ಪಂಡಿತ ವಗ್ಗ
ನಿಮ್ಮನ್ನು ತಿದ್ದುವ ಪ್ರಾಜ್ಞರೊಡನೆ ಬೆರೆಯಿರಿ
ಅಡಗಿರುವ
ನಿಧಿಯನ್ನು ತೋರಿಸುವ ಮಾರ್ಗದಶರ್ಿಯನ್ನು ಹಿಂಬಾಲಿಸುವಂತೆ, ತಪ್ಪುಗಳನ್ನು ತಿದ್ದುವ ಪ್ರಾಜ್ಞನು ಸಿಕ್ಕರೆ ಹಿಂಬಾಲಿಸಿ. ಅಂತಹ
ಪಂಡಿತರೊಂದಿಗೆ ಸೇರುವುದರಿಂದ ಶ್ರೇಯಸ್ಸು ಆಗುವುದೇ ಹೊರತು ಕೆಡಕಾಗದು. (76)
ಗಾಥ ಪ್ರಸಂಗ 6.1
ಅರಹತ್ವ ಬಯಸುವ ವೃದ್ಧ ರಾಧ
ರಾಧನೆಂಬ ಬಡ ಬ್ರಾಹ್ಮಣನು ವಿಹಾರದಲ್ಲಿ ಹುಲ್ಲು
ಕೊಯ್ಯುವುದು, ಗುಡಿಸುವುದು
ಇತ್ಯಾದಿ ಸಣ್ಣಪುಟ್ಟ ಕಾರ್ಯಗಳನ್ನು ಮಾಡುತ್ತ ಭಿಕ್ಷುಗಳಿಗೆ ಸಹಾಯ ಮಾಡುತ್ತಿದ್ದನು. ಆ
ಭಿಕ್ಷುಗಳು ಆತನೊಂದಿಗೆ ಸೌಹಾರ್ದವಾಗಿಯೇ ಇದ್ದರು. ಆದರೆ ಆತನಿಗೆ ಭಿಕ್ಷುವನ್ನಾಗಿಸಲು
ಒಪ್ಪಲಿಲ್ಲ. ಆದರೂ ಸಹಾ ಆತನ ಇಚ್ಛೆಯು ಪ್ರಬಲವಾಗುತ್ತಾ ಹೋಯಿತು.
ಒಂದುದಿನ ಭಗವಾನರು ಈ ಬಡ ಬ್ರಾಹ್ಮಣನು ಅರಹತ್ವಕ್ಕೆ
ಪಕ್ವವಾಗಿರುವುದನ್ನು ಕಂಡರು. ಆತನಿಗೆ ವಿಚಾರಿಸಿದಾಗ ಭಿಕ್ಷುಗಳು ಸಂಘಕ್ಕೆ ಸೇರಿಸಲು ಒಪ್ಪಲಿಲ್ಲ
ಎಂದು ಆತನು ಹೇಳಿದನು. ಆಗ ಭಗವಾನರು ಎಲ್ಲಾ ಭಿಕ್ಷುಗಳನ್ನು ಕರೆಸಿದರು. ಈ ವೃದ್ಧನಿಂದ
ನಿಮ್ಮಲ್ಲಿ ಯಾರಿಗಾದರೂ ಒಳಿತಾಗಿದೆಯೇ ಎಂದು ಭಗವಾನರು ಕೇಳಿದರು. ಆಗ ಸಾರಿಪುತ್ತರು ಒಮ್ಮೆ ಆ
ವೃದ್ಧನು ಅವರಿಗೆ ಅನ್ನ ನೀಡಿದ್ದು ಒಪ್ಪಿಕೊಂಡರು. ಆಗ ಭಗವಾನರು ಹೀಗೆ ಹೇಳಿದರು ಹಾಗಿದ್ದಾಗ,
ನಿನ್ನ ಶುಭಚಿಂತಕನಿಗೆ ಸಂಸಾರ ದುಃಖದಿಂದ ಪಾರು ಮಾಡಲು
ಸಹಾಯ ಮಾಡಲಾರೆಯಾ? ಎಂದರು. ಆಗ
ಸಾರಿಪುತ್ತರು ಆತನಿಗೆ ದೀಕ್ಷೆ ನೀಡಿದರು. ನಂತರ ಆತನಿಗೆ ಕಠಿಣವಾದ ನಿಯಮಗಳನ್ನು ಹಾಕಿದರು. ಆ
ವೃದ್ಧನು ಸಹಾ ಅದರಂತೆಯೇ ಪರಿಶ್ರಮಪಟ್ಟು ಅರಹಂತನಾದನು.
ಭಿಕ್ಷುಗಳಿಗೆ ಆಶ್ಚರ್ಯವಾಗಿ ಈ ವಿಷಯವನ್ನು ಬುದ್ಧರ ಬಳಿಗೆ
ತಂದರು. ಆಗ ಭಗವಾನರು ಆ ವೃದ್ಧನನ್ನು ಮೆಚ್ಚಿ ಈ ಮೇಲಿನ ಗಾಥೆಯನ್ನು ತಿಳಿಸಿದರು
No comments:
Post a Comment