ ರಾಷ್ಟ್ರವನ್ನೇ ಆಗಲಿ ಇಚ್ಛಿಸದಿರಲಿ, ಅಧರ್ಮದಿಂದ ತನ್ನ ಯಶಸ್ಸು ಶೋಧಿಸದಿರಲಿ. ಹಾಗೆ ಆಚರಿಸಿದಾಗ ಮಾತ್ರ ನಿಜಕ್ಕೂ ಆತನು ಶೀಲವಂತ, ಪ್ರಜ್ಞಾವಂತ ಮತ್ತು ಧಾಮರ್ಿಕನಾಗುತ್ತಾನೆ     (84)
ಗಾಥ ಪ್ರಸಂಗ 6.9

ಧಾಮ್ಮಿಕರು ಯೋಗ್ಯವಾಗಿ ಜೀವಿಸುವರು

                ಧಮ್ಮಿಕ (ಧಾಮರ್ಿಕ) ಎಂಬುವವನು ಶ್ರಾವಸ್ತಿಯಲ್ಲಿ ತನ್ನ ಪತ್ನಿಯೊಂದಿಗೆ ಸುಖವಾಗಿ  ಜೀವಿಸುತ್ತಿದ್ದನು. ಮುಂದೆ ಆತನಲ್ಲಿ ಪ್ರಜ್ಞಾಶೀಲತೆಯು ಅಭಿವೃದ್ಧಿಯಾಗಿ ಪ್ರಾಪಂಚಿಕ ಸುಖಭೋಗಗಳು ಕ್ಷುಲ್ಲಕವೆನಿಸಿ, ಮತ್ತಷ್ಟು ಜನ್ಮಗಳನ್ನು ವ್ಯರ್ಥವಾಗಿ, ಮೂಢವಾಗಿ, ದುಃಖಭರಿತರಾಗಿ ಪಡೆಯಬಾರದು ಎಂದು ನಿರ್ಧರಿಸಿದನು. ಈ ಜನ್ಮವನ್ನೇ ಕೊನೆಯ ಜನ್ಮವಾಗಿ ಮಾಡಬೇಕು ಎಂದು ಅತನು ತೀಮರ್ಾನಿಸಿದನು. ಗೃಹಸ್ಥನಾಗಿಯೇ ಅಂತಹ ಪರಿಶುದ್ಧತೆ, ಏಕಾಂತತೆ, ಸಾಧನೆಗೆ ಕಾಲವು ಸಿಗಲಾರದು ಎಂದು ಅರಿವಾಗಿ ಆತನು ಭಿಕ್ಷುವಾಗಲು ನಿರ್ಧರಿಸಿದನು. ತನ್ನ ಇಚ್ಛೆಯನ್ನು ಆತನು ತನ್ನ ಪತ್ನಿಗೆ ವಿವರಿಸಿದನು. ಆದರೆ ಆತನ ಹೆಂಡತಿಯು ತನ್ನ ಮಗುವು ಜನ್ಮಿಸುವವರೆಗೂ ಹಾಗೆ ಮಾಡಬೇಡ ಎಂದು ಬೇಡಿಕೊಂಡಳು. ಆಗ ಆತನು ಹಾಗೆಯೇ ನಡೆದುಕೊಂಡಾಗ ಮಗುವು ನಡೆಯುವವರೆಗೆ ತಮ್ಮನ್ನು ತೊರೆಯದಿರು ಎಂದು ಕೇಳಿಕೊಂಡಳು. ಆಗ ಆತನಿಗೆ ಈ ರೀತಿಯ ಜ್ಞಾನೋದಯವಾಯಿತು; ನಾನು ಸಂಸಾರ ದುಃಖದಿಂದ ಪಾರಾಗಬೇಕಾದರೆ ನಾನು ಶ್ರಮಿಸಲೇಬೇಕಾಗಿದೆ. ಪರರಿಗೋಸ್ಕರ ನಾನು ಇಂತಹ ಅಮೂಲ್ಯ ಅವಕಾಶವನ್ನು ಕಳೆದುಕೊಳ್ಳಲಾರೆ, ನಂತರ ನರಳಲಾರೆ ಎಂದು ನಿರ್ಧರಿಸಿ ಆತನು ಭಿಕ್ಷುವಾದನು. ಹಾಗೆಯೇ ಸಾಧನೆಯಿಂದ ಆತನು ಅರಹಂತನಾದನು.
                ಮುಂದೆ ಆತನು ಪತ್ನಿಪುತ್ರನಿಗೆ ಬೋಧಿಸಲು ಬಂದಿದ್ದಾಗ, ಆತನ ಪುತ್ರನಿಗೂ ಜ್ಞಾನೋದಯ ಉಂಟಾಗಿ ಆತನೂ ಭಿಕ್ಷುವಾಗಿ ಅರಹಂತ ಸಾಧಿಸಿದನು. ಗಂಡ, ನಂತರ ಮಗ ಇವರೀರ್ವರೂ ಅರಹಂತರಾಗಿದ್ದನ್ನು ಕಂಡು ಆಕೆಗೂ ವೈರಾಗ್ಯ ಉಂಟಾಗಿ, ಆಕೆಯೂ ಭಿಕ್ಷುಣಿಯಾಗಿ ಮುಂದೆ ಸಾಧನೆಯಿಂದ ಅರಹಂತೆಯಾದಳು.

                ಭಿಕ್ಷುಗಳಲ್ಲಿ ಇದು ಚಚರ್ೆಯ ವಿಷಯವಾದಾಗ ಭಗವಾನರು ಅಲ್ಲಿ ಬಂದರು ಮತ್ತು ಈ ಮೇಲಿನ ಗಾಥೆಯನ್ನು ನುಡಿದರು. 

dhammapada/panditavagga/6.8/veranja

ಸುಖದುಃಖಗಳಿಂದ ಪಂಡಿತರು ಏರುಪೇರು ಆಗುವುದಿಲ್ಲ
ಸತ್ಪುರುಷರು ಸರ್ವವವನ್ನು ತ್ಯಾಗ ಮಾಡುತ್ತಾರೆ. ಸಂತರು ಕಾಮಬೋಗಗಳ ಮಾತುಗಳಲ್ಲಿ ತೊಡಗುವುದಿಲ್ಲ. ಪಂಡಿತರು ಸುಖ-ದುಃಖಗಳ ಸ್ಪರ್ಶಗಳಿಂದ ಸುಖವಾಗಲಿ, ದುಃಖವಾಗಲಿ ವ್ಯಕ್ತಪಡಿಸುವುದಿಲ್ಲ.          (83)
ಗಾಥ ಪ್ರಸಂಗ 6.8
ಸುಜ್ಞಾನಿಗಳು ಸಮಚಿತ್ತತೆಯಿಂದಿರುತ್ತಾರೆ


                ವೇರಂಜಾದ ಬ್ರಾಹ್ಮಣನ ಕೋರಿಕೆಯಂತೆ ಬುದ್ಧರು ವೇರಂಜಾದಲ್ಲಿ ತಂಗಿದ್ದರು. ಆದರೆ ಅವರು ಅಲ್ಲಿದ್ದಾಗ ಆ ಬ್ರಾಹ್ಮಣ ಅವರಿಗೆ ನೋಡಿಕೊಳ್ಳಲಿಲ್ಲ. ಅದೂ ಅಲ್ಲದೆ ವೇರಂಜ ಜನರು ಕ್ಷಾಮವನ್ನು ಎದುರಿಸುತ್ತಿದ್ದರು. ಆದ್ದರಿಂದ ಭಿಕ್ಷುಗಳಿಗೆ ಅತಿಅಲ್ಪವಾದ ಆಹಾರ ದೊರೆಯುತ್ತಿತ್ತು. ಪರಮಪೂಜ್ಯ ಮೊಗ್ಗಲಾನರವರು ತಮ್ಮ ಪವಾಡಶಕ್ತಿಯಿಂದ ಆಹಾರವನ್ನು ತಂದು ನೀಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದರು. ಅಂದರೆ ಬುದ್ಧರು ಅದಕ್ಕೆ ಅನುಮತಿ ನೀಡಲಿಲ್ಲ. ಈ ಎಲ್ಲಾ ಕಷ್ಟಗಳಿದ್ದರು ಭಿಕ್ಷುಗಳು ಎದೆಗುಂದಲಿಲ್ಲ. ಅವರು ಸಿಕ್ಕಿರುವಷ್ಟರಲ್ಲಿ ಸಂತೃಪ್ತರಾಗಿ ಧ್ಯಾನಜೀವನ ನಡೆಸಿದರು. ಕುದುರೆಯ ವ್ಯಾಪಾರಿಗಳು ಆಗ ಅವರಿಗೆ ಅಲ್ಪಸ್ವಲ್ಪ ಧಾನ್ಯ ನೀಡುತ್ತಿದ್ದರು.
                ವರ್ಷವಾಸವು ಮುಗಿಯಿತು. ಆಗ ಬುದ್ಧರು ಮತ್ತು ಇತರ ಭಿಕ್ಷುಗಳು ಜೇತವನಕ್ಕೆ ಹಿಂತಿರುಗಿದರು. ಶ್ರಾವಸ್ತಿಯ ಜನರಂತು ಆನಂದದಿಂದ ಬುದ್ಧರಿಗೆ ಮತ್ತು ಭಿಕ್ಷುಗಳಿಗೆ ಆಹಾರೋಪಚಾರವನ್ನು ಮಾಡಿದರು.
                ಆ ಸಂದರ್ಭದಲ್ಲಿ ಭಿಕ್ಷುಗಳೊಡನೆ ವೇರಂಜಾದ ಕೆಲವು ಜನರು ಸಹಾ ವಿಹಾರದಲ್ಲಿ ಉಳಿದರು ಅವರಂತು ತಿಂದುತೇಗಿ ನಿದ್ದೆಹೋದರು. ನಂತರ ಎದ್ದ ಆ ಜನರು ನದಿಯ ದಂಡೆಗೆ ಹೋಗಿ ಈಜಾಡಿ, ಕೂಗಾಡುತ್ತಾ, ಕುಣಿದಾಡುತ್ತಾ, ಕುಸ್ತಿಯಾಡುತ್ತಾ, ಗದ್ದಲ ಎಬ್ಬಿಸುತ್ತಾ ಸಭ್ಯತೆ ಉಲ್ಲಂಘಿಸಿದರು.

                ಈ ವಿಷಯ ಭಗವಾನರ ಬಳಿಗೆ ಬಂದಿತು. ಆಗ ಭಗವಾನರು ಹೀಗೆಂದರು: ಇದು ಅಜ್ಞಾನಿ ಜನಗಳ ಸ್ವಭಾವವಾಗಿದೆ. ಅವರು ದುಃಖದಲ್ಲಿ ಕುಗ್ಗುವರು ಮತ್ತು ಸುಖದಲ್ಲಿ ಹಿಗ್ಗುವರು. ಆದರೆ ಜ್ಞಾನಿಗಳು ಸುಖ-ದುಃಖಗಳಲ್ಲೂ ಸ್ಥಿರವಾಗಿರುವರು ಎಂದು ಹೇಳಿ ನಂತರ ಮೇಲಿನ ಗಾಥೆಯನ್ನು ಹೇಳಿದರು.