ಕಶ್ಮಲ ರಹಿತರು ಸ್ವತಂತ್ರರಾಗಿರುತ್ತಾರೆ
“ಯಾರ ಅಸ್ರವಗಳು
ನಾಶವಾಗಿದೆಯೋ, ಯಾರು ಆಹಾರದಲ್ಲಿ
ಅಂಟದೆ ಇರುವರೋ, ಯಾರ ಗಮ್ಯಸ್ಥಾನವು
ಶೂನ್ಯವೂ, ಚಿಹ್ನೆರಹಿತವೂ ಆದ
ವಿಮುಕ್ತಿಯಾಗಿದೆಯೋ ಅಂತಹವರನ್ನು ಆಕಾಶದಲ್ಲಿರುವ ಪಕ್ಷಿಗಳ ರೀತಿ ನೋಡಲಾಗುವುದಿಲ್ಲ” (93)
ಗಾಥ ಪ್ರಸಂಗ 7.4
ಶುದ್ಧ ಭಿಕ್ಷುವಿಗೆ ದೇವತೆಯ ಸಹಾಯ
ಒಂದುದಿನ ಪೂಜ್ಯ ಅನುರುದ್ದರವರು ಚೀವರನ್ನು ತಯಾರಿಸಲು
ಚಿಂದಿ ಬಟ್ಟೆಗಳನ್ನು ಹುಡುಕಾಡುತ್ತಿದ್ದರು. ಏಕೆಂದರೆ ಅವರ ಹಳೆಯ ಚೀವರ ಹರಿದು
ಶಿಥಿಲಗೊಂಡಿತ್ತು. ಆಗ ಅದನ್ನು ಅವರ ಮೂರನೆಯ ಹಿಂದಿನ ಜನ್ಮದ ಪತ್ನಿಯಾದ ಜಾಲಿನಿ ವೀಕ್ಷಿಸಿದಳು.
ಆಕೆ ಈಗ ತಾವತಿಂಸ ಲೋಕದ ದೇವತೆಯಾಗಿದ್ದಳು. ಆಗ ಆಕೆಯು ಅವರಿಗಾಗಿ ಮೂರು ವಸ್ತ್ರಗಳ ತುಂಡುಗಳನ್ನು
ಅವರು ಹುಡುಕುತ್ತ ಬರುವಲ್ಲಿಗೆ ಇಟ್ಟಳು. ನಂತರ ಹುಡುಕುತ್ತ ಬಂದಂತಹ ಅನುರುದ್ದರವರಿಗೆ ಅದು
ಸಿಕ್ಕಾಗ ಅದನ್ನು ವಿಹಾರಕ್ಕೆ ಕೊಂಡು ಹೋದರು. ಆಗ ಅವರಿಗಾಗಿ ಚೀವರ ತಯಾರಿಸಲು ಸ್ವಯಂ ಬುದ್ಧರು,
ಅಗ್ರಶಾವಕರು ಮತ್ತು ಹಿರಿಯ ಭಿಕ್ಷುಗಳಿದ್ದರು.
ನಂತರ ಜಾಲಿನಿಯು ಹಳ್ಳಿಗೆ ಬಂದು ಅಲ್ಲಿನ ಜನರಿಗೆ ಬುದ್ಧರಿಗೆ
ಮತ್ತು ಸಂಘಕ್ಕೆ ಸ್ವಾದಿಷ್ಟ ಆಹಾರ ನೀಡುವಂತೆ ಪ್ರೋತ್ಸಾಹಿಸಿದಳು. ಅದರಂತೆಯೇ ಆ ಜನರೆಲ್ಲರೂ
ಬುದ್ಧರಿಗೆ ಮತ್ತು ಭಿಕ್ಷು ಸಂಘಕ್ಕೆ ತೃಪ್ತಿಯಾಗುವಷ್ಟು ಸ್ವಾದಿಷ್ಟ ಆಹಾರ ಬಡಿಸಿದರು. ಬೇರೆಡೆಯ
ಭಿಕ್ಷುಗಳಿಗೆ ಇದು ಆಶ್ಚರ್ಯವಾಗಿ ಈ ರೀತಿ ಚಚರ್ಿಸಿದರು ಪೂಜ್ಯ ಅನುರುದ್ದರು ತಮ್ಮ
ಬಂಧು-ಮಿತ್ರರಲ್ಲಿ ಆಹಾರವನ್ನು ಕೇಳಿರಬಹುದು ಅಥವಾ ಅವರಿಗೆ ತಾವು ಹೆಚ್ಚಿನ ಉಪಾಸಕರನ್ನು
ಪಡೆದಿದ್ದೇವೆ ಎಂದು ತೋರಿಸಿಕೊಳ್ಳುವ ಬಯಕೆ ಇದ್ದಿರಬಹುದು ಒಮ್ಮೆ ಅದನ್ನು ಆಲಿಸಿದ ಭಗವಾನರು
ಅವರಿಗೆ ಹೀಗೆ ಹೇಳಿದರು ಅರಹಂತರಲ್ಲಿ ಆಸಕ್ತಿಯಿರುವುದಿಲ್ಲ. ಇದಕ್ಕೆ ಅವರ ಹಿಂದಿನ ಜನ್ಮದ
ಪತ್ನಿಯೇ ಕಾರಣ ಎಂದು ತಿಳಿಸಿ ಈ ಗಾಥೆಯನ್ನು ನುಡಿದರು
No comments:
Post a Comment