Sunday, 15 March 2015

dhammapada/arahantavagga/7.8/saariputta

ಕೇವಲ ಶ್ರದ್ಧೆಯಿಂದಲೇ ನಿಬ್ಬಾಣ ಸಿಗುವುದಿಲ್ಲ
ಯಾರು ಸುಲಭವಾಗಿ ನಂಬುವವನಲ್ಲವೋ, ಯಾರು ಅನಿಮರ್ಿತ (ಅಕತ) (ನಿಬ್ಬಾಣ)ವನ್ನು ಅರಿತಿರುವನೋ, ಯಾರು ಕೊಂಡಿಗಳನ್ನು ಕತ್ತರಿಸಿರುವನೋ, ಯಾರು ತನ್ನ ಪ್ರಯಾಣವನ್ನು ಅಂತ್ಯ ಮಾಡಿರುವನೋ ಮತ್ತು ಯಾರು ಎಲ್ಲಾ ಬಯಕೆಗಳನ್ನು ವಾಂತಿ ಮಾಡಿರುವನೋ, ಅಂತಹವನು ನಿಜಕ್ಕೂ ಉತ್ತಮ ಪುರುಷನಾಗಿದ್ದಾನೆ.         (97)
ಗಾಥ ಪ್ರಸಂಗ 7.8
ವೈಯಕ್ತಿಕ ಅನುಭವವನ್ನು ಮಾತ್ರ ನಂಬಿ

                30 ಮಂದಿ ಭಿಕ್ಷುಗಳು ಜೇತವನಕ್ಕೆ ಬಂದು ಬುದ್ಧರಿಗೆ ವಂದಿಸಿದರು. ಭಗವಾನರಿಗೂ ಸಹ ಈ ಭಿಕ್ಷುಗಳು ಅರಹಂತರಾಗಲು ಪಕ್ವವಾಗಿದ್ದಾರೆ ಎಂದು ಅರಿವಾಯಿತು. ಆಗ ಅವರು ಸಾರಿಪುತ್ತರನ್ನು ಕರೆಸಿದರು. ಸಾರಿಪುತ್ತರು ಬಂದಾಗ ಅವರು ಹೀಗೆ ಪ್ರಶ್ನಿಸಿದರು.
                ಸಾರಿಪುತ್ತ, ನನ್ನ ಮಗು ನೀನು ಈ ವಿಷಯವನ್ನು ಒಪ್ಪುವೆಯಾ? ಇಂದ್ರೀಯಗಳಲ್ಲಿ ಧ್ಯಾನಿಸಿದಾಗ ಒಬ್ಬನು ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾನೆ?
                ಆಗ ಸಾರಿಪುತ್ರರು ಹೀಗೆ ಉತ್ತರಿಸಿದರು ಭಂತೆ, ನಿಮ್ಮಲ್ಲೇ ಶ್ರದ್ಧೆಯಿದೆ ಎಂಬ ಮಾತ್ರಕ್ಕೆ ನಾನು ಇದನ್ನು ಒಪ್ಪಲಾರೆ. ಯಾರಿಗೆ ವೈಯಕ್ತಿಕವಾಗಿ ಅನುಭವ ಆಗಿಲ್ಲವೋ ಅಂತಹವರು ಪರರಿಂದ ಇದನ್ನು ಒಪ್ಪಬಹುದು.
                ಈ ಉತ್ತರದ ಅರ್ಥವನ್ನು ತಿಳಿಯದ ಭಿಕ್ಷುಗಳು ಹೀಗೆ ಭಾವಿಸಿದರು ಸಾರಿಪುತ್ತರಲ್ಲಿ ಇನ್ನೂ ಮಿಥ್ಯಾ ದೃಷ್ಟಿಗಳು ಪರಿತ್ಯಜಿಸಿಲ್ಲ. ಆದ್ದರಿಂದಲೇ ಅವರಿಗೆ ಬುದ್ಧರಲ್ಲಿ ಶ್ರದ್ಧೆಯಿಲ್ಲ.
                ಆಗ ಬುದ್ಧರು ಅವರ ಮಿಥ್ಯಾಗ್ರಹಿಕೆಯನ್ನು ಹೀಗೆ ಹೇಳಿ ದೂರೀಕರಿಸಿದರು.

                ಭಿಕ್ಷುಗಳೇ, ಸಾರಿಪುತ್ತರವರ ಉತ್ತರದ ಅರ್ಥ ಹೀಗಿದೆ. ಏನೆಂದರೆ, ನಿಬ್ಬಾಣವನ್ನು ಇಂದ್ರೀಯಗಳಲ್ಲಿ ಧ್ಯಾನಿಸಿದಾಗ ಸಾಕ್ಷಾತ್ಕರಿಸಬಹುದು ಎಂಬ ಸತ್ಯವನ್ನು ಸ್ವೀಕರಿಸುತ್ತಾರೆ. ಆದರೆ ಅದು ವೈಯಕ್ತಿಕವಾಗಿ ಅನುಭವಿಸಿದಾಗ ಮಾತ್ರ ಹೊರತು, ನಾನು ಅಥವಾ ಪರರು ಹೇಳಿದ್ದು ಎಂದು ನಂಬಿ ಒಪ್ಪುವುದಿಲ್ಲ. ಸಾರಿಪುತ್ತರಿಗೆ ನನ್ನ ಮೇಲೆ ಶ್ರದ್ಧೆಯಿದೆ. ಹಾಗೆಯೇ ಕುಶಲ ಅಕುಶಲಗಳ ಪರಿಣಾಮಗಳಲ್ಲೂ ಶ್ರದ್ಧೆಯಿದೆ ಎಂದು ಹೇಳಿ ಈ ಗಾಥೆ ನುಡಿದರು.

No comments:

Post a Comment