Sunday, 15 March 2015

dhammapada/arahantavagga/7.7/kosambivasitissa

ಅರಹಂತರ ಅಚಲ ಶಾಂತತೆ
ಶಾಂತವು ಆತನ ಮನಸ್ಸು, ಶಾಂತವು ಆತನ ಮಾತು ಮತ್ತು ಕರ್ಮಗಳು ಸಹಾ, ವಿಮುಕ್ತಿಯ ಜ್ಞಾನದಲ್ಲಿ ಪರಿಪೂರ್ಣನು ಆದ ಆತನು ಪ್ರಶಾಂತ ಆಂತರಿಕವುಳ್ಳವನು ಮತ್ತು ಏರಿಳಿತಗಳಲ್ಲಿ ಅಚಲನು ಆಗಿರುತ್ತಾರೆ.       (96)”
ಗಾಥ ಪ್ರಸಂಗ 7.7
ಬಾಲಕನಾದರೂ ಬಲಿಷ್ಠ ಅರಹಂತ

                ಕೋಸಂಬಿಯ ನಿವಾಸಿಯಾದ ತಿಸ್ಸನು ಸಂಘಕ್ಕೆ ಸೇರಿದನು. ಅಂದಿನಿಂದ ಆತನಿಗೆ ಕೋಸಂಬಿವಾಸಿ ತಿಸ್ಸ ಎಂದು ಕರೆಯತೊಡಗಿದರು. ಆತ ವರ್ಷವಾಸ ಕೋಸಂಬಿಯಲ್ಲಿ ಕಳೆಯುವಾಗ ಆತನ ಪೋಷಕ ಉಪಾಸಕ ಆತನಿಗಾಗಿ 3 ಚೀವರಗಳು, ತುಪ್ಪ, ತಾಳೆಯ ಸಕ್ಕರೆ, ಇವೆಲ್ಲಾ ಆತನ ಪಾದದ ಬಳಿ ಇಟ್ಟು ಪೂಜ್ಯರೇ, ನಿಮಗೆ ಸೇವೆ ಸಲ್ಲಿಸಲು ಯಾವ ಸಾಮಣೇರ ಇಲ್ಲವೆಂದು ಕೇಳಿದ್ದೇನೆ, ಆದ್ದರಿಂದ ನನ್ನ ಮಗನಿಗೆ ಸಾಮಣೇರನನ್ನಾಗಿ ಮಾಡಿ, ನಿಮಗೆ ಸೇವೆ ಸಲ್ಲಿಸಲು ಕಳುಹಿಸುತ್ತೇನೆ ಎಂದನು. ತಿಸ್ಸ ಭಿಕ್ಷುವು ಸಹಾ ಸಂತೋಷದಿಂದ ಒಪ್ಪಿದನು. ಆಗ ಆ ಬಾಲಕನಿಗೆ ಕೇವಲ 7 ವರ್ಷ ಮಾತ್ರ ವಯಸ್ಸಾಗಿತ್ತು. ಆಗ ಆ ಬಾಲಕನಿಗೆ ತಲೆ ಬೋಳಿಸಲು ತಲೆಯನ್ನು ನೆನೆಸಲಾಯಿತು. ಅದೇವೇಳೆ ಆತನಿಗೆ ಕಾಯಾಗತಾನುಸತಿ ಧ್ಯಾನವನ್ನು ತಿಳಿಸಿದನು. ಆತ ಕ್ಷೌರ ಕತ್ತಿಯನ್ನು ಆತನ ತಲೆಗೆ ಸ್ಪಶರ್ಿಸುವಾಗಲೇ ಆ ಬಾಲಕನು ಅರಹಂತನಾದನು. ತಿಸ್ಸರವರು ಸಮಣೇರನೊಂದಿಗೆ 15 ದಿನ ಕಾಲ ಕೋಸಂಬಿಯಲ್ಲಿದ್ದರು. ನಂತರ ಬುದ್ಧರನ್ನು ದಶರ್ಿಸುವ ಆಕಾಂಕ್ಷೆಯಿಂದ ಅವರು ಅಲ್ಲಿಂದ ಹೊರಟರು. ದಾರಿಯಲ್ಲಿ ಅವರು ವಿಹಾರವನ್ನು ಪ್ರವೇಶಿಸಿದರು. ಅಲ್ಲಿ ಆ ಬಾಲಕ ರಾತ್ರಿಯಿಡೀ ಧ್ಯಾನದಲ್ಲಿ ತಲ್ಲೀನನಾದನು.
                ಮರುದಿನ ಆ ತಿಸ್ಸ, ಬಾಲಕನನ್ನು ಎಬ್ಬಿಸಲು ಹೋಗಿ, ಬಾಲಕನಿಗೆ ತಾಳೆಯ ಎಲೆಯಿಂದ ಚುಚ್ಚಿದನು. ಆ ಚುಚ್ಚುವಿಕೆಯಿಂದ ಬಾಲಕನಿಗೆ ಒಂದು ಕಣ್ಣು ಹೋಯಿತು. ಆದರೂ ಆ ಬಾಲಕ ಅದನ್ನು ತೋರಿಸಿಕೊಳ್ಳಲಿಲ್ಲ. ಮುಂದೆ ಆ ಬಾಲಕನಿಗೆ ಕೋಸಂಬಿಯ ತಿಸ್ಸನು ಅಪಾರ ಕೆಲಸಗಳನ್ನು ಹೇಳಿ ಮಾಡಿಸಿದನು. ಆದರೂ ಆ ಬಾಲಕ ತಾನು ಅಂಧನಾಗಿದ್ದೇನೆ ಎಂದು ಹೇಳಿಕೊಳ್ಳಲಿಲ್ಲ. ಮರುದಿನ ಒಂದು ಕೈಯಲ್ಲಿ ನೀರು ನೀಡಲು ಹೋದಾಗ ತಿಸ್ಸನಿಗೆ ತನ್ನ ತಪ್ಪಿನಿಂದ ಬಾಲಕ ಅಂಧನಾಗಿರುವುದು ತಿಳಿಯಿತು. ಆಗ ಬಾಲಕ ಎಲ್ಲವನ್ನೂ ತಿಳಿಸಿದನು. ಇಷ್ಟಾದರೂ ಸಹಾ ಬಾಲಕ ವಿಚಲಿತನಾಗಲಿಲ್ಲ. ತಿಸ್ಸ ಬಾಲಕನ ಬಳಿ ಕ್ಷಮೆಯಾಚಿಸಿದನು. ಆದರೆ ಅದಕ್ಕೆ ಬಾಲಕ ಈ ರೀತಿ ಉತ್ತರಿಸಿದನು. ಇದು ನಿಮ್ಮ ತಪ್ಪು ಅಲ್ಲ, ನನ್ನದು ಅಲ್ಲ. ಹಿಂದಿನ ಜನ್ಮದ ಪಾಪದ ಫಲವಾಗಿದೆ. ಆದರೂ ತಿಸ್ಸನಿಗೆ ಅಪಾರ ಪಶ್ಚಾತ್ತಾಪವುಂಟಾಯಿತು. ಆತನು ಬುದ್ಧರ ಬಳಿಗೆ ಬಾಲಕನನ್ನು ಕರೆತಂದು ಭಗವಾನರಲ್ಲಿ ಈ ವಿಷಯವೆಲ್ಲಾ ತಿಳಿಸಿದನು.

                ಭಗವಾನ್ ಈ ಸಮಣೇರನಲ್ಲಿ ಅತ್ಯಂತ ಶ್ರೇಷ್ಠಗುಣಗಳಿವೆ. ಅಂತಹವನನ್ನು ನಾನು ಎಂದೂ ಕಾಣಲಿಲ್ಲ ಎಂದನು. ಆಗ ಭಗವಾನರು ಹೀಗೆಂದರು ನನ್ನ ಮಗು ಅರಹಂತನಾಗಿದ್ದಾನೆ, ಆತ ಎಂದಿಗೂ, ಯಾರಲ್ಲಿಯೂ, ಕೋಪಗೊಳ್ಳುವುದಿಲ್ಲ. ಆತನ ಇಂದ್ರೀಯಗಳು ಶಾಂತವಾಗಿವೆ, ಆತನು ಪರಿಪೂರ್ಣ ಪ್ರಶಾಂತ ಸ್ವರೂಪಿಯಾಗಿದ್ದಾನೆ ಎಂದು ಹೇಳಿ ಈ ಮೇಲಿನ ಗಾಥೆ ನುಡಿದರು. 

No comments:

Post a Comment