Saturday, 7 March 2015

dhammapada/panditavagga/6.7/kaanamathe

ಪ್ರಜ್ಞಾವಂತರು ಪ್ರಶಾಂತರಾಗಿರುತ್ತಾರೆ
ಹೇಗೆ ಆಳವಾದ ಸರೋವರವು ಸ್ಪಷ್ಟವಾಗಿ ಮತ್ತು ಪ್ರಶಾಂತವಾಗಿ ಇರುತ್ತದೆಯೋ ಹಾಗೆಯೆ ಧಮ್ಮವನ್ನು ಆಲಿಸಿದ ಪಂಡಿತರು ಅತೀವ ಶಾಂತತೆಯನ್ನು ಅನುಭವಿಸುತ್ತಾರೆ.  (82)
ಗಾಥ ಪ್ರಸಂಗ 6.7
ಧಮ್ಮವನ್ನು ಆಲಿಸಿದವರು ಪ್ರಶಾತರಾಗುತ್ತಾರೆ


                ಕಾಣಮಾತೆಯು ಬುದ್ಧರ ಉಪಾಸಿಕೆಯಾಗಿದ್ದಳು. ಆಕೆಯ ಮಗಳು ಕಾಣ ಬೇರೊಂದು ಹಳ್ಳಿಯವನ ಜೊತೆ ವಿಹಾಹವಾಗಿದ್ದಳು. ಕಾಣಳು ಒಮ್ಮೆ ತನ್ನ ತವರುಮನೆಗೆ ಬಂದಿದ್ದಳು. ಆಕೆ ಬೇಗನೆ ಹಿಂತಿರುಗದ ಕಾರಣ ಆಕೆಯ ಗಂಡನು ಬೇಗನೆ ಹಿಂತಿರುಗಲು ಸಂದೇಶ ಕಳುಹಿಸಿದನು. ಆದರೆ ಆಕೆಯ ತಾಯಿಯು ಇನ್ನೂ ಕೆಲದಿನ ಇರಲು ಒತ್ತಾಯಿಸಿದಳು. ಏಕೆಂದರೆ ಆಕೆ ಕೆಲವು ತಿಂಡಿಗಳನ್ನು ಜೊತೆಗೆ ಕಳಿಸಲು ಇಚ್ಛಿಸಿದಳು.
                ಮಾರನೆಯ ದಿನ ಕಾಣಮಾತೆಯು ಕೆಲವು ಹೋಳಿಗೆಗಳನ್ನು ತಯಾರಿಸಿದಳು. ಅದೇವೇಳೆಯಲ್ಲಿ ನಾಲ್ವರು ಭಿಕ್ಖುಗಳು ಆಹಾರಕ್ಕೆ ಬಂದಿದ್ದರು. ಆಕೆ ಎಲ್ಲವನ್ನು ಆ ಭಿಕ್ಷುಗಳಿಗೆ ಸಮಪರ್ಿಸಿದಳು. ಹೀಗಾಗಿ ಆಕೆಯ ಮಗಳು ಮತ್ತು ಅಳಿಯನಿಗೆ ತಿಂಡಿ ಇಲ್ಲವಾಗಿ ಆಕೆ ಮತ್ತೆ ಮೂರುದಿನ ಇರಿಸಿಕೊಂಡಳು. ಆಕೆ ಹೋಳಿಗೆಗಳನ್ನು ತಯಾರಿಸಿದಳು. ಮತ್ತೊಮ್ಮೆ ಭಿಕ್ಷುಗಳು ಕಾಣಿಸಿಕೊಂಡಾಗ ದಾನಿಯಾದ ಆಕೆ ಎಲ್ಲವನ್ನೂ ಅವರಿಗೆ ದಾನ ಮಾಡಿದಳು.
                ಇದರ ಪರಿಣಾಮವಾಗಿ ಕಾಣಳ ಗಂಡನು ಕುಪಿತನಾಗಿ ಮತ್ತೊಂದು ವಿವಾಹವಾದನು. ಅಂದಿನಿಂದ ಕಾಣಳಿಗೆ ಭಿಕ್ಷುಗಳನ್ನು ಕಂಡರೆ ಆಗುತ್ತಿರಲಿಲ್ಲ. ತನ್ನ ವಿವಾಹ ಜೀವನವು ಈ ಭಿಕ್ಷುಗಳಿಂದಲೇ ಹಾಳಾಯಿತು ಎಂದು ಕುಪಿತಳಾದ ಆಕೆ ಕಂಡ ಕಂಡ ಭಿಕ್ಷುಗಳಿಗೆ ಬೈಯಲು ಪ್ರಾರಂಭಿಸಿದಳು. ಹೀಗಾಗಿ ಎಲ್ಲಾ ಭಿಕ್ಷುಗಳು ಆಕೆಯ ಮನೆಯನ್ನು ತೊರೆದರು.
                ಬುದ್ಧರಿಗೆ ಎಲ್ಲವೂ ಅರಿವಾಗಿ ಕಾಣಮಾತೆಯ ಮನೆಗೆ ಹೋದರು. ಅಲ್ಲಿ ಕಾಣಳನ್ನು ಕರೆಸಿ ಈ ರೀತಿ ಪ್ರಶ್ನಿಸಿದರು ನನ್ನ ಭಿಕ್ಷುಗಳು ಕೊಟ್ಟಿದ್ದನ್ನು (ದಾನ) ಸ್ವೀಕರಿಸಿದರೆ ಅಥವಾ ಕೊಡದಿದ್ದುದನ್ನು ತೆಗೆದುಕೊಂಡರೆ (ಕಳ್ಳತನ)? ಆಗ ಆಕೆಯು ನಾನು ದಾನ ಮಾಡಿದ್ದನ್ನು ಅವರು ಸ್ವೀಕರಿಸಿದ್ದಾರೆ ಎಂದಳು. ಹಾಗೆಯೆ ಆಕೆಗೆ ತನ್ನ ತಪ್ಪು ಅರಿವಾಗಿ ಹೀಗೆಂದಳು ಅವರದೇನು ತಪ್ಪಿಲ್ಲ, ನನ್ನದೆ ತಪ್ಪಾಗಿದೆ ಎಂದು ಹೇಳಿ ಆಕೆ ಕ್ಷಮೆಯಾಚಿಸಿದಳು ಮತ್ತು ಗೌರವಯುತ ಪೂಜೆ ಮಾಡಿದಳು. ನಂತರ ಭಗವಾನರು ಆಕೆಗೆ ಧಮರ್ೊಪದೇಶ ಮಾಡಿದರು. ಆಕೆ ಧಮ್ಮವನ್ನು ಆಲಿಸುತ್ತಿದ್ದಂತೆಯೇ ಆಕೆಯ ಸಂಶಯ, ಚಿಂತೆ ಎಲ್ಲವೂ ದೂರವಾಗಿ ಸೋತಪತ್ತಿ ಫಲ ಪಡೆದಳು.
                ನಂತರ ಈ ವಿಷಯ ರಾಜ ಪಸೇನದಿಗೂ ಸಹಾ ಬುದ್ಧರಿಂದ ತಿಳಿಯಿತು. ಆತನು ಆಕೆಯ ಜೀವನವನ್ನು ಒಳ್ಳೆಯ ರೀತಿ ಮಾಡಲು ನಿರ್ಧರಿಸಿ ಆಕೆಯನ್ನು ಅರಮನೆಗೆ ಕರೆಸಿದನು. ನಂತರ ಸಭೆಯಲ್ಲಿ ಈ ರೀತಿ ಕೇಳಿದನು ಈಕೆ ಇಂದಿನಿಂದ ನನ್ನ ಮಗಳಾಗಿದ್ದಾಳೆ. ಈಕೆಯನ್ನು ಯಾರು ಆರೈಕೆ ಮಾಡಲು ಸಿದ್ಧರಿದ್ದೀರಿ? ಆಗ ಒಬ್ಬ ಮಂತ್ರಿಯು ಆಕೆಯನ್ನು ಮಗಳಾಗಿ ಸ್ವೀಕರಿಸಿ ಆಕೆಗೆ ತನ್ನ ಎಲ್ಲಾ ಐಶ್ವರ್ಯ ನೀಡಿ ನೀನು ಇಷ್ಟಪಟ್ಟಷ್ಟು ದಾನ ಮಾಡು, ಸುಖಿಯಾಗಿರು ಎಂದನು. ಇದಾದ ನಂತರ ಪ್ರತಿದಿನ ಆಕೆಯ ಮನೆಗೆ ಭಿಕ್ಷುಗಳು ದಾನಕ್ಕಾಗಿ ಬರತೊಡಗಿದರು.

                ಕಾಣಳು ಮತ್ತೆ ದಾನಿಯಾಗಿದ್ದಳೆ ಎಂಬ ವಿಷಯ ಭಿಕ್ಷುಗಳು ಭಗವಾನರಿಗೆ ತಿಳಿಸಿದಾಗ ಭಗವಾನರು ಈ ಗಾಥೆ ನುಡಿದರು ಮತ್ತು ಹೀಗೆಂದರು ಭಿಕ್ಷುಗಳೇ, ಈ ಮೊದಲು ಆಕೆಯ ಮನಸ್ಸು ಜೇಡಿಮಣ್ಣಿನಂತೆ ರಾಡಿಯಾಗಿತ್ತು. ಆದರೆ ಧಮ್ಮಾಶ್ರವಣದ ನಂತರ ಆಕೆಯ ಮನಸ್ಸು ಪ್ರಶಾಂತ ಸರೋವರದಂತೆ ಆಗಿದೆ ಎಂದರು. 

No comments:

Post a Comment