Sunday, 15 March 2015

dhammapada/arahantavagga/7.5/mahakaccayana

ಸರ್ವ ಇಂದ್ರೀಯ ಸಂಯಮಿಗಳು ಸರ್ವರಿಗೆ ಪ್ರಿಯರಾಗಿರುತ್ತಾರೆ
ಹೇಗೆ ಸಾರಥಿಯಿಂದ ಕುದುರೆಗಳು ಪಳಗಿಸಲ್ಪಟ್ಟಿರುವವೋ ಅದೇ ರೀತಿಯಲ್ಲಿ ಯಾರ ಇಂದ್ರೀಯಗಳು ಶಾಂತವಾಗಿದೆಯೋ, ಅಹಂಕಾರವು ವಜರ್ಿಸಲ್ಪಟ್ಟಿದೆಯೋ, ಅಸವರಹಿತರಾಗಿರುವರೋ ಅಂತಹವರನ್ನು ದೇವತೆಗಳು ಸಹಾ ಪ್ರಿಯರೆಂದು ಭಾವಿಸುತ್ತಾರೆ.            (94)
ಗಾಥ ಪ್ರಸಂಗ 7.5
ಅರಹಂತರನ್ನು ಇಂದ್ರಾದಿ ದೇವತೆಗಳು ಪೂಜಿಸುವರು

                ಒಮ್ಮೆ ವಷರ್ಾವಾಸದ ಕೊನೆಯ ಪೂಣರ್ಿಮೆಯಂದು ಭಗವಾನರು ಮಿಗಾರ ಮಾತಾರವರ ವಿಹಾರದ ಕಟ್ಟಡದಲ್ಲಿ ಕುಳಿತಿದ್ದರು. ಅವರ ಸುತ್ತಲು ಭಿಕ್ಷುಗಳು ಇದ್ದರು. ಆ ಸಮಯದಲ್ಲಿ ಮಹಾ ಕಚ್ಚಾಯನರವರು ಅವಂತಿ ರಾಜ್ಯದಲ್ಲಿದ್ದರು. ಅವರು ದೂರದಲ್ಲಿದ್ದರು ಸಹ ಧಮ್ಮವನ್ನು ಆಲಿಸಲು ಇಲ್ಲಿಗೆ ಬರುತ್ತಿದ್ದರು. ಆದ್ದರಿಂದ ಅವರಿಗಾಗಿ ಒಂದು ಪೀಠವನ್ನು ಖಾಲಿಯಾಗಿಯೇ ಬಿಡಲಾಗಿತ್ತು.
                ಸಕ್ಕರವರು ದೇವೇಂದ್ರನಾಗಿದ್ದರೂ ಅವರು ಬುದ್ಧರ ಬಳಿಗೆ ಬರುವಾಗ ಎರಡು ಲೋಕದ ದೇವತೆಗಳನ್ನು ಬರಮಾಡಿಕೊಂಡು ಬರುತ್ತಿದ್ದರು ಮತ್ತು ಬುದ್ಧರಿಗೆ ದಿವ್ಯವಾದ ಸುಗಂಧಗಳಿಂದ ಮತ್ತು ಹೂಗಳಿಂದ ಪೂಜಿಸುತ್ತಿದ್ದರು. ಈ ಬಾರಿ ಸಕ್ಕರವರು ಬಂದಾಗ ಕಚ್ಚಾಯನರವರ ಪೀಠ ಖಾಲಿಯಾಗಿರುವುದು ಕಂಡು ಪೂಜ್ಯ ಕಚ್ಚಾಯನರವರು ಎಲ್ಲೂ ಕಾಣುತ್ತಿಲ್ಲವಲ್ಲ? ಅವರು ಹತ್ತಿರ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಯೋಚಿಸಿದ ಕ್ಷಣದಲ್ಲೆ, ಕಚ್ಚಾಯರು ಪ್ರತ್ಯಕ್ಷರಾದರು. ಆಗ ಸಕ್ಕರವರು ಪೂಜ್ಯ ಕಚ್ಚಾಯನರ ಪಾದಗಳನ್ನು ಹಿಡಿದುಕೊಂಡು ಆನಂದದಿಂದ ಸುಗಂಧ ಮತ್ತು ಹೂಗಳಿಂದ ಪೂಜಿಸಿದರು.

                ಅದನ್ನು ಕಂಡ ಕೆಲವು ಭಿಕ್ಷುಗಳು ಇದು ಇಂದ್ರನ ಪಕ್ಷಪಾತವೆಂದು ಮಾತನಾಡಿಕೊಂಡಾಗ ಭಗವಾನರು ಭಿಕ್ಷುಗಳೇ, ಕಚ್ಚಾಯನರಂತಹ ಇಂದ್ರೀಯ ಶಾಂತರನ್ನು ಮಾನವರಷ್ಟೇ ಅಲ್ಲ, ದೇವತೆಗಳು ಪ್ರಿಯರೆಂದು ಭಾವಿಸುವರು ಎಂದು ಹೇಳಿ ಈ ಮೇಲಿನ ಗಾಥೆಯನ್ನು ನುಡಿದರು. 

No comments:

Post a Comment