ಇಂದ್ರೀಯ ಕ್ಷೇತ್ರ ಜಯಿಸುವುದು ಕಷ್ಟಕರ
ಮನುಷ್ಯರಲ್ಲಿ
ಕೆಲವರು ಮಾತ್ರ ಆಚೆಯ ದಡವನ್ನು ದಾಟಿರುವರು, ಮಿಕ್ಕವರೆಲ್ಲಾ ಈ ದಡದಲ್ಲಿಯೇ ಅಡ್ಡಾಡುತ್ತಿರುವರು. (85)
ಆದರೆ ಯಾರು
ಚೆನ್ನಾಗಿ ವಿವರಿಸಲ್ಪಟ್ಟಿರುವ ಈ ಧಮ್ಮವನ್ನು ನಿಷ್ಠೆಯಿಂದ ಪಾಲಿಸಿರುವರೋ, ಅವರು ಮಾತ್ರ ಆಚೆಯ (ನಿಬ್ಬಾಣ) ದಡವನ್ನು
ತಲುಪುತ್ತಾರೆ. ಆದರೆ ಇಂದ್ರೀಯಗಳ ಭಾವೋದ್ರೇಕಗಳ ಕ್ಷೇತ್ರವನ್ನು ಜಯಿಸುವುದು ಅತ್ಯಂತ ಕಷ್ಟಕರ. (86)
ಗಾಥ ಪ್ರಸಂಗ 6.10
ಬಹಳಷ್ಟು ಮಂದಿ ಈ ಲೋಕಗಳಿಗೆ ಬಂಧಿತರು
ಒಮ್ಮೆ ಶ್ರಾವಸ್ತಿಯ ಒಂದು ಗುಂಪು ಭಿಕ್ಷುಗಳಿಗೆ
ಒಟ್ಟಾಗಿ ದಾನ ಮಾಡಿದರು. ಭಿಕ್ಷುಗಳಿಗೆ ನಾನಾರೀತಿಯ ಸತ್ಕಾರ ಮಾಡಿದರು. ಆಗ ಭಿಕ್ಷುಗಳು
ಧಮ್ಮಾದಾನ ಮಾಡಲು ನಿರ್ಧರಿಸಿದರು. ಅವರು ಕೆಲವು ಭಿಕ್ಷುಗಳಿಗೆ ರಾತ್ರಿಯಿಡೀ ಬೋಧನೆ ಮಾಡಲು
ಆಜ್ಞಾಪಿಸಿ ಹೊರಟರು. ಭಿಕ್ಷುಗಲು ನಿಷ್ಠೆಯಿಂದ ಬೋಧಿಸತೊಡಗಿದರು. ಆದರೆ ಎಲ್ಲರಿಗೂ ರಾತ್ರಿಯಿಡೀ
ಬೋಧನೆ ಕೇಳಲು ಸಾಧ್ಯವಾಗಲಿಲ್ಲ. ಬಹಳಷ್ಟು ಜನರು ರಾತ್ರಿಯಿಡೀ ಇರಲು ಆಗದೆ ಮನೆಗೆ
ಹಿಂದಿರುಗಿದರು. ಬಹಳಷ್ಟು ಜನರು ಮನೆಗೆ ಹೋಗದಿದ್ದರೂ ತೂಗಾಡಿಕೆ ಮತ್ತು ನಿದ್ರೆಗೆ
ಶರಣಾಗತರಾದರು. ಆದರೆ ಕೆಲವರು ಮಾತ್ರ ಬೋಧನೆಯನ್ನು ರಾತ್ರಿಯಿಡೀ ಶ್ರದ್ಧೆಯಿಂದ ಧಮ್ಮವನ್ನು
ಆಲಿಸಿದರು.
No comments:
Post a Comment