Sunday, 15 March 2015

dhammapada/arahantavagga/7.2/mahakassapa

ಅರಹಂತರು ಅಂಟುವಿಕೆಯಿಂದ ಮುಕ್ತರಾಗಿರುತ್ತಾರೆ
ಸ್ಮೃತಿವಂತರು ಸದಾ ಯತ್ನಶೀಲರಾಗಿರುತ್ತಾರೆ. ಅವರು ನಿಕೇತನ (ಮನೆಗಳಲ್ಲಿ)ದಲ್ಲಿ ರಮಿಸುವುದಿಲ್ಲ. ಹೇಗೆ ಹಂಸಗಳು ಸರೋವರವನ್ನು ಬಿಟ್ಟು ನಡೆದಂತೆ ಅವರು ಸರ್ವರೀತಿಯ ಗೃಹಗಳನ್ನು ಬಿಟ್ಟು ನಡೆಯುತ್ತಾರೆ. (91)
ಗಾಥ ಪ್ರಸಂಗ 7.2
ಮಹಾಕಸ್ಸಪರವರ ವಿರಾಗತೆ

                ಒಮ್ಮೆ ಭಗವಾನರು ರಾಜಗೃಹದಲ್ಲಿ ಬಹಳ ಭಿಕ್ಷುಗಳ ಜೊತೆ ವಷರ್ಾವಾಸ ಕಳೆದರು. ವಷರ್ಾವಾಸದ ಎರಡು ವಾರಗಳ ಹಿಂದೆ ಭಗವಾನರು ಭಿಕ್ಷುಗಳಿಗೆ ತಾವಿನ್ನು ರಾಜಗೃಹವನ್ನು ಬಿಡುತ್ತಿದ್ದೇವೆ. ಇಲ್ಲಿಂದ ಹೊರಡಲು ಸಿದ್ಧರಾಗಿ ಎಂದು ಹೇಳಿದ್ದರು. ಆಗ ಕೆಲವು ಭಿಕ್ಷುಗಳು ಹೊಸ ಚೀವರಗಳಿಗೆ ಬಣ್ಣ ಹಚ್ಚಿದರು. ಕೆಲವರು ಹಳೆಯ ಚೀವರಗಳಿಗೆ ತೊಳೆದು ಶುಭ್ರ ಮಾಡಿದರು. ಆಗ ವಸ್ತ್ರಗಳನ್ನು ಒಗೆಯುತ್ತಿದ್ದ ಮಹಾಕಸ್ಸಪರವರನ್ನು ಕಂಡು ಅವರು ಈ ರೀತಿ ಚಿಂತಿಸಿದರು. ರಾಜಗೃಹದಲ್ಲಿ ಕಸ್ಸಪರವರಿಗೆ ಗೌರವಿಸಿ ಆಧರಿಸುವವರು ಬಹಳಷ್ಟಿದ್ದಾರೆ. ಅವರು ಇಲ್ಲಿನ ಉಪಾಸಕರಿಗೆ ತೊರೆದು ಬುದ್ಧರೊಂದಿಗೆ ಹೋಗುವುದು ಉಚಿತವೆ?
                15 ದಿನದ ನಂತರ ಬಿಡುವ ಸಂದರ್ಭದಲ್ಲಿ ಬುದ್ಧರು ಎಲ್ಲಾ ಭಿಕ್ಷುಗಳು ರಾಜಗೃಹವನ್ನು ಬಿಡುವುದು ಸರಿಯಲ್ಲ, ಕೆಲವರು ಇಲ್ಲಿದ್ದು ಉಪಾಸಕರಿಗೆ ಸಹಾಯ ಮಾಡಲಿ ಎಂದು ಅವರು ಕಸ್ಸಪರವರನ್ನೇ ಅದಕ್ಕೆ ಆಯ್ಕೆ ಮಾಡಿದರು. ಆಗ ಕಸ್ಸಪ ಮತ್ತು ಅವರ ಶಿಷ್ಯರು ರಾಜಗೃಹದಲ್ಲೇ ಉಳಿದರು.

                ಆಗ ಇತರ ಭಿಕ್ಷುಗಳು ಈ ರೀತಿ ಹೇಳಿಕೊಂಡರು ನಾವು ಎಣಿಸಿದ್ದಂತೆ ಕಸ್ಸಪರವರು ಬುದ್ಧರೊಂದಿಗೆ ಬರುತ್ತಿಲ್ಲ ಆಗ ಬುದ್ಧರಿಗೆ ಎಲ್ಲವೂ ಅರ್ಥವಾಗಿ ಹೀಗೆ ಹೇಳಿದರು ಭಿಕ್ಷುಗಳೇ, ರಾಜಗೃಹದ ಉಪಾಸಕರು ಆಧರಿಸಿ ಆತಿಥ್ಯ ನೀಡುವುದರಿಂದಾಗಿ ಕಸ್ಸಪರವರು ಇಲ್ಲೇ ಉಳಿದ್ದಿದ್ದಾರೆ ಎಂದು ಭಾವಿಸಿರುವಿರಾ, ನೀವು ತಪ್ಪಾಗಿ ಅರ್ಥ ಮಾಡಿ ಕೊಂಡಿರುವಿರಿ. ಕಸ್ಸಪರವರು ಅಂಟುವಿಕೆಗೆ ಅತೀತರು ಎಂದು ಹೇಳಿ ಮೇಲಿನ ಗಾಥೆ ನುಡಿದರು. 

No comments:

Post a Comment