ಭಿಕ್ಷುವಿಗೆ ಆಹಾರದಲ್ಲಿ ಆಸಕ್ತಿ ಬೇಡ
“ಯಾರು ಏನನ್ನು
ಸಂಗ್ರಹಣೆ ಮಾಡುವುದಿಲ್ಲವೋ, ಯಾರಿಗೆ ಆಹಾರದ
ಪೂರ್ಣಸ್ವರೂಪ ತಿಳಿದು ಮಿತಿಯಿಂದಿರುವರೋ, ಯಾರ ಗುರಿಯು ಶೂನ್ಯವೂ, ಚಿಹ್ನೆರಹಿತವೂ ಆದ ವಿಮುಕ್ತಿಯು ಆಗಿದೆಯೋ ಅಂತಹವರ ಗಮ್ಯಸ್ಥಾನವನ್ನು
ಆಕಾಶದಲ್ಲಿ ಹಾರಿಹೋಗುವ ಪಕ್ಷಿಗಳ ರೀತಿಯಲ್ಲಿ ಪತ್ತೆಹಚ್ಚಲಾಗುವುದಿಲ್ಲ”. (92)
ಗಾಥ ಪ್ರಸಂಗ 7.3
ಭಿಕ್ಷುಗಳು ಸಂಗ್ರಹಕಾರರಲ್ಲ
ಪೂಜ್ಯ ಬೆಲ್ಲಟ್ಟಿಸೀಸ ಆಹಾರ ಅನ್ವೇಷಣೆಯಲ್ಲಿ ಹಳ್ಳಿಗೆ
ಹೋದರು. ಅಲ್ಲಿ ಆಹಾರ ಸ್ವೀಕರಿಸಿದ ನಂತರ ಮತ್ತೆ ಇನ್ನೊಮ್ಮೆ ಆಹಾರಕ್ಕಾಗಿ ಹೊರಟರು. ಸಾಕಷ್ಟು
ಆಹಾರ ಪಡೆದು ವಿಹಾರಕ್ಕೆ ಹಿಂತಿರುಗಿದರು. ನಂತರ ಅವರು ಅಕ್ಕಿಯನ್ನು ಒಣಗಿಸಿ, ಸಂಗ್ರಹಣೆ ಮಾಡಿದರು. ಹೀಗಾಗಿ ಅವರು ದಿನನಿತ್ಯ
ಆಹಾರಕ್ಕಾಗಿ ಹೊರಹೋಗುವ ಹಾಗಿರಲಿಲ್ಲ. ಇದರಿಂದಾಗಿ ಅವರು ಎರಡು ಅಥವಾ ಮೂರು ದಿನಗಳಷ್ಟು ಕಾಲ
ನಿರಂತರ ಧ್ಯಾನದಲ್ಲಿ ನಿರತರಾಗುತ್ತಿದ್ದರು. ಧ್ಯಾನದಿಂದೆದ್ದು, ಅವರು ಆ ಒಣಗಿದ ಅಕ್ಕಿಯನ್ನು ನೀರಿನಲ್ಲಿ ನೆನೆಸಿ ಅದನ್ನೇ ಸೇವಿಸಿ
ಧ್ಯಾನನಿರತರಾಗುತ್ತಿದ್ದರು. ಈ ವಿಷಯವನ್ನು ಗಮನಿಸಿದ ಭಿಕ್ಷುಗಳು ಈತ ಸಂಗ್ರಹಕಾರನೆಂದು ತಿಳಿದು
ಭಗವಾನರಲ್ಲಿ ಈ ವಿಷಯವನ್ನು ಗಮನಕ್ಕೆ ತಂದರು. ಏಕೆಂದರೆ ಭಿಕ್ಷುಗಳು ಸಂಗ್ರಹಣೆ
ಮಾಡುವಂತಿರಲಿಲ್ಲ.
ಭಗವಾನರು ಈ ವಿಷಯ ನಿಜವೇ ಎಂದು ವಿಚಾರಿಸಿದಾಗ
ಭಿಕ್ಷುವು ತಾನು ಸಂಗ್ರಹಣೆ ಮಾಡಿರುವುದು ಲೋಭಕ್ಕಾಗಿ ಅಲ್ಲ. ಬದಲಾಗಿ ಸಮಯ ಉಳಿಸುವುದಕ್ಕಾಗಿ
ಮತ್ತು ಧ್ಯಾನದಲ್ಲಿ ತೊಡಗುವುದಕ್ಕಾಗಿ ಎಂದು ಹೇಳಿದಾಗ ಭಗವಾನರು ಆತನಿಗೆ ನಿದರ್ೊಷಿ ಎಂದು
ಹೇಳಿದರು. ನಂತರ ಮೇಲಿನ ಈ ಗಾಥೆಯನ್ನು ನುಡಿದರು.
No comments:
Post a Comment