ಬುದ್ಧಿವಾದ ಹೇಳುವವರು ಸಾತ್ವಿಕರಿಗೆ ಸಂಸತ ನೀಡುತ್ತಾರೆ
ಬೋಧಿಸುವವನು
ಬುದ್ಧಿ ಹೇಳಿ ಎಚ್ಚರಿಸುವವನು, ಅಸಭ್ಯತೆಗಳ
ನಿವಾರಿಸುವವನು (ತಡೆಗಟ್ಟುವವನು) ಸಾತ್ವಿಕರಿಗೆ ಪ್ರಿಯನಾಗುವನು, ಅಸಾತ್ವಿಕರಿಗೆ ಅಪ್ರಿಯನಾಗುವನು (77)
ಗಾಥ ಪ್ರಸಂಗ 6.2
ಅಸಾತ್ವಿಕರಿಗೆ ಉಪದೇಶ ಅಪ್ರಿಯವಾಗಿರುತ್ತದೆ
ಭಿಕ್ಖು ಅಸ್ಸಜಿ ಮತ್ತು ಪುನಭಾನುಕ ಮತ್ತು ಅವರ
ಶಿಷ್ಯರು ಕಿಟಾಗಿರಿಯಲ್ಲಿ ತಂಗಿದ್ದರು. ಅವರು ಅಲ್ಲಿದ್ದಾಗ ಸ್ವಾರ್ಥಕ್ಕಾಗಿ ಹಣ್ಣಿನ ಗಿಡಗಳನ್ನು
ನೆಟ್ಟರು. ಅಷ್ಟೇ ಅಲ್ಲ, ಭಿಕ್ಷುವಿನ ಎಷ್ಟೋ ನಿಯಮಗಳನ್ನು ಅವರು ಮುರಿದರು. ಹೀಗೆ ಅವರು
ವಿಹಾರವನ್ನು ಗದ್ದಲಮಯ ಮಾಡಿ ಬೇರೆ ಭಿಕ್ಷುಗಳಿಗೆ ಅಶಾಂತಿ ತಂದರು.
ಈ ಭಿಕ್ಷುಗಳ ಬಗ್ಗೆ ಕೇಳಿದ ಭಗವಾನರು ಸಾರಿಪುತ್ತ
ಮತ್ತು ಮೊಗ್ಗಲಾನರವರಿಗೆ ಅವರನ್ನು ಸರಿಹಾದಿಗೆ ತರಲು ಕಳುಹಿಸಿದರು. ಸಾರಿಪುತ್ತ ಮತ್ತು
ಮೊಗ್ಗಲಾನರವರ ಬುದ್ಧಿವಾದ ಕೇಳಿದ ಬಹಳಷ್ಟು ಭಿಕ್ಷುಗಳು ಬದಲಾವಣೆ ಹೊಂದಿ ಶುದ್ಧ ಭಿಕ್ಷುಗಳಾದರು.
ಕೆಲವು ತಮ್ಮಿಂದಾಗದು ಎಂದು ಪುನಃ ಗೃಹಸ್ಥರಾದರು. ಉಳಿದವರನ್ನು ಬಹಿಷ್ಕಾರ ಹಾಕಲಾಯಿತು. ಆ
ಸಂದರ್ಭದಲ್ಲಿ ಭಗವಾನರು ಈ ಗಾಥೆಯನ್ನು ಹೇಳಿದರು.
No comments:
Post a Comment