Wednesday 1 April 2015

dhammapada/sahassavagga/8.1/tambadatika

8. ಸಹಸ್ಸ ವಗ್ಗ

ಅರ್ಥಪೂರ್ಣವಾದ ಪದವೊಂದೇ ಸಾಕು
ಅನರ್ಥಕಾರಿ ಪದಗಳಿಂದ ಕೂಡಿರುವ ಸಾವಿರ ನುಡಿಗಳಿಗಿಂತ ಶಾಂತಿ ನೀಡುವ ಒಂದೇ ಒಂದು ಅರ್ಥಪೂರ್ಣವಾದ ಪದವು ಶ್ರೇಷ್ಠವಾದುದು.      (100)
ಗಾಥ ಪ್ರಸಂಗ 8.1
ಸುಭಾಷಿತದಿಂದ ಸಮಾಧಾನ ಮತ್ತು ಸುಗತಿ



  ತಂಬದಾಟಿಕನು ಗಲ್ಲುಶಿಕ್ಷೆ ನಿರ್ವಹಿಸುತ್ತಿದ್ದನು. ಆತನು ಅದೇ ವೃತ್ತಿಯಲ್ಲಿ 55 ವರ್ಷ ಕಳೆದಿದ್ದನು. ವೃದ್ಧಾಪ್ಯದಲ್ಲಿ ಆತನು ಯಾರಿಗೂ ಗಲ್ಲು ಹಾಕುವ ಹಾಗಿರಲಿಲ್ಲ. ಆತನು ನಿವೃತ್ತಿ ಹೊಂದಿದ ದಿನದಂದು ಸಾರಿಪುತ್ತರಿಗೆ ತನಗೆಂದು ಮಾಡಿಸಿ ಇಟ್ಟಿದ್ದ ಸಿಹಿ ಅಡುಗೆಯನ್ನು ಅವರಿಗೆ ಬಡಿಸಿ ಆತಿಥ್ಯ ನೀಡಿದನು.

                ಆಹಾರದ ಬಳಿಕ ಸಾರಿಪುತ್ತರವರು ಆತನಿಗೆ ಧಮ್ಮವನ್ನು ಬೋಧಿಸಿದರು. ಆದರೆ ಆತನು ತನ್ನ ಹಿಂದಿನ ಕೃತ್ಯಗಳಿಂದಾಗಿ ಪಶ್ಚಾತ್ತಾಪಪಡುತ್ತ ಅಶಾಂತಿತಯಿಂದಿದ್ದು ಧಮ್ಮ ಆಲಿಸುತ್ತಿರಲಿಲ್ಲ. ಆಗ ಸಾರಿಪುತ್ತರು ಆತನ ವಿಷಯವನ್ನೆಲ್ಲಾ ತಿಳಿದು ಈ ರೀತಿ ಪ್ರಶ್ನಿಸಿದರು. ನೀವು ಕಳ್ಳರನ್ನು ಇಷ್ಟಪಟ್ಟು ಗಲ್ಲಿಗೇರಿಸುವಿರೋ ಅಥವಾ ರಾಜಾಜ್ಞೆ ಎಂಬ ಕಾರಣದಿಂದ ಆ ಕಾರ್ಯ ನೆರವೇರಿಸುವಿರೋ? ಆಗ ಆತನು ರಾಜಾಜ್ಞೆಯಿಂದಾಗಿ ಆ ಎಲ್ಲಾ ಕಾರ್ಯಗಳನ್ನು ಮಾಡಿದೆ ಹೊರತು ಇಷ್ಟಪಟ್ಟು ಮಾಡಲಿಲ್ಲ. ಆಗ ಸಾರಿಪುತ್ತರು ಆತನಿಗೆ ನಿದರ್ೊಷಿ ಎಂದು ಘೋಷಿಸಿದರು. ಆಗ ಆತನಿಗೆ ಸಮಾಧಾನವಾಯಿತು. ನಂತರ ಧಮ್ಮಾ ಆಲಿಸಿ ಆತನು ಸೋತಪತ್ತಿ ಫಲ ಪಡೆದನು. ನಂತರ ಮನೆಗೆ ಹಿಂತಿರುಗುವಾಗ ಹಸುವಿನಿಂದ ತಿವಿಯಲ್ಪಟ್ಟು ಸತ್ತನು. ನಂತರ ತುಸಿತ ಲೋಕದಲ್ಲಿ ಹುಟ್ಟಿದನು. ಇವೆಲ್ಲವೂ ಆತನಿಗೆ ಸಾರಿಪುತ್ತರಿಗೆ ನೀಡಿದ್ದ ದಾನ ಮತ್ತು ಧಮ್ಮ ಶ್ರವಣದಿಂದಲೇ ಆಯಿತು. ಭಿಕ್ಷುಗಳಿಗೆ ಆಶ್ಚರ್ಯವಾಯಿತು. ಪಾಪಿಯೊಬ್ಬನು ಹೇಗೆ ಸುಗತಿ ಪಡೆದ ಮತ್ತು ಸಾರಿಪುತ್ತರ ಸಂಕ್ಷಿಪ್ತ ಬೋಧನೆ ಹೇಗೆ ಪರಿಣಾಮಕಾರಿ ಎಂದು ಚಚರ್ಿಸಿದಾಗ ಭಗವಾನರು ಈ ಮೇಲಿನ ಗಾಥೆ ನುಡಿದರು.


No comments:

Post a Comment