Friday, 6 March 2015

dhammapada/panditavagga/6.5/pandita

ಪ್ರಜ್ಞಾವಂತರು ತಮ್ಮನ್ನು ಧಮಿಸಿಕೊಳ್ಳುತ್ತಾರೆ,
ನೀರು ಹಾಯಿಸುವವರು ನೀರಿಗೆ ದಾರಿ ಮಾಡುವರು, ಬಾಣ ನಿಮರ್ಾಣಗಾರರು ಬಾಣವನ್ನು ಬಾಗಿಸುವರು, ಬಡಗಿಕಾರರು ಮರವನ್ನು ಮಣಿಸುವರು ಮತ್ತು ಪಂಡಿತರು ತಮ್ಮನ್ನು ಧಮಿಸುವರು.          (80)
ಗಾಥ ಪ್ರಸಂಗ 6.5
ಬಾಲಕ ಸಮಣೇರನ ಸಾಧನೆ

                ಪಂಡಿತನೆಂಬ ಸಾಮನೇರನು ಅತಿ ಕಡಿಮೆ ವಯಸ್ಸಿನ ಬಾಲಕನಾಗಿದ್ದನು. ಬಾಲ್ಯದಲ್ಲೇ ವಿರಕ್ತನಾಗಿ ಸಾಮನೇರನಾಗಿದ್ದನು. ಆತನು ದೀಕ್ಷೆ ಪಡೆದ 8ನೆಯ ದಿನದಂದು ಪೂಜ್ಯ ಸಾರಿಪುತ್ರರ ಜೊತೆ ಒಮ್ಮೆ ಭಿಕ್ಷಾಟನೆಗೆ ಹೊರಟನು. ದಾರಿಯಲ್ಲಿ ಕೆಲವು ರೈತರು ನೀರಿಗೆ ದಾರಿಮಾಡಿ ನೀರನ್ನು ಹಾಯಿಸುತ್ತಿದ್ದರು. ಆಗ ಪಂಡಿತ ಸಾರಿಪುತ್ತರೊಂದಿಗೆ ಪ್ರಶ್ನಿಸಿದನು.
                ಪೂಜ್ಯರೇ ನೀರನ್ನು ನಮ್ಮ ಇಚ್ಛೆಯಂತೆ ಹೇಗೆ ಬೇಕಾದರೂ ಹಾಯಿಸಬಹುದೇ? ಸಾರಿಪುತ್ತ ಹೌದೆಂದರು. ಸ್ವಲ್ಪ ದೂರದಲ್ಲಿ ಒಬ್ಬನು ಬಾಣಗಳನ್ನು ಕಾಯಿಸುತ್ತಾ ನೇರ ಮಾಡುತ್ತಿದ್ದನು. ಇನ್ನೂ ಸ್ವಲ್ಪ ದೂರದಲ್ಲಿ ಬಡಗಿಕಾರರು ಮರಗಳನ್ನು ಕತ್ತರಿಸಿ ಗರಗಸದಿಂದ ನೇರಮಾಡಿ ಚಕ್ರಗಳನ್ನಾಗಿ ಸಿದ್ಧಮಾಡುತ್ತಿದ್ದರು.
                ಆಗ ಆ ಬಾಲಕ ಈ ರೀತಿ ಚಿಂತಿಸಲಾರಂಭಿಸಿದನು ನಮ್ಮ ಇಚ್ಛೆಯಂತೆ ನೀರನ್ನು ಹೇಗೆ ಬೇಕಾದರೂ ಹಾಯಿಸಬಹುದು, ನಮ್ಮ ಇಚ್ಛೆಯಂತೆ ಕಬ್ಬಿಣವನ್ನು ಸಹ ಬಾಣದಂತೆ ನೇರ ಮಾಡಬಹುದು, ನಮ್ಮ ಇಚ್ಛೆಯಂತೆ ಬಿದಿರುಗಳನ್ನು ಸಹ ನೇರ ಮಾಡಬಹುದು. ಇವೆಲ್ಲವೂ ನಿಜರ್ಿವ ವಸ್ತುಗಳಾಗಿವೆ. ನಾನು ನನ್ನ ಇಚ್ಛೆಯಂತೆ ಮನಸ್ಸನ್ನು ಗೆಲ್ಲುತ್ತೇನೆ, ಧ್ಯಾನವನ್ನು ಸಿದ್ಧಿಸುತ್ತೇನೆ ಮತ್ತು ಅರಹತ್ವ ಸಾಧಿಸುತ್ತೇನೆ ಎಂದು ಚಿಂತಿಸಲಾರಂಭಿಸಿದನು.
                ನಂತರ ಆತನು ಸಾರಿಪುತ್ತರಿಂದ ಅಪ್ಪಣೆ ಪಡೆದು ವಿಹಾರದಲ್ಲಿ ಧ್ಯಾನಿಸ ಲಾರಂಭಿಸಿದನು. ಆತನ ನಿಷ್ಠೆ ಗಮನಿಸಿ ದೇವತೆಗಳು ವಿಹಾರನ್ನು ನಿಶ್ಶಬ್ದವನ್ನಾಗಿಸಿದರು.  ಸ್ವಲ್ಪ ಕಾಲದಲ್ಲಿಯೇ ಆತನು ಆನಾಗಾಮಿಯಾದನು.

                ಆಗ ಸಾರಿಪುತ್ತರು ಆ ಬಾಲಕನಲ್ಲಿಗೆ ಹೊರಟರು. ಇದನ್ನು ಅರಿತ ಭಗವಾನರು ಸಾರಿಪುತ್ತರು ಅಲ್ಲಿಗೆ ಹೊರಟರೆ ಆತನಿಗೆ ಅರಹಂತತ್ವಕ್ಕೆ ಅಡ್ಡಿ ಎಂದು ಭಾವಿಸಿ, ದ್ವಾರದಲ್ಲೇ ಸಾರಿಪುತ್ತರಿಗೆ ನಿಲ್ಲಿಸಿ ಪ್ರಶ್ನಿಸಲಾರಂಭಿಸಿದರು. ಈ ರೀತಿ ಸಂಭಾಷಣೆ ನಡೆಯುತ್ತಿರುವಾಗಲೇ ಪಂಡಿತ ಅರಹಂತತ್ವವನ್ನು ಸಾಧಿಸಿದನು. ಅದು ಬಾಲಕನಾಗಿರು ವಾಗಲೇ, ಅದು ಸಂಘಕ್ಕೆ ಸೇರಿದ 8ನೆಯ ದಿನಕ್ಕೆ. ಆತನ ನಿಷ್ಠೆಗೆ ದೇವತೆಗಳು ಮತ್ತು ಬುದ್ಧರು ಸಹ ಸಹಾಯ ಮಾಡಿದರು. ಆತನ ಬಗ್ಗೆ ಬುದ್ಧರು ಈ ಗಾಥೆ ನುಡಿದರು.

No comments:

Post a Comment