Sunday, 15 March 2015

dhammapada/arahantavagga/7.9/revata

ಅರಹಂತರ ವಾಸಸ್ಥಳ ರಮಣೀಯವಾದುದು
ಗ್ರಾಮದಲ್ಲೇ ಆಗಲಿ, ಅರಣ್ಯದಲ್ಲೇ ಆಗಲಿ, ಕಣಿವೆಯಲ್ಲೇ ಆಗಲಿ ಅಥವಾ ಬೆಟ್ಟದಲ್ಲೇ ಆಗಲಿ, ಎಲ್ಲೆಲ್ಲಿ ಅಹರಂತರು ವಿಹರಿಸುವರೋ ಆ ಭೂಮಿಯೆಲ್ಲಾ ಅತಿ ರಮಣೀಯವಾಗಿರುತ್ತದೆ.           (98)
ಗಾಥ ಪ್ರಸಂಗ 7.9
ಸಾರಿಪುತ್ತರ ಕೊನೆಯ ತಮ್ಮ ರೇವತ

                ರೇವತರು ಸಾರಿಪುತ್ತರ ಕೊನೆಯ ತಮ್ಮನಾಗಿದ್ದರು. ಆತನ ಮನೆಯಲ್ಲೇ ಆತನ ಹೊರತು ಎಲ್ಲರೂ ಭಿಕ್ಷುಗಳಾಗಿದ್ದರು. ಆದ್ದರಿಂದಾಗಿ ಆತನ ತಂದೆ-ತಾಯಿಗಳು ತುಂಬಾ ಕಾಳಜಿಯಿಂದ ಆತನ ವಿವಾಹಕ್ಕೆ ಸಿದ್ಧತೆ ನಡೆಸುತ್ತಿದ್ದರು. ರೇವತ ಇನ್ನೂ 12 ವರ್ಷದವನಾಗಿದ್ದನು. ಆತನಿಗೆ ಎಳೆಯ ಕನ್ಯೆಯೊಡನೆ ನಿಶ್ಚಿತಾರ್ಥ ಮಾಡುತ್ತಿದ್ದರು. ಆಗ ಅವರಿಗೆ ದೀಘರ್ಾಯುವಾಗುವಂತೆ ಹರಸಿದರು. ಅದೇವೇಳೆ 125 ವರ್ಷದ ಮುದುಕಿಯನ್ನು ಬಾಲಕ ರೇವತ ವೀಕ್ಷಿಸಿದನು. ತಕ್ಷಣ ಆತನಿಗೆ ಎಲ್ಲಾ ಜೀವಿಗಳು ವೃದ್ಧಾಪ್ಯಕ್ಕೆ ಮತ್ತು ಸಾವಿಗೆ ವಶವಾಗುವುದು ಎಂದು ಜ್ಞಾನೋದಯವಾಯಿತು. ಆಗ ಆತನು ಸಹಾ ತನ್ನ ಅಣ್ಣನಂತೆ ಬಿಕ್ಷುವಾಗಲು ಇಚ್ಛಿಸಿ ಮನೆಯನ್ನು ಬಿಟ್ಟು 30 ಭಿಕ್ಷುಗಳಿರುವ ವಿಹಾರದಲ್ಲಿ ಸೇರಿದನು. ಅಲ್ಲಿ ಆತನು ಸಮಣೀರನಾದನು.
                ರೇವತನು ಭಿಕ್ಷುಗಳಿಂದ ಧ್ಯಾನದ ವಿಷಯ ಸ್ವೀಕರಿಸಿ ವಿಹಾರದಿಂದ ದೂರದಲ್ಲಿರುವ ಕಾಡಿಗೆ ಹೋಗಿ ಅಲ್ಲಿ ಸಾಧನೆ ಆರಂಭಿಸಿದನು. ವಷರ್ಾವಾಸದ ಅಂತ್ಯದಲ್ಲಿ ಆತನು ಅರಹಂತನಾದನು. ಆಗ ಪೂಜ್ಯ ಸಾರಿಪುತ್ತರವರು ಬುದ್ಧರಲ್ಲಿ ರೇವತನನ್ನು ನೋಡುವುದಕ್ಕಾಗಿ ಅಪ್ಪಣೆ ಕೇಳಿದರು. ಆಗ ಬುದ್ಧರು ಸಹಾ ಜೊತೆಯಲ್ಲಿ ಬರುವುದಾಗಿ ಹೇಳಿದರು. ಹೀಗೆ ಭಗವಾನರು, ಸಾರಿಪುತ್ತ, ಶೀವಾಲ ಮತ್ತಿತರ ಭಿಕ್ಷುಗಳು ರೇವತನನ್ನು ಕಾಣಲು ಹೋದರು.
                ಆ ಪ್ರಯಾಣವು ದೀರ್ಘವಾಗಿತ್ತು. ದಾರಿಯು ಬಹಳ ಒರಟಾಗಿತ್ತು ಮತ್ತು ಜನರಿಂದ ಕೂಡಿರಲಿಲ್ಲ. ದಾರಿಯಲ್ಲಿ ದೇವತೆಗಳು ಅವರ ಅವಶ್ಯಕತೆ ಪೂರೈಸಿದರು. ಪ್ರತಿ ಯೋಜನದಲ್ಲೂ ವಿಹಾರವು, ಆಹಾರವು ದೊರೆಯುತ್ತಿತ್ತು. ಆವರು ಪ್ರತಿದಿನ 1 ಯೋಜನ ದೂರ ನಡೆಯುತ್ತಿದ್ದರು.
                ರೇವತನಿಗೆ ದಿವ್ಯದೃಷ್ಟಿಯಿಂದ ಭಗವಾನರು ಬರುವುದು ತಿಳಿದು ಆತನು ಅವರ ಸ್ವಾಗತ, ಸತ್ಕಾರಕ್ಕೆ ಎಲ್ಲಾ ವ್ಯವಸ್ಥೆ ಮಾಡಿದನು. ತನ್ನ ಅತೀಂದ್ರಿಯ ಶಕ್ತಿಯಿಂದ ಆತನು ಬುದ್ಧರಿಗಾಗಿ ವಿಶೇಷ ವಿಹಾರವನ್ನು ನಿಮರ್ಿಸಿದನು ಮತ್ತು ಅವರು ಇರುವಷ್ಟು ಕಾಲ ಎಲ್ಲಾರೀತಿಯ ಸವಲತ್ತುಗಳನ್ನು ಸೃಷ್ಟಿಸಿದನು.
                ನಂತರ ಅಲ್ಲಿಂದ ಹಿಂತಿರುಗಿ ಶ್ರಾವಸ್ತಿಯ ಪುಟ್ಟ ಗ್ರಾಮಕ್ಕೆ ಬಂದು. ಅಲ್ಲಿ ವಿಶಾಖಳಿಂದ ಆತಿಥ್ಯ ಪಡೆದರು. ಆಗ ವಿಶಾಖೆಯು ಭಗವಾನರಲ್ಲಿ ಈ ಪ್ರಶ್ನೆ ಹಾಕಿದಳು. ರೇವತರಿದ್ದ ಅರಣ್ಯ ಸುಖಕರವಾಗಿತ್ತೇ?
                ಅದಕ್ಕೆ ಉತ್ತರವಾಗಿ ಭಗವಾನರು ಈ ಮೇಲಿನ ಗಾಥೆಯನ್ನು ನುಡಿದರು

No comments:

Post a Comment