Sunday, 15 March 2015

dhammapada/arahantavagga/7.1/jeevaka

                              ಅರಹಂತ ವಗ್ಗ

ಅರಹಂತರಿಗೆ ಭಾವೋದ್ರೇಕದ ಜ್ವರವಿಲ್ಲ
ಯಾರ ಪ್ರಯಾಣವು ಪೂರ್ಣಗೊಂಡಿದೆಯೋ, ಯಾರು ಶೋಕರಹಿತರೊ, ಯಾರು ಸರ್ವದರಿಂದ ವಿಮುಕ್ತರಾಗಿರುವರೋ ಹಾಗು ಯಾರು ಬಂಧನಗಳ ಗಂಟುಗಳಿಂದ ಬಿಡುಗಡೆ ಹೊಂದಿರುವರೋ, ಅಂತಹವರಲ್ಲಿ ಭಾವೋದ್ರೇಕದ ಜ್ವರವು ಇರಲಾರದು.   (90)
ಗಾಥ ಪ್ರಸಂಗ 7.1
ಬುದ್ಧರಿಗೆ ವೈದ್ಯ ಜೀವಕ

                ದೇವದತ್ತನು ಅಜಾತಶತ್ರುವಿನೊಂದಿಗೆ ಕೂಡಿ ಬುದ್ಧರನ್ನು ಕೊಲ್ಲಲು ಪ್ರಯತ್ನಿಸಿದನು. ಆದರೆ ಬುದ್ಧರು ಕೊಲ್ಲಲು ಬಂದ ಪ್ರತಿಯೊಬ್ಬ ಬಿಲ್ಗಾರನನ್ನು ಪರಿವತರ್ಿಸಿದರು. ಆಗ ದೇವದತ್ತನು ಬುದ್ಧಭಗವಾನರಿಗು ಕೊಲ್ಲಲು ತಾನೇ ಮುಂದಾದನು. ಆತನು ಗೃದ್ಧಕೂಟ ಪರ್ವತ (ಬೆಟ್ಟ) ಏರಿ ಬುದ್ಧರಿಗೆ ಕಾಯುತ್ತಿದ್ದನು. ಆಗ ಅಲ್ಲಿಗೆ ಬರುತ್ತಿದ್ದ ಬುದ್ಧರ ಮೇಲೆ ದೊಡ್ಡ ಬಂಡೆ ಮೇಲಿನಿಂದ ತಳ್ಳಿ ಕೆಳಕ್ಕೆ ಉರುಳಿಸಿದನು. ಅದು ಸರಿಯಾಗಿ ಬುದ್ಧರ ಮೇಲೆಯೇ ಬಂದಿತು. ಆದರೆ ಕಡಿದಾದ ಪಾಶ್ರ್ವ ಬಂಡೆಗಳು ಅದನ್ನು ತಡೆಯಿತು. ಆದರೂ ಅಲ್ಲಿ ಡಿಕ್ಕಿ ಹೊಡೆದು ಚೂರೊಂದು ಭಗವಾನರ ಕಾಲಿನ ಹೆಬ್ಬೆರಳಿಗೆ ತಾಕಿ ರಕ್ತ ಹರಿಯತೊಡಗಿತು. ಭೀಕರವಾದ ಗಾಯ ಉಂಟಾಯಿತು. ಆಗ ಬುದ್ಧರನ್ನು ಜೀವಕರ ಬಳಿಗೆ ಕರೆತರಲಾಯಿತು. ಆಗ ಜೀವಕರು ಮುಲಾಮನ್ನು ಹಚ್ಚಿ ಪಟ್ಟಿ ಕಟ್ಟಿದರು. ನಂತರ ಬುದ್ಧರಿಗೆ ಹೀಗೆ ಹೇಳಿದರು: ಭಗವಾನ್ ನಾನು ರೋಗಿಯೊಬ್ಬನನ್ನು ಕಾಣಲು ನಗರಕ್ಕೆ ಹೋಗಬೇಕಾಗಿದೆ. ಆತನನ್ನು ನೋಡಿ ಹಾಗೆಯೇ ಹಿಂತಿರುಗುವೆ, ನಾನು ಬರುವವರೆಗೆ ಈ ಪಟ್ಟಿ ಹೀಗೆ ಇರಲಿ ಎಂದು ಹೇಳಿ ಅಪ್ಪಣೆ ಪಡೆದು ಆತನು ನಗರಕ್ಕೆ ಹೋದರು. ಆದರೆ ಆತನು ಹಿಂತಿರುಗಿ ಬರುವಾಗ ವೇಳೆಯಾಗಿ ನಗರದ ಬಾಗಿಲು ಮುಚ್ಚಿದ್ದರು. ಹೀಗಾಗಿ ಆತನು ಬರಲು ಸಾಧ್ಯವಿರಲಿಲ್ಲ. ಆತ ಆಗ ಈ ರೀತಿ ಪಶ್ಚಾತ್ತಾಪ ಪಡಲಾರಂಭಿಸಿದನು. ಓಹ್ ನನ್ನಿಂದ ಅತಿ ದೊಡ್ಡ ಪಾಪವುಂಟಾಯಿತು. ನಾನು ಬುದ್ಧರ ಕಾಲಿಗೆ ಸಾಮಾನ್ಯ ಮನುಷ್ಯನಿಗೆ ಕಟ್ಟುವ ರೀತಿ ಪಟ್ಟಿ ಕಟ್ಟಿದೆನು. ಈಗ ಅದು ಬಿಚ್ಚುವ ಸಮಯ. ಅದನ್ನು ಈಗ ಬಿಚ್ಚದೆ ರಾತ್ರಿ ಹಾಗೆ ಕಳೆದುಹೋದರೆ ಬುದ್ಧರಿಗೆ ಅಪಾರ ನೋವು ಉಂಟಾಗಬಹುದು ಎಂದು ಪರಿತಪಿಸಿದನು.
                ಅದೇ ವೇಳೆಯಲ್ಲಿ ಭಗವಾನರು ಪೂಜ್ಯ ಆನಂದರಿಗೆ ಹೀಗೆ ಹೇಳಿದರು ಆನಂದ ಜೀವಕನು ಸಂಜೆ ಹಿಂತಿರುಗುವಾಗ ನಿಧಾನವಾಗಿ, ಹೆಬ್ಬಾಗಿಲು ಮುಚ್ಚಲ್ಪಟ್ಟಿದೆ. ಈಗ ಗಾಯದ ಪಟ್ಟಿ ಬಿಚ್ಚುವ ಸಮಯ ಎಂದು ಆತನು ಕೊರಗುತ್ತಿದ್ದಾನೆ. ಆದ್ದರಿಂದ ಈ ಪಟ್ಟಿ ಬಿಚ್ಚು ಆಶ್ಚರ್ಯ! ಬಿಚ್ಚಿದ ನಂತರ ಗಾಯದ ಜೊತೆಗೆ ಗುರುತು ಮಾಯವಾಗಿತ್ತು.
                ಮುಂಜಾನೆ ಜೀವಕನು ಬುದ್ಧರಲ್ಲಿಗೆ ಓಡೋಡಿ ಬಂದನು. ಭಗವಾನ್ ತಾವು ಅಸಾಧ್ಯವಾದ ನೋವು ಏನಾದರೂ ಅನುಭವಿಸಿದಿರೆ?

                ಆಗ ಭಗವಾನರು ಜೀವಕ ಬುದ್ಧರಲ್ಲಿ ಎಲ್ಲ ದುಃಖಗಳು ನಾಶವಾಗಿರುತ್ತದೆ. ಯಾವಾಗ ಬೋಧಿಸತ್ವ ಬುದ್ಧರಾದರೋ ಆಗಲೇ ಎಲ್ಲಾ ದುಃಖಗಳು ನಶಿಸಿಹೋದವು ಎಂದು ಹೇಳಿ ಮೇಲಿನ ಗಾಥೆ ನುಡಿದರು. 

No comments:

Post a Comment