ಶೀಲ-ಧ್ಯಾನದ ಶಿಸ್ತಿನಿಂದಲೇ ನಿಬ್ಬಾಣ
ಮಿಥ್ಯಾದೃಷ್ಟಿಯ
ಕಪ್ಪು ಧಮ್ಮವನ್ನು ವಿಸಜರ್ಿಸು, ಸುಪರಿಶುದ್ದಿಯ
ಬೆಳಗುವಂತಹದನ್ನು ಅಭಿವೃದ್ಧಿಸು, ಗೃಹತನದಿಂದ ದೂರಾಗಿ, ಅನಿಕೇತನಾಗಿ,
ಸಿದ್ಧಿಸಲು ಕಷ್ಟಕರವಾದ
ಏಕಾಂತತೆಯಲ್ಲಿ ನೆಲಸಲಿ. (87)
ಅಂತಹ ವಿಮುಕ್ತಿಯ
ಇಚ್ಛೆಗಳಲ್ಲಿ ಸ್ಥಿರನಾಗಿ, ಇಂದ್ರೀಯ
ಕಾಮಗಳನ್ನು ತೊರೆದು, ಏನೂ ಇಲ್ಲದವನಾಗಲಿ
(ಅಕಿಂಚನ) ಹೀಗೆ ಪಂಡಿತನು ತನ್ನನ್ನು ಚಿತ್ತಕ್ಲೇಷಗಳಿಂದ ಶುದ್ಧೀಕರಿಸಲಿ (88)
ಯಾರ ಚಿತ್ತವು
ಸಂಬೋಧಿ ಅಂಗಗಳಲ್ಲಿ ಸುಅಭಿವೃದ್ಧಿ ಹೊಂದಿದೆಯೋ, ಯಾರು ಹಿಡಿಯುವುದನ್ನು ಬಿಟ್ಟಿರುವವರೋ, ಅಂಟುವಿಕೆಯಿಂದ ರಹಿತರಾಗಲು ಆನಂದಿಸುವರೋ, ಅಂತಹ ಕ್ಷೀಣಾ ಅಸವರಾದ ಪ್ರಜ್ಞಾ-ಜ್ಯೋತಿ ಸ್ವರೂಪವಂತರು
ಈ ಲೋಕದಲ್ಲಿಯೇ ಪರಿನಿಬ್ಬಾಣ ಪಡೆಯುತ್ತಾರೆ. (89)
ಗಾಥ ಪ್ರಸಂಗ 6.11
ಬಹಳಷ್ಟು ಮಂದಿ ಈ ಲೋಕಗಳಿಗೆ ಬಂಧಿತರು
50 ಜನ ಭಿಕ್ಷುಗಳು ಕೋಸಲ ರಾಜ್ಯದಲ್ಲಿ ವಷರ್ಾವಾಸ
ಕಳೆದರು. ನಂತರ ಭಗವಾನರನ್ನು ಕಾಣಲು ಜೇತವನಕ್ಕೆ ಬಂದರು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತರು.
ನಂತರ ತಮ್ಮ ಅನುಭವಗಳನ್ನು ಹೇಳಿದರು. ಆಗ ಭಗವಾನರು ಅವರಿಗೆ ಈ ಮೇಲಿನ ಗಾಥೆಯಿಂದ ಉಪದೇಶಿಸಿದರು.
No comments:
Post a Comment